Search
  • Follow NativePlanet
Share
» »ಕಾಫಿಯ ಕಾಡುಗಳಲ್ಲಿ ಅಡ್ಡಾಡಬೇಕೇ ? ಹಾಗಿದ್ದಲ್ಲಿ ಈ ಸ್ಥಳಗಳಿಗೆ ಭೇಟಿ ಕೊಡಿ

ಕಾಫಿಯ ಕಾಡುಗಳಲ್ಲಿ ಅಡ್ಡಾಡಬೇಕೇ ? ಹಾಗಿದ್ದಲ್ಲಿ ಈ ಸ್ಥಳಗಳಿಗೆ ಭೇಟಿ ಕೊಡಿ

By Manjula Balaraj

ನೀವು ಕಾಫಿ ಪ್ರೇಮಿಯಾಗಿದ್ದರೆ ಮತ್ತು ನಿಮ್ಮ ದಿನವನ್ನು ಕಾಫಿಯೊಂದಿಗೆ ಪ್ರಾರಂಭಿಸಲು ಇಷ್ಟಪಡುವವರಾಗಿದ್ದಲ್ಲಿ, ಈ ಲೇಖನವನ್ನು ನೀವು ಓದಲೇ ಬೇಕು. ಇಲ್ಲಿ ನಾವು ಭಾರತದ ಕಾಫೀ ಅರಣ್ಯಗಳನ್ನು ಹೊಂದಿರುವ ಅಗ್ರಮಾನ್ಯ ರಾಜ್ಯಗಳ ಪಟ್ಟಿ ಮಾಡಿದ್ದೇವೆ ಅಷ್ಟೇ ಅಲ್ಲದೆ ಇವುಗಳು ಪರಿಪೂರ್ಣವಾದ ವಾರಾಂತ್ಯದಲ್ಲಿ ನೀವು ಭೇಟಿ ಕೊಡಬಹುದಾದ ತಾಣಗಳಾಗಿವೆ.

ಕಾಫಿ ಬೀಜಗಳ ಸುವಾಸನೆಯುಕ್ತ ತಾಜಾತನದ ಅನುಭವವನ್ನು ಕೊಡುವ ಕಾಫಿಗಳ ಅರಣ್ಯಗಳಲ್ಲಿ ನೀವೊಮ್ಮೆ ಅಡ್ಡಾಡಬಯಸುವುದಿಲ್ಲವೆ ?ಹೌದು ಎಂದಾದಲ್ಲಿ, ನೀವು ಈ ಕೆಳಗಿನ ರಾಜ್ಯಗಳಿಗೆ ಪ್ರವಾಸ ಹೋಗುವ ಯೋಜನೆ ಹಾಕಬೇಕು ಈ ರಾಜ್ಯಗಳಲ್ಲಿ ದೇಶದಲ್ಲಿಯೇ ಅತಿ ಹೆಚ್ಚಾಗಿ ಕಾಫಿ ಉತ್ಪಾದಿಸಲ್ಪಡುತ್ತವೆ.

ಕೇವಲ ಇಲ್ಲಿ ತಿರುಗಾಡಿಕೊಂಡು ಕಾಫಿಯನ್ನು ಸೇವಿಸುವುದು ಮಾತ್ರವಲ್ಲದೆ ಭಾರತದ ಈ ಸ್ಥಳಗಳಲ್ಲಿ ಕಾಫಿ ಉತ್ಪಾದನೆ ಮತ್ತು ಅದರ ಇತಿಹಾಸದ ಬಗ್ಗೆಯೂ ಕೂಡಾ ಅನ್ವೇಷಣೆ ಮಾಡಬಹುದಾಗಿದೆ. ಆದುದರಿಂದ ಇಂತಹ ಕಾಫಿ ಉತ್ಪಾದಿಸಲ್ಪಡುವ ಅರಣ್ಯಗಳಿಗೆ ನೀವೊಮ್ಮೆ ಭೇಟಿ ಕೊಡಲು ಯೋಜನೆ ಮಾಡುವುದು ಒಳಿತು ಎಂದು ನಿಮಗೆ ಅನಿಸುವುದಿಲ್ಲವೆ? ಈ ವಿಷಯದ ಬಗ್ಗೆ ನಮ್ಮ ಲೇಖನದಲ್ಲಿ ಇನ್ನಷ್ಟು ಓದಿ.

