Search
  • Follow NativePlanet
Share
» »ಏನಿದು ಇಂಡೊ-ಸಾರ್ಸೆನಿಕ್ ಶೈಲಿ? ಎಲ್ಲಿ ಕಾಣಬಹುದು?

ಏನಿದು ಇಂಡೊ-ಸಾರ್ಸೆನಿಕ್ ಶೈಲಿ? ಎಲ್ಲಿ ಕಾಣಬಹುದು?

By Vijay

ಜಗತ್ತಿನಲ್ಲಿ ಕಂಡುಬರುವ ಎಲ್ಲ ಕಟ್ಟಡ ರಚನೆಗಳು ವಿಶಿಷ್ಟವಾಗಿರುತ್ತವೆ ಅಲ್ಲವೆ? ಹೌದು, ಇಂತಹ ವಿಶಿಷ್ಟ ರಚನೆಗಳು ಒಂದೊಂದು ರೀತಿಯ ವಾಸ್ತುಶೈಲಿಯನ್ನು ಹೊಂದಿರುತ್ತವೆ. ವಾಸ್ತುಶೈಲಿ ಎಂಬುದು ಹಿಂದಿನಿಂದಲೂ ರೂಢಿಯಲ್ಲಿರುವ ಪದ್ಧತಿಯಾಗಿದೆ. ಅಲ್ಲದೆ ಇದರಲ್ಲಿ ಹಲವಾರು ಭಾಗಗಳಿವೆ. ಭಾರತವೂ ಇದಕ್ಕೆ ಹೊರತಾಗಿಲ್ಲ.

ನೀವು ನೋಡಬಹುದು ಇಂಗ್ಲೆಂಡ್ ನಂತಹ ದೇಶಗಳಲ್ಲಿ ಮನೆಗಳ ವಿನ್ಯಾಸ ಒಂದು ರೀತಿಯದಾಗಿದ್ದರೆ ಭಾರತದಲ್ಲೆ ಇನ್ನೊಂದು ರೀತಿಯಲ್ಲಿರುತ್ತವೆ. ಇಂತಹ ವಿನ್ಯಾಸಗಳು ಆಯಾ ಕಾಲದಲ್ಲಿ ಆಯಾ ಸ್ಥಳಗಳಲ್ಲಿ ವಾಸ್ತುಶಿಲ್ಪ ವಿನ್ಯಾಸಗಾರರು ಅಳವಡಿಸಿಕೊಂಡು ಬಂದಿರುವ ಪದ್ಧತಿಯಾಗಿದೆ.

ಭಾರತದಲ್ಲಿರುವ ಅತಿ ಎತ್ತರದ ಕಟ್ಟಡಗಳು

ಸಾಕಷ್ಟು ವಾಸ್ತುಶೈಲಿಗಳು ಇಂದು ಪ್ರಚಲಿತದಲ್ಲಿದ್ದು ಅವುಗಳ ಪೈಕಿ ಇಂಡೊ-ಸಾರ್ಸೆನಿಕ್ ವಾಸ್ತುಶೈಲಿಯೂ ಸಹ ಒಂದು. ಮೂಲತಃ ಸಾರ್ಸೆನಿಕ್ ಪದವು ಪ್ರಾಚೀನ ಕಾಲದಲ್ಲಿ ರೋಮನ್ನರು ಬಳಸುತ್ತಿದ್ದ ಪದವಾಗಿದೆ. ರೋಮ್ ಪ್ರಭುತ್ವವಿದ್ದ ಅರೇಬಿಯನ್ ಮರಳಗಾಡಿನಲ್ಲಿ ವಾಸಿಸುತ್ತಿದ್ದ ಆದರೆ ಅರಬರಲ್ಲದ ಜನರನ್ನು ಅವರು ಸಾರ್ಸೆನಿಕ್ ಎಂದು ಕರೆಯುತ್ತಿದ್ದರು.

