» »ಇವು ಹುಲಿಗಳ ಮನೆಗಳು

ಇವು ಹುಲಿಗಳ ಮನೆಗಳು

Posted By: Divya

ವನ್ಯ ಜೀವಿಗಳು ಎಂದರೆ ಒಂದು ಬಗೆಯ ಕುತೂಹಲ. ಅವುಗಳನ್ನು ನೋಡಬೇಕು, ಮುಟ್ಟ ಬೇಕು ಎನಿಸುವುದು ಸಹಜ. ಆದರೆ ಕುತೂಹಲದಲ್ಲಿ ಅವುಗಳ ಮುಟ್ಟುವ ಸಾಹಸಕ್ಕೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಭಾರತದ ಉದ್ದ-ಅಗಲಕ್ಕೂ ಹಲವಾರು ವನ್ಯಧಾಮಗಳಿರುವುದನ್ನು ಕಾಣಬಹುದು. ಅವುಗಳಲ್ಲಿಯೇ ನಾವಿನ್ನೂ ನೋಡದಿರುವ ಪ್ರಾಣಿ-ಪಕ್ಷಿಗಳನ್ನು ಸುಲಭವಾಗಿ ಕಾಣಬಹುದು.

ಹುಲಿಯಂತಹ ಪ್ರಾಣಿ ಒಮ್ಮೆ ಕೂಗಿದರೆ ಸಾಕು, ಕೈಕಾಲುಗಳೆಲ್ಲಾ ನಡುಗಲು ಪ್ರಾರಂಭವಾಗುತ್ತದೆ. ಆದರೆ ಈ ಪ್ರಾಣಿಯ ಸಂಖ್ಯೆಯು ಕಡಿಮೆಯಾಗುತ್ತಿರುವುದು ವಿಪರ್ಯಾಸ. ಇವುಗಳ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಸಂರಕ್ಷಿಸುವ ಉದ್ದೇಶಕ್ಕಾಗಿ ಹಲವೆಡೆ ಹುಲಿ ಸಂರಕ್ಷಣಾ ತಾಣವೆಂದು ಗುರುತಿಸಲಾಗಿವೆ. ಕೇಸರಿ ಮೈ ಬಣ್ಣ, ಕಪ್ಪು ಪಟ್ಟೆಯ ಚಿತ್ತಾರ, ಕೌರ್ಯದಿಂದ ನೋಡುವ ಆ ಕಣ್ಣುಗಳು ಹುಲಿಯ ಆಕರ್ಷಣೆ. ಈ ನಮ್ಮ ರಾಷ್ಟ್ರೀಯ ಪ್ರಾಣಿಯನ್ನು ಭಾರತದ ಪ್ರಮುಖ 5 ಪ್ರದೇಶದಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು. 

Tiger Sightings In India
 

ರಣಥಂಬೂರ್ ರಾಷ್ಟ್ರೀಯ ಉದ್ಯಾನ
ಭಾರತದ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನ ಎಂದು ಖ್ಯಾತಿ ಪಡೆದಿರುವ ಈ ಉದ್ಯಾನದಲ್ಲಿ ಹುಲಿಗಳ ಹಿಂಡನ್ನು ಕಾಣಬಹುದು. ರಾಜಸ್ಥಾನದಲ್ಲಿರುವ ಈ ಉದ್ಯಾನ ಹಿಂದಿನ ಕಾಲದಲ್ಲಿ ರಾಜ ಮನೆತನದ ಶಿಖಾರಿ ಸ್ಥಳವಾಗಿತ್ತು ಎನ್ನಲಾಗುತ್ತದೆ. 1955ರಲ್ಲಿ ಇದನ್ನು ವನ್ಯ ಜೀವಿಧಾಮ ಎಂದು ಘೋಷಿಸಲಾಯಿತು. 1973ರಲ್ಲಿ ಮೊದಲ ಹಂತದ ಹುಲಿಯೋಜನೆಯಲ್ಲಿ ಸೇರ್ಪಡೆಗೊಂಡಿತು. 392 ಚ.ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ತಾಣದಲ್ಲಿ ನರಿ, ಚಿರತೆ, ಕಾಡು ಹಂದಿ ಸೇರಿದಂತೆ ಅನೇಕ ಪ್ರಾಣಿ ಹಾಗೂ ಪಕ್ಷಿ ಸಂಕುಲಗಳನ್ನು ಕಾಣಬಹುದು. 

