Search
  • Follow NativePlanet
Share
» »ಮಹಾರಾಷ್ಟ್ರದಲ್ಲಿ ಈ ಬೀಚ್‌ಗಳೂ ಇವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ...

ಮಹಾರಾಷ್ಟ್ರದಲ್ಲಿ ಈ ಬೀಚ್‌ಗಳೂ ಇವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ...

By Manjula Balaraj Tantry

ಕರ್ನಾಟಕದ ಕಾಶ್ಮೀರಕ್ಕೋಂದು ಪ್ರಯಾಣ...

ಈ ವಾರಾಂತ್ಯದಲ್ಲಿ ಇಂತಹ ನೈಸರ್ಗಿಕ ಸೌಂದರ್ಯವನ್ನು ಅನ್ವೇಷಣೆ ಮಾಡಿದರೆ ಹೇಗಿರಬಹುದು? ಮಹಾರಾಷ್ಟ್ರದ ಕಡಿಮೆ ಪ್ರಸಿದ್ದಿಗೊಳಗಾದ ಬೀಚ್ ಗಳ ಬಗ್ಗೆ ಓದಿ ತಿಳಿಯಿರಿ. ಅಲ್ಲದೆ ಮಹಾರಾಷ್ಟ್ರದ ಆಫ್ಬೀಟ್ ಪ್ರವಾಸೀ ಸ್ಥಳಗಳ ಬಗ್ಗೆ ತಿಳಿಯಿರಿ.

ನಾಗೋನ್ ಬೀಚ್

ನಾಗೋನ್ ಬೀಚ್

ಮಹಾರಾಷ್ಟ್ರದ ಕೊಂಕಣ ಪ್ರಾಂತ್ಯದಲ್ಲಿರುವ ನಾಗೋನ್ ಬೀಚ್ ಒಂದು ಅತ್ಯಂತ ಸ್ವಚ್ಚವಾದ ಕಡಲತೀರಗಳಲ್ಲೊಂದಾಗಿದೆ. ಇಲ್ಲಿ ಜಲ ಕ್ರೀಡೆಗಳಿರುವ ಕಾರಣದಿಂದಾಗಿ ಇದು ಜನಪ್ರಿಯವಾಗಿದ್ದು ಎಲ್ಲಾ ರಾಜ್ಯಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಇದು ಸ್ಥಳೀಯರಿಗೆ ಮತ್ತು ಕಾಲೋಚಿತ ಪ್ರವಾಸಿಗರಲ್ಲಿ ಜನಪ್ರಿಯವೆನಿಸಿದ್ದರೂ ಕೂಡಾ ಇದು ತನ್ನ ಆಕರ್ಷಣೀಯ ದೃಶ್ಯ ಸೌಂದರ್ಯತೆಗಾಗಿ ಗುರುತಿಸಲ್ಪಟ್ಟಿದೆ. ನಾಗೋನ್ ಬೀಚ್ ನಲ್ಲಿ ನಾವು ಮಾಡಬಹುದಾದ ಜಲಕ್ರೀಡೆಗಳೆಂದರೆ ಪ್ಯಾರಾಸೈಲಿಂಗ್ ಮತ್ತು ಬೋಟಿಂಗ್,ಮೀನುಗಾರಿಕೆ. ನೀವು ಅದೇ ಹಳೆಯ ಜನಭರಿತ ಕಡಲ ತೀರಗಳಿಗೆ ಪದೇ ಪದೆ ಭೇಟಿ ನೀಡಿ ಬೇಸರಗೊಂಡಿದ್ದರೆ ಈ ಅದ್ಬುತವಾದ ಕಡಲತೀರಕ್ಕೆ ಭೇಟಿ ಕೊಡಿ. ಇದು ಮುಂಬೈಗೆ ಸುಮಾರು 115 ಕಿ,ಮೀ ಅಂತರದಲ್ಲಿದ್ದು, ಮುಂಬೈನ ಪ್ರವಾಸಿಗರು ಇಲ್ಲಿಗೆ ಹೆಚ್ಚಾಗಿ ಭೇಟಿ ಕೊಡುತ್ತಿರುತ್ತಾರೆ. ಆದುದರಿಂದ ಬೇಸಿಗೆ ಋತುವಿನಲ್ಲಿ ಇಲ್ಲಿ ಬೇರೆ ಬೇರೆ ರಾಜ್ಯದ ಜನರೂ ಭೇಟಿ ಕೊಡುವುದನ್ನು ಕಾಣಬಹುದಾಗಿದೆ.

