Search
  • Follow NativePlanet
Share
» »ಕರ್ನಾಟಕದ ಕಾಶ್ಮೀರಕ್ಕೋಂದು ಪ್ರಯಾಣ…

ಕರ್ನಾಟಕದ ಕಾಶ್ಮೀರಕ್ಕೋಂದು ಪ್ರಯಾಣ…

ಕರ್ನಾಟಕದ ಕಾಶ್ಮೀರವೆಂದೇ ಪ್ರಸಿದ್ಧವಾಗಿರುವ ಕೊಡಗನ್ನು ಭಾರತದ ಸ್ಕಾಟ್‌ಲ್ಯಾಂಡ್‌ ಎಂದೂ ಕರೆಯಲಾಗುತ್ತದೆ. ಈ ಪ್ರದೇಶವು ಸುತ್ತಲೂ ಹಚ್ಚಹಸುರಿನಿಂದ ಕೂಡಿದ್ದು, ಮಂಜಿನ ಗುಡ್ಡಗಳು, ಕಾಫಿ ತೋಟಗಳು, ಟೀ ಎಸ್ಟೇಟ್‌ಗಳು, ಕಿತ್ತಳೆ ತೋಟಗಳು ಹಾಗೂ ಜಲಪಾತಗಳಿಂದಾಗಿ ತುಂಬಾ ಜನಪ್ರಿಯವಾಗಿದೆ.

ದಕ್ಣಿಣ ಭಾರತದಲ್ಲೇ ಇದು ತುಂಬಾ ಜನಪ್ರಿಯ ಸ್ಥಳವಾಗಿದ್ದು ವಾರದ ರಜಾ ಕಳೆಯಲು ಉತ್ತಮ ತಾಣವೂ ಆಗಿದೆ. ವಿಶೇಷವಾಗಿ ಕರ್ನಾಟಕದ ನೆರೆಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಹಾಸನ ಮತ್ತು ಮೈಸೂರಿನವರಿಗೆ ಮತ್ತು ಕೇರಳದ ಕಣ್ಣೂರು, ವಯನಾಡು ಜಿಲ್ಲೆಗಳ ಜನರಿಗೆ ಇದು ತುಂಬಾ ಅಚ್ಚುಮೆಚ್ಚಿನ ತಾಣವಾಗಿದೆ.

ಸಣ್ಣ ಜಿಲ್ಲೆ ಕೊಡಗು

ಸಣ್ಣ ಜಿಲ್ಲೆ ಕೊಡಗು

PC:Gaurav Vasare

ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ ಎಂಬ ಮೂರು ತಾಲೂಕುಗಳನ್ನು ಹೊಂದುವ ಮೂಲಕ ಕರ್ನಾಟಕದಲ್ಲೇ ಅತಿ ಸಣ್ಣ ಜಿಲ್ಲೆಯಾಗಿದೆ. ಕೊಡಗು ಜಿಲ್ಲೆಯ ಕೇಂದ್ರ ಮಡಿಕೇರಿಯಾಗಿದೆ.