ಕರ್ನಾಟಕ

ಕರ್ನಾಟಕ

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಫಿಯನ್ನು ಪರಿಚಯಿಸಿರುವುದು ಎಲ್ಲಿ ಎಂದು ನಿಮಗೆ ತಿಳಿದಿದೆಯೆ? ಹೌದು ಅದು ಖಂಡಿತವಾಗಿಯೂ ಕರ್ನಾಟಕದಲ್ಲಿ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಕರ್ನಾಟಕದ ಚಿಕ್ಕಮಗಳೂರು ಕಾಫಿಯ ಜನ್ಮಸ್ಥಳವೆಂದು ಪ್ರಸಿದ್ದಿಯನ್ನು ಪಡೆದಿದೆ.

ಇಂದು ಕರ್ನಾಟಕವು ದೇಶದ ಅತೀ ದೊಡ್ಡ ಕಾಫಿ ಉತ್ಪಾದಕ ರಾಜ್ಯವೆನಿಸಿದ್ದು ದೇಶದ ಸರಾಸರಿ ಕಾಫಿ ಉತ್ಪಾದನೆಯ 70% ಕ್ಕಿಂತಲೂ ಹೆಚ್ಚಿನ ಉತ್ಪಾದನೆಯನ್ನು ಇಲ್ಲಿ ಮಾಡಲಾಗುತ್ತದೆ. ಆದುದರಿಂದ ರಾಜ್ಯದ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಜಿಲ್ಲೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೆಲ್ಲಾ ಕಾಫಿ ಉತ್ಪಾದನೆ ಮಾಡಲಾಗುತ್ತದೆ ಮತ್ತು ಇಲ್ಲಿ ಕಾಫಿ ತೋಟಗಳನ್ನು ಕಾಣಬಹುದಾಗಿದೆ.

ಚಿಕ್ಕಮಗಳೂರಿನ ಹೊರತಾಗಿಯೂ ಇನ್ನೂ ಕೆಲವು ಪ್ರಮುಖ ಸ್ಥಳಗಳಲ್ಲಿ ಕಾಫಿ ಉತ್ಪಾದನೆ ಮಾಡಲಾಗುತ್ತದೆ. ಅವುಗಳಲ್ಲಿ ಕೂರ್ಗ್, ಹಾಸನ, ಮತ್ತು ಶಿವಮೊಗ್ಗ ಇತ್ಯಾದಿ ಸ್ಥಳಗಳೂ ಸೇರಿವೆ. ಈ ಕಾಡುಗಳು ಮೂಲ ಪ್ರಕೃತಿಯ ಸಾರವನ್ನು ಅನುಭವಕ್ಕೆ ತರುವಂತಹುದಾಗಿದ್ದು ನಿಮ್ಮನ್ನು ತೃಪ್ತಿ ಪಡಿಸುವ ಸೂಕ್ತ ಸ್ಥಳಗಳೆನಿಸಿವೆ . ನೀವು ದೇಶದಲ್ಲಿಯೇ ಅತೀ ಉತ್ತಮವಾದ ಫಿಲ್ಟರ್ ಕಾಫಿಯನ್ನು ಸವಿಯಬಹುದಾದ ಸ್ಥಳಕ್ಕೆ ಹೋಗಲು ಇಷ್ಟ ಪಡುವುದಿಲ್ಲವೆ?