ಆದರೆ ಪ್ರಮುಖವಾಗಿ ಇಂಡೊ-ಸಾರ್ಸೆನಿಕ್ ವಾಸ್ತುಶೈಲಿಯ ಕ್ರಾಂತಿಯು ಭಾರತದಲ್ಲಿ ಬ್ರಿಟೀಷರಿಂದ ಸುಮಾರು 19 ನೇಯ ಶತಮಾನದಲ್ಲಿ ಪ್ರಾರಂಭವಾಯಿತು. ಇದರಲ್ಲಿ ಬ್ರಿಟೀಷ್ ವಾಸ್ತು ವಿನ್ಯಾಸಗಾರರು ಇಂಡೊ-ಇಸ್ಲಾಮಿಕ್ ಶೈಲಿಯ ವಾಸ್ತು ಅಂಶಗಳನ್ನು ತಮ್ಮದೆ ಆದ ಗೋಥಿಕ್ ಶೈಲಿಯೊಂದಿಗೆ ಸಮ್ಮಿಳಿಸಿ ಹೊರತಂದರು.

ಹೀಗಾಗಿ ಇಂಡೊ-ಸಾರ್ಸೆನಿಕ್ ವಾಸ್ತುಶೈಲಿಯಲ್ಲಿ ಇಂಡೊ-ಇಸ್ಲಾಮಿಕ್ ಹಾಗೂ ಗೋಥಿಕ್ ಶೈಲಿಗಳ ಪ್ರಭಾವವಿರುವುದನ್ನು ಕಾಣಬಹುದು. ಇನ್ನೊಂದು ವಿಶೇಷವೆಂದರೆ, ಈ ತರಹದ ರಚನೆಗಳು ಸಾಮಾನ್ಯವಾಗಿ ಭಾರತ ಹಿಡಿದು ಕೇವಲ ಕೆಲವೆ ದೇಶಗಳಲ್ಲಿ ಮಾತ್ರ ಕಂಡುಬರುತ್ತವೆ.

ಭಾರತದಲ್ಲಿ ಇಂಡೊ-ಸಾರ್ಸೆನಿಕ್ ವಾಸ್ತುಶೈಲಿಯಲ್ಲಿ ಪ್ರಪ್ರಥಮವಾಗಿ ನಿರ್ಮಿಸಲಾದ ರಚನೆಯೆಂದರೆ ಇಂದಿನ ತಮಿಳುನಾಡಿನ ಚೆನ್ನೈನಲ್ಲಿರುವ ಚಿಲ್ಪೌಕ್ ಅರಮನೆ. ಹಾಗಾದರೆ ಈ ರೀತಿಯ ವಾಸ್ತುಶೈಲಿಯನ್ನು ಭಾರತದ ಯಾವ ಯಾವ ಕಟ್ಟಡದಲ್ಲಿ ಕಾಣಬಹುದೆಂದು ಈ ಲೇಖನದ ಮೂಲಕ ತಿಳಿಯಿರಿ. ವಾಸ್ತುವಿನ್ಯಾಸದಲ್ಲಿ ಅಭಿರುಚಿಯಿರುವ ಪ್ರವಾಸಿಗರು ಖಂಡಿತವಾಗಿಯೂ ಇವುಗಳನ್ನು ಒಮ್ಮೆ ನೋಡಲೇಬೇಕು.

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ವಿಕ್ಟೋರಿಯಾ ಮೆಮೋರಿಯಲ್ : ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತಾ ನಗರದಲ್ಲಿರುವ ವಿಕ್ಟೋರಿಯಾ ಮೆಮೋರಿಯಲ್ ಈ ರೀತಿಯ ವಾಸ್ತುಶೈಲಿಗೆ ಉದಾಹರಣೆಯಾಗಿದೆ. 1906 ರಿಂದ 1921 ರ ಮಧ್ಯೆ ಈ ಅದ್ಭುತ ಕಟ್ಟಡದ ನಿರ್ಮಾಣವಾಗಿದೆ.

ಚಿತ್ರಕೃಪೆ: Sreejit Pramanik

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂದು ಹೂಗ್ಲಿ ನದಿಯ ತಟದ ಮೇಲೆ ನೆಲೆಸಿರುವ ಈ ಭವ್ಯ ರಚನೆಯು ಒಂದು ಅದ್ಭುತ ಸಂಗ್ರಹಾಲಯ ಹಾಗೂ ಪ್ರವಾಸಿ ಆಕರ್ಷಣೆಯಾಗಿ ಗುರುತಿಸಲ್ಪಡುತ್ತದೆ. ಪ್ರತಿನಿತ್ಯ ನೂರಾರು ಪ್ರವಾಸಿಗರಿಂದ ಇದು ಭೇಟಿ ನೀಡಲ್ಪಡುತ್ತದೆ.

