Search
  • Follow NativePlanet
Share
» »ಜನವರಿಯಲ್ಲಿ ಪುನರೀಕರಿಸಬಹುದಾದಂತಹ ಭಾರತದ 15 ಚಳಿಗಾಲದ ಪ್ರವಾಸಿ ತಾಣಗಳು

ಜನವರಿಯಲ್ಲಿ ಪುನರೀಕರಿಸಬಹುದಾದಂತಹ ಭಾರತದ 15 ಚಳಿಗಾಲದ ಪ್ರವಾಸಿ ತಾಣಗಳು

By Manjula Balaraj Tantry

ಹೊಸವರ್ಷ ಸಮೀಪಿಸುತ್ತಿದ್ದಂತೆ ಜನರು ತಮ್ಮ ಹೊಸವರ್ಷದ ನಿರ್ಣಯಗಳನ್ನು ನಿರ್ಧರಿಸುವಲ್ಲಿ ವ್ಯಸ್ತರಾಗಿರುತ್ತಾರೆ. ಮತ್ತು ತಮ್ಮ ಪಟ್ಟಿಯಲ್ಲಿ ಕೆಲವು ಉತ್ತಮ ಸ್ಥಳಗಳಿಗೆ ಪ್ರಯಾಣಿಸುವುದನ್ನೂ ಸೇರಿಸಿಕೊಂಡಿರುತ್ತಾರೆ. ಭಾರತದಲ್ಲಿ ಕೆಲವು ಸ್ಥಳಗಳು ಚಳಿಗಾಲದ ಋತುಗಳಲ್ಲಿ ಸುಂದರ ಪ್ರವಾಸಿ ತಾಣಗಳಾಗಿ ಮಾರ್ಪಡುತ್ತವೆ.

ಸುತ್ತಲೂ ಹಸಿರುಮಯ ಹಾಗೂ ತಂಪಾದ ಗಾಳಿಯನ್ನು ಹೊಂದಿರುವ ವಾತಾವರಣವನ್ನು ಹೊಂದಿರುವ ಸ್ಥಳಗಳು ಅನ್ವೇಷಣೆಗೆ ಮತ್ತು ಭೇಟಿಕೊಡಲು ಸೂಕ್ತವಾಗಿರುತ್ತವೆ. ಜನವರಿ ತಿಂಗಳು ಹತ್ತಿರ ಬರುತ್ತಿದ್ದಂತೆಯೇ ನಿಮ್ಮ ಬ್ಯಾಗುಗಳನ್ನು ತುಂಬಿಸಿಕೊಂಡು ಕೂತೂಹಲಕಾರಿಯಾದಂತಹ ಇವುಗಳಲ್ಲಿ ಯಾವುದಾದರೊಂದು ಸ್ಥಳಕ್ಕೆ ಪ್ರಯಾಣ ಬೆಳೆಸಿ.

1. ಕೊಚ್ಚಿ

1. ಕೊಚ್ಚಿ

ಕೊಚ್ಚಿಯು ಕೇರಳದ ಅತ್ಯಂತ ಸುಂದರವಾದ ಕರಾವಳಿ ಪಟ್ಟಣವಾಗಿದ್ದು , ಇಲ್ಲಿಯ ಅದ್ಬುತವಾದ ಕಲಾಕೃತಿ ಮತ್ತು ಚಿನ್ನಕ್ಕೆ ಹೆಸರುವಾಸಿಯಾದುದರಿಂದ ಇದು ಪ್ರವಾಸಿಗರನ್ನು ಹೆಚ್ಚಿನ ಮಟ್ಟದಲ್ಲಿ ಆಕರ್ಷಿಸುತ್ತದೆ. ಪುರಾತನ ಯಹೂದಿ ಪಟ್ಟಣಗಳ ಮೂಲಕ ಪ್ರಯಾಣಿಸಿ ಇದು ನಿಮಗೆ ಕೊಚ್ಚಿಯ ಶ್ರೀಮಂತ ಇತಿಹಾಸದ ಒಂದು ಪಕ್ಷಿನೋಟವನ್ನು ನೀಡುತ್ತದೆ. ಮುಝೀರಿಸ್ ಬಿನಾಲ್ 2012 ರಲ್ಲಿ ಪ್ರಾರಂಭವಾಯಿತು ಮತ್ತು ಇಂದಿಗೂ ಸಹ ಅದರ ಸುಂದರ ಸೊಬಗು ಮತ್ತು ಮೋಡಿಯು ಪ್ರೇಕ್ಷಕರನ್ನು ಹಿಡಿದಿಡುತ್ತದೆ.