ತಮಿಳುನಾಡು

ತಮಿಳುನಾಡು

ದೇವಾಲಯಗಳು ಮತ್ತು ಐತಿಹಾಸಿಕ ಸ್ಥಳಗಳಿಗೆ ಹೆಸರುವಾಸಿಯಾಗಿರುವ ತಮಿಳುನಾಡು ಎಲ್ಲಾ ತರಹದ ಪ್ರವಾಸಿ ತಾಣಗಳನ್ನು ಹೊಂದಿದ ದೇಶದಲ್ಲಿಯ ಕೆಲವೇ ಕೆಲವು ರಾಜ್ಯಗಳಲ್ಲೊಂದಾಗಿದೆ. ಆದುದರಿಂದ ಈ ರಾಜ್ಯವು ಕಾಫಿ ಪ್ರಿಯರನ್ನು ನಿರಾಸೆಗೊಳಿಸಲು ಸಾಧ್ಯವೆ? ಕೂನೂರು, ಯೆರ್ಕಾಡ್, ಊಟಿ ಮತ್ತು ಕೊಡೈಕೆನಾಲ್ ನಂತಹ ಕೆಲವು ಪ್ರಾಂತ್ಯಗಳು ಅನೇಕ ಕಾಫಿ ಅರಣ್ಯಗಳ ನೆಲೆಯಾಗಿದೆ. ಇಲ್ಲಿ ನೀವು ವಿಶ್ರಾಂತಿ ತೆಗೆದುಕೊಂಡು ಸುಂದರವಾದ ಕಾಫಿ ಎಸ್ಟೇಟ್ ಗಳ ಮಧ್ಯೆ ಆನಂದಿಸಬಹುದಾಗಿದೆ.

ನೀವು ಈ ಕಾಫೀ ತೋಟಗಳ ಗಡಿಯೊಳಗೆ ಪ್ರವೇಶಿಸಿದಲ್ಲಿ ಇಲ್ಲಿಯ ಸಂಪೂರ್ಣವಾಗಿ ವಿಭಿನ್ನವಾಗಿರುವ ಫಿಲ್ಟರ್ ಕಾಫಿಯ ರುಚಿಯನ್ನು ಸವಿಯಲು ಮರೆಯದಿರಿ. ಇಲ್ಲಿಯ ಸುತ್ತಮುತ್ತಲಿನ ಪ್ರದೇಶಗಳನ್ನು ನೀವು ಅನ್ವೇಷಣೆ ಮಾಡಬಹುದು ಮತ್ತು ತಮಿಳುನಾಡಿನ ಇನ್ನಿತರ ಭವ್ಯತೆಗಳನ್ನೂ ಕೂಡ ಭೇಟಿ ಕೊಡಬಹುದು ಅವುಗಲಲ್ಲಿ ತೊರೆಗಳು, ಜಲಪಾತಗಳು ಬೆಟ್ಟಗಳು ಮತ್ತು ಹುಲ್ಲುಗಾವಲು ಪ್ರದೇಶಗಳು ಇತ್ಯಾದಿಗಳು ಸೇರಿವೆ.

ಕೇರಳ

ಕೇರಳ

ದೇವರ ಸ್ವಂತ ಊರಿನಲ್ಲಿ ಏನು ಇಲ್ಲ ಎನ್ನಬಹುದು ? ಹೌದು ನಿಸ್ಸಂದೇಹವಾಗಿಯೂ ಕೇರಳವು ಎಲ್ಲಾ ತರಹದ ಪ್ರವಾಸಿಗರನ್ನು ತೃಪ್ತಿ ಪಡಿಸುವ ಸಾಮರ್ಥ್ಯವನ್ನು ಹೊಂದಿರುವ ರಾಜ್ಯವಾಗಿದೆ. ಇದು ತನ್ನ ಸುಂದರವಾದ ಹಿನ್ನೀರಿನ ಪ್ರದೇಶಗಳನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿದ್ದರೂ ಕೂಡಾ ಪ್ರಾಚೀನ ಕಡಲತೀರಗಳು ಮತ್ತು ಆಹ್ಲಾದಕರವಾಗಿರುವ ಸ್ಥಳಗಳನ್ನೂ ಹೊಂದಿದೆ ಅಲ್ಲದೆ ಸುಂದರವಾದ ಚಹಾ ಮತ್ತು ಕಾಫಿ ತೋಟಗಳನ್ನೂ ಈ ಸ್ವರ್ಗ ಸದೃಶ್ಯವಾದ ರಾಜ್ಯವು ಸರಿಸಮನಾಗಿ ಹೊಂದಿದ್ದು ಅನ್ವೇಷಣೆಗೆ ಮತ್ತು ಪ್ರಸಿದ್ದಿಗೆ ಯೋಗ್ಯವಾದುದಾಗಿದೆ.

