Search
  • Follow NativePlanet
Share
» »ಹೋಮ್‌ಮೇಡ್ ಚಾಕೋಲೆಟ್‌ ತಿನ್ನಬೇಕಾದರೆ ಇಲ್ಲಿಗೆ ಹೋಗಿ

ಹೋಮ್‌ಮೇಡ್ ಚಾಕೋಲೆಟ್‌ ತಿನ್ನಬೇಕಾದರೆ ಇಲ್ಲಿಗೆ ಹೋಗಿ

ಚಾಕೋಲೆಟ್‌ ಅಂದ್ರೆ ಯಾರಿಗೆ ಯಾನೇ ಇಷ್ಟ ಇಲ್ಲ. ಸಣ್ಣ ಮಕ್ಕಳಿಂದ ಹಿಡಿದು ಮುದಿ ಪ್ರಾಯದವರ ವರೆಗೂ ಪ್ರತಿಯೊಬ್ಬರೂ ಚಾಕೋಲೆಟ್‌ನ್ನು ಇಷ್ಟ ಪಡುತ್ತಾರೆ. ಚಾಕೋಲೇಟ್‌ನಲ್ಲಿ ಹಲವಾರು ವಿಧಗಳಿರುತ್ತವೆ. ಅದರಲ್ಲೂ ಕ್ಯಾಡ್‌ಬೆರಿ ಚಾಕೋಲೇಟ್‌ ಅಂದ್ರೆ ಮಕ್ಕಳಿಗೆ ಅಚ್ಚುಮೆಚ್ಚಾಗಿರುತ್ತದೆ. ನಾವಿಂದು ಚಾಕೋಲೆಟ್‌ ಬಗ್ಗೆ ಯಾಕೆ ಹೇಳುತ್ತಿದ್ದೇವೆ ಎಂದರೆ ನಮ್ಮ ದಕ್ಷಿಣ ಭಾರತದಲ್ಲಿ ಕೆಲವು ಸ್ಥಳಗಳಿವೆ ಅವುಗಳು ಹೋಮ್‌ ಮೇಡ್‌ ಚಾಕೋಲೆಟ್‌ಗಳಿಗಾಗಿ ಪ್ರಸಿದ್ಧವಾಗಿವೆ. ಹೋಮ್‌ಮೇಡ್‌ ಚಾಕೋಲೇಟ್‌ ಇತರ ಚಾಕೋಲೇಟ್‌ನಷ್ಟು ಸಿಹಿಯಾಗಿರುವುದಿಲ್ಲ ಅಲ್ಲದೆ ಆರೋಗ್ಯಕರವೂ ಆಗಿರುತ್ತದೆ.

ದಕ್ಷಿಣ ಭಾರತದಲ್ಲಿ

ದಕ್ಷಿಣ ಭಾರತದಲ್ಲಿ

ಹೋಮ್‌ ಮೇಡ್‌ ಚಾಕೋಲೇಟ್‌ಗಳನ್ನು ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಇದೊಂದು ಪ್ರಮುಖ ಖಾದ್ಯವಾಗಿದೆ. ಇತರ ಚಾಕೋಲೇಟ್‌ಗಳಿಗಿಂತ ಭಿನ್ನವಾಗಿರುವ ಈ ಚಾಕೋಲೇಟ್‌ನ್ನು ಇಲ್ಲಿಗೆ ಬರುವವರೆಲ್ಲರೂ ಒಮ್ಮೆಯಾದರೂ ರುಚಿ ನೋಡುತ್ತಾರೆ. ಚಾಕೋಲೇಟ್ ಒಂದು ಉತ್ತಮ ಮೂಡ್‌ ರಿಫ್ರೆಶನರ್‌ ಎಂದೇ ಹೇಳಬಹುದು. ನೀವು ಬೋರ್‌ ಆದಾಗ, ಟೆನ್ಷನ್‌ನಲ್ಲಿದ್ದಾಗ ಚಾಕೋಲೇಟ್ ತಿಂದರೆ ನಿಮ್ಮ ಮೂಡ್‌ ಸರಿಯಾಗುತ್ತದೆ. ಬಹಳಷ್ಟು ಜನರಿಗೆ ಮೂಡ್‌ ಸರಿ ಇಲ್ಲದಾಗ ಚಾಕೋಲೇಟ್ ತಿನ್ನುವ ಅಭ್ಯಾಸಗಳಿವೆ.