ಮಾಲ್ವನ್ ಬೀಚ್

ಮಾಲ್ವನ್ ಬೀಚ್

PC: Shreyas m balappanavar

ವಾರಾಂತ್ಯದ ರಜಾ ದಿನವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಡನೆ ಕಳೆಯಲು ಮಾಲ್ವನ್ ಬೀಚ್ ಒಂದು ಸೂಕ್ತವಾದ ತಾಣವಾಗಿದೆ. ಈ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಅನೇಕ ಆಸಕ್ತಿದಾಯಕ ಸ್ಥಳಗಳಿರುವುದರಿಂದ ಇದು ಕಾಲೋಚಿತ ಪ್ರವಾಸಿಗರು ಮತ್ತು ಸ್ಥಳೀಯರಲ್ಲಿ ಒಂದು ಅತ್ಯಂತ ನೆಚ್ಚಿನ ಸ್ಥಳವೆನಿಸಿದೆ.ಮಾಲ್ವನ್ ಬೀಚ್ ಸಿಂಧುದುರ್ಗ ಜಿಲ್ಲೆಯಲ್ಲಿದೆ ಮತ್ತು ಇದು ಇಲ್ಲಿಯ ಕೋಟೆಗಾಗಿ ಅತ್ಯಂತ ಜನಪ್ರಿಯವಾಗಿದೆ. ಈ ಕೋಟೆಯು 17ನೇ ಶತಮಾನದ ಮರಾಠರ ಕಾಲದ್ದಾಗಿದೆ. ಈ ಜಾಗವು ಭೇಟಿ ಕೊಡಬಹುದಾದಂತಹ ಇನ್ನೂ ಅನೇಕ ಸ್ಥಳಗಳನ್ನು ಸುತ್ತ ಮುತ್ತಲಲ್ಲಿ ಒಳಗೊಂಡಿದೆ.

ಅವುಗಳಲ್ಲಿ ರಾಕ್ ಗಾರ್ಡನ್, ಜೈ ಗಣೇಶ ಮಂದಿರ ಮತ್ತು ರಾಮೇಶ್ವರ ದೇವಾಲಯ ಇತ್ಯಾದಿ. ಮಾಲ್ವನ್ ಬೀಚ್ ಗೆ ಭೇಟಿಕೊಡುವುದರ ಹೊರತಾಗಿ , ನೀವು ಇದರ ಪಕ್ಕದಲ್ಲಿರುವ ಇನ್ನಿತರ ಬೀಚ್ ಗಳಾದ ಚಿಲ್ವಾ ಬೀಚ್ ಮತ್ತು ತರ್ಕಾರ್ಲಿ ಬೀಚ್ ಗಳಿಗೂ ಭೇಟಿ ಕೊಡಬಹುದಾಗಿದೆ. ನೀವು ಪ್ರಕೃತಿಯ ಅಸ್ತಿತ್ವವನ್ನು ನೋಡಲು ಬಯಸುತ್ತಿದ್ದಲ್ಲಿ ಪಾಮ್ ಮರಗಳು ಮತ್ತು ಹಸಿರು ಸಸ್ಯವರ್ಗಗಳಿಂದ ಮತ್ತು ಮರಳಿನಿಂದ ಆವೃತ್ತ ವಾಗಿರುವ ಈ ಬೀಚ್ ನೀವು ಭೇಟಿ ಕೊಡಲೇ ಬೇಕಾದ ಕಡಲತೀರವಾಗಿದೆ. ಮಾಲ್ವನ್ ಬೀಚ್ ನಲ್ಲಿ ನೀವು ಬೋಟಿಂಗ್ ಮತ್ತು ಪ್ಯಾರಾ ಸೈಲಿಂಗ್ ಗೆ ಕೂಡಾ ಹೋಗಬಹುದಾಗಿದೆ.

