Search
  • Follow NativePlanet
Share
ಮುಖಪುಟ » ಸ್ಥಳಗಳು» ಸುಂದರಬನ್ಸ್

ಸುಂದರಬನ್ಸ್ - ಭಾರತೀಯ ಹುಲಿರಾಯನ ಸ್ವಗೃಹ (ಸ್ವಂತ ಮನೆ)

14

ಭಾತರ ಮತ್ತು ಬಾಂಗ್ಲಾಗಳಲ್ಲಿ ಹಬ್ಬಿರುವ ಬೃಹತ್ ಮ್ಯಾನ್ ಗ್ರೋ ಕಾಡುಗಳೇ ಈ ಸುಂದರಬನ್ಸ್ ಕಾಡುಗಳು. ಈ ಮ್ಯಾನ್ ಗ್ರೋ ಕಾಡುಗಳ ಅತಿಹೆಚ್ಚಿನ ಭಾಗ ಬಾಂಗ್ಲಾದೇಶದಲ್ಲಿ ಚಾಚಿಕೊಂಡಿದ್ದು, ಕೇವಲ ಮೂರರಲ್ಲಿ ಒಂದು ಭಾಗ ಮಾತ್ರ ಭಾರತದಲ್ಲಿದೆ. ಹಾಗಾಗಿ ಮ್ಯಾನ್ ಗ್ರೋ ಕಾಡುಗಳನ್ನು ಸಂದರ್ಶಿಸಬೇಕಾದರೆ ಸುಂದರಬನ್ಸ್ ಒಂದೇ ಆಯ್ಕೆ.

ಹಾಗೆಂದು ಅದು ಹೇಗಿದ್ದರೂ ಹೋಗಿನೋಡಿ "ವಾಹ್, ಎನ್ನಿ" ಅನ್ನುತ್ತಿಲ್ಲ. ಒಮ್ಮೆ ನೀವು ಸುಂದರಬನ್ಸ್ ಗೆ ಪ್ರವಾಸ ಬೆಳೆಸಿನೋಡಿ, ಅದು ನಿಮ್ಮ ಜೀವಮಾನದ ಅತ್ಯುತ್ತಮ ಅನುಭವಗಳಲ್ಲೊಂದಾಗುವುದಂತೂ ಖಚಿತ. ಇದು ಯುನೆಸ್ಕೋದಿಂದ ವಿಶ್ವಪಾರಂಪರ್ಯದ ಮಾನ್ಯತೆ ಪಡೆದಿರುವ (UNESCO World Heritage ) ಈ ಪ್ರದೇಶದ ಏಕೈಕ ತಾಣವಾಗಿದೆ.     

ರಕ್ಷಿತ ಅರಣ್ಯದ ವ್ಯಾಪ್ತಿ

ಈ ಸುಂದರಬನ್ಸ್ ಮ್ಯಾನ್ ಗ್ರೋ ಕಾಡುಗಳು ಭಾರತದ ಅತಿದೊಡ್ಡ ಕಡುಗಳಲ್ಲೊಂದು. ಇವು ಸುಮಾರು 4200 ಘನ ಕಿ.ಮೀ ವ್ಯಾಪ್ತಿಯಲ್ಲಿ ಹಬ್ಬಿದ್ದು, ಅಳಿವಿನ ಅಂಚಿನಲ್ಲಿರುವ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯ ಆವಾಸಸ್ಥಾನವಾಗಿದೆ. ಸುಂದರಬನ್ಸ್ ದ ಪರಿಸರ ಹಾಗು ಇಲ್ಲಿನ ನೀರಿಗೆ ತಮ್ಮನ್ನು ತಾವು ಒಗ್ಗಿಸಿಕೊಂಡು ಸ್ವಚ್ಛಂದವಾಗಿ ಓಡಾಡಿಕೊಂಡಿರುವ ಬೆಕ್ಕಿನ ದೊಡ್ಡಪ್ಪನನ್ನು ಕಣ್ತುಂಬಿಕೊಳ್ಳುವುದೇ ಒಂದು ಭಾಗ್ಯ.

ಈಗ ಉಳಿದಿರುವ 250 ಹುಲಿಗಳನ್ನು ಹೊರತುಪಡಿಸಿ ಚೇತಲ್ ಜಿಂಕೆ ಮತ್ತು ರ್ಹೆಸುಸ್ ಮಂಗಗಳೂ ಇಲ್ಲಿವೆ. ಆದರೆ ಎಚ್ಚರ, ಸುಂದರಬನ್ಸ ಕೆಲವು ಅಳಿವಿನ ಅಂಚಿನಲ್ಲಿರುವ ನಾಗರಹಾವು, ವಾಟರ್ ಮೊನಿಟರ್ ನಂತಹ ಸರಿಸೃಪಗಳಿಗೂ ರಕ್ಷಣೆ ನೀಡಿದೆ.  

