Search
  • Follow NativePlanet
Share
» »ಭಾರತದಲ್ಲಿದೆ ಅದ್ಭುತ ಗುಹೆಗಳು....ಒಮ್ಮೆ ಭೇಟಿ ನೀಡಿ ಬನ್ನಿ

ಭಾರತದಲ್ಲಿದೆ ಅದ್ಭುತ ಗುಹೆಗಳು....ಒಮ್ಮೆ ಭೇಟಿ ನೀಡಿ ಬನ್ನಿ

ಗುಹೆಗಳು ಭೂಮಿಯ ಮೇಲ್ಪದರದ ಶಿಲೆಯಲ್ಲಿನ ಪೊಳ್ಳುಭಾಗ ಎಂದೇ ಕರೆಯುತ್ತಾರೆ.ಒಂದೊಂದು ಗುಹೆಗಳು ತನ್ನದೇ ಆದ ಸ್ವರೂಪವನ್ನು ಹೊಂದಿರುತ್ತವೆ. ಗುಹೆಗಳ ವೈಶಾಲ್ಯ ಮತ್ತುದ್ವಾರದ ಅಗಲ ಎತ್ತರಗಳಲ್ಲಿ ಬಹಳ ವ್ಯತ್ಯಾಸಗಳು ಇರುವುದು ಸಹಜ. ಕೆಲವು ಗುಹೆಗಳು

By Sowmyabhai

ಗುಹೆಗಳು ಭೂಮಿಯ ಮೇಲ್ಪದರದ ಶಿಲೆಯಲ್ಲಿನ ಪೊಳ್ಳುಭಾಗ ಎಂದೇ ಕರೆಯುತ್ತಾರೆ. ಒಂದೊಂದು ಗುಹೆಗಳು ತನ್ನದೇ ಆದ ಸ್ವರೂಪವನ್ನು ಹೊಂದಿರುತ್ತವೆ. ಗುಹೆಗಳ ವೈಶಾಲ್ಯ ಮತ್ತು ದ್ವಾರದ ಅಗಲ ಎತ್ತರಗಳಲ್ಲಿ ಬಹಳ ವ್ಯತ್ಯಾಸಗಳು ಇರುವುದು ಸಹಜ. ಕೆಲವು ಗುಹೆಗಳು ತೆವಳಿಕೊಂಡು ಹೋಗುವಷ್ಟು ಕಿರಿದಾದ ದ್ವಾರವಿದ್ದರೆ, ಇನ್ನು ಕೆಲವು ಸರಾಗವಾಗಿ ನಡೆದು ಹೋಗುವಷ್ಟು ದೊಡ್ಡದಾಗಿರುತ್ತವೆ. ಗುಹೆಗಳನ್ನು ಮಾನವ ನಿರ್ಮಿತ ಹಾಗು ಪ್ರಕೃತಿ ನಿರ್ಮಿತ ಎಂದು ವರ್ಗೀಕರಿಸಲಾಗುತ್ತದೆ.

ನಮ್ಮ ಭಾರತ ದೇಶದಲ್ಲಿ ಅನೇಕ ಗುಹೆಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ಮಾನವ ನಿರ್ಮಿತ ಗುಹೆಗಳಿಗೆ ಉದಾಹರಣೆ ಎಂದರೆ ಎಲ್ಲೋರ, ಅಜಂತ, ಭಾಜ ಮೊದಲಾದ ಕಡೆ ಅನೇಕ ಏಕ ಶಿಲಾ ಗುಹಾಂತರ ದೇವಾಲಯಗಳಿವೆ. ಗುಹೆಗಳು ಆದಿಮಾನವನಿಗೆ ವಸತಿಗಳಾಗಿದ್ದವು ಎಂದು ನಂಬಲಾಗಿದೆ.

ಹಾಗಾದರೆ ಬನ್ನಿ ಭಾರತ ದೇಶದಲ್ಲಿರುವ ಸುಂದರವಾದ ಗುಹೆಗಳ ಬಗ್ಗೆ ತಿಳಿದು ಒಮ್ಮೆ ಭೇಟಿ ನೀಡಿ ಬರೋಣ.

1.ಬಾದಾಮಿ ಗುಹೆ

1.ಬಾದಾಮಿ ಗುಹೆ

PC:Ramnath Bhat

ಬಾದಾಮಿ ಗುಹೆಗಳಲ್ಲಿ ನಮ್ಮ ಕರ್ನಾಟಕದಲ್ಲಿರುವ ಬಾದಾಮಿ ಗುಹೆಯನ್ನು ಮರೆಯುವಂತಿಲ್ಲ. ಬಾದಾಮಿ ಗುಹೆಯು ಭಾರತದ ಅತಿ ಪ್ರಖ್ಯಾತ ಗುಹೆಗಳಲ್ಲಿ ಒಂದಾಗಿದೆ. ಬಾದಾಮಿಯಲ್ಲಿ ಹಲವಾರು ಸುಂದರ ದೇವಾಲಯಗಳಿವೆ. ಇಲ್ಲಿನ 4 ದೇವಾಲಯಗಳು ಸದಾ ಪ್ರವಾಸಿಗರಿಗಾಗಿ ತೆರೆದಿರಲಾಗುತ್ತದೆ. ಇಲ್ಲಿನ 4 ಗುಹೆಗಳಲ್ಲಿ ಶಿವ, ವಿಷ್ಣು, ಮತ್ತು ಜೈನನ ಮೂರ್ತಿಗಳಿರುವ ಗುಹಾ ದೇವಾಲಯಗಳಿವೆ.