ಅಗರ್ದಾಂಡ ಬೀಚ್

ಅಗರ್ದಾಂಡ ಬೀಚ್

ತೆಂಗಿನ ಮರಗಳು ಮತ್ತು ಅಡಿಕೆ ಮರಗಳಿಂದ ಆವೃತ್ತವಾಗಿರುವ ಈ ಕಡಲತೀರದ ವಾತಾವರಣವು ಪ್ರಕೃತಿಯ ಒಂದು ಜೀವಂತಿಕೆಗೆ ಉದಾಹರಣೆಯಾಗಿದೆ. ವಾಣಿಜ್ಯೀಕರಣ ಹೊಂದುತ್ತಿರುವ ಜಗತ್ತಿನಲ್ಲಿಯ ಸಂಕೀರ್ಣತೆಯಿಂದ ದೂರದಲ್ಲಿರುವ ಅಗರ್ದಾಂಡ ಬೀಚ್ ಒಂದು ಸ್ವರ್ಗದಂತಿದೆ. ಇದು ರಾಯ್ಗಡ್ ಜಿಲ್ಲೆಯಲ್ಲಿದೆ ಮತ್ತು ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಕೆಲವು ಸ್ಥಳೀಯರು ಇಲ್ಲಿಗೆ ಭೇಟಿ ಕೊಡುತ್ತಾರೆ. ಇದು ದಿನಕಳೆದಂತೆ ಇದರ ಪ್ರಶಾಂತವಾದ ಪರಿಸರದಿಂದಾಗಿ ಪ್ರಸಿದ್ದಿಯನ್ನು ಪಡೆಯುತ್ತಿದೆ.

ಇಲ್ಲಿ ನೀವು ಜಂಜೀರಾ ಕೋಟೆಗೂ ಭೇಟಿ ಕೊಡಬಹುದಾಗಿದೆ. ಇದು ಅಗರ್ದಾಂಡಾ ಬೀಚ್ ಗೆ ಹತ್ತಿರದಲ್ಲಿದೆ ಮತ್ತು ಅದ್ಬುತವಾದ ವಾಸ್ತುಶಿಲ್ಪವನ್ನು ಪ್ರದರ್ಶಿಸುತ್ತದೆ.ಮೂರೂ ಕಡೆಗಳಲ್ಲಿಯೂ ಅರಬ್ಬಿ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಈ ಕೋಟೆಯು ಸಂದರ್ಶಕರಿಗೆ ಹತ್ತಿರದ ಸ್ಥಳಗಳ ಒಂದು ನಯನ ಮನೋಹರ ದೃಶ್ಯವನ್ನು ಒದಗಿಸಿಕೊಡುತ್ತದೆ. ಆದುದರಿಂದ ಪ್ರಕೃತಿ ತಾಯಿಯ ಮಡಿಲಲ್ಲಿ ನಿಮ್ಮ ರಜಾದಿನಗಳನ್ನು ಆರಾಮವಾಗಿ ಕಳೆದರೆ ಹೇಗಿರಬಹುದು?