ಛಾಯಾಗ್ರಾಹಕರ ಸ್ವರ್ಗ

ಸುಂದರಬನ್ಸ್ ರಾಷ್ಟ್ರೀಯ ಉದ್ಯಾನದಲ್ಲಿ ಅಪರೂಪದ ಪಕ್ಷಿಗಳಾದ ಮಾಸ್ಕಡ್ ಫಿನ್ ಫೂಟ್, ಮ್ಯಾನ್ ಗ್ರೋ ಪಿಟ್ಟಾ ಮತ್ತು ಮ್ಯಾನ್ ಗ್ರೋ ವ್ಹಿಸ್ತ್ಲೆರ್ ಗಳ ತವರಾಗಿದೆ. ವನ್ಯಜೀವಿ  ಛಾಯಾಗ್ರಾಹಕರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಇಲ್ಲಿಗೆ ಬಂದು ಸುಂದರಬನ್ಸ್ ದ ರಮಣೀಯತೆಯನ್ನು ಇಲ್ಲಿನ ಪ್ರಾಣಿ-ಪಕ್ಷಿಗಳ ಸಹಿತ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯಲೇಬೇಕು. ಬರೀ ಪ್ರಾಣಿ-ಪಕ್ಷಿಗಳಷ್ಟೇ ಅಲ್ಲ, ಇಲ್ಲಿನ ಮರಗಳೂ ವಿಶಿಷ್ಟವಾದವುಗಳು. ಸ್ಥಳಿಯ ಮರಗಳಾದ ಸುಂದರೀ ಮತ್ತು ಗೊಲ್ಪಟಾ ಮರಗಳು ಇಲ್ಲಿಯ ವಿಶೇಷ.

1900 ರ ಪ್ರಾರಂಭದ ದಿನಗಳಲ್ಲೇ ಜೀವಶಾಸ್ತ್ರಜ್ಞನಾದ ಡೇವಿಡ್ ಪ್ರೈನ್ ನು " ಸುಂದರಬನ್ಸ ನಲ್ಲಿ ವಿವಿಧ ಪ್ರಬೇಧದ ಸುಮಾರು 330 ತರಹದ ಸಸ್ಯರಾಶಿ ಇದೆ ಎಂದು ದಾಖಲಿಸಿದ್ದಾನೆ.

ಎಮ್,ಬಿ ಸುಂದರಿ

ಎಮ್,ಬಿ ಸುಂದರಿ ಎಂಬುದು ಇಲ್ಲಿ ಬಾಡಿಗೆಗೆ ಸಿಗುವ ತೇಲುವ ಮನೆಗಳು. ಆದರೆ ಇವನ್ನು ಮೊದಲೇ ಕಾಯ್ದಿರಿಸುವದರಿಂದ ಎಲ್ಲರಿಗೂ ಎಲ್ಲಾಕಾಲದಲ್ಲೂ ತಕ್ಷಣಕ್ಕೆ ಇವು ಸಿಗುವದಿಲ್ಲ. ಆದರೆ ಅದೃಷ್ಟವಶಾತ್ ಇಂತಹ ತೇಲುವ ಮನೆಗಳೇನಾದರು ನಿಮಗೆ ಸಿಕ್ಕರೆ, ಇವು ಸುಂದರಬನ್ಸ್ ಬಗೆಗಿನೆ ನಿಮ್ಮ ದೃಷ್ಟಿಕೋನವನ್ನೇ ಬದಲಿಸಿಬಿಡುತ್ತದೆ. ಎಮ್,ಬಿ ಸುಂದರಿಯಲ್ಲಿ ಎಂಟು ಜನರ ಒಂದು ಕುಟುಂಬವು ಆರಾಮವಾಗಿ ನೆಲೆಸುವಷ್ಟು ಸ್ಥಳವಿದ್ದು, ಅನೇಕ ಕೊಠಡಿಗಳು ಮತ್ತು ಸ್ನಾನಗೃಹವನ್ನು ಹೊಂದಿದೆ. ಇವನ್ನು ಕೇರಳದಲ್ಲಿನ ಅಥವಾ ಭಾರತದ ಇತರ ಭಾಗದಲ್ಲಿರುವ ಉತ್ಕೃಷ್ಟ ಮಟ್ಟದ ತೇಲುವ ಮನೆಗಳಿಗೆ ಹೋಲಿಸಬಹುದು.    