2. ಅಹಮದಾಬಾದ್

2. ಅಹಮದಾಬಾದ್

ಅಹಮದಾಬಾದ್ ಜನವರಿಯಲ್ಲಿ ಭೇಟಿ ಕೊಡುವ ಸಂದರ್ಶಕರ ಒಂದು ಪ್ರಯಾಣ ಪಟ್ಟಿಯಲ್ಲಿ ಹೆಚ್ಚಾಗಿ ಕಾಣದೇ ಇರಬಹುದು ಆದರೆ ಪ್ರತಿವರ್ಷ ಆಚರಿಸಲಾಗುವ ಮಕರ ಸಂಕ್ರಾಂತಿಯ ಸಮಯದಲ್ಲಿ ಅತ್ಯಾಕರ್ಷಕ ಗಾಳಿಪಟ ಹಾರಿಸುವ ಅಸಾಧಾರಣ ದೃಶ್ಯವು ಈ ಆಧುನಿಕ ತಾಣವನ್ನು ಭೇಟಿ ಮಾಡಲು ಸಾಕು.

3. ಗೋವಾ

3. ಗೋವಾ

ಗೋವಾದ ಒಂದು ಸುಂದರವಾದ ಕಡಲತೀರದ ತಾಣವಾಗಿದ್ದು, ಶಾಂತ ಗಾಳಿ ಮತ್ತು ತಣ್ಣನೆಯ ವಾತಾವರಣವು ಇಲ್ಲಿ ಕಂಡು ಬರುತ್ತದೆ. ಇದು ಭಾರತ ಮತ್ತು ಹೊರದೇಶಗಳಲ್ಲಿರುವ ಬಹುತೇಕ ಜನರ ಕಲ್ಪನೆಯನ್ನು ಸೆರೆಹಿಡಿಯುವಂತಹ ತಾಣವಾಗಿದೆ. ಕಠಿಣವಾದ ಬೇಸಿಗೆಯು ಬರುವುದಕ್ಕಿಂತ ಮುನ್ನ ಅಂದರೆ ಜನವರಿ ತಿಂಗಳುಗಳಲ್ಲಿ ಗೋವಾಕ್ಕೆ ಭೇಟಿ ಕೊಡವುದು ಸೂಕ್ತ ಸಮಯವಾಗಿದೆ. ನೀವು ಅವಶ್ಯಕವಾದ ಮೀಸಲಾತಿಗಳನ್ನು ಆರಂಭದಲ್ಲಿಯೇ ಮಾಡಿದರೆ, ಕೆಲವು ಪ್ಯಾಕೇಜುಗಳಲ್ಲಿ ನೀವು ಉತ್ತಮ ರಿಯಾಯಿತಿಗಳನ್ನು ಪಡೆಯಲು ಅವಕಾಶವಿರುತ್ತದೆ. ಒಂದು ಬೈಕನ್ನು ಬಾಡಿಗೆಗೆ ಪಡೆದುಕೊಳ್ಳಿ ಮತ್ತು ಗೋವಾ ವನ್ನು ಅನ್ವೇಷಿಸಲು ಸಿದ್ದರಾಗಿ.

4. ಜೈಪುರ

4. ಜೈಪುರ

ಪಿಂಕ್ ಸಿಟಿ ಪುನರುಜ್ಜೀವನಗೊಂಡು ಪ್ರಾಚೀನ ನಗರಗಳನ್ನು ಅದ್ಭುತ ಪ್ರವಾಸಿ ತಾಣವಾಗಿ ಮಾರ್ಪಡಿಸಿದೆ. ಜನವರಿ 21 ರಿಂದ ಜನವರಿ 25 ರವರೆಗೆ ಜಾರಿಗೆ ಬರುವ ಜೈಪುರ ಸಾಹಿತ್ಯ ಉತ್ಸವವು ಈ ಪ್ರಾಚೀನ ನಗರವನ್ನು ಭೇಟಿ ಮಾಡಲು ಇನ್ನೊಂದು ಕಾರಣವನ್ನು ನೀಡುತ್ತದೆ. ಐತಿಹಾಸಿಕ ಸ್ಮಾರಕಗಳು ಮತ್ತು ರಚನೆಗಳನ್ನು ಹೊಂದಿರುವ ಜೈಪುರವು ಶ್ರೀಮಂತ ಸಾಂಸ್ಕೃತಿಕ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ.