ಚಿತ್ರಕೃಪೆ: CHINMOY BISWAS

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ತಮಿಳುನಾಡಿನ ಚೆನ್ನೈ ಮಹಾನಗರದಲ್ಲಿರುವ ಚೆನ್ನೈ ಹೈ ಕೋರ್ಟ್ ಕಟ್ಟಡ ಇಂಡೊ-ಸಾರ್ಸೆನಿಕ್ ವಾಸ್ತುಶೈಲಿಗೆ ಉದಾಹರಣೆಯಾಗಿದೆ. 1892 ರಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಯಿತು. ಸಾಕಷ್ಟು ವಿಶೇಷತೆಗಳನ್ನು ಈ ಕಟ್ಟಡವು ಹೊಂದಿದ್ದು ವಾಸ್ತು ವಿನ್ಯಾಸಗಾರರ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Yoga Balaji

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಅಲ್ಬರ್ಟ್ ಹಾಲ್ ಮ್ಯೂಸಿಯಂ : ರಾಜಸ್ಥಾನ ರಾಜ್ಯದ ಜಯಪುರದಲ್ಲಿ ಈ ಅದ್ಭುತ ವಾಸ್ತುಶೈಲಿಯ ಸಂಗ್ರಹಾಲಯವಿದೆ. ರಾಜ್ಯದ ಅತಿ ಪುರಾತನವಾದ ಸಂಗ್ರಹಾಲಯ ಇದಾಗಿದ್ದು ಇಂದು ಇದು ರಾಜ್ಯ ಸಂಗ್ರಹಾಲಯವಾಗಿ ಕಾರ್ಯನಿರ್ವಹಿಸುತ್ತದೆ.

ಚಿತ್ರಕೃಪೆ: Ajay Parikh 103

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

1887 ರಲ್ಲಿ ನಿರ್ಮಾಣ ಪೂರ್ಣಗೊಂಡು ಲೋಕಾರ್ಪಣೆಯಾದ ಇಂಡೊ-ಸಾರ್ಸೆನಿಕ್ ಶೈಲಿಯ ಈ ಕಟ್ಟಡವು ಇಂದು ಜಯಪುರದ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Rafatalam100

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಷನ್ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಾಗೆ ಮುಂಬೈನ ಪಾಲಿಕೆಯ ಕಟ್ಟಡ ಇದಾಗಿದ್ದು ಇಂಡೊ-ಸಾರ್ಸೆನಿಕ್ ವಾಸ್ತುಶೈಲಿಗೆ ಉದಾಹರಣೆಯಾಗಿದೆ. ಇದು 1880 ರಲ್ಲಿ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: Amit20081980

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಚೆನ್ನೈ ನಗರದ ಎಗ್ಮೋರ್ ಪ್ರದೇಶದಲ್ಲಿರುವ ರಾಷ್ಟ್ರೀಯ ಕಲಾ ಸಂಗ್ರಹಾಲಯದ ಕಟ್ಟಡ. ಚೆನ್ನೈ ನ್ಯಾಷನಲ್ ಆರ್ಟ್ ಗ್ಯಾಲರಿ.

ಚಿತ್ರಕೃಪೆ: slasha

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇದು ಛತ್ರಪತಿ ಶಿವಾಜಿ ಟರ್ಮಿನಸ್ ಕಟ್ಟಡ. ಮುಂಬೈ ನಗರದ ಮುಖ್ಯ ರೈಲು ನಿಲ್ದಾಣ ಕೇಂದ್ರ. ಹಿಂದೆ ವಿಕ್ಟೋರಿಯಾ ಟರ್ಮಿನಸ್ ಎಂಬ ಹೆಸರಿನಿಂದ ಇದು ಕರೆಯಲ್ಪಡುತ್ತಿತ್ತು. ಇಂದು ಅದ್ಭುತ ವಿನ್ಯಾಸದ ಕಟ್ಟಡ ಹೊಂದಿರುವ ಇದು ಪ್ರವಾಸಿ ಆಕರ್ಷಣೆಯಾಗಿಯೂ ಗಮನಸೆಳೆಯುತ್ತದೆ.