ಮಲಬಾರ್ ಪ್ರಾಂತ್ಯದಲ್ಲಿ ವಯನಾಡ್, ಕಾಸರಗೋಡು

ಕೋಝಿಕೋಡ್, ಕನ್ನೂರ್ ಮತ್ತು ಪಾಲಕ್ಕಾಡ್ ಪ್ರದೇಶಗಳು ಸೇರಿದ್ದು ಇವು ಕೇರಳದ ಪ್ರಮುಖ ಭಾಗಗಳಾಗಿವೆ ಇಲ್ಲಿ ಹಲವಾರು ದಶಕಗಳಿಂದಲೂ ಕಾಫಿ ತೋಟಗಳಿದ್ದು ಕಾಫಿ ಉತ್ಪಾದಿಸಲಾಗುತ್ತದೆ. ಪ್ರಕೃತಿಯ ಬಗ್ಗೆ ಅಭಿರುಚಿಯನ್ನು ಹೊಂದಿರುವವರಿಗೆ ಕೇರಳಕ್ಕಿಂತ ಉತ್ತಮವಾದ ಜಾಗ ಇನ್ನೊಂದಿಲ್ಲ ಎಂದು ಅನಿಸುವುದಿಲ್ಲವೆ? ಆದುದರಿಂದ ನೀವು ಇಲ್ಲಿಯ ಮಲಬಾರ್ ಪ್ರಾಂತ್ಯವನ್ನು ಭೇಟಿ ಕೊಡಲು ಹಾಗು ಅತ್ಯಂತ ಬಿಸಿಯಾದ ಮತ್ತು ತಾಜಾ ಕಾಫಿಯ ರುಚಿಯನ್ನು ಸವಿಯುವುದನ್ನು ಮರೆಯಲು ಸಾಧ್ಯವೆ?

ಒಡಿಶಾ

ಒಡಿಶಾ

ಪಟ್ಟಿಯಲ್ಲಿನ ಕಡಿಮೆ -ನಿರೀಕ್ಷಿತ ಹೆಸರು ಒಡಿಶಾ. ಇದು ಒಂದು ಅದ್ಬುತವಾದ ರಾಜ್ಯವಾಗಿದ್ದು ಇದು ಅನೇಕ ಅನ್ವೇಷಣೆಗೊಳಪಡದೇ ಇರುವ ಬೀಚ್ ಗಳು ಮತ್ತು ಅನೇಕ ಯಾತ್ರೀ ಸ್ಥಳಗಳ ನೆಲೆಯಾಗಿದೆ. ಆದರೆ ಭಾರತದ ಕಾಫೀ ಉತ್ಪಾದನೆಯಲ್ಲಿ ಒಡಿಶಾದ ಮಹತ್ತರದ ಕೊಡುಗೆ ಇದೆ ಎಂಬುದು ನಿಮಗೆ ತಿಳಿದಿದೆಯೇ ?

