Search
  • Follow NativePlanet
Share
» »ಮೇಲುಕೋಟೆಯಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳು

ಮೇಲುಕೋಟೆಯಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳು

ಕರ್ನಾಟಕದ ಒಂದು ಭಾಗವಾಗಿರುವ ಮೇಲುಕೋಟೆಗೆ ತನ್ನದೇ ಆದಂತಹ ಪ್ರಾಮುಖ್ಯತೆ ಇದೆ. ಈ ಸ್ಥಳವು ಅನೇಕ ಧಾರ್ಮಿಕ ತಾಣಗಳು ಮತ್ತು ದೇವಾಲಯಗಳ ನೆಲೆಯಾಗಿದ್ದು, ಕರ್ನಾಟಕದ ಪವಿತ್ರ ಸ್ಥಳಗಳಲ್ಲಿ ಒಂದೆನಿಸಿದೆ. ಮಂಡ್ಯಾ ಜಿಲ್ಲೆಲ್ಲಿರುವ ಮೇಲುಕೋಟೆಗೆ 12ನೇ ಶತಮಾನದಷ್ಟು ಹಳೆಯ ಇತಿಹಾಸವಿದ್ದು, ಸಂತ ರಾಮಾನುಜಾಚಾರ್ಯರು ಈ ಪಟ್ಟಣದಲ್ಲಿ ಸುಮಾರು 12 ವರ್ಷಗಳ ಕಾಲ ನೆಲೆಸಿದ್ದರು ಎನ್ನಲಾಗುತ್ತದೆ. ಆನಂತರದಿಂದ ಇದು ಧಾರ್ಮಿಕ ಮಹತ್ವವುಳ್ಳ ಧಾರ್ಮಿಕ ಸ್ಥಳವೆಂದು ಪರಿಗಣಿಸಲ್ಪಟ್ಟಿತು.

ದೇವಾಲಯಗಳ ಹೊರತಾಗಿಯೂ ಮೇಲುಕೋಟೆ ಅನೇಕ ಐತಿಹಾಸಿಕ ಕಟ್ಟಡಗಳು ಮತ್ತು ಹಸಿರುಮಯ ಪರಿಸರವನ್ನು ತನ್ನ ಸುತ್ತಲೂ ಹೊಂದಿದೆ. ಮೈಸೂರಿನಿಂದ ಸುಮಾರು 50 ಕಿ.ಮೀ ಅಂತರದಲ್ಲಿರುವ ಮೇಲುಕೋಟೆಗೆ ಸುಲಭವಾಗಿ ತಲುಪಬಹುದಾಗಿದೆ. ಆದುದರಿಂಡ ಮೇಲುಕೋಟೆಗೆ ಪ್ರವಾಸ ಮಾಡಿ ಅಲ್ಲಿಯ ಬಗ್ಗೆ ಗಮನ ಹರಿಸಿದರೆ ಐತಿಹಾಸಿಕ ಮತ್ತು ಸ್ಥಳದ ಮಹತ್ವದ ಬಗ್ಗೆ ತಿಳಿದುಕೊಂಡರೆ ಹೇಗಿರಬಹುದು? ಮೇಲುಕೋಟೆಯಲ್ಲಿ ಈ ಕೆಳಗಿನ ಕೆಲವು ಪ್ರಮುಖ ಸ್ಥಳಗಳು ಮತ್ತು ಇನ್ನು ಕೆಲವು ಕಡಿಮೆ ಅನ್ವೇಶಿತ ಸ್ಥಳಗಳ ಬಗ್ಗೆ ಕೆಲವು ಮಾಹಿತಿ ನೀಡುತ್ತಿದ್ದೇವೆ.

ಚೆಲುವ ನಾರಾಯಣ ಸ್ವಾಮಿ ದೇವಾಲಯ

ಚೆಲುವ ನಾರಾಯಣ ಸ್ವಾಮಿ ದೇವಾಲಯ

ಯಾದವಗಿರಿ ಮತ್ತು ಯದುಗಿರಿ ಬೆಟ್ಟಗಳ ಮೇಲೆ ನೆಲೆಸಿರುವ ವಿಷ್ಣು ದೇವರ ಅವತಾರವಾದ ಚೆಲುವನಾರಾಯಣ ದೇವರಿಗೆ ಸಮರ್ಪಿತವಾದ ಈ ಪ್ರಾಚೀನ ಚೆಲುವನಾರಾಯಣ ದೇವಾಲಯವು ಮೇಲುಕೋಟೆಯಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ದೇವಾಲಯವು ಹಿಂದೂ ಧರ್ಮದ ಭಕ್ತರಲ್ಲಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿದ್ದು ಇಲ್ಲಿಗೆ ದೇಶದ ಎಲ್ಲಾ ಕಡೆಯಿಂದಲೂ ಪ್ರತೀವರ್ಷ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಹಿಂದೂ ಭಕ್ತರು ಭೇಟಿ ನೀಡುತ್ತಾರೆ.