2.ಅಜಂತಾ ಮತ್ತು ಎಲ್ಲೋರ ಗುಹೆಗಳು

2.ಅಜಂತಾ ಮತ್ತು ಎಲ್ಲೋರ ಗುಹೆಗಳು

PC:Yashasvi nagda

ಮಹಾರಾಷ್ಟ್ರದಲ್ಲಿರುವ ಅಜಂತಾ ಹಾಗೂ ಎಲ್ಲೋರ ಗುಹೆಗಳು ಭಾರತದ ಅತ್ಯಂತ ಹೆಸರುವಾಸಿ ಗುಹೆಗಳು. ಈ ಗುಹೆಯನ್ನು ಬಂಡೆಯಿಂದ ಶಿಲ್ಪಗಳನ್ನು ಕೆತ್ತಲಾಗಿದೆ. ಈ ಗುಹೆಯು ಅತ್ಯಂತ ಸುಂದರವಾದ ವಾಸ್ತುಶಿಲ್ಪ ಹೊಂದಿದೆ. ಎಲ್ಲೋರಾದಲ್ಲಿ ಸುಮಾರು 34 ವಿಶಿಷ್ಟವಾದ ಗುಹೆಗಳಿವೆ. ಈ ಗುಹೆಗಳು 6 ರಿಂದ 11 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗೇಯೆ ಅಜಂತಾದಲ್ಲಿಯೂ ಕೂಡ ಸುಮಾರು 29 ಗುಹೆಗಳಿವೆ. ಅಜಂತಾ ಗುಹೆಗಳೆಲ್ಲಾ ಬೌದ್ದ ಧರ್ಮದ ಶಿಲ್ಪಗಳಾಗಿದ್ದರೆ, ಎಲ್ಲೋರದಲ್ಲಿ ಬೌದ್ದ, ಹಿಂದೂ ಹಾಗೂ ಜೈನ ಧರ್ಮದ ಶಿಲ್ಪಗಳನ್ನು ಹೊಂದಿರುವ ಗುಹೆಗಳಾಗಿವೆ.

3.ಮೇಘಾಲಯದ ಗುಹೆಗಳು

3.ಮೇಘಾಲಯದ ಗುಹೆಗಳು

PC:Biospeleologist

ಮೇಘಾಲಯದಲ್ಲಿ ಮೊಟ್ಟ ಮೊದಲು ಗುಹೆಗಳ ಅನ್ವೇಷಣೆ ನಡೆಯಿತು. ಮೇಘಾಲಯ ರಾಜ್ಯದಲ್ಲಿ ಹಲವಾರು ಗುಹೆಗಳಿವೆ. ಇಲ್ಲಿರುವ ಗುಹೆಗಳೆಲ್ಲವು ನೋಡುಗರನ್ನು ಬೆರಗು ಮೂಡಿಸುತ್ತದೆ. ಸೂರ್ಯೋದಯದ ಸಮಯ ಹಾಗೂ ಸೂರ್ಯಸ್ತದ ಸಮಯ ಇಲ್ಲಿನ ಗುಹೆಗಳನ್ನು ನೋಡುವುದೇ ಒಂದು ಅದ್ಭುತ ವೀಕ್ಷಣೆಯಾಗಿದೆ. ಗುಹೆಗಳ ತವರೂರು ಈ ಮೇಘಾಲಯ. ಒಮ್ಮೆ ಭೇಟಿ ನೀಡಲೇ ಬೇಕಾದ ಪ್ರವಾಸಿತಾಣವಾಗಿದೆ.

4.ಉಂದವಳ್ಳಿ ಮತ್ತು ಮೊಗಲರಾಜಪುರಂ ಗುಹೆಗಳು

4.ಉಂದವಳ್ಳಿ ಮತ್ತು ಮೊಗಲರಾಜಪುರಂ ಗುಹೆಗಳು

PC:Aleksandar Cocek

ಆಂಧ್ರ ಪ್ರದೇಶದ ಪ್ರಸಿದ್ದ ನಗರವಾದ ವಿಜಯವಾಡದಲ್ಲಿ 7 ನೇ ಶತಮಾನದ ಉಂದವಳ್ಳಿ ಗುಹಾ ದೇವಾಲಯವಿದೆ. ಈ ಗುಹೆಯಲ್ಲಿ ಹಿಂದೂ ದೈವವಾದ ಶಿವ, ವಿಷ್ಣು ಮತ್ತು ಬ್ರಹ್ಮನ ದೇವಾಲಯವಿದೆ. ಹಾಗೇಯೆ ಮೊಗಲರಾಜಪುರಂನ ಗುಹೆಯಲ್ಲಿ ಅತ್ಯಂತ ಸುಂದರವಾದ ವಾಸ್ತುಶಿಲ್ಪವಿರುವುದರಿಂದ ಈ ಗುಹೆಗೆ ಹಲವಾರು ಪ್ರವಾಸಿಗರು ದಿನನಿತ್ಯ ಭೇಟಿ ನೀಡುತ್ತಿರುತ್ತಾರೆ.