ಇದನ್ನು ತಿಳಿದು ನೀವು ಅಚ್ಚರಿಗೊಳಗಾದಲ್ಲಿ ನಾವು ನಿಮಗೆ ಒಡಿಶಾದ ಬಗ್ಗೆ ವಿವರಣೆ ನೀಡುತ್ತಿದ್ದೇವೆ. ಒಡಿಶಾವು ಇತ್ತೀಚೆಗೆ ತನ್ನ ಕಾಫೀ ಸಾಗುವಳಿಯನ್ನು ವಿಸ್ತರಿಸುವ ಗುರಿಯನ್ನು ಪ್ರಸ್ತಾಪಿಸಿದೆ ಮತ್ತು ಅದರ ಕುರಿತಾದ ವ್ಯಾಪಕವಾಗಿ ಕಾರ್ಯ ನಿರ್ವಹಿಸುತ್ತಿದೆ.

ನೀವು ಸುತ್ತಾಡಬಹುದಾದ ಮತ್ತು ಆನಂದಿಸಬಹುದಾದ ಕಾಫೀ ಕಾಡುಗಳಲ್ಲಿ ಕೊರಪುಟ್ ಮತ್ತು ದರಿಂಗ್ ಬಡಿ ಪ್ರದೇಶಗಳು ಸೇರಿವೆ. ಆದುದರಿಂದ ಮುಂದಿನ ದಿನಗಳಲ್ಲಿ ನೀವು ಒಡಿಶಾದ ಪ್ರಸಿದ್ದ ಪ್ರಾಂತ್ಯಗಳಿಗೆ ಭೇಟಿ ನೀಡುವ ಪ್ರವಾಸವನ್ನು ಯೋಜನೆ ಮಾಡುವಾಗ ಈ ಕಾಫೀ ಎಸ್ಟೇಟುಗಳಿಗೂ ಭೇಟಿ ಕೊಡಿ. ಇದು ನಿಮಗೆ ಒಂದು ಆಪ್ಭೀಟ್ ಅನುಭವವನ್ನು ಕೊಡುವುದರಲ್ಲಿ ಸಂಶಯವೇ ಇಲ್ಲ.

ಆಂಧ್ರ ಪ್ರದೇಶ

ಆಂಧ್ರ ಪ್ರದೇಶ

ಹೊಸದಾಗಿ ಅಭಿವೃದ್ದಿ ಹೊಂದಿದ ಕಾಫೀ ಎಸ್ಟೇಟುಗಳನ್ನು ಹೊಂದಿದ ಆಂಧ್ರಪ್ರದೇಶವು ದೇಶದ ಅತೀ ಹೆಚ್ಚು ಕಾಫೀ ಉತ್ಪಾದನೆ ಮಾಡುವ ನಾಲ್ಕನೆ ದೊಡ್ಡ ರಾಜ್ಯವಾಗಿದ್ದು ಇದು ತಮಿಳುನಾಡಿಗೆ ಪೈಪೋಟಿ ನೀಡುತ್ತಿದೆ. ರಾಜ್ಯದಲ್ಲಿರುವ ತೋಟಗಳಿಂದಾಗಿ ಹೆಚ್ಚಿನ ಪ್ರಮಾಣದ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಲಾಗಿದೆ.

ಇಲ್ಲಿ ಸುಂದರವಾದ ಮತ್ತು ಆಹ್ಲಾದಕರವಾದ ವಾತಾವರಣವನ್ನು ನೀಡುವ ಪ್ರಮುಖ ಕಾಫೀ ಎಸ್ಟೇಟ್ ಪ್ರದೇಶಗಳಲ್ಲಿ ಅರಕು ಕಣಿವೆ ಮತ್ತು ಅನಂತಗಿರಿಗಳು ಸೇರಿವೆ. ಆದುದರಿಂದ ಈ ಋತುವಿನಲ್ಲಿ ಅರಕು ಕಣಿವೆಗೆ ಭೇಟಿ ಮಾಡುವ ಕುರಿತಾಗಿ ಯೋಚಿಸಿದರೆ ಹೇಗೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more