ಮೈಸೂರು ರಾಜವಂಶಸ್ಥರು ಇಲ್ಲಿನ ದೇವಾಲಯಕ್ಕೆ ಆಭರಣಗಳು ಕಿರೀಟಗಳು ಮತ್ತು ಅಮೂಲ್ಯವಾದ ರತ್ನಗಳನ್ನು ಹೇರಳವಾಗಿ ಉಡುಗೊರೆಯಾಗಿ ನೀಡಿದ್ದರು. ಈ ಅಮೂಲ್ಯವಾದ ವಸ್ತುಗಳನ್ನು ಪ್ರತೀವರ್ಷ ಇಲ್ಲಿ ನಡೆಸಲಾಗುವ ವೈರಮುಡಿ ಹಬ್ಬದಂದು ಚೆಲುವನಾರಾಯಣ ಸ್ವಾಮಿಯ ಮೂರ್ತಿಯನ್ನು ಮತ್ತು ಇಲ್ಲಿನ ದೇವಾಲಯದ ಸಂಕೀರ್ಣವನ್ನು ಅಲಂಕರಿಸಲು ತರಲಾಗುತ್ತದೆ.

ಅಕಾಡಮಿ ಆಫ್ ಸಂಸ್ಕೃತ ರಿಸರ್ಚ್(ಸಂಶೋಧನೆ)

ಅಕಾಡಮಿ ಆಫ್ ಸಂಸ್ಕೃತ ರಿಸರ್ಚ್(ಸಂಶೋಧನೆ)

1977 ರಲ್ಲಿ ಸ್ಥಾಪನೆಯಾದ ಅಕಾಡೆಮಿ ಆಫ್ ಸಂಸ್ಕೃತ ರಿಸರ್ಚ್(ಸಂಶೋಧನೆ) ಹಲವಾರು ಸಂಶೋಧನಾ ವಿದ್ವಾಂಸರನ್ನು ಹೊಂದಿದ್ದು, ಅವರನ್ನು ಸಂಸ್ಕೃತದ ವಿವಿಧ ವಿಷಯಗಳ ಕುರಿತು ಸಂಶೋಧನೆ ನಡೆಸಲು ನೇಮಿಸಲಾಗಿದೆ. ಇಲ್ಲಿ ನೂರಾರು ಪುರಾತನ ಹಸ್ತಪ್ರತಿಗಳು ಮತ್ತು ಸಾವಿರಾರು ಪ್ರಾಚೀನ ಗ್ರಂಥಗಳನ್ನು ಕಾಣಬಹುದು. ಇಲ್ಲಿನ ವಿದ್ವಾಂಸರು ಆರಂಭಿಕ ಅವಧಿಗಳಲ್ಲಿ ಸಂಸ್ಕೃತದ ಬಳಕೆ ಇದ್ದುದರ ಬಗ್ಗೆ ಮತ್ತು ಅದರ ವಿಕಾಸದ ಬಗ್ಗೆ ಸಂಶೋಧನೆ ನಡೆಸುತ್ತಿದ್ದುದಲ್ಲದೆ , ಸಂಸ್ಕೃತವನ್ನು ಕಲಿಯುವುದು ಹೇಗೆ? ಎಂಬುದರ ಬಗ್ಗೆ ತಿಳುವಳಿಕೆ ನೀಡುತ್ತಾರೆ.

ಯೋಗ ನರಸಿಂಹ ದೇವಾಲಯ

ಯೋಗ ನರಸಿಂಹ ದೇವಾಲಯ

ಯದುಗಿರಿ ಬೆಟ್ಟದ ಮೇಲಿರುವ ಸುಂದರವಾದ ಪಟ್ಟಣವಾದ ಮೆಲುಕೋಟೆಯಲ್ಲಿ ಯೋಗ ನರಸಿಂಹ ದೇವಾಲಯವು ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿದೆ. ದಂತಕಥೆಗಳ ಪ್ರಕಾರ, ಭಗವಾನ್ ನರಸಿಂಹ ದೇವತೆಯನ್ನು ಸಾವಿರಾರು ವರ್ಷಗಳ ಹಿಂದೆ ದೇವಾಲಯದ ಒಳಗೆ ಭಕ್ತ ಪ್ರಹ್ಲಾದ ಇರಿಸಿದ್ದರು ಎಂದು ನಂಬಲಾಗಿದೆ. ಅಂದಿನಿಂದ, ಇದು ಹಿಂದೂಗಳಿಗೆ ಪ್ರಮುಖ ಧಾರ್ಮಿಕ ತಾಣವಾಗಿದೆ.

ಈ ದೇವಾಲಯವನ್ನು ರಾಮ ಮತ್ತು ಶ್ರೀಕೃಷ್ಣ ದೇವರುಗಳಿಂದ ಪೂಜಿಸಲಾಗಿತ್ತು ಎಂದು ಹೇಳಲಾಗುತ್ತದೆ. ದೇವಾಲಯದಲ್ಲಿ ಆಚರಿಸುವ ಪ್ರಮುಖ ಹಬ್ಬವೆಂದರೆ ನರಸಿಂಹ ಜಯಂತಿ.

