Search
  • Follow NativePlanet
Share
» »ವಟಸಾವಿತ್ರಿಯ ಮಹತ್ವ ಸಾರುವ ಪ್ರಸಿದ್ಧ ವಟವೃಕ್ಷಗಳು

ವಟಸಾವಿತ್ರಿಯ ಮಹತ್ವ ಸಾರುವ ಪ್ರಸಿದ್ಧ ವಟವೃಕ್ಷಗಳು

By Vijay

ಆಲದ ಮರ ಅಥವ ಬನಿಯನ್ ಟ್ರೀ ಎಂದು ಏನು ಕರೆಯುತ್ತೆವೆಯೋ ಆ ಮರಗಳನ್ನೆ ಪುರಾಣ ಪುಣ್ಯ ಕಥೆಗಳಲ್ಲಿ ಸಮ್ಸ್ಕೃತ ಪದವಾದ ವಟ ವೃಕ್ಷಗಳೆಂದು ವರ್ಣಿಸಲಾಗಿದೆ. ಆಲದ ಮರಗಳು ಸಾಮಾನ್ಯವಾಗಿ ಹೆಚ್ಚು ಸಮಯದವರೆಗೆ ಬದುಕುತ್ತವೆ ಹಾಗೂ ಇದನ್ನು ಹಿಂದು ಧರ್ಮದಲ್ಲಿ ಪವಿತ್ರ ಮರವೆನ್ನಲಾಗಿದೆ.

ಕುತೂಹಲ ಕೆರಳಿಸುವ ತ್ರಿಶ್ಶೂರ್ ಪೂರಂ ಎಂದರೇನು?

ಈ ವೃಕ್ಷಗಳನ್ನೂ ಸಹ ಒಂದು ನಿರ್ದಿಷ್ಟ ದಿನದಂದು ಪೂಜಿಸಲಾಗುತ್ತದೆ. ಇದನ್ನು ವಟ ಸಾವಿತ್ರಿ ಅಥವಾ ವಟ ಪೂರ್ಣಿಮೆ ದಿನವೆಂದು ಕರೆಯಲಾಗುತ್ತದೆ. ಭಾರತೀಯ ಕ್ಯಾಲೆಂಡರಿನ ಜೇಷ್ಠ ಮಾಸದ ಪೌರ್ಣಮಿಯಂದು (ಜೂನ್) ಈ ವೃತವನ್ನು ಭಾರತದ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳಲ್ಲಿ ಇದನ್ನು ಮದುವೆಯಾದ ಸ್ತ್ರೀಯರು ತಮ್ಮ ತಮ್ಮ ಪತಿಯ ಉತ್ತಮ ಆರೋಗ್ಯ ಹಾಗೂ ಆಯಸ್ಸನ್ನು ಕುರಿತು ಪ್ರಾರ್ಥಿಸಲು ಈ ದಿನ ಆಚರಿಸುತ್ತಾರೆ.

ಪ್ರಸ್ತುತ ಲೇಖನದಲ್ಲಿ ವಟ ಪೌರ್ಣಮಿಯ ಅಂಗವಾಗಿ ಭಾರತದಲ್ಲಿರುವ ಕೆಲವು ಅದ್ಭುತ, ದೊಡ್ಡದಾದ ಹಾಗೂ ಪುರಾತನ ವಟ ವೃಕ್ಷಗಳ ಕುರಿತು ತಿಳಿಯಿರಿ. ಈ ವಟ ವೃಕ್ಷಗಳು ಪ್ರವಾಸಿ ಆಕರ್ಷಣೆಗಳಾಗಿಯೂ ಪ್ರಸಿದ್ಧವಾಗಿವೆ. ಅಲ್ಲದೆ ವಟ ಸಾವಿತ್ರಿ ಕುರಿತಂತೆ ದಂತ ಕಥೆಯೊಂದಿದ್ದು ಅದನ್ನೂ ಸಹ ವೃಕ್ಷಗಳ ದರ್ಶನ ಮಾಡುತ್ತ ಓದಿ ತಿಳಿಯಿರಿ.

ವಟಸಾವಿತ್ರಿಯ ಮಹತ್ವ ಸಾರುವ ಪ್ರಸಿದ್ಧ ವಟವೃಕ್ಷಗಳು

ಚಿತ್ರಕೃಪೆ: Abdulkaleem md

ತಿಮ್ಮಮ್ಮು ಮರ್ರಿಮನು : ತೆಲುಗುವಿನಲ್ಲಿ ಮರ್ರಿ ಎಂದರೆ ಆಲ ಎಂತಲೂ ಮನು ಎಂದರೆ ಮರ ಎಂತಲೂ ಹೇಳಲಾಗುತ್ತದೆ. ಆಂಧ್ರದ ಅನಂತಪುರದಿಂದ 25 ಕಿ.ಮೀ ದೂರದಲ್ಲಿರುವ ಕದಿರಿ ಎಂಬಲ್ಲಿ ಈ ದೊಡ್ಡ ಆಲದಮರವಿದೆ. ಐದು ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಈ ಮರ ಹಬ್ಬಿದ್ದು 1989 ರ ಗಿನೆಸ್ ಬುಕ್ ಆಫ್ ವರ್ಲ್ಡ್ ರಿಕಾರ್ಡ್ಸ್ ಪ್ರಕಾರ ಇದು ವಿಶ್ವದ ಅತ್ಯಂತ ದೊಡ್ಡ ಮರವೆನ್ನಲಾಗಿದೆ.

ದಂತಕಥೆಯಂತೆ, ತಿಮ್ಮಮ್ಮ ಎಂಬಾಕೆಯು ದೊಡ್ಡ ಪತಿವೃತೆಯಾಗಿದ್ದಳು. ಆಕೆಯ ಗಂಡನ ಅಕಾಲ ಮರಣದ ನಂತರ ತನ್ನ ಪ್ರಾಣವನ್ನು ಸತಿ ಆಚರಣೆಯ ಮೂಲಕ ತ್ಯಾಗ ಮಾಡಿದಳು. ಅವಳು ಮರಣ ಹೊಂದಿದ ಸ್ಥಳದಲ್ಲಿಯೆ ಕ್ರಮೇಣ ಈ ಆಲದ ಮರ ಬೆಳೆಯಿತ್ತೆನ್ನಲಾಗಿದೆ. ಹೀಗಾಗಿ ಇಲ್ಲಿ ಆಕೆಗೆ ಮುಡಿಪಾದ ದೇವಾಲಯವನ್ನೂ ಕಾಣಬಹುದು. ಮಕ್ಕಳಿಲ್ಲದವರು ಇಲ್ಲಿ ಪ್ರಾರ್ಥಿಸಿದರೆ ಮಕ್ಕಳಾಗುತ್ತವೆ ಎಂಬ ನಂಬಿಕೆಯಿದೆ.

ವಟಸಾವಿತ್ರಿಯ ಮಹತ್ವ ಸಾರುವ ಪ್ರಸಿದ್ಧ ವಟವೃಕ್ಷಗಳು

ದೊಡ್ಡ ಆಲದ ಮರ, ಚಿತ್ರಕೃಪೆ: BostonMA

ದೊಡ್ಡ ಆಲದಮರ : ಬೆಂಗಳೂರಿನಲ್ಲಿ ಈ ಪ್ರಖ್ಯಾತ ಮರವಿದೆ. ಕೇತೋಹಳ್ಳಿ ಎಂಬ ಗ್ರಾಮಕ್ಕೆ ಒಳಪಡುವ ಈ ದೊಡ್ಡ ಆಲದ ಮರವು ಸುಮಾರು 400 ವರ್ಷಗಳಷ್ಟು ಹಳೆಯದಾದುದು ಎಂದು ಹೇಳಲಾಗಿದೆ. ಈ ಒಂದು ಏಕೈಕ ಮರವು ಸುಮಾರು ಮೂರು ಎಕರೆಗಳಷ್ಟು ಪ್ರದೇಶವನ್ನು ಬಾಚಿಕೊಂಡಿದೆ.

ವಟಸಾವಿತ್ರಿಯ ಮಹತ್ವ ಸಾರುವ ಪ್ರಸಿದ್ಧ ವಟವೃಕ್ಷಗಳು

ಗ್ರೇಟ್ ಬನಿಯನ್ ಟ್ರೀ, ಚಿತ್ರಕೃಪೆ: Biswarup Ganguly

ಗ್ರೇಟ್ ಬನಿಯನ್ ಟ್ರೀ : ಕೊಲ್ಕತ್ತಾದಲ್ಲಿರುವ ಈ ಅಗಾಧವಾಗಿ ಬೆಳೆದ ದೊಡ್ಡ ವಟ ವೃಕ್ಷವು ಹೌರಾದ ಆಚಾರ್ಯ ಜಗದೀಶ್ ಚಂದ್ರ ಬೋಸ್ ಭಾರತೀಯ ಸಸ್ಯಶಾಸ್ತ್ರೀಯ ಉದ್ಯಾನದಲ್ಲಿದೆ. ಸುಮಾರು 250 ವರ್ಷಗಳಷ್ಟು ಪುರಾತನವಾದ ಈ ಮರ ಪ್ರತಿ ನೂರಾರು ಸಾಂದರ್ಶಿಕರನ್ನು ಪಡೆಯುತ್ತದೆ.

ವಟಸಾವಿತ್ರಿಯ ಮಹತ್ವ ಸಾರುವ ಪ್ರಸಿದ್ಧ ವಟವೃಕ್ಷಗಳು

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Nagarjun Kandukuru

ತೆಲಂಗಾಣ ರಾಜ್ಯದ ಮೆಹಬೂಬ್ ನಗರದಲ್ಲಿರುವ ಪಿಲ್ಲಾಲಮರ್ರಿ ಆಲದ ಮರವು ಸುಮಾರು 800 ವರ್ಷಗಳಷ್ಟು ಪುರಾತನವಾದುದೆನ್ನಲಾಗಿದೆ. ಈ ಒಂದು ಮರದ ಅಕ್ಕ ಪಕ್ಕಗಳಲ್ಲಿ ಇತರೆ ಅನೇಕ ಮರಗಳು ಇದರ ಮಕ್ಕಳಂತೆ ಜನ್ಮ ತಳೆದಿವೆ. ಸುಮಾರು ಮೂರು ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಇದು ಹರಡಿಕೊಂಡಿದೆ.

ದಂತಕಥೆ : ಹಿಂದೆ ಸಾವಿತ್ರಿ ಎಂಬ ಪರಮ ಪತಿವೃತೆಯಿದ್ದಳು. ಅವಳ ಗಂಡ ಸತ್ಯವಾನ್ ಬಹು ಬೇಗ ಸಾಯುತ್ತಾನೆಂಬ ಭವಿಷ್ಯ ನುಡಿಯಲಾಗಿತ್ತು. ಅದರಂತೆ ಒಮ್ಮೆ ಆತ್ ತೀರಿ ಹೋದ. ಇತ್ತ ಯಮ ಕಿಂಕರರು ಆತನ ಆತ್ಮ ಪಡೆಯಬಂದಾಗ ಅವಳು ತನ್ನ ಪಾತಿವೃತ್ಯ ಶಕ್ತಿಯಿಂದ ಅವರನ್ನು ತಡೆದಳು. ಕೊನೆಗೆ ಯಮನೆ ಬಂದು ಅವಳನ್ನು ಕೇಳಿಕೊಂಡಾದ ಅವಳು ಮೊದಲು ತನ್ನ ಮೈದುನರ ಒಳ್ಳೆಯದನ್ನು ಬಯಸಿದಳು. ಯಮ ಅವಳಿಗೆ ವರ ನೀಡಿ ಸತ್ಯವಾನನ ಆತ್ಮ ತೆಗೆದುಕೊಂಡು ಮುಂದೆ ನಡೆದ.

ನಿಮಗಿಷ್ಟವಾಗಬಹುದಾದ : ಮಂಗಳಮುಖಿಯರಿಂದ ಆಚರಿಸಲಾಗುವ ಉತ್ಸವ

ಮತ್ತೆ ಯಮನ ಬೆನ್ನು ಹತ್ತಿದ ಸಾವಿತ್ರಿ ಅವನಿಂದ ತನ್ನ ಪಾಲಕರ ಕ್ಷೇಮದ ವರ ಕೇಳಿ ಪಡೆದಳು. ಹೀಗೆ ಮತ್ತೆ ಅವನನ್ನು ಹಿಂಬಾಲಿಸುತ್ತ ಕೊನೆಯದಾಗಿ ಯಮನಿಂದ ಒಳ್ಳೆಯ ಸಂತಾನ ಭಾಗ್ಯದ ವರ ಪಡೆದಳು. ಆದರೆ ಸತ್ಯವಾನನ ಉಪಸ್ಥಿತಿಯಿಲ್ಲ ಸಂತಾನವಾಗುವ ಹಾಗಿಲ್ಲ. ಹೀಗಾಗಿ ಅವಳ ಭಕ್ತಿಯನ್ನು ಮೆಚ್ಚಿದ ಯಮ ಸತ್ಯವಾನನ್ನು ಅವಳಿಗೆ ಹಿಂತಿರುಗಿಸಿದ. ಅದರಂತೆ ಆಲದ ಮರವು ಸಹ ಸಾಕಷ್ಟು ಸಮಯ ದೀರ್ಘ ಕಾಲದವರೆಗೆ ಬಾಳುವುದರಿಂದ ಈ ದಿನದಂದು ಮುತ್ತೈದೆಯರು ಆಲದ ಮರದ ಸುತ್ತ ದಾರದಿಂದ ಏಳು ಸುತ್ತು ಹಾಕಿ ವೃತವನ್ನಾಚರಿಸುತ್ತಾರೆ ಅದು ಕೂಡ ತಮ್ಮ ಪತಿಯ ಆಯುರ್ ಆಯುಷ್ಯ ಅಭಿವ್ರ್‍ದ್ಧಿಗಾಗಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X