Search
  • Follow NativePlanet
Share
» »ಚೌಕಾಸಿ ಮಾಡಿದರೆ 100 ರೂಪಾಯಿ ವಸ್ತುಗಳನ್ನು ಕೂಡ 20 ರೂಪಾಯಿಗೆ ಪಡೆಯಬಹುದು…

ಚೌಕಾಸಿ ಮಾಡಿದರೆ 100 ರೂಪಾಯಿ ವಸ್ತುಗಳನ್ನು ಕೂಡ 20 ರೂಪಾಯಿಗೆ ಪಡೆಯಬಹುದು…

ಶಾಪಿಂಗ್ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚು-ಮೆಚ್ಚು. ಮುಖ್ಯವಾಗಿ ಪ್ರವಾಸಕ್ಕೆಂದು ಹೋರಟಾಗ ಆ ಸ್ಥಳಗಳ ನೆನಪಿಗಾಗಿಯೇ ಎಂದು ಶಾಷಿಂಗ್ ಮಾಡುತ್ತೇವೆ. ತಮ್ಮ ಊರಿನಲ್ಲಿ ದೊರೆಯದ ವಸ್ತುವನ್ನು ಕೊಂಡುಕೊಳ್ಳುವುದು, ತಮ್ಮಲ್ಲಿ ಆ ವಸ್ತುವು ಇದೆ ಎಂದು ಹೇಳುವುದು ಒಂದು ಗರ್ವವಾಗಿ ಜನರು ಭಾವಿಸುತ್ತಾರೆ.

ಆದರೆ ಆ ವಸ್ತುವಿನ ದರವು ಕೂಡ ಸ್ವಲ್ಪ ಕಡಿಮೆ ಇದ್ದರೆ ಮಾತ್ರ ಕೊಂಡುಕೊಳ್ಳಲು ಬಯಸುತ್ತಾರೆ. ಇದರಿಂದ ಅರ್ದ ಪ್ರವಾಸ ಹಾಗು ಉಳಿದರ್ಧ ವಸ್ತುಗಳಿಗೆ ಪ್ರವಾಸಿಗರು ವ್ಯಯ ಮಾಡುತ್ತಾರೆ. ಮುಂಬೈ, ಗೋವಾ ಹಾಗು ಬೆಂಗಳೂರು ಹೀಗೆ ಯಾವ ಪಟ್ಟಣವನ್ನು ತೆಗೆದುಕೊಂಡರು ಕೂಡ ಅಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವು ವಸ್ತುಗಳು ದೊರೆಯುವ ಪ್ರತ್ಯೇಕವಾದ ಪ್ರದೇಶಗಳಿರುತ್ತವೆ.

ಅಂತಹ ಸ್ಥಳದಲ್ಲಿ ಶಾಪಿಂಗ್ ಮಾಡುವುದರಿಂದ ಅತಿ ಕಡಿಮೆ ದರದಲ್ಲಿ ಹೆಚ್ಚು ಸರಕುಗಳನ್ನು ಖರೀದಿಸಬಹುದು. ಈ ಲೇಖನದ ಮೂಲಕ ವಿವಿಧ ಪ್ರವಾಸಿ ಸ್ಥಳಗಳಲ್ಲಿನ ಕಡಿಮೆ ಬೆಲೆಗೆ ಸರಕು ದೊರೆಯುವ ಶಾಪಿಂಗ್ ಸ್ಥಳಗಳ ಬಗ್ಗೆಮಾಹಿತಿಯನ್ನು ಪಡೆಯಿರಿ.