ಚಿತ್ರಕೃಪೆ: Dbenbenn

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇದು ಮಧ್ಯ ಪ್ರದೇಶ ರಾಜ್ಯದ ಇಂದೋರ್ ನಗರದಲ್ಲಿರುವ ಡಾಲಿ ಕಾಲೇಜು ಕಟ್ಟಡ ಹಾಗೂ ಇಂಡೊ-ಸಾರ್ಸೆನಿಕ್ ವಾಸ್ತುಶೈಲಿಗೆ ಉದಾಹರಣೆ.

ಚಿತ್ರಕೃಪೆ: Ekabhishek

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇದು ಗೇಟ್ ವೇ ಆಫ್ ಇಂಡಿಯಾ. ಮುಂಬೈನ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದು. ನಿತ್ಯವೂ ನೂರಾರು ಸಂಖ್ಯೆಯಲ್ಲಿ ಪ್ರವಸಿಗರು ಈ ಸ್ಮಾರಕಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Dakshbakshi98

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಪ್ರಧಾನ ಅಂಚೆ ಕಚೇರಿ : ಇಂಡೊ-ಸಾರ್ಸೆನಿಕ್ ವಾಸ್ತುಶೈಲಿಗೆ ಅದ್ಭುತ ಉದಾಹರಣೆಯಾಗಿದೆ ಮುಂಬೈ ನಗರದ ಪ್ರಧಾನ ಅಂಚೆ ಕಚೇರಿ. ಇನ್ನೊಂದು ಅಂಶವೆಂದರೆ, ಇಂಡೊ-ಸಾರ್ಸೆನಿಕ್ ವಾಸ್ತುಶೈಲಿಯು ಮೂಲತಃ ಬ್ರಿಟೀಷ್ ವಿನ್ಯಾಸಗಾರರಿಂದ ಪ್ರವರ್ಧಮಾನಕ್ಕೆ ಬಂದಿತು ಹಾಗೂ ಆ ಸಮಯದಲ್ಲಿ ಬ್ರಿಟಿಷರು ಮುಂಬೈ, ಚೆನ್ನೈ ಹಾಗೂ ಕೊಲ್ಕತ್ತಾದಲ್ಲಿ ಅತಿ ಹೆಚ್ಚು ಆಡಳಿತಾತ್ಮಕ ವ್ಯವಹಾರ ಹೊಂದಿದ್ದ ಕಾರಣ ಬಹು ಸಂಖ್ಯೆಯಲ್ಲಿ ಇಂತಹ ಕಟ್ಟಡಗಳನ್ನು ಸಾಮಾನ್ಯವಾಗಿ ಈ ನಗರಗಳಲ್ಲಿಯೆ ಕಾಣಬಹುದು. 1850-70 ರ ಮಧ್ಯದ ಸಮಯದಲ್ಲಿ.

ಚಿತ್ರಕೃಪೆ: wikimedia

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಪಂಜಾಬ್ ರಾಜ್ಯದ ದೊಡ್ಡ ನಗರವಾದ ಅಮೃತಸರ್ ನಲ್ಲಿರುವ ಇಂಡೊ-ಸಾರ್ಸೆನಿಕ್ ಶೈಲಿಗೆ ಉದಾಹರಣೆಯಾದ ಖಾಲ್ಸಾ ಕಾಲೇಜು.

ಚಿತ್ರಕೃಪೆ: Diego Delso

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಕರ್ನಾಟಕದ ಸಾಂಸ್ಕೃತಿಕ ನಗರಿ ಎಮ್ದೆ ಪ್ರಖ್ಯಾತವಾದ ಮೈಸೂರಿನಲ್ಲಿರುವ ವಿಶ್ವವಿಖ್ಯಾತ ಮೈಸೂರು ಅರಮನೆ ಇಂಡೊ-ಸಾರ್ಸೆನಿಕ್ ವಾಸ್ತುಶೈಲಿಗೆ ಉದಾಹರಣೆಯಾದ ಕರ್ನಾಟಕದಲ್ಲಿರುವ ರಚನೆಯಾಗಿದೆ. ವಿಶಾಲವಾಗಿ ನಿರ್ಮಿತವಾದ ಈ ಭವ್ಯ ಅರಮನೆಯು ನೋದುಗರನ್ನು ತನ್ನ ಅದ್ಭುತ ವಾಸ್ತುಶೈಲಿಯಿಂದಲೆ ಆಕರ್ಷಿಸುತ್ತದೆ.