5. ಕೋವಲಂ

5. ಕೋವಲಂ

ದೇವರ ರಾಜ್ಯದ ರಾಜಧಾನಿಯ ಒಂದು ಸಣ್ಣ ಉಪನಗರವಾಗಿದ್ದು, ಕೋವಲಂ ಅನೇಕ ಪಂಚತಾರಾ ಹೋಟೇಲುಗಳ ನೆಲೆಯಾಗಿದೆ ಮತ್ತು ಕೆಲವು ನೀರಿನ ಸಾಹಸ ಕ್ರೀಡೆಗಳು ಅಥವಾ ಸರ್ಫಿಂಗ್ ನಲ್ಲಿ ತೊಡಗಿಸಿಕೊಳ್ಳುವಲ್ಲಿ ನಿಮಗೆ ಉತ್ತಮ ಸೌಲಭ್ಯವನ್ನು ಒದಗಿಸಿಕೊಡುತ್ತದೆ. ಕೋವಲಂನಲ್ಲಿ ಜನವರಿ ಮಧ್ಯದಲ್ಲಿ ನಡೆಯುವ ವಾರ್ಷಿಕ ಉತ್ಸವವಾದ ಗ್ರಾಮಮ್ ನ ಆತಿಥ್ಯ ವಹಿಸುತ್ತದೆ, ಇದು ಕೇರಳದ ಸಾಂಸ್ಕೃತಿಕ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಲು ಪ್ರಾರಂಭಿಸಲಾಗಿದೆ. ಇಲ್ಲಿಯ ಖಾದ್ಯಗಳನ್ನು ಸವಿಯಿರಿ ಮತ್ತು ಇಲ್ಲಿ ಸ್ಥಳೀಯರ ಸುಂದರವಾದ ಉಡುಪುಗಳನ್ನು ಗಮನಿಸಿ.

6. ಸಿರ್ಪುರ್

6. ಸಿರ್ಪುರ್

ನೈಸರ್ಗಿಕ ಸೌಂದರ್ಯ ಮತ್ತು ಪುರಾತನ ಸ್ಮಾರಕಗಳ ಸುಂದರ ಮಿಶ್ರಣದೊಂದಿಗೆ ಸಿರ್ಪುರ್ ಪ್ರಕೃತಿಯ ಮಡಿಲಲ್ಲಿರುವ ಪುರಾತನ ಪಟ್ಟಣವಾಗಿದೆ.ಸಿರ್ಪುರ್ ಪ್ರತಿವರ್ಷ ರಾಷ್ಟ್ರೀಯ ನೃತ್ಯ ಮತ್ತು ಸಂಗೀತ ಉತ್ಸವನ್ನು ನೆರವೇರಿಸುತ್ತದೆ; ಇದು ಐತಿಹಾಸಿಕ ಪಟ್ಟಣದಲ್ಲಿ ನಿಮ್ಮ ಇರುವಿಕೆಯನ್ನು ಇನ್ನೂ ಉಲ್ಲಾಸಮಯವಾಗಿಸುತ್ತದೆ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ.ಇಸ್ಕಾನ್ ದೇವಸ್ಥಾನ, ಮಹಂತ್ ಘಾಸಿದಾಸ್ ಸ್ಮಾರಕ, ಉರ್ಜಾ ಉದ್ಯಾನ, ನಂದನವಾನ್ ಗಾರ್ಡನ್ ಮತ್ತು ಮಡ್ಕು ದ್ವೀಪ್ ಗಳನ್ನು ಇಲ್ಲಿ ಇರುವಾಗ ಖಂಡಿತವಾಗಿಯೂ ಭೇಟಿಕೊಡಿ.

