Search
  • Follow NativePlanet
Share
» » 1000 ವರ್ಷ ಹಳೆಯ ಈ ದೇವಾಲಯಗಳನ್ನು ನೀವು ನೋಡಿದ್ದೀರಾ?

1000 ವರ್ಷ ಹಳೆಯ ಈ ದೇವಾಲಯಗಳನ್ನು ನೀವು ನೋಡಿದ್ದೀರಾ?

ನಮ್ಮ ದೇಶದಲ್ಲಿ ಎಷ್ಟೆಲ್ಲಾ ದೇವಾಲಯಗಳಿವೆ. ಪ್ರತಿಯೊಂದ ರಾಜ್ಯದಲ್ಲೂ ನೂರಾರು ಮಂದಿರಗಳು ಕಾಣಸಿಗುತ್ತದೆ. ಅವುಗಳಲ್ಲಿ ಬಹುತೇಕ ಮಂದಿರಗಳು ಬಹಳ ಪ್ರಸಿದ್ಧ ಹೊಂದಿರುವುದರ ಜೊತೆಗೆ ಬಹಳ ಪ್ರಾಚೀನವಾದವುಗಳೂ ಕೂಡಾ. ನಮ್ಮ ದೇಶದಲ್ಲಿ 1000 ವರ್ಷಕ್ಕೂ ಹೆಚ್ಚಿನ ಅನೇಕ ಮಂದಿರಗಳಿವೆ. ಅವುಗಳು ಯಾವುವು ಅನ್ನೋದು ನಿಮಗೆ ಗೊತ್ತಾ?

ಕೈಲಾಸ ಎಲ್ಲೋರ ದೇವಾಲಯ

ಕೈಲಾಸ ಎಲ್ಲೋರ ದೇವಾಲಯ

PC:Pratheepps

ಕಿ.ಮೀ ದೂರದಲ್ಲಿ ಎಲ್ಲೋರಾ ಗ್ರಾಮವಿದೆ . ಕ್ರಿ.ಶ 7 ನೇ ಶತಮಾನದಲ್ಲಿ 757 ರಿಂದ 773 ಮಧ್ಯೆ ಭಾಗದಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗಿದೆ. ಪ್ರಪಂಚದಲ್ಲಿನ ಏಕ ಶಿಲದ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡದಾದ ಶಿವಾಲಯವೆಂದರೆ ಕೈಲಾಸ ದೇವಾಲಯ. ಇದನ್ನು 8 ನೇ ಶತಮಾನದಲ್ಲಿ ನಿರ್ಮಾಣ ಮಾಡಿರಬಹುದು ಎಂದು ಭಾವಿಸುತ್ತಾರೆ.

ಚೆನ್ನಕೇಶವ ದೇವಾಲಯ, ಕರ್ನಾಟಕ

ಚೆನ್ನಕೇಶವ ದೇವಾಲಯ, ಕರ್ನಾಟಕ

PC: Calvinkrishy

ಬೇಲೂರಿನ ಚೆನ್ನಕೇಶವ ದೇವಾಲಯವು ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ಶಿಲಾಬಾಲಿಕೆಯರ ಬೇಲೂರು ಎಂದು ಪ್ರಸಿದ್ಧವಾಗಿರುವ ಬೇಲೂರು ಶಿಲ್ಪಕಲೆಗೆ ಖ್ಯಾತಿ ಪಡೆದಿದೆ. ಹೊಯ್ಸಳ ಸಾಮ್ರಾಜ್ಯದ ಶಿಲ್ಪಕಲೆಯ ದೇವಾಲಯಗಳೆಂದು ಪ್ರಸಿದ್ಧವಾಗಿವೆ .

ಸೋಮನಾಥೇಶ್ವರ ದೇವಾಲಯ, ಗುಜರಾತ್

ಸೋಮನಾಥೇಶ್ವರ ದೇವಾಲಯ, ಗುಜರಾತ್

PC: Bharath12345

ಗುಜರಾತ್ ರಾಜ್ಯದ ಸೌರಾಷ್ತ್ರ - ಜುನಾಗಡ ಜಿಲ್ಲೆಯ ಪ್ರಭಾಸ ಎಂಬಲ್ಲಿ ಶ್ರೀ ಸೋಮನಾಥ ಜ್ಯೊತಿರ್ಲಿಂಗ ದ ದೇವಾಲಯವಿದೆ. ಇದು ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ದೇವಾಲಯವು ಚಾಲುಕ್ಯ ಶೈಲಿಯಲ