ಚಿತ್ರಕೃಪೆ: Jim Ankan Deka

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಅಂಬಾ ವಿಲಾಸ ಅರಮನೆ ಎಮ್ತಲೂ ಸಹ ಕರೆಯಲ್ಪಡುವ ಈ ಅರಮನೆಯು ಮೈಸೂರು ರಾಜರಿಂದ ನಿರ್ಮಿತವಾಗಿದೆ. ಬ್ರಿಟೀಷ್ ವಿನ್ಯಾಸಗಾರರಿಂದ ಇದರ ವಿನ್ಯಾಸ ಮಾಡಲಾಗಿದ್ದು 1912 ರಲ್ಲಿ ಇದರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.

ಚಿತ್ರಕೃಪೆ: Muhammad Mahdi Karim

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಮೈಸೂರು ಅರಮನೆಯ ಮತ್ತೊಂದು ವಿಶೇಷವೆಂದರೆ ಇದರ ದೀಪಾಲಂಕಾರ ಅದರಲ್ಲೂ ವಿಶೇಷವಾಗಿ ದಸರಾ ಹಬ್ಬದ ಸಂದರ್ಭದಲ್ಲಿ. ಈ ಅದ್ಭುತ ನೋಟವನ್ನು ತಮ್ಮ ಕಣ್ಣು ಹಾಗು ಮನಸ್ಸುಗಳಲ್ಲಿ ತುಂಬಿಕೊಳ್ಳಲೆಂದೆ ದೇಶ ಹಾಗೂ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇದಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Arian Zwegers

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ನೇಪಿಯರ್ ಸಂಗ್ರಹಾಲಯ : ಕೇರಳದ ರಾಜಧಾನಿ ನಗರವಾದ ತಿರುವನಂತಪುರಂನ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾದ ನೇಪಿಯರ್ ಮ್ಯೂಸಿಯಂ ಅಥವಾ ಸಂಗ್ರಹಾಲಯ ಕಟ್ಟಡವು ಇಂಡೊ-ಸಾರ್ಸೆನಿಕ್ ವಾಸ್ತುಶೈಲಿಗೆ ಉದಾಹರಣೆಯಾಗಿದೆ.

ಚಿತ್ರಕೃಪೆ: Mohan K

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ರಿಪಾನ್ ಕಟ್ಟಡ : ಚೆನ್ನೈ ನಗರದಲ್ಲಿರುವ ಪಾಲಿಕೆಯ ಆಡಳಿತಾತ್ಮಕ ಕಚೇರಿಯ ಕಟ್ಟಡ ಇದಾಗಿದ್ದು ಇಂಡೊ-ಸಾರ್ಸೆನಿಕ್ ವಾಸ್ತುಶೈಲಿಗೆ ಉತ್ತಮವಾದ ಉದಾಹರಣೆಯಾಗಿದೆ.

ಚಿತ್ರಕೃಪೆ: wikimedia

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಮುಂಬೈನಲ್ಲಿರುವ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್. ಪ್ರಮುಖ ಹಾಗೂ ಗುರುತರ ಕೇಂದ್ರವಾದ ಈ ಹೋಟೆಲ್ ಇಂಡೊ-ಸಾರ್ಸೆನಿಕ್ ವಾಸ್ತುಶೈಲಿಯ ಅದ್ಭುತ ಉದಾಹರಣೆಯಾಗಿದೆ. ಕೆಲ ಸಮಯದ ಹಿಂದೆ ಈ ಕಟ್ಟಡ ಆತಂಕವಾದಿಗಳ ಆಕ್ರಮಣದಿಂದ ಸ್ವಲ್ಪ ನಾಶಗೊಂಡಿತಾದರೂ ಮತ್ತೆ ಭವ್ಯವಾಗಿ ಇಂದು ಎದೆ ಸೆಟೆಸಿ ನಿಂತಿದ್ದು ಆ ಹೇಡಿಗಳಿಗೆ ಅವಮಾನಿಸುವಂತಿದೆ.

ಚಿತ್ರಕೃಪೆ: Abhi278864

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಇಂಡೊ-ಸಾರ್ಸೆನಿಕ್ ಶೈಲಿಯ ಕಟ್ಟಡಗಳು:

ಹೋಟೆಲ್ ನ ಮತ್ತೊಂದು ಭವ್ಯ ನೋಟ.

ಚಿತ್ರಕೃಪೆ: Joe Ravi

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more