ಈ ಪ್ರದೇಶದಲ್ಲಿ ಬದಲಾಗುತ್ತಿರುವ ಹವಾಗುಣದಿಂದಾಗಿ ಸುಂದರಬನ್ಸ್ ಕಾಡುಗಳ ಪರಿಸ್ಥಿತಿ ಏನಾಗಬಹುದೆಂಬುದು ವಿಜ್ಞಾನಿಗಳಿಗೆ ಪ್ರಶ್ನೆಯಾಗಿತ್ತು. ಕೊಲ್ಕತ್ತದಿಂದ ಕೆಲವೇ ತಾಸುಗಳ ಪಯಣದಲ್ಲಿ ಸುಂದರಬನ್ಸ್ ನ್ನು ತಲುಪಬಹುದಾಗಿದ್ದು, ರಾತ್ರಿ ಉಳಿಯಲು ಸಾಧ್ಯವಾಗದ ಪ್ರವಾಸಿಗರು,  ಸುಂದರಬನ್ಸ್ ಗೆ ಒಂದು ದಿನದ ಪ್ರವಾಸಕ್ಕಾಗಿ ತೆರಳುವರು. ಕೆಲವು ಸ್ಥಳೀಯ ರೆಸಾರ್ಟಗಳು ಹಾಗು ವಸತಿಗೃಹಗಳು ಸ್ಥಳಿಯ-ರುಚಿಕಟ್ಟಾದ ಊಟವನ್ನು ಒದಗಿಸುತ್ತವೆ. ಇನ್ನು ಕೆಲವು ಕಡೆಗಳಲ್ಲಿ ಮೀನಿನೂಟದ ವ್ಯವಸ್ಥೆಯೂ ಇದೆ.

ಪ.ಬಂಗಾಳದ ರಾಜಧಾನಿ ಕೋಲ್ಕತ್ತಾದಿಂದ ಅನೇಕ ಬಸ್ ಮತ್ತು ಕಾರಗಳು ಸುಂದರಬನ್ಸ್ ಗೆ ತೆರಳುತ್ತವೆ. ಜೋಡಿ-ಹಕ್ಕಿಗಳಾಗಿ ಹೋದರೋ ಅಥವಾ ಕುಟುಂಬವಾಗಿ ಹೋದರೋ  ಸುಂದರಬನ್ಸ್ ಖಂಡಿತವಾಗಿ ಒಳ್ಳೆಅಯ ಅನುಭವ ನೀಡುತ್ತದೆ. ನದಿಯ ತೇಲು ಗೃಹವನ್ನು ಬಾಡಿಗೆಗೆ ಪಡೆದರಂತೂ  ಸುಂದರಬನ್ಸ್, ಒಂದು ರೋಮಾಂಚಕಾರಿ ತಾಣವಾಗಬಲ್ಲದು. ಇಲ್ಲಿನ ಕಡಿದಾದ ತೊರೆಗಳಲ್ಲಿ ತೇಲುತ್ತಿದ್ದರೆ ಪ್ರಸಿದ್ದ ಅಂತರರಾಷ್ಟ್ರೀಯ ತೇಲು ಪಂದ್ಯಾವಳಿಗಳ ಅನುಭವವನ್ನು ನೀಡುತದೆ. ಆದ್ದರಿಂದಲೇ ಸುಂದರಬನ್ಸ್ ನ್ನು ಅಮೇಜಾನನದಿಗೆ ಹೋಲಿಸುತ್ತಾರೆ!.

ಸುಂದರಬನ್ಸ್ ನ್ನು ತಲುಪುವುದು ಹೇಗೆ

ವಾಯು, ರಸ್ತೆ ಮತ್ತು ರೈಲು ಮಾರ್ಗವಾಗಿ ಸುಂದರಬನ್ಸ್ ನ್ನು ಸುಲಭವಾಗಿ ತಲುಪಬಹುದು.

ಸುಂದರಬನ್ಸ್ ಪ್ರಸಿದ್ಧವಾಗಿದೆ

ಸುಂದರಬನ್ಸ್ ಹವಾಮಾನ

ಉತ್ತಮ ಸಮಯ ಸುಂದರಬನ್ಸ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸುಂದರಬನ್ಸ್

  • ರಸ್ತೆಯ ಮೂಲಕ
    ಪ್ರತಿದಿನವೂ ನಿರಂತರವಾಗಿ ಕೊಲ್ಕತ್ತದಿಂದ ಸುಂದರಬನ್ಸ್ ಗೆ ಬಸ್ ಗಳು ಸಂಚರಿಸುತ್ತವೆ. ಕೊಲ್ಕತ್ತಾದಿಂದ 100 ಕಿ.ಮೀ ದೂರವಿರುವ ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ್ನು ಕೇವಲ ಮೂರುತಾಸುಗಳ ಪಯಣಗಲ್ಲಿ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸುಂದರಬನ್ಸ್ , ಕೊಲ್ಕತ್ತಾದ ಹೌರಾ ರೈಲು ನಿಲ್ದಾಣಕ್ಕೆ ನೇರವಾದ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    100 ಕಿ.ಮೀ ದೂರವಿರುವ ಕೊಲ್ಕತ್ತಾ ಅಂತಾರಾಷ್ಟ್ರೀಯ ವಾಯುನೆಲೆ ಸುಂದರಬನ್ಸ್ ಗೆ ಹತ್ತಿರದ ವಾಯುನೆಲೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat