Search
  • Follow NativePlanet
Share
» »ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ 8 ಜನಪ್ರಿಯ ಶಿವ ದೇವಾಲಯಗಳು.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ 8 ಜನಪ್ರಿಯ ಶಿವ ದೇವಾಲಯಗಳು.

ಶಿವದೇವರು ಹೆಚ್ಚಿನ ಹಿಂದುಗಳಿಗೆ ಅತ್ಯಂತ ನೆಚ್ಚಿನ ಆರಾಧ್ಯ ದೈವವಾಗಿದ್ದು, ಈ ದೇವರನ್ನು ಉದಾರಿ ಬೇಡಿದ್ದನ್ನು ನೀಡುವ ದೇವರೆಂದು ಹಿಂದುಗಳಲ್ಲಿ ನಂಬಿಕೆ ಇದೆ. ಶಿವರಾತ್ರಿಯ ಸಮಯದಲ್ಲಿ ಸಾಯಂಕಾಲದ ಹೊತ್ತು ಶಿವಾಲಯಗಳಿಗೆ ಭೇಟಿ ನೀಡುವುದು ವಾಡಿಕೆ. ಬೆಂಗಳೂರಿನಲ್ಲಿ ಈ ಪ್ರಮುಖ ಶಿವಾಲಯಗಳ ಧಾರ್ಮಿಕ ಪ್ರವಾಸ ಮಾಡಬಹುದು!

ಬೆಂಗಳೂರಿನಲ್ಲಿ ಮಹದೇವನನ್ನು ಪೂಜಿಸುವ ಹಲವಾರು ದೇವಾಲಯಗಳಿದ್ದು, ಅವುಗಳಲ್ಲಿ ಕೆಲವು ಹಳೆಯ ಕಾಲಕ್ಕೆ ಸೇರಿದ್ದರೆ ಇನ್ನು ಕೆಲವು ಆಧುನಿಕ ಯುಗದ್ದಾಗಿವೆ. ಶಿವರಾತ್ರಿ 2023 ರ ನಿಮ್ಮ ದೇವಾಲಯದ ಪ್ರವಾಸಕ್ಕಾಗಿ ನೀವು ಈ ದೇವಾಲಯಗಳ ಪಟ್ಟಿಯನ್ನು ಪರಿಶೀಲಿಸಿ

ಗವಿಗಂಗಾಧರೇಶ್ವರ, ಕೆಂಪೋರ್ಟ್ ಶಿವ ದೇವಾಲಯ ಮತ್ತು ಕಾಡು ಮಲ್ಲೇಶ್ವರ ದೇವಾಲಯ ಇವು ಕೆಲವು ಅತ್ಯಂತ ಪ್ರಸಿದ್ದ ಧಾರ್ಮಿಕ ಸ್ಥಳಗಳು ಹಾಗೂ ಬೆಂಗಳೂರಿನ ಪ್ರಸಿದ್ದ ಪ್ರವಾಸಿ ತಾಣಗಳೂ ಆಗಿವೆ.

ಬನ್ನಿ ಈ ಶಿವ ದೇವಾಲಯಗಳಿಗೆ ಒಂದು ಸಣ್ಣ ಪ್ರವಾಸ ಮಾಡೋಣ!

ಹಲಸೂರು ಸೋಮೇಶ್ವರ ದೇವಾಲಯ

ಹಲಸೂರು ಸೋಮೇಶ್ವರ ದೇವಾಲಯ

ಹಲಸೂರಿನಲ್ಲಿರುವ ಸೋಮೇಶ್ವರ ದೇವಾಲಯವು ನಿಮ್ಮನ್ನು ಹಿಂದಿನ ಕಾಲಕ್ಕೆ ಕೊಂಡೊಯ್ಯುತ್ತದೆ. ಈ ದೇವಾಲಯವು ಚೋಳರ ಕಾಲಕ್ಕೆ ಸೇರಿದ್ದಾಗಿದ್ದು ಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ದೇವಾಲಯದ ಸುತ್ತಲಿನ ಇತರ ಕೆಲವು ಬದಲಾವಣೆಗಳು ನಂತರದ ವರ್ಷಗಳಲ್ಲಿ ಮಾಡಿದ ವಿಜಯನಗರ ವಾಸ್ತುಶೈಲಿಯ ಪ್ರಭಾವವನ್ನು ಸೂಚಿಸುತ್ತವೆ.

ಗವಿ ಗಂಗಾಧರೇಶ್ವರ ದೇವಾಲಯ

ಗವಿ ಗಂಗಾಧರೇಶ್ವರ ದೇವಾಲಯ

ಬೆಂಗಳೂರಿನ ಗವಿಪುರಂ ನಲ್ಲಿರುವ ಗವಿ ಗಂಗಾಧರೇಶ್ವರ ದೇವಾಲಯವು ಅತ್ಯಂತ ಪ್ರಾಚೀನ ಗುಹೆ ದೇವಾಲಯವಾಗಿದೆ. ಈ ದೇವಾಲಯವು ಇನ್ನೊಂದು ಆಸಕ್ತಿದಾಯಕ ವಿಷಗಳಿಗೆ ಹೆಸರುವಾಸಿಯಾಗಿದೆ. ಅದು ಏನೆಂದರೆ, ಈ ದೇವಾಲಯದಲ್ಲಿ ಮಕರಸಂಕ್ರಾಂತಿಯ ಸಂಜೆ ಸೂರ್ಯನ ಕಿರಣಗಳು ನಂದಿಯ ಪ್ರತಿಮೆಯ ಕೊಂಬಿನ ಮೂಲಕ ನೇರವಾಗಿ ಶಿವಲಿಂಗವನ್ನು ಸ್ಪರ್ಶಿಸುತ್ತದೆ. ಈ ದೃಶ್ಯ ಅದ್ಬುತವು ಪ್ರತಿ ವರ್ಷ ಈ ಹಬ್ಬದಂದು ನೋಡಲು ಸಿಗುತ್ತದೆ.

ಕೆಂಪೋರ್ಟ್ ಶಿವ ದೇವಾಲಯ

ಕೆಂಪೋರ್ಟ್ ಶಿವ ದೇವಾಲಯ

ಕೆಂಪ್‌ಫೋರ್ಟ್ ಶಿವ ದೇವಾಲಯವು ಬೆಂಗಳೂರಿನ ಹೆಗ್ಗುರುತುಗಳಲ್ಲಿ ಒಂದಾಗಿದೆ. ಇದು 65 ಅಡಿ ಶಿವನ ಪ್ರತಿಮೆಗೆ ಹೆಸರುವಾಸಿಯಾಗಿದ್ದು, ದೇವಾಲಯವು ದೊಡ್ಡ ಗಣೇಶನ ವಿಗ್ರಹ ಮತ್ತು ಶಿವನ ಇತರ ರೂಪಗಳ ಮಾದರಿಗಳನ್ನು ಸಹ ಹೊಂದಿದೆ. ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಇದು ಭೇಟಿ ನೀಡಲೇಬೇಕಾದ ದೇವಾಲಯಗಳಲ್ಲಿ ಒಂದಾಗಿದೆ.

ದ್ವಾದಶ ಜ್ಯೋತಿರ್ಲಿಂಗ ದೇವಾಲಯ

ದ್ವಾದಶ ಜ್ಯೋತಿರ್ಲಿಂಗ ದೇವಾಲಯ

ಶ್ರೀ ದ್ವಾದಶ ಜ್ಯೋತಿರ್ಲಿಂಗ ದೇವಾಲಯವು 12 ಸಣ್ಣ ಶಿವ ದೇವಾಲಯಗಳನ್ನು ಒಳಗೊಂಡಿದೆ. ಇದು ಭಾರತದಾದ್ಯಂತ ಇರುವ ಇತರ ಜ್ಯೋತಿರ್ಲಿಂಗ ದೇವಾಲಯಗಳನ್ನು ಪ್ರತಿನಿಧಿಸುತ್ತದೆ. ಶ್ರೀನಿವಾಸಪುರದ ಓಂಕಾರ ಬೆಟ್ಟದಲ್ಲಿ ದ್ವಾದಶ ಜ್ಯೋತಿರ್ಲಿಂಗ ದೇವಾಲಯವಿದೆ.

 ಕಾಡು ಮಲ್ಲೇಶ್ವರ ದೇವಾಲಯ

ಕಾಡು ಮಲ್ಲೇಶ್ವರ ದೇವಾಲಯ

ಬೆಂಗಳೂರಿನ ಮಲ್ಲೇಶ್ವರಂ ಪರಿಸರದಲ್ಲಿ ಕಾಡು ಮಲ್ಲೇಶ್ವರ ದೇವಾಲಯವು ನೆಲೆಸಿದೆ. ಈ ದೇವಾಲಯವು 17 ನೇ ಶತಮಾನಕ್ಕೆ ಸೇರಿದುದಾಗಿದ್ದು, ಶಿವನಿಗರ್ಪಿತವಾದುದಾಗಿದೆ. ನಂದೀಶ್ವರ ತೀರ್ಥ ಇಲ್ಲಿಯ ಮತ್ತೊಂದು ದೊಡ್ಡ ಆಕರ್ಷಣೆಯಾಗಿದೆ. ಇಲ್ಲಿ ನಂದಿ ಪ್ರತಿಮೆಯ ಬಾಯಿಯಿಂದ ನೀರು ನಿರಂತರವಾಗಿ ಹರಿದು ಲಿಂಗದ ಮೇಲೆ ಬೀಳುತ್ತದೆ. ಈ ನೀರೇ ವೃಷಭಾವತಿ ನದಿಯ ಮೂಲ ಎಂಬ ನಂಬಿಕೆಯೂ ಇದೆ

ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯ

ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯ

ನೀವು ಈ ದೇವಾಲಯವನ್ನು ಕನ್ನಡ ಪ್ರಾದೇಶಿಕ ವಾಹಿನಿಗಳಲ್ಲಿ ನೋಡಿರಬಹುದು. ಧರ್ಮಗಿರಿ ದೇವಸ್ಥಾನವು ಬನಶಂಕರಿ ಬಿಡಿಎ ಸಂಕೀರ್ಣದ ಸಮೀಪದಲ್ಲಿದೆ ಮತ್ತು ಇದು ಪ್ರಸಿದ್ಧ ಧಾರಾವಾಹಿ ಶೂಟಿಂಗ್ ಸ್ಥಳವಾಗಿದೆ. ಹಲವು ಕನ್ನಡ ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ನಂತರ ಜನಪ್ರಿಯತೆ ಗಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X