ಕೂರ್ಗ್

ಕೂರ್ಗ್

ಕೊಡಗು ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಮಡಿಕೇರಿಯಲ್ಲಿ ನೀವು ಹೋಮ್‌ ಮೇಡ್‌ ಚಾಕೋಲೇಟ್‌ನ್ನು ಕಾಣಬಹುದು. ಈ ಚಾಕೋಲೇಟ್‌ಗಳು ರುಚಿಕರವೂ ಆಗಿರುತ್ತದೆ ಜೊತೆಗೆ ಮಕ್ಕಳಿಗೆ ಇಷ್ಟವಾಗುತ್ತದೆ. ಮಡಿಕೇರಿಯಲ್ಲಿ ನೀವು ಗೋಲ್ಡನ್‌ ಟೆಂಪಲ್ ಹೋಗಿದ್ದೀರಿ ಎಂದಾದರೆ ಈ ಚಾಕೋಲೇಟ್‌ನ್ನು ನೋಡಿರುವಿರಿ. ಖರೀದಿಸಿರಲೂ ಬಹುದು. ಗೋಲ್ಡನ್‌ ಟೆಂಪಲ್‌ ಗೇಟ್‌ ಉದ್ದಕ್ಕೂ ಇರುವ ಅಂಗಡಿ ಮಳಿಗೆಗಳಲ್ಲಿ ಈ ಹೋಮ್‌ ಮೇಡ್‌ ಚಾಕೋಲೇಟ್‌ನ್ನು ಮಾರಾಟ ಮಾಡುತ್ತಾರೆ.

ಇಲ್ಲಿ ಬರೀ ಹೋಮ್‌ ಮೇಡ್‌ ಚಾಕೋಟ್‌ಗಳು ಮಾತ್ರವಲ್ಲ. ಹೋಮ್‌ ಮೇಡ್‌ ವೈನ್‌ಗಳೂ ಲಭ್ಯವಿದೆ. ಮೆನಯಲ್ಲೇ ತಯಾರಿಸಿದಂತಹ ರುಚಿಕರ ವೈನ್‌ನ ರುಚಿಯನ್ನೂ ಮಾಡಬಹುದು. ಇಲ್ಲಿ ವಿವಿಧ ಫ್ಲೇವರ್‌ಗಳಲ್ಲಿ ವೈನ್‌ಗಳು ಲಭ್ಯವಿದೆ. ಬೆಲೆಯೂ ಕಡಿಮೆ ಜೊತೆಗೆ ಆರೋಗ್ಯಕರವೂ ಆಗಿದೆ. ಕೂರ್ಗ್‌ಗೆ ಪ್ರವಾಸ ಹೋದವರು ಹೋಮ್‌ ಮೇಡ್‌ ಚಾಕೋಲೆಟ್ ಹಾಗೂ ಹೋಮ್‌ ಮೇಡ್‌ ವೈನ್‌ನ್ನು ಕೊಳ್ಳದೇ ಇರಲಾರರು.

ಊಟಿ

ಊಟಿ

ಊಟಿಯನ್ನು ಸಾಮಾನ್ಯವಾಗಿ ಹನಿಮೂನ್‌ಗೆ ಹೇಳಿ ಮಾಡಿಸಿದ ಜಾಗ ಎನ್ನುತ್ತಾರೆ. ಚಾಕೋಲೇಟ್‌ ಸೇವಿಸಿದ್ರೆ ರೊಮಾನ್ಸ್‌ ಇನ್ನಷ್ಟು ಸುಮಧುರವಾಗಿರುತ್ತದೆ. ಅದಕ್ಕೆ ಹೇಳಿ ಮಾಡಿಸಿದಂತೆ ಊಟಿಯು ಹೋಮ್‌ಮೇಡ್‌ ಚಾಕೋಲೇಟ್‌ಗೆ ಫೇಮಸ್‌ ಆಗಿದೆ. ಊಟಿಗೆ ಸುತ್ತಾಡಲು ಹೋದವರು ಹೋಮ್‌ ಮೇಡ್‌ ಚಾಕೋಲೇಟ್‌ನ್ನು ತರದೇ ಇರಲಾರರು. ಹಸಿರು ನೈಸರ್ಗಿಕ ಪರಿಸರದಲ್ಲಿ ಚಹಾ ತೋಟಗಳ ಮಧ್ಯೆ ನೀವು ಚಾಕೋಲೇಟ್‌ನ್ನು ಸವಿಯಬಹುದು. ಇಲ್ಲಿ ಚಾಕೋಲೇಟ್‌ ಮಾತ್ರವಲ್ಲ ಚಹಾ ಪುಡಿಯೂ ಸಿಗುತ್ತದೆ. ಅದೂ ವಿಭಿನ್ನ ಫ್ಲೇವರ್‌ಗಳಲ್ಲಿ. ಇಲ್ಲಿ ಹೋಗುವ ಪ್ರವಾಸಿಗರಿಗೆ ಚಹಾ ಇಷ್ಟವಾಗದೇ ಇರಲಾರದು. ಹಾಗಾಗಿ ಊಟಿಗೆ ಹೋಗುವವರು ಬರುವಾಗ ಚಹಾಪುಡಿ ಹಾಗೂ ಹೋಮ್‌ ಮೇಡ್‌ ಚಾಕೋಲೇಟ್‌ನ್ನು ತರೋದನ್ನು ಮರೆಯೋದಿಲ್ಲ.