7. ಮಧುರೈ

7. ಮಧುರೈ

ದಕ್ಷಿಣ ಭಾರತದ ಧಾರ್ಮಿಕ ಪಟ್ಟಣಗಳಲ್ಲಿ ಒಂದಾದ ಮಧುರೈ ಆಕರ್ಷಣೆ ಮತ್ತು ಸೊಬಗುಗಳಿಂದ ಕೂಡಿದ್ದಾಗಿದೆ. ನಗರದ ಹೃದಯಭಾಗದಲ್ಲಿರುವ ಆಕರ್ಷಕ ಮೀನಾಕ್ಷಿ ದೇವಸ್ಥಾನವು ಇಂದಿಗೂ ಸಹ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.ಈ 4,000-ವರ್ಷದ-ಹಳೆಯ ಪಟ್ಟಣದ ಭೂದೃಶ್ಯವನ್ನು ಅಲಂಕರಿಸುವ ಹಲವಾರು ದೇವಾಲಯಗಳು ಮತ್ತು ಪ್ರಾಚೀನ ಸ್ಮಾರಕಗಳಿವೆ. ಹಿಂದಿನ ಕಾಲದ ಜೀವನದ ಸುತ್ತಲಿನ ನೋಟವನ್ನು ಸವಿಯಲು ನಗರದಾದ್ಯಂತ ಒಂದು ದೂರ ಅಡ್ಡಾಡಿದರೆ ಸಾಕು.


PC: Wikimedia.org

8. ಅಂಡಮಾನ್ ಮತ್ತು ನಿಕೋಬಾರ್

8. ಅಂಡಮಾನ್ ಮತ್ತು ನಿಕೋಬಾರ್

ಈ ಸ್ಥಳವು ದಂಪತಿಗಳಿಗೆ ಒಂದು ಪ್ರಖ್ಯಾತ ಹನಿಮೂನ್ ತಾಣಗಳಲ್ಲೊಂದಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಬೆರಗುಗೊಳಿಸುವಂತಹ ಕಡಲತೀರಗಳು, ಸ್ಪಟಿಕದಂತಿರು ಸ್ವಚ್ಚವಾದ ನೀರು ಮತ್ತು ರೇಷ್ಮೆಯಂತಿರುವ ಮರಳುಗಳು ನಿಮ್ಮ ಕಲ್ಪನೆಯನ್ನು ಮೀರಿಸುವಂತಹ ನೋಟವನ್ನು ಒದಗಿಸುತ್ತದೆ. ಹ್ಯಾವ್ ಲಾಕ್ ದ್ವೀಪವು ಗಮನವನ್ನು ಸೆಳೆಯುವ ಸ್ಥಳಗಳಲ್ಲಿ ಒಂದಾಗಿದೆ, ಈ ತಾಣವು ಕೆಲವು ಶಾಂತಿ ಮತ್ತು ವಿಶ್ರಾಂತಿಗೆ ಪರಿಪೂರ್ಣ ತಾಣವಾಗಿದೆ.

ಎಲಿಫೆಂಟ್ ಮತ್ತು ಕಲಾಪಥರ್ ಬೀಚ್, ಸೆಲ್ಯುಲರ್ ಜೈಲ್, ರಾಧಾನಗರ್, ವೆನಮ್ ಬಾರ್, ಫುಲ್ ಮೂನ್ ಕೆಫೆಯಲ್ಲಿ ರುಚಿಕರ ಭಕ್ಷ್ಯಗಳು ಮತ್ತು ಸ್ನಾರ್ಕ್ಕಲಿಂಗ್ ಮತ್ತು ಸ್ಕೂಬಾ ಡೈವಿಂಗ್ ನಂತಹ ಜಲ ಕ್ರೀಡೆಗಳು ಇಲ್ಲಿವೆ.

9. ಭುವನೇಶ್ವರ

9. ಭುವನೇಶ್ವರ

ಭಾರತದಲ್ಲಿ ಕೆಲವು ಯೋಜಿತ ನಗರಗಳಲ್ಲಿ ಒಂದಾಗಿದೆ, ಇದು ದೇಶದ ಅತಿ ಹೆಚ್ಚು ಕಡೆಗಣಿಸದ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.ಪುರಾತನ ದೇವಾಲಯಗಳು ಮತ್ತು ಬೆರಗುಗೊಳಿಸುವಂತಹ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಭುವನೇಶ್ವರ ಪವಿತ್ರ ನಗರವಾದ ಪುರಿ ಮತ್ತು ಕೋನಾರ್ಕ್ ಅನ್ನು ಹೊಂದಿರುವ ಗೋಲ್ಡನ್ ಟ್ರಯಾಂಗಲ್ ನ ಅವಿಭಾಜ್ಯ ಅಂಗವಾಗಿದೆ, ಇದು ಕ್ರಮವಾಗಿ ಜಗನ್ನಾಥ ದೇವಸ್ಥಾನ ಮತ್ತು ಸೂರ್ಯ ದೇವಾಲಯಕ್ಕೆ ಆಶ್ರಯವಾಗಿದೆ. ಜನವರಿ ಎರಡನೇ ವಾರದಲ್ಲಿ ನಡೆಯುವ ಮುಕ್ತೇಶ್ವರ್ ನೃತ್ಯ ಉತ್ಸವದಲ್ಲಿ ಭಾಗವಹಿಸಿ.