1.ಅರ್ಪೋರಾ ಬಜಾರ್, ಗೋವಾ

1.ಅರ್ಪೋರಾ ಬಜಾರ್, ಗೋವಾ

PC:YOUTUBE

ಗೋವಾ ಎಂದಾಕ್ಷಣ ನಮಗೆ ಮೊದಲು ನೆನಪಾಗುವುದೇ ಬೀಚ್‍ಗಳೇ. ಇನ್ನು ಇಲ್ಲಿ ನೈಟ್ ಲೈಫ್ ಎಂದರೆ ಕೇವಲ ಮದ್ಯವನ್ನು ಸೇವನೆ ಮಾಡಿ ಏಂಜಾಯ್ ಮಾಡುವುದೇ ಎಂಬ ಉತ್ತರ ಬರುವುದು ಸಾಮಾನ್ಯವಾದುದು. ಆದರೆ ಈ ಅರ್ಪೋರಾ ಬಜಾರ್‍ನಲ್ಲಿ ಆ ಅಲೋಚನೆ ತಪ್ಪು ಎಂದೇ ಹೇಳಬಹುದು. ಏಕೆಂದರೆ 6 ಗಂಟೆಯ ನಂತರವೇ ಲೈಟಿಂಗ್‍ನಲ್ಲಿ ಕಂಗೊಳಿಸುತ್ತಿರುವ ಪ್ರದೇಶವಾಗಿ ಮಾರ್ಪಾಟಾಗುತ್ತದೆ. ಇಲ್ಲಿ ಅಭರಣಗಳ ಜೊತೆಜೊತೆಗೆ 100 ರೂಪಾಯಿಯ ಜೀನ್ಸ್ ಕೂಡ ದೊರೆಯುತ್ತದೆ. ಗೋವಾಗೆ ಭೇಟಿ ನೀಡುವವರು ತಪ್ಪದೇ ಈ ಸ್ಥಳಕ್ಕೆ ಭೇಟಿ ನೀಡಲೇಬೇಕು.

2.ಸರೋಜಿನಿ ಮಾರ್ಕೆಟ್, ದೆಹಲಿ

2.ಸರೋಜಿನಿ ಮಾರ್ಕೆಟ್, ದೆಹಲಿ

PC:YOUTUBE

ಸ್ಟ್ರೀಟ್ ಮಾರ್ಕೆಟ್‍ಗಳಲ್ಲಿ ಸರೋಜಿನಿ ಮಾರ್ಕೆಟ್‍ಗೆ ಪ್ರತ್ಯೇಕವಾದ ಸ್ಥಾನವಿದೆ. ಇಲ್ಲಿ ಎಕ್ಸ್ ಫೋರ್ಟ್ ಕ್ವಾಲಿಟಿ ಸರಕು ಕೂಡ ಅತ್ಯಂತ ಕಡಿಮೆ ದರದಲ್ಲಿ ದೊರೆಯುತ್ತದೆ. ಅದ್ದರಿಂದಲೇ ದೆಹಲಿ ವಾಸಿಗಳು ಹೆಚ್ಚಾಗಿ ಇಲ್ಲಿಯೇ ಶಾಪಿಂಗ್ ಮಾಡಲು ಬಯಸುತ್ತಾರೆ. ಟ್ರೆಂಡಿ ಫ್ಯಾಷನ್ ವಸ್ತ್ರಗಳಿಗೆ ಈ ಸರೋಜಿನಿ ಮಾರ್ಕೆಟ್ ಪ್ರಸಿದ್ಧಿ. ಚೌಕಾಸಿ ಮಾಡುಲು ನಿಮಗೆ ಬಂದರೆ ಇನ್ನು ಕಡಿಮೆ ದರದಲ್ಲಿ ವಸ್ತುಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