5.ಟಬೂ

5.ಟಬೂ

PC:Michael Scalet

ಆಧ್ಯಾತ್ಮಿಕವಾದ ಗುಹೆ ಎಂದರೆ ಅದು ಟಬೂ ಗುಹೆಯಾಗಿದೆ. ಈ ಗುಹೆಯ ಒಳಗೆ ಧ್ಯಾನ ಮಾಡಲು ಅತ್ಯಂತ ಪ್ರಶ್ಯಸ್ತವಾಗಿರುವ ಪ್ರವಾಸಿ ತಾಣವಾಗಿದೆ. ಟಬೂ ಗುಹೆಯು ಹಿಮಾಚಲ ಪ್ರದೇಶದಲ್ಲಿದೆ. ಟಬೂ ಪ್ರದೇಶದಲ್ಲಿ ಹಲವಾರು ಬೌದ್ದರಿಗೆ ನಿರ್ಮಲವಾಗಿ ಧ್ಯಾನ ಮಾಡಲು ಸೂಕ್ತವಾದ ಸ್ಥಳ ಇದಾಗಿತ್ತು. ಇಲ್ಲಿ ಹಲವಾರು ದೊಡ್ಡ ಹಾಗೂ ಚಿಕ್ಕದಾದ ಗುಹೆಗಳಿದ್ದು ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

6.ಟ್ರಿಚಿ ಕಲ್ಲುಕೋಟೆಯ ದೇವಾಲಯ ಮತ್ತು ಪಲ್ಲವರ ಗುಹೆ

6.ಟ್ರಿಚಿ ಕಲ್ಲುಕೋಟೆಯ ದೇವಾಲಯ ಮತ್ತು ಪಲ್ಲವರ ಗುಹೆ

PC:Alex Alishevskikh

ಟ್ರಿಚಿ ಕಲ್ಲುಕೋಟೆಯ ದೇವಾಲಯ ಮತ್ತು ಪಲ್ಲವರ ಗುಹೆ ಈ ಟ್ರಿಚಿಯಲ್ಲಿ ಕಲ್ಲು ಕೋಟೆಯ ದೇವಾಲಯವು ಮುಖ್ಯ ಆಕರ್ಷಕ. ಈ ಕೋಟೆಯನ್ನು ಮಧುರೈನ ನಾಯಕರು ಸ್ಥಾಪಿಸಿದರು. ನಗರ ಮಟ್ಟದಿಂದ ಈ ದೇವಾಲಯವನ್ನು ಸುಮಾರು 237 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಈ ಕೋಟೆಯಿಂದ ನಗರವನ್ನು ವಿಕ್ಷೀಸಲು ಅತ್ಯಂತ ಆನಂದದಾಯಕವಾಗಿರುತ್ತದೆ. ಇಲ್ಲಿರುವ ಗುಹೆಯಲ್ಲಿ ಚಿತ್ತಾಕರ್ಷಕವಾದ ವಾಸ್ತು ಶಿಲ್ಪಗಳನ್ನು ಕಾಣಬಹುದಾಗಿದೆ.

7.ಜಮ್ಮು ಮತ್ತು ಕಾಶ್ಮೀರದ ಗುಹೆಗಳು

7.ಜಮ್ಮು ಮತ್ತು ಕಾಶ್ಮೀರದ ಗುಹೆಗಳು

PC:Nitin Badhwar

ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಪ್ರಸಿದ್ದವಾದ ಗುಹೆಗಳನ್ನು ಕಾಣಬಹುದಾಗಿದೆ. ನಿರ್ದಿಷ್ಟವಾಗಿ ಶಿವನಿಗೆ ಸಂಬಂಧಿಸಿದಂತೆ 2 ಮುಖ್ಯ ಗುಹೆಗಳಿವೆ. ಈ ಗುಹಾ ದೇವಾಲಯವು ಭಾರತದಲ್ಲಿ ಅತ್ಯಂತ ಪ್ರಖ್ಯಾತವಾದ ತೀರ್ಥಕ್ಷೇತ್ರ. ಈ ಶಿವನ ಗುಹಾ ದೇವಾಲಯಕ್ಕೆ ದೇಶ ವಿದೇಶಗಳಿಂದ ಭೇಟಿ ನೀಡುತ್ತಾರೆ. ರಣಾಸು ಎಂಬಲ್ಲಿ ಸ್ವಾಲಿಕ್ ಬೆಟ್ಟದ ಮೇಲೆ ಶಿವನು ನೈಸರ್ಗಿಕವಾಗಿ ಗವಿಗಂಬದಂತೆ ನೆಲೆಸಿದ್ದಾನೆ. ಇಲ್ಲಿ ಅಮರನಾಥ್ ಗುಹೆಯು ಕೂಡ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X