ಕೂಕುನೂರು

ಕೂಕುನೂರು

ಮನೆಯಲ್ಲಿ ತಯಾರಿಸಿದ ಚಾಕೊಲೇಟುಗಳ ಮ್ಯಾಜಿಕ್ ಬರೀ ಊಟಿಯಲ್ಲಿ ಮಾತ್ರವಲ್ಲ, ಊಟಿಯಿಂದ ಕೂಕುನೂರಿನಲ್ಲೂ ಕೂಡಾ ಇದೆ. ಚಹಾ ತೋಟಗಳಲ್ಲಿಸುತ್ತಾಡುವುದರ ಜೊತೆಗೆ, ಚಾಕೊಲೇಟ್ ಶಾಪಿಂಗ್ ಅನ್ನು ಇಲ್ಲಿ ಪ್ರಯತ್ನಿಸಿ. ಕೂನೂರಿನ ಗ್ರೀನ್ ಶಾಪ್ , ಚಿತ್ತಸ್ ಚಾಕೊಲೇಟ್ ಹಬ್ ಗಳು ಮನೆಯಲ್ಲಿ ತಯಾರಿಸಿದ ಚಾಕೊಲೇಟುಗಳಿಗೆ ಹೆಸರುವಾಸಿಯಾಗಿದೆ.

ಕೊಡೈಕೆನಾಲ್‌

ಕೊಡೈಕೆನಾಲ್‌

ಕೊಡೈಕೆನಾಲ್‌ ತಮಿಳುನಾಡಿನ ಮತ್ತೊಂದು ಪ್ರಸಿದ್ಧ ಗಿರಿಧಾಮವಾಗಿದೆ. ಇಲ್ಲಿನ ಕಂಗೆಡಿಸುವ ಹವಾಮಾನ ಮತ್ತು ಬಾಯಲ್ಲಿ ನೀರೂರಿಸುವಂತಹ ಭಕ್ಷ್ಯಗಳು ಈ ತಾಣವನ್ನು ಇನ್ನಷ್ಟು ಸುಮಧುರವಾಗಿಸಿದೆ. ಕೊಡೈಕೆನಾಲ್ ಕೂಡ ಚಾಲ್ತಿಯಲ್ಲಿರುವ ಚಾಕೊಲೇಟ್ ಉದ್ಯಮವನ್ನು ಹೊಂದಿದೆ. ನಿಸ್ಸಂದೇಹವಾಗಿ, ಭಾರತದಲ್ಲಿ ಮನೆಯಲ್ಲಿ ತಯಾರಿಸಿದ ಚಾಕೊಲೇಟುಗಳಿಗೆ ಕೊಡೈಕೆನಾಲ್ ಉತ್ತಮ ಸ್ಥಳವಾಗಿದೆ. ಚಾಕೊಲೇಟ್ ಫ್ಯಾಕ್ಟರಿ, ಪಾಟ್ ಲಕ್, ಕ್ಲೌಡ್ ಸ್ಟ್ರೀಟ್ ಮತ್ತು ಎಸ್.ಜಿ. ಕಾಟೇಜ್ ಇಂಡಸ್ಟ್ರೀಸ್‌ಗಳು ಕೊಡೈಕೆನಾಲ್‌ನಲ್ಲಿನ ಚಾಕೊಲೇಟುಗಳು ಮತ್ತು ಚಾಕೊಲೇಟ್ ಸಿಹಿಭಕ್ಷ್ಯಗಳಿಗೆ ಪ್ರಸಿದ್ಧವಾಗಿವೆ. ನೀವು ಯಾವತ್ತಾದರೂ ಕೊಡೈಕೆನಾಲ್‌ಗೆ ಭೇಟಿ ನೀಡಿದಾಗ ಹೋಮ್‌ ಮೇಡ್‌ ಚಾಕೋಲೇಟ್‌ನ್ನು ನಿಮ್ಮ ಮನೆಗೆ ಕೊಂಡೊಯ್ಯಿರಿ.