PC: G41rn8

10. ಪ್ಯಾಟ್ನಿಟಾಪ್

10. ಪ್ಯಾಟ್ನಿಟಾಪ್

ಪೀರ್ ಪಂಜಾಲ್ ರೇಂಜ್ನ ಅದ್ಭುತ ದೃಶ್ಯಗಳು ಮತ್ತು ಪಾದಯಾತ್ರೆ, ಕ್ಯಾಂಪಿಂಗ್, ರಾಕ್ ಕ್ಲೈಂಬಿಂಗ್, ಟ್ರೆಕ್ಕಿಂಗ್ ಮತ್ತು ಪ್ಯಾರಾಗ್ಲೈಡಿಂಗ್ ಮುಂತಾದವುಗಳು ಪಾಟ್ನಿಟಾಪ್ಗೆ ಭೇಟಿ ನೀಡಬೇಕಾದ ಪ್ರವಾಸಿ ಕೇಂದ್ರಗಳಾಗಿವೆ ಇಲ್ಲಿಯ ಹಲವಾರು ಸಾಹಸ ಚಟುವಟಿಕೆಗಳು ನಿಮ್ಮನ್ನು ಆಕರ್ಷಿಸುತ್ತವೆ. ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತರಾಗುವಂತಹ ಸನ್ಸಾರ್ ಸರೋವರದತ್ತ ಒಂದು ಭೇಟಿ ಕೊಡಿ. ಸೀಡರ್ ಮತ್ತು ಪೈನ್ ಕಾಡುಗಳ ಮಧ್ಯೆ ನೆಲೆಸಿರುವ ಸಣ್ಣ ಹಳ್ಳಿಗಳಾದ ಬಟೊಟ್ ಮತ್ತು ಕುಡ್ ಕಾಶ್ಮೀರದ ಆಕರ್ಷಕ ಸಂಸ್ಕೃತಿಯ ನೋಟವನ್ನು ಒದಗಿಸುತ್ತದೆ.


PC: Sunny Arora


11. ಮುರುಡೇಶ್ವರ

11. ಮುರುಡೇಶ್ವರ

ಈ ಸ್ಥಳವು ಸಾಹಸಮಯ ಚಟುವಟಿಕೆಗಳಿಗೆ ತಾಣವಾಗಿ ಪ್ರಸಿದ್ದವಾಗಿದೆ. ಭವ್ಯವಾದ ಶಿವನ ಪ್ರತಿಮೆ ವಿಶ್ವದಲ್ಲಿನ ಶಿವನ ಪ್ರತಿಮೆಗಳಲ್ಲಿ ಎರಡನೇ ಅತ್ಯಂತ ಎತ್ತರದ ರಚನೆಯಾಗಿದೆ. ಮೂರು ಕಡೆಗಳಿಂದ ಅರಬ್ಬೀ ಸಮುದ್ರದಿಂದ ಮತ್ತು ಪೂರ್ವದ ಭೂಭಾಗದಲ್ಲಿ ಪಶ್ಚಿಮದ ಘಟ್ಟಗಳಿಂದ ಸುತ್ತುವರೆದಿರುವ ಮುರುಡೇಶ್ವರವು ಕರ್ನಾಟಕಕ್ಕೆ ಭೇಟಿ ನೀಡುವ ಜನರಿಗೆ ಸೂಕ್ತ ಪ್ರವಾಸಿ ತಾಣವಾಗಿದೆ.

