Search
  • Follow NativePlanet
Share
» »ಡೈನೋಸಾರ್ ಉತ್ಸವವು ಪ್ರತಿ ವರ್ಷ ಜೂನ್ 10 ರಿಂದ ಜೂನ್ 19 ರವರೆಗೆ ಚೆನ್ನೈನಲ್ಲಿ ನಡೆಯುತ್ತದೆ

ಡೈನೋಸಾರ್ ಉತ್ಸವವು ಪ್ರತಿ ವರ್ಷ ಜೂನ್ 10 ರಿಂದ ಜೂನ್ 19 ರವರೆಗೆ ಚೆನ್ನೈನಲ್ಲಿ ನಡೆಯುತ್ತದೆ

ಹೌದು ! ನೀವು ಕೇಳುತ್ತಿರುವುದು ನಿಜವಾದ ಸಂಗತಿ. ಭಾರತದ ಚೆನ್ನೈನಲ್ಲಿ ಪ್ರತೀ ವರ್ಷ ಜೂನ್ 10 ರಿಂದ ಜೂನ್ 19 ರ ವರೆಗೆ ಡೈನೋಸರ್ ಹಬ್ಬವನ್ನು ಆಯೋಜಿಲಾಗುತ್ತದೆ. ಈ ಹಬ್ಬಕ್ಕೆ ಭೇಟಿ ಕೊಡುವವರಿಗೆ ಡೈನೋಸರ್ ಗಳ ಬಗ್ಗೆ ಮಾಹಿತಿ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗುತ್ತದೆ. ಇದಲ್ಲದೆ ಇಲ್ಲಿ ಡೈನೋಸರ್ ಗಳ ಪ್ರದರ್ಶನಗಳನ್ನೂ ಕೂಡ ಆಯೋಜಿಸಲಾಗುತ್ತದೆ.

ಈ ಹಬ್ಬವು ಪ್ರವಾಸಿಗರು ಮತ್ತು ಡೈನೋಸರ್ ಗಳ ಅನ್ವೇಷಕರಿಗೆ ಸಾಕಷ್ಟು ಮಾಹಿತಿಯನ್ನು ಒದಗಿಸುತ್ತದೆ ಮಾತ್ರವಲ್ಲದೆ ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಸಂತೋಷವನ್ನು ನೀಡುವುದರಿಂದ ಕುಟುಂಬ ಸಮೇತವಾಗಿ ಅಥವಾ ಸ್ನೇಹಿತರೊಂದಿಗೆ ಭೇಟಿ ಕೊಡಬಹುದಾಗಿದೆ. ನೀವು ಈಗಾಗಲೇ ಚೆನ್ನೈ ಪ್ರವಾಸದಲ್ಲಿ ಇದ್ದು, ನಿಮ್ಮ ಪ್ರವಾಸವನ್ನು ನಿಮ್ಮ ಕುಟುಂಬದವರು ಅಥವಾ ಸ್ನೇಹಿತರೊಂದಿಗೆ ಅವಿಸ್ಮರಣೀಯಗೊಳಿಸ ಬಯಸುವಿರಾದಲ್ಲಿ ನಿಮ್ಮ ರಜೆಯನ್ನು ಮುಂದುವರಿಸಿ ಹತ್ತು ದಿನಗಳ ಕಾಲ ನಡೆಯುವ ಈ ಸುಂದರವಾದ ಹಬ್ಬದಲ್ಲಿ ಖಂಡಿತವಾಗಿಯೂ ಭಾಗಿಯಾಗಿ ಚೆನ್ನೈ ನಲ್ಲಿ ಒಂದು ವಿಶೇಷವಾದ ಅನುಭವವನ್ನು ಪಡೆಯಿರಿ. ಅಥವಾ ಈ ಹಬ್ಬದಲ್ಲಿ ಪಾಲ್ಗೊಳ್ಳುವ ಸಲುವಾಗಿಯಾದರೂ ಚೆನ್ನೈಗೆ ಭೇಟಿ ನೀಡಿ ಡೈನೋಸರ್ ಗಳ ಸುಂದರ ಪ್ರಪಂಚವನ್ನು ನೋಡಿ ಆನಂದಿಸಿ.

Chennai Dinosaur Festival

65 ಮಿಲಿಯನ್ ವರ್ಷಗಳ ಹಿಂದೆ ಭಾರತದಲ್ಲಿ ಡೈನೋಸರ್ ಗಳು ಸುತ್ತಾಡುತ್ತಿದ್ದುದರ ಬಗ್ಗೆ ಈ ಹಬ್ಬವು ವಿಸ್ತಾರವಾದ ಮಾಹಿತಿಯನ್ನು ನೀಡುತ್ತದೆ.

ಈ ಪ್ರದರ್ಶನವು ಮಕ್ಕಳಿಗೂ ಕೂಡ ಮುದ ನೀಡುತ್ತದೆ

ಈ ಉತ್ಸವದಲ್ಲಿ ನಡೆಯುವ ಪ್ರದರ್ಶನವು ಮಕ್ಕಳಿಗೆ ಡೈನೋಸರ್ ಗಳ ಬಗ್ಗೆ ವಿಶಿಷ್ಟವಾದ ಮಾಹಿತಿಗಳನ್ನು ನೀಡುವುದರ ಜೊತೆಗೆ ಇನ್ನೂ ಅನೇಕ ಪ್ರದರ್ಶನಗಳನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ ಇಲ್ಲಿ ಡೈನೋಸರ್ ಗಳ ಅಸ್ಥಿತ್ವದ ಕುರಿತಾದ ಛಾಯಾ ಚಿತ್ರಗಳ ಪ್ರದರ್ಶನವೂ ಇರುವುದರಿಂದ ಅವುಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದಾಗಿದೆ.

ಚೆನ್ನೈನ ಸುತ್ತಮುತ್ತಲಿರುವ ಶಾಲೆಗಳ ಮಕ್ಕಳಿಗಾಗಿ ಶುಕ್ರವಾರ ಮತ್ತು ಸೋಮವಾರದಂದು ಉಚಿತ ಪ್ರವೇಶದ ಸೌಲಭ್ಯವನ್ನು ಒದಗಿಸಲಾಗುತ್ತದೆ.

Read more about: chennai
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X