ಕಾಶೀದ್ ಬೀಚ್

ಕಾಶೀದ್ ಬೀಚ್

ಕಾಶೀದ್ ಬೀಚ್ ಪೂನಾದಿಂದ ಕೇವಲ 125 ಕಿ.ಮೀ ಅಂತರದಲ್ಲಿದ್ದು, ಮಹಾರಾಷ್ಟ್ರದ ಅತ್ಯಂತ ಸುಂದರವಾದ ಬೀಚ್ ಗಳಲ್ಲಿ ಒಂದಾಗಿದೆ. ಈ ಹೊಂಬಣ್ಣದ ಮರಳಿನಲ್ಲಿ ಕಾಶೀದ್ ಹಿತವಾದ ನೀರಿನಲ್ಲಿ ಅನೇಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಪ್ರಮುಖ ಚಟುವಟಿಕೆಗಳಲ್ಲಿ ಬನಾನ ಬೋಟ್ ವಿಹಾರ, ಸ್ನೋರ್ಕ್ಲಿಂಗ್,ಪ್ಯಾರಾ ಸೈಲಿಂಗ್ ಮತ್ತು ಕುದುರೆ ಸವಾರಿ ಮುಂತಾದುವುಗಳು ಸೇರಿವೆ.

ಬಂಡೆಗಳು, ಕಲ್ಲುಗಳು ಮತ್ತು ಮರಳುಗಳ ಉಪಸ್ಥಿತಿಯಿಂದಾಗಿ ಕಾಶೀದ್ ಬೀಚ್ ಮಹಾರಾಷ್ಟ್ರದ ಇತರ ಸಾಮಾನ್ಯ ಮರಳು ಕಡಲತೀರಗಳಿಂದ ವಿಭಿನ್ನವಾಗಿದೆ.ನೀವು ಇವುಗಳ ಸುತ್ತಮುತ್ತಲನ್ನು ಅನ್ವೇಷಿಸಬಹುದಾಗಿದೆ. ಮತ್ತು ಆಲಿಭಾಗ್ ಬೀಚ್, ಜಂಜೀರಾ ಕೋಟೆ, ಕೋರ್ಲೈ ಕೋಟೆ ಮತ್ತು ಫನ್ಸಾದ್ ವನ್ಯಜೀವಿ ಅಭಯಾರಣ್ಯವನ್ನೂ ಭೇಟಿ ಮಾಡಬಹುದು. ಆದುದರಿಂದ ಇಲ್ಲಿ ಇಷ್ಟೊಂದು ನೋಡಲು ಇರುವಾಗ ಏಕೆ ಭೇಟಿ ನೀಡಬಾರದು?

ರತ್ನಗಿರಿ ಬೀಚ್

ರತ್ನಗಿರಿ ಬೀಚ್

PC: Sachinshelar486

ದಟ್ಟಣೆಯಿಂದ ಏಕಾಂಗಿಯಾಗಿ ಬೆಳೆಯುತ್ತಿರುವ ಮತ್ತೊಂದು ಮೋಡಿಮಾಡುವ ಬೀಚ್, ರತ್ನಾಗಿರಿ ಬೀಚ್ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿರುವ ಇದು ಇನ್ನೊಂದು ಅದ್ಬುತವಾದ ಬೀಚ್ ಆಗಿದೆ. ಇದು ಮುಖ್ಯವಾಗಿ ಮೀನುಗಾರಿಕೆ ಮತ್ತು ಬೋಟಿಂಗ್ ಗೆ ಪ್ರಸಿದ್ದವಾಗಿದೆ. ಆದುದರಿಂದ, ಇಲ್ಲಿ ಅನ್ವೇಷಿಸಬೇಕಾದುದು ಬೇಕಾದಷ್ಟಿದೆ. ಇಲ್ಲಿ ಹಸಿರು ಸಸ್ಯವರ್ಗದಿಂದ ಮತ್ತು ಸುಂದರವಾದ ಬೆಟ್ಟಗಳವರೆಗೆ ನಯನ ಮನೋಹರವಾದ ದೃಶ್ಯಗಳನ್ನು ಒಳಗೊಂಡಿದೆ. ಆದುದರಿಂದ ಈ ವಾರಾಂತ್ಯದಲ್ಲಿ ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ರತ್ನಗಿರಿ ಬೀಚ್ ಗೆ ಭೇಟಿ ಕೊಡಲು ಆಯೋಜಿಸಿದರೆ ಹೇಗೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X