ನೆರೆಯ ನೆಟ್ರಾನಿ ದ್ವೀಪ ಅಥವಾ ಪಾರಿವಾಳ (ಪಿಜನ್ ) ದ್ವೀಪ ಸ್ಕೂಬಾ ಡೈವಿಂಗ್ ಮತ್ತು ಸ್ನೋರ್ಕ್ಲಿಂಗ್ ನ ಅನುಕೂಲವನ್ನು ಒದಗಿಸಿಕೊಡುತ್ತದೆ. ಮುರುಡೇಶ್ವರ ಬೀಚ್, ಜಲ ಕ್ರೀಡೆಗಳು, ಡೈವಿಂಗ್ ಸೌಲಭ್ಯಗಳು ಮತ್ತು ಮುರುಡೇಶ್ವರ ದೇವಸ್ಥಾನಗಳ ಬಗ್ಗೆ ಗಮನ ಹರಿಸಿ.

12. ಔಲಿ

12. ಔಲಿ

ಭಾರತದ ಒಂದು ಪ್ರಖ್ಯಾತ ಸ್ಕೈಯಿಂಗ್ ತಾಣಗಳಲ್ಲೊಂದಾಗಿದ್ದು ಪ್ರಕೃತಿಯ ಎಲ್ಲಾ ಛಾಯೆಗಳನ್ನು ಹೊಂದಿದೆ ಮತ್ತು ಜನವರಿಯಲ್ಲಿ ಭೇಟಿ ನೀಡಬಹುದಾದ ಪ್ರಮುಖ ಪ್ರವಾಸಿ ತಾಣವಾಗಿದೆ.ಈ ಗಿರಿಧಾಮವು ಹಿಮದಿಂದ ಅಲಂಕರಿಸಲ್ಪಟ್ಟಿದ್ದು ಸಾಹಸಮಯ ಚಟುವಟಿಕೆಗಳಿಂದ ಕೂಡಿದೆ.

ನಂದಾ ದೇವಿ ಶ್ರೇಣಿಯ ಅದ್ಭುತ ದೃಶ್ಯಗಳನ್ನು ಮತ್ತು ಪ್ರಕೃತಿಯ ಅನೇಕ ಅದ್ಭುತವಾದ ವಾಸ್ತುಶಿಲ್ಪಗಳನ್ನು ನೋಡಿ ಆನಂದಿಸಿ, ಅದರಲ್ಲಿ ನದಿಗಳು ಮತ್ತು ಸೊಂಪಾದ ಹಸಿರು ಕಾಡುಗಳೂ ಕೂಡ ಸೇರಿವೆ. ತ್ರಿಶೂಲ್ ಪೀಕ್, ರುದ್ರ ಪ್ರಯಾಗ, ಚೆನಾಬ್ ಸರೋವರ, ಕ್ವಾನಿ ಬ್ಯುಗಲ್ ಮತ್ತು ಜೋಶಿಮಠವನ್ನು ಪರಿಶೀಲಿಸಿ. ಸಮಯ ಅನುಮತಿಸಿದರೆ, ನೀವು ಇಲ್ಲಿ ಆಯೋಜಿಸಿದ ರಾಷ್ಟ್ರೀಯ ಸ್ಕೀಯಿಂಗ್ ಚಾಂಪಿಯನ್ಷಿಪ್ ಅನ್ನು ವೀಕ್ಷಿಸಬಹುದು.

13. ದಿಯು

13. ದಿಯು

ಒಂದಾನೊಂದು ಕಾಲದಲ್ಲಿ ಇದು ಪೊರ್ಚುಗೀಸರ ವಿಶ್ರಾಂತಿ ಕೇಂದ್ರವಾಗಿತ್ತು. ದಿಯೂ ತನ್ನ ಗದ್ದಲದಿಂದ ಅದರ ಜೊತೆಗೆ ಹಿತವಾದ ಆಹ್ಲಾದಕರ ವಾತಾವರಣದೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ ಇಲ್ಲಿಯ ಶಾಂತ ವಾತಾವರಣ, ಕಡಲತೀರಗಳು ಮತ್ತು ಆಹ್ಲಾದಕರ ಹವಾಮಾನ ಜನವರಿನಲ್ಲಿ ಭೇಟಿ ನೀಡಲು ಸೂಕ್ತ ಸ್ಥಳವಾಗಿದೆ. ಪ್ರಾಚೀನ ರಚನೆಗಳೊಂದಿಗೆ ಪಾಕ ಪದ್ದತಿ ಮತ್ತು ಸಂಸ್ಕೃತಿ ಪೊರ್ಚುಗೀಸರಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವಿತವಾಗಿದೆ. ಇಲ್ಲಿಗೆ ಭೇಟಿಕೊಡುವುದು ನಿಮ್ಮ ರಜಾ ಪ್ಯಾಕೇಜ್ ನ ಒಂದು ಉತ್ತಮ ಆಯ್ಕೆಗಳಲ್ಲೊಂದಾಗಿದೆ. ಏಷ್ಯಾದಲ್ಲಿನ ವಿಸ್ತೃತ ಬೀಚ್ ಉತ್ಸವವಾದ ದಿಯುವಿನಲ್ಲಿ ಭಾಗವಹಿಸಲು ಮರೆಯಬೇಡಿ.