ಮೇಲುಕೋಟೆ ದೇವಾಲಯ ವನ್ಯಜೀವಿ ಅಭಯಾರಣ್ಯ

ಮೇಲುಕೋಟೆ ದೇವಾಲಯ ವನ್ಯಜೀವಿ ಅಭಯಾರಣ್ಯ

ಮೆಲುಕೋಟೆ ದೇವಾಲಯಗಳ ಗಡಿಯಲ್ಲಿರುವ ಮೆಲ್ಕೋಟೆ ದೇವಾಲಯ ವನ್ಯಜೀವಿ ಅಭಯಾರಣ್ಯವು ಸುಮಾರು 50 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿದೆ. ಕಪ್ಪು ಬಕ್ ಮತ್ತು ಬೂದು ತೋಳದ ರಕ್ಷಣೆಗಾಗಿ ಇದು ಜನಪ್ರಿಯವಾಗಿದ್ದು ಇವುಗಳು ಈ ಅಭಯಾರಣ್ಯದೊಳಗೆ ಹೇರಳವಾಗಿ ಕಂಡುಬರುತ್ತದೆ. ಈ ವನ್ಯಜೀವಿ ಅಭಯಾರಣ್ಯದ ಭೂದೃಶ್ಯವು ಬಂಡೆಗಳು ಮತ್ತು ಪತನಶೀಲ ಮರಗಳಿಂದ ಆವೃತವಾಗಿದೆ ಅಲ್ಲದೆ ಈ ಪ್ರದೇಶದಲ್ಲಿ ಹಲವಾರು ಜಾತಿಯ ವರ್ಣರಂಜಿತ ಚಿಟ್ಟೆಗಳನ್ನು ಸಹ ಇಲ್ಲಿ ಕಾಣಬಹುದು.

ಪುಷ್ಕರಣಿ ಕೊಳ

ಪುಷ್ಕರಣಿ ಕೊಳ

ಕಲ್ಯಾಣಿ ಕೊಳವೆಂದೂ ಕರೆಯಲಾಗುವ ಈ ಪುಟ್ಟ ಕೊಳವು ದೇವಾಲಯದ ಸುತ್ತಲೂ ಇರುವುದರಿಂದ ಇಲ್ಲಿನ ಪರಿಸರಕ್ಕೆ ಶಾಂತತೆ ಮತ್ತು ವಿಶ್ರಾಂತಿಯ ಸೆಳೆತವನ್ನು ನೀಡುತ್ತದೆ. ಮೆಲುಕೋಟೆಯ ಸಂತೋಷಕರ ವಾತಾವರಣದಲ್ಲಿ ಸ್ವಲ್ಪ ಸಮಯ ಕಳೆಯಲು ಮತ್ತು ಹತ್ತಿರದ ದೇವಾಲಯಗಳಿಂದ ಹೊರಹೊಮ್ಮುವ ಭಕ್ತಿ ಸಂಗೀತಗಳನ್ನು ಕೇಳಲು ನೀವು ಬಯಸಿದರೆ ನೀವು ಈ ಸುಂದರವಾದ ಕೊಳಕ್ಕೆ ಭೇಟಿ ನೀಡಬೇಕು.

ಆಸಕ್ತಿದಾಯಕ ಇನ್ನಿತರ ಸ್ಥಳಗಳು

ಆಸಕ್ತಿದಾಯಕ ಇನ್ನಿತರ ಸ್ಥಳಗಳು

ಮೇಲೆ ಹೇಳಿರುವ ಸ್ಥಳಗಳ ಹೊರತಾಗಿಯೂ ಮೇಲುಕೋಟೆಯಲ್ಲಿ ಅನ್ವೇಷಣೆ ಮಾಡಬಹುದಾದ ಇನ್ನೂ ಸಾಕಷ್ಟು ಸಂಗ್ರಹಗಳಿವೆ. ಇಲ್ಲಿ ಶಿಥಿಲ ಅವಸ್ಥೆಯಲ್ಲಿರುವ ರಚನೆಯಾದ ರಾಯಗೋಪುರವನ್ನು ಕೂಡಾ ನೋಡಬಹುದಾಗಿದೆ ಇದು ಇತಿಹಾಸಪ್ರಿಯರಲ್ಲಿ ಪ್ರಸಿದ್ದಿಯನ್ನು ಪಡೆದಿದೆ ಅಲ್ಲದೆ ಉಪದೇಶ ಕೇಂದ್ರವಾದ ವನಪ್ರಸ್ಥ ಆಶ್ರಮ, ಕೂಡ ಇಲ್ಲಿ ಕಾಣಬಹುದಾಗಿದೆ ಇಷ್ಟೇ ಅಲ್ಲದೆ ತೊಂಡನೂರ್ ಕೊಳ ಇಲ್ಲಿಯ ಇನ್ನೊಂದು ಪ್ರಮುಖ ಪ್ರವಾಸೀ ಆಕರ್ಷಣಾ ಸ್ಥಳವಾಗಿದ್ದು ಇದು ಶ್ರೀ ವೈಷ್ಣವ ಪಂಥದ ಬ್ರಾಹ್ಮಣರಿಗೆ ಪವಿತ್ರವಾದ ಸ್ಥಳವೆಂದು ಪರಿಗಣಿಸಲ್ಪಟ್ಟಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X