ಕೊಡಗಿನಲ್ಲಿ ನೋಡಬೇಕಾಗಿರುವ ಸ್ಥಳಗಳು

ಕೊಡಗಿನಲ್ಲಿ ನೋಡಬೇಕಾಗಿರುವ ಸ್ಥಳಗಳು

PC:Shashidhara halady

ಕೊಡಗಿನಲ್ಲಿ ತುಂಬಾ ಜನಪ್ರಿಯವಾದ ಧಾರ್ಮಿಕ ಸ್ಥಳವೆಂದರೆ ಭಾಗಮಂಡಲ, ಟಿಬೆಟಿಯನ್‌ ಗೋಲ್ಡನ್‌ ಟೆಂಪಲ್‌, ಓಂಕಾರೇಶ್ವರ ದೇವಸ್ಥಾನ ಮತ್ತು ತಲಕಾವೇರಿ. ಕೊಡಗಿನಲ್ಲಿ ಚೆಲವಾರ ಜಲಪಾತ, ಹಾರಂಗಿ ಡ್ಯಾಮ್‌, ಕಾವೇರಿ ನಿಸರ್ಗಧಾಮ, ದುಬಾರೆ ಆನೆ ಕ್ಯಾಂಪ್‌, ಹೊನ್ನಮ್ಮನ ಕೆರೆ ಮತ್ತು ಮಂಡಲಪಟ್ಟಿ, ಅಬ್ಬಿ ಜಲಪಾತ, ಇರ್ಪು ಜಲಪಾತ, ಮಳ್ಳಳ್ಳಿ ಜಲಪಾತ, ಮಡಿಕೇರಿ ಕೋಟೆ, ರಾಜಾ ಸೀಟ್‌, ನಾಲ್ಕ್‌ನಾಡ್‌ ಅರಮನೆ ಮತ್ತು ಗದ್ದಿಗೆ, ನಾಗರಹೊಳೆ, ಬಂಡೀಪುರದಂತಹ ನಿಸರ್ಗ ತಾಣಗಳನ್ನು ನೋಡಬಹುದು.

 ಕಾಫಿ ಉತ್ಪನ್ನಗಳಿಗೆ ಫೇಮಸ್

ಕಾಫಿ ಉತ್ಪನ್ನಗಳಿಗೆ ಫೇಮಸ್

PC:HPNadig

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡಗು ಕಾಫಿ ಉತ್ಪನ್ನಗಳಿಗೆ ಹೆಸರಾಗಿದೆ ಮತ್ತು ಇಲ್ಲಿ ಸಾಮಾನ್ಯವಾಗಿ ತಂಪಾದ ವಾತಾವರಣ ಇರುತ್ತದೆ. ಕೊಡಗಿನಲ್ಲಿ ಬ್ರಿಟಿಷರು ಕಾಫಿಯನ್ನು ಪರಿಚಯಿಸಿದರು. ಅರೇಬಿಕಾ ಮತ್ತು ರೋಬಸ್ಟಾಗಳು ಇಲ್ಲಿ ಬೆಳೆಯುವ ಪ್ರಮುಖ ಕಾಫಿ ತಳಿಗಳು. ಅಲ್ಲದೇ ಈ ಪ್ರದೇಶವು ಜೇನು, ಏಲಕ್ಕಿ, ಮೆಣಸು ಮತ್ತು ಕಿತ್ತಳೆ ಉತ್ಪಾದನೆಗೆ ಕೂಡಾ ಜನಪ್ರಿಯವಾಗಿದೆ.

ಯಾವಾಗ ಭೇಟಿ ನೀಡಬೇಕು

ಯಾವಾಗ ಭೇಟಿ ನೀಡಬೇಕು

PC:Aneezon

ಕೊಡಗಿಗೆ ಈ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕಾದರೆ ನವೆಂಬರಿನಿಂದ ಏಪ್ರಿಲ್‌ ತನಕ ಉತ್ತಮವಾದ ಕಾಲವಾಗಿದೆ. ಬೇಸಿಗೆ ರಜೆಯಲ್ಲಿ ಕೊಡಗಿಗೆ ಪ್ರಯಾಣ ಹೋಗೋದರಿಂದ ನಿಮ್ಮ ಬೇಸಿಗೆ ರಜೆಯನ್ನು ಎಂಜಾಯ್ ಮಾಡಬಹುದು.

ಹೋಗುವುದು ಹೇಗೆ?

ಹೋಗುವುದು ಹೇಗೆ?

ಕೊಡಗಿಗೆ ರಸ್ತೆಯ ಮೂಲಕ ಮಾತ್ರ ಹೋಗಬಹುದು. ಈ ಪ್ರದೇಶವು ಮಂಗಳೂರು, ಹಾಸನ, ಮೈಸೂರು, ಬೆಂಗಳೂರು , ಕಣ್ಣೂರು ಮತ್ತು ವಯನಾಡು ಮೂಲಕ ಸಂಪರ್ಕವನ್ನು ಹೊಂದಿದೆ. ಇನ್ನು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಲ್ಲಿಂದ ನಂತರ ಬಸ್ ಅಥವಾ ಕಾರಿನ ಮೂಲಕ ಪ್ರಯಾಣ ಬೆಳೆಸಬೇಕಾಗುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+