14. ಕೊಹಿಮಾ

14. ಕೊಹಿಮಾ

ಇದು ಭವ್ಯವಾದ ಪ್ರಕೃತಿ ಮತ್ತು ಸುಂದರ ಮತ್ತು ಕುತೂಹಲಕಾರಿಯಾದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಮ್ಮಿಲನವಾಗಿದೆ. ಕೊಹಿಮಾ ಒಂದು ಆಹ್ಲಾದಕರ ವಾತಾವರಣವನ್ನು ಒದಗಿಸುತ್ತದೆ. ಇದು ಬುಡಕಟ್ಟು ಸಂಪ್ರದಾಯದ ರಸವನ್ನು ಪ್ರತಿಬಿಂಬಿಸುತ್ತದೆ. ಬ್ರಿಟಿಷರಿಂದ ನಿರ್ಮಿಸಲ್ಪಟ್ಟಿದೆ ಮತ್ತು ಕುಲ್ಕಿಸ್ ಮತ್ತು ನಾಗಾ ಬುಡಕಟ್ಟು ಜನಾಂಗದವರಿಗೆ ನೆಲೆಯಾಗಿದೆ, ಕೊಹಿಮಾವು ಒಂದು ರೋಮಾಂಚಕ ಸಂಸ್ಕೃತಿಯನ್ನು ಪರಿಚಯಿಸುತ್ತದೆ, ಇದು ಎಲ್ಲ ಮನಸ್ಥಿತಿಗಳತ್ತ ಬೆಳಕು ಚೆಲ್ಲುತ್ತದೆ.ಕೊಹಿಮಾದಲ್ಲಿ ಅನ್ವೇಷಿಸಬಹುದಾದಂತಹ ಇತರ ಪ್ರಮುಖ ಸ್ಥಳಗಳೆಂದರೆ, ಕೊಹಿಮಾ ಝೂ, ಶಿಲ್ಲೋಯ್ ಲೇಕ್, ಝುಕೊ ವ್ಯಾಲಿ, ಜಪ್ಪು ಪೀಕ್, ಟಫೇಮಾ ವಿಲೇಜ್, ಕೊಹಿಮಾ ಮ್ಯೂಸಿಯಂ ಮತ್ತು ಖೊನೊಮಾ ಗ್ರೀನ್ ವಿಲೇಜ್


PC: Sharada Prasad CS

15. ಮಂಗಳೂರು

15. ಮಂಗಳೂರು

ಮಂಗಳೂರು ಕರ್ನಾಟಕ ರಾಜ್ಯದ ಒಂದು ಪ್ರಮುಖ ಬಂದರಾಗಿದ್ದು, ಇದೊಂದು ಮನಮೋಹಕವಾದ ಪ್ರವಾಸಿ ತಾಣವಾಗಿದೆ. ಸುಂದರವಾದ ಬೀಚ್, ಉಷ್ಣ ಹವಾಮಾನ ಮತ್ತು ಆಕರ್ಷಕ ವಾಸ್ತುಶಿಲ್ಪ ಮಂಗಳೂರಿನ ಪ್ರಮುಖ ಲಕ್ಷಣಗಳಾಗಿವೆ.ಸೇಂಟ್ ಅಲೋಶಿಯಸ್ ಚರ್ಚ್, ಮಂಗಳಾದೇವಿ ದೇವಸ್ಥಾನ, ಕದ್ರಿ ದೇವಸ್ಥಾನ, ಇತ್ಯಾದಿಗಳು ಇಲ್ಲಿ ಪ್ರಮುಖವಾದುದಾಗಿದೆ.


PC: Nithin Bolar k

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more