ಮುನ್ನಾರ್

ಮುನ್ನಾರ್

ಮುನ್ನಾರ್ ಕೇರಳದ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ತಂಪಾದ ವಾತಾವರಣದಿಂದ ಹಾಗೂ ಚಹಾ ಗಿಡಗಳಿಂದ ಕೂಡಿರುವ ಮುನ್ನಾರ್ ಮನೆಯಲ್ಲೇ ತಯಾರಿಸಿದಂತಹ ಹೋಮ್‌ ಮೇಡ್‌ ಚಾಕೋಲೇಟ್‌ಗೂ ಹೆಸರುವಾಸಿಯಾಗಿದೆ. ಮನ್ನಾ ಚಾಕೋಲೆಟ್ ಕಿಚನ್, ಮುನ್ನಾರ್ ಸ್ಪೈಸಸ್‌ನಲ್ಲಿ ಉತ್ತಮ ಹೋಮ್‌ ಮೇಡ್ ಚಾಕೋಲೆಟ್‌ಗಳು ದೊರೆಯುತ್ತವೆ.

ವಯನಾಡ್

ವಯನಾಡ್

ವಯನಾಡ್ ವನ್ಯಜೀವಿ ಸಫಾರಿಗಳು, ಚಾರಣ, ನದಿ ರಾಫ್ಟಿಂಗ್ ಮುಂತಾದ ವೈವಿಧ್ಯಮಯ ಅನುಭವಗಳನ್ನು ಒದಗಿಸುತ್ತವೆ. ವಯನಾಡ್‌ನಲ್ಲಿ ಸುಂದರವಾದ ಮಸಾಲೆ ತೋಟಗಳು ಮತ್ತು ಪ್ರಶಾಂತ ಕಣಿವೆಗಳಿವೆ. ಇದು ಜೀವನದ ಏಕತಾನತೆಯಿಂದ ನವಜಾತ ವಿರಾಮಕ್ಕೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅದರ ವಿಶಾಲವಾದ ಹಸಿರುಮನೆಗಳಿಂದಾಗಿ, ವಯನಾಡ್ ಪ್ರಕೃತಿಯ ಪ್ರೇಮಿಗಳು ಮತ್ತು ವನ್ಯಜೀವಿ ಉತ್ಸಾಹದ ಅದ್ಭುತವಾದ ತಾಣವಾಗಿದೆ. ವಯನಾಡಿನಲ್ಲಿ ಹೋಮ್‌ ಮೇಡ್‌ ಚಾಕೋಲೇಟ್‌ನ್ನು ತಯಾರಿಸುವ ಅನೇಕ ಸ್ಥಳಗಳಿವೆ. ಇಲ್ಲಿ ಇದೊಂದು ಬ್ಯುಸಿನೆಸ್ ಆಗಿದೆ.

ವಗಮೋನ್

ವಗಮೋನ್

ಕೇರಳದ ಕೊಟ್ಟಾಯಂ-ಇಡುಕ್ಕಿ ಗಡಿಯಲ್ಲಿರುವ ವಗಮೋನ್ ಒಂದು ಗಿರಿಧಾಮವಾಗಿದೆ. ಬೇಸಿಗೆಯ ಮಧ್ಯಾಹ್ನದಲ್ಲಿ ಇದು 10-23 ° C ನಡುವೆ ತಾಪಮಾನದೊಂದಿಗೆ ತಂಪಾದ ಹವಾಮಾನವನ್ನು ಹೊಂದಿರುತ್ತದೆ. ಇದು ಸಮುದ್ರ ಮಟ್ಟದಿಂದ 1,100 ಮೀಟರ್ ಎತ್ತರದಲ್ಲಿದೆ. ಮಂಜಿನಿಂದ ಆವೃತವಾದ ಝಿಗ್ಜಾಗ್ ರಸ್ತೆಗಳು ಬೆಟ್ಟಗಳನ್ನು ಸುತ್ತಿಕೊಂಡು ನಿಜವಾದ ಆನಂದವನ್ನು ಅನುಭವಿಸುತ್ತವೆ. ಸಾಹಸ ಅನ್ವೇಷಕರಿಗೆ ಟ್ರೆಕ್ಕಿಂಗ್, ಪ್ಯಾರಾ ಗ್ಲೈಡಿಂಗ್ ಅಥವಾ ರಾಕ್ ಕ್ಲೈಂಬಿಂಗ್ ಆಯ್ಕೆಗಳಿವೆ. ವಗಮೋನ್‌ನಲ್ಲಿ ಮನೆಯಲ್ಲಿ ತಯಾರಿಸಿದ ಚಾಕೋಲೇಟ್‌ಗಳು ಪ್ರಸಿದ್ಧಿಯಾಗಿವೆ. ಹೋಮ್‌ ಮೇಡ್‌ ತಯಾರಾಗುವ ಸ್ಥಳಗಳನ್ನು ಹೊರತುಪಡಿಸಿ ನೀವು ಇತರ ಸ್ಥಳಗಳಲ್ಲಿ ಚಾಕೋಲೇಟ್‌ನ್ನು ಖರೀದಿಸಿದರೆ ಅವುಗಳು ಹೆಚ್ಚಿನ ಬೆಲೆಗೆ ಮಾರಾಟಮಾಡಲಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more