3.ಎಫ್,ಸಿ ಮಾರ್ಕೆಟ್

3.ಎಫ್,ಸಿ ಮಾರ್ಕೆಟ್

PC:YOUTUBE

ಪೂನೆಯಲ್ಲಿ ಉತ್ತಮವಾದ ಕಾಲೇಜ್ ಯಾವುದು ಎಂದರೆ ಹೇಳದೇ ಇರಬಹುದು. ಆದರೆ ಶಾಪಿಂಗ್‍ಗೆ ಅನುಕೂಲಕರವಾದ ಪ್ರದೇಶವೆಂದರೆ ಮಾತ್ರ ಪ್ರತಿಯೊಬ್ಬರಿಗೂ ಕೇಳಿಸುವ ಪದವೇ ಎಫ್,ಸಿ ಮಾರ್ಕೆಟ್. ಇಲ್ಲಿ ಅತ್ಯಂತ ಫ್ಯಾಷನ್ ವಸ್ತ್ರಗಳಿಂದ ಹಿಡಿದು ಪ್ರತಿಯೊಂದು ವಸ್ತುವು ಕೂಡ ದೊರೆಯುತ್ತದೆ. ಅದರಲ್ಲೂ ಅತ್ಯಂತ ಕಡಿಮೆ ದರದಲ್ಲಿ. ಇವುಗಳಲ್ಲಿ ಅನೇಕ ವಸ್ತುಗಳು ಮುಂಬೈನಿಂದ ಬಂದಿರುವುದೆ. ಅದ್ದದರಿಂದಲೇ ದಿನದಲ್ಲಿ ಯಾವ ಸಮಯದಲ್ಲಿ ನೋಡಿದರು ಕೂಡ ಇಲ್ಲಿ ವಿದ್ರ್ಯಾಥಿಗಳೇ ಹೆಚ್ಚು ಸಂಖ್ಯೆಯಲ್ಲಿ ಕಾಣಿಸುತ್ತಾರೆ.

4.ಕಮರ್ಷಿಯಲ್ ಸ್ಟ್ರೀಟ್

4.ಕಮರ್ಷಿಯಲ್ ಸ್ಟ್ರೀಟ್

PC:YOUTUBE

ಸ್ಟ್ರಿಟ್ ಮಾರ್ಕೆಟ್‍ನಲ್ಲಿಯೂ ಕೂಡ ನವನವೀನ ಸರಕುಗಳು ದೊರೆಯುತ್ತದೆ. ಕಮರ್ಷಿಯಲ್ ಸ್ಟ್ರೀಟ್ ಎಂದರೆ ತಟ್ಟನೆ ನೆನಪಾಗುವುದೇ ನಮ್ಮ ಬೆಂಗಳೂರು. ಇಲ್ಲಿ ದೊರೆಯುವ ವಸ್ತುಗಳು ಯಾವುದೇ ದೊಡ್ಡ-ದೊಡ್ಡ ಅಂಗಡಿಗಳಲ್ಲಿ ದೊರೆಯದ ಅತ್ಯುತ್ತಮವಾದ ಹಾಗು ಬ್ರಾಂಡೆಡ್ ವಸ್ತುಗಳು ದೊರೆಯುತ್ತದೆ. ಅದ್ದರಿಂದಲೇ ಬೆಂಗಳೂರಿಗರು ಹೆಚ್ಚಾಗಿ ಈ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಶಾಪಿಂಗ್ ಮಾಡಲು ಬಯಸುತ್ತಾರೆ.

5.ಕೊಲಬಾ ಮಾರ್ಕೆಟ್

5.ಕೊಲಬಾ ಮಾರ್ಕೆಟ್

PC:YOUTUBE

ಮುಂಬೈನಲ್ಲಿ ಈ ಕೊಲಬಾ ಮಾರ್ಕೆಟ್‍ನ ಬಗ್ಗೆ ತಿಳಿಯದೇ ಇರುವವರು ಯಾರು ಇರುವುದಿಲ್ಲ ಎಂದೇ ಹೇಳಬಹುದು. ಸಂದಿಗುಂದಿಯಲ್ಲಿರುವ ಈ ಮಾರ್ಕೆಟ್ ಪ್ರದೇಶದಲ್ಲಿ ಅತ್ಯಂತ ಆಕರ್ಷಣೀಯವಾದ ದರದಲ್ಲಿ ವಸ್ತಗಳನ್ನು ನಾವು ಸ್ವಂತ ಮಾಡಿಕೊಳ್ಳಬಹುದು. ಚೌಕಾಸಿ ಮಾಡುವ ನೈಪುಣ್ಯ ಇದ್ದರೆ 100 ರೂಪಾಯಿ ವಸ್ತುಗಳನ್ನು ಕೂಡ 20 ರೂಪಾಯಿಗೆ ಪಡೆಯಬಹುದು. ಅದ್ದರಿಂದಲೇ ಮಧ್ಯಮ ವರ್ಗದ ಜನರ ಜೊತೆಜೊತೆಗೆ ಧನವಂತರು ಕೂಡ ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X