Search
  • Follow NativePlanet
Share
» »ನಿಮ್ಮ ಹನಿಮೂನ್ ಇಲ್ಲಿಯಾದರೆ ಜೀವನವೆಲ್ಲಾ ಮೊದಲ ರಾತ್ರಿಯೇ...

ನಿಮ್ಮ ಹನಿಮೂನ್ ಇಲ್ಲಿಯಾದರೆ ಜೀವನವೆಲ್ಲಾ ಮೊದಲ ರಾತ್ರಿಯೇ...

ಮನುಷ್ಯನ ಜೀವನದಲ್ಲಿ ಮುಖ್ಯವಾದದು ಗೃಹಸ್ತನಾಗುವುದು. ವಿವಾಹ ಅದಕ್ಕೆ ಬುನಾದಿ. ವಿವಾಹದ ಮೊದಲ ದಿನ ತನ್ನ ಜೀವನದಲ್ಲಿ ಬರುವ ಸಂಗಾತಿಯೊಂದಿಗೆ ಏಕಾಂತವಾಗಿ ಕಳೆಯಬೇಕು ಎಂದು ಪ್ರತಿಯೊಬ್ಬರು ಬಯಸುವುದು ಸಾಮಾನ್ಯವೇ.

ಹೊಸ ಜೀವನ ವಿವಾಹದಿಂದ ಪ್ರಾರಂಭವಾಗುತ್ತದೆ. ಗಂಡು-ಹೆಣ್ಣಿನ ಸಂಬಂಧಕ್ಕೆ ಪವಿತ್ರವಾದ ಬಂಧನವಾಗಿ ಮದುವೆ ಎಂಬ ಪದವನ್ನು ಬಳಸಲಾಗುತ್ತದೆ. ಪ್ರಾರಂಭದ ಉತ್ಸಾಹದ ಒಂದು ಹೊಸ ಜೀವನವನ್ನು ನಿಮ್ಮ ಮಧುಚಂದ್ರದಿಂದಾಗಿ ಮತ್ತಷ್ಟು ಬಂಧನ ಗಟ್ಟಿಗೊಳಿಸುತ್ತದೆ. ಯಾವುದೇ ಜಂಜಾಟವಿಲ್ಲದೇ ಕೆಲವು ಕಾಲ ತಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಬೇಕು ಎಂದು ಪ್ರತಿಯೊಬ್ಬರ ಸಹಜವಾದ ಬಯಕೆಯೇ ಆದರೆ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ಹೀಗಾಗಿ ಲೇಖನದಲ್ಲಿ ಮಧುಚಂದ್ರಕ್ಕೆ ರೋಮ್ಯಾಂಟಿಕ್ ಪ್ರದೇಶಗಳ ಬಗ್ಗೆ ಲೇಖನದ ಮೂಲಕ ತಿಳಿದುಕೊಂಡು ಒಮ್ಮೆ ಭೇಟಿ ನೀಡಿ ಬನ್ನಿ.

ನಿಮ್ಮ ಪ್ರಣಯ ವಿರಾಮಕ್ಕಾಗಿ ಭಾರತದಲ್ಲಿನ ಅತ್ಯುತ್ತಮವಾದ 5 ಮಧುಚಂದ್ರದ ಸ್ಥಳಗಳನ್ನು ಆಯ್ಕೆ ಮಾಡಿ ತಿಳಿಸುತ್ತಿದ್ದೇನೆ. ಈ ಸುಂದರವಾದ ಸ್ಥಳಗಳಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆದರೆ ಜೀವನದಲ್ಲಿ ಎಂದಿಗೂ ಮರೆಯಲಾಗದಂತಹ ಅನುಭೂತಿಯನ್ನು ನೀವು ಹೊಂದಬಹುದು.

ಹಾಗಾದರೆ ಬನ್ನಿ ಆ ಸ್ಥಳಗಳು ಯಾವುವು? ಎಲ್ಲಿವೆ? ಎಂಬುದನ್ನು ಸಂಕ್ಷೀಪ್ತವಾಗಿ ತಿಳಿಯೋಣ.

1..ದೇವಿಕುಲಂ

1..ದೇವಿಕುಲಂ

PC:YOUTUBE

ಕೇರಳದಲ್ಲಿನ ಈ ಪ್ರಮುಖ ಗಿರಿಧಾಮವು ನವ ದಂಪತಿಗಳಿಗೆ ಬೇಸಿಗೆಯಲ್ಲಿಯೇ ಅಲ್ಲದೇ, ವರ್ಷದಲ್ಲಿ ಯಾವುದೇ ಸಮಯದಲ್ಲಿಯಾದರು ಆಹ್ವಾನಿಸುತ್ತಲೇ ಇರುತ್ತದೆ. ಇಲ್ಲಿ ಸುಂದರವಾದ ಜಲಪಾತಗಳು, ಕಣ್ಣಿಗೆ ಮುದ ನೀಡುವ ಹಚ್ಚ ಹಸಿರಿನ ಪ್ರಕೃತಿ, ಎತ್ತರವಾದ ಗಿರಿಶಿಖರಗಳು ಆಹಾ ಇಲ್ಲಿಯೇ ಜೀವನ ಪೂರ್ತಿ ಕಳೆಯಬೇಕು ಎಂದು ಅನ್ನಿಸದೇ ಇರದು. ಇಲ್ಲಿರುವ ಸೀತಾ ದೇವಿ ಸರೋವರ ಕೂಡ ಪ್ರಧಾನವಾದ ಆಕರ್ಷಣೆ.

2.ಅರಕು ವ್ಯಾಲಿ

2.ಅರಕು ವ್ಯಾಲಿ

PC:YOUTUBE

ಆಂಧ್ರಪ್ರದೇಶದಲ್ಲಿನ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ಕೇಂದ್ರದಲ್ಲಿ ಅರಕು ಕಣಿವೆ ಮೊದಲನೆಯದು. ಮುಖ್ಯವಾಗಿ ಹನಿಮೂನ್‍ಗಾಗಿ ಕೇವಲ ಆಂಧ್ರ ಪ್ರದೇಶದಿಂದಲೇ ಅಲ್ಲದೇ ದೇಶದಲ್ಲಿನ ವಿವಿಧ ಪ್ರದೇಶಗಳಿಂದಲೂ ಕೂಡ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಬೊರ್ರಾ ಗುಹೆಗಳು ಪ್ರಧಾನವಾದ ಆಕರ್ಷಣೆಯಾಗಿದೆ. ತಮ್ಮ ಸಂಗಾತಿಯೊಂದಿಗೆ ರೋಮಾಂಚನಕಾರಿ ಕ್ಷಣವನ್ನು ಕಳೆಯಲು ಇದೊಂದು ಅತ್ಯುತ್ತಮವಾದ ತಾಣ ಎಂದೇ ಹೇಳಬಹುದು.

3.ಕುದುರೆ ಮುಖ

3.ಕುದುರೆ ಮುಖ

PC:YOUTUBE

ಕರ್ನಾಟಕದಲ್ಲಿನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುದುರೆಮುಖ ಗಿರಿಧಾಮವಿದೆ. ಮಳೆಗಾಲದ ಪ್ರಾರಂಭದಲ್ಲಿ ಇಲ್ಲಿ ಆಕರ್ಷಿಸುವ ಹಸಿರು ಹಾಸಿಗೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇದೊಂದು ಅತ್ಯದ್ಭುತವಾದ ಸ್ಥಳವಾಗಿದ್ದು, ನವ ಜೋಡಿಗಳ ಏಕಾಂತಕ್ಕೆ ಹೇಳಿ ಮಾಡಿಸಿದ ಸ್ಥಳ ಎಂದೇ ಹೇಳಬಹುದು. ಕರ್ನಾಟಕದಲ್ಲಿ ಹನಿಮೂನ್ ತಾಣಕ್ಕೆ ಅನುಕೂಲಕರವಾದ ಪ್ರದೇಶದಲ್ಲಿ ಇದು ಕೂಡ ಒಂದು.

4.ಕೊಡೈಕೆನಲ್:

4.ಕೊಡೈಕೆನಲ್:

PC:Noblevmy

ತಮಿಳುನಾಡಿನ ಪಶ್ಚಿಮ ಘಟ್ಟದ ಪಳನಿ ಪರ್ವತ ಶ್ರೇಣಿಗಳ ಮಧ್ಯೆ ನೆಲೆಸಿರುವ ಕೊಡೈಕೆನಲ್ ಗಿರಿಧಾಮವು ದಕ್ಷಿಣ ಭಾರತದ ಸುಂದರ ಗಿರಿಧಾಮಗಳ ಪೈಕಿ ಒಂದಾಗಿದೆ. ಸಮುದ್ರಮಟ್ಟದಿಂದ 2100 ಮೀ ಎತ್ತರದಲ್ಲಿರುವ ಈ ಮನಮೋಹಕ ಗಿರಿಧಾಮ ಪ್ರದೇಶವು ಮತ್ತೊಂದು ಪ್ರಖ್ಯಾತ ಧಾರ್ಮಿಕ ನಗರಿ ಮದುರೈನಿಂದ 120 ಕಿ.ಮೀ ದೂರದಲ್ಲಿ ನೆಲೆಸಿದೆ. ಛಾಯಾಗ್ರಾಹಕ ಸ್ನೇಹಿ ಭೂದೃಶ್ಯಾವಳಿಗಳನ್ನು ಹೊಂದಿರುವ ಈ ಗಿರಿಧಾಮ ತಾಣದ ಪ್ರಮುಖ ಆಕರ್ಷಣೆಯೆಂದರೆ ನಕ್ಷತ್ರ ಆಕಾರದ ಸುಂದರವಾದ ಕೆರೆ. ಈ ಕೆರೆಯಲ್ಲಿ ಹಾಯಾಗಿ ದೋಣಿ ಸವಾರಿ ಮಾಡುತ್ತ ಸುತ್ತಮುತ್ತಲಿನ ಸುಂದರ ಪರಿಸರದ ಅನುಭವವನ್ನು ಸವಿಯಬಹುದು.

5.ಕನ್ನೂರ್

5.ಕನ್ನೂರ್

PC:YOUTUBE

ತಮಿಳುನಾಡಿನಲ್ಲಿರುವ ಹಿಲ್ ಸ್ಟೇಷನ್ ಯಾವಾಗಲೂ ಹಚ್ಚಹಸರಿನಿಂದ ಕಾಣಿಸುತ್ತವೆ. ಮುಖ್ಯವಾಗಿ ಇಲ್ಲಿನ ಟೀ ಎಸ್ಟೇಟ್ ಪ್ರವಾಸಿಗರ ಪ್ರಧಾನವಾದ ಆಕರ್ಷಣೆ ಎಂದೇ ಹೇಳಬಹುದು. ಇಲ್ಲಿಗೆ ಹನಿಮೂನ್ ಜೋಡಿಗಳು ಸ್ವರ್ಗಧಾಮವಾದ ಕನ್ನೂರ್‍ನಲ್ಲಿನ ವಸತಿ ಸೌಕರ್ಯಗಳು ಕೂಡ ಇವೆ. ಇಲ್ಲಿ ಅನೇಕ ಪ್ರವಾಸಿ ತಾಣಗಳು ಕೂಡ ಇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more