Tiger Sightings In India

                                          PC: flickr.com

ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ
ಬಂಗಾಳದಲ್ಲಿರುವ ಮ್ಯಾನ್ ಗ್ರೋ ಕಾಡುಗಳನ್ನೇ ಸುಂದರಬನ್ಸ್ ಅರಣ್ಯ ಎಂದುಕರೆಯುತ್ತಾರೆ. ಇದು ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣ ಎನ್ನುವ ಮಾನ್ಯತೆಯನ್ನು ಪಡೆದುಕೊಂಡಿದೆ. ಇದು 4200 ಘನ ಚ.ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದು, ಅಳಿವಿನಂಚಿನಲ್ಲಿರುವ ಹುಲಿಗಳ ಆವಾಸ ಸ್ಥಾನವಾಗಿದೆ. ಇಲ್ಲಿ ಸುಮಾರು 250 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಹುಲಿಯನ್ನು ಹೊರತು ಪಡಿಸಿದರೆ ನಾಗರಹಾವು, ಮೊನಿಟರ್ ನಂತಹ ಸರಿಸೃಪಗಳಿಗೂ ಆಶ್ರಯ ನೀಡಿದೆ. 

Tiger Sightings In India
 

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ
ಉಪ ಹಿಮಾಲಯ ಭಾಗದಲ್ಲಿರುವ ಈ ಉದ್ಯಾನ ಉತ್ತರಾಖಂಡ್‍ನ ನೈನಿತಾಲ್ ಜಿಲ್ಲೆಯ ರಾಮನಗರದಲ್ಲಿದೆ. ವಿಶಿಷ್ಟ ಪರಿಸರದ ನಡುವೆ 488 ಬಗೆಯ ವೈವಿಧ್ಯಮಯ ವನಸ್ಪತಿ ಸಸ್ಯಗಳನ್ನು ಒಳಗೊಂಡಿದೆ. ಹುಲಿಯ ರಕ್ಷಣಾ ತಾಣವಾದ ಇಲ್ಲಿ 50 ಬಗೆಯ ಸಸ್ತನಿಗಳು, 580 ಬಗೆಯ ಪಕ್ಷಿಗಳು ಹಾಗೂ 25 ಬಗೆಯ ಸರಿಸೃಪಗಳನ್ನು ಒಳಗೊಂಡಿದೆ.

Tiger Sightings In India
 

                                          PC: commons.wikimedia.org

ಬಾಂಧವಗಡ್ ರಾಷ್ಟ್ರೀಯ ಉದ್ಯಾನ
ಮಧ್ಯಪ್ರದೇಶದ ವಿಂಧ್ಯಾ ಬೆಟ್ಟದ ಬಾಂಧವಗಡ್‍ನಲ್ಲಿ ಈ ಉದ್ಯಾನವಿದೆ. ಹುಲಿ ಹಾಗೂ ಅನೇಕ ಜೀವಿಗಳ ವೈವಿಧ್ಯಕ್ಕೆ ಪ್ರಸಿದ್ಧಿ ಪಡೆದಿದೆ. ಇಳಿಜಾರು ಪ್ರದೇಶ ಹಾಗೂ ಹುಲ್ಲುಗಾವಲಿನಿಂದ ಕೂಡಿದ್ದು, 400 ಅಡಿ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. 22ಬಗೆಯ ಸಸ್ತನಿಗಳು, 250 ಬಗೆಯ ಪಕ್ಷಿಸಂಕುಲಗಳು, ಸ್ಲಾತ್ ಕರಡಿ, ಚಿರತೆ, ಮುಂಗುಸಿ ಸೇರಿದಂತೆ ಅನೇಕ ಪ್ರಾಣಿಗಳ ವಾಸಸ್ಥಳವಾಗಿದೆ.

Tiger Sightings In India
 

ತಡೋಬ ಅಂಧಾರಿ ಉದ್ಯಾನವನ
ಮಹಾರಾಷ್ಟ್ರದಲ್ಲಿರುವ ಈ ಉದ್ಯಾನವನವನ್ನು ಹುಲಿಗಳ ಮೀಸಲು ಪ್ರದೇಶ ಎಂದು ಘೋಷಿಸಲಾಗಿದೆ. ಇದನ್ನು ಮಹಾರಾಷ್ಟ್ರದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನವನ ಎಂದು ಗುರುತಿಸಲಾಗಿದೆ. 575.78 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಉದ್ಯಾನ ಭಾರತದಲ್ಲಿರುವ 25 ಹುಲಿಯ ಮೀಸಲು ಪ್ರದೇಶಗಳಲ್ಲಿ ಒಂದು. ಇಲ್ಲಿ ಸುಮಾರು 50 ಹುಲಿಗಳ ವಾಸವಿದೆ. ಇವುಗಳನ್ನು ಹೊರತು ಪಡಿಸಿದರೆ ಚಿರತೆ, ಕಪ್ಪು ಕರಡಿ, ವನವೃಷಭ, ಕಾಡುನಾಯಿಗಳು ಹಾಗೂ ಇನ್ನಿತರ ಪಕ್ಷಿ ಸಂಕುಲಗಳಿವೆ.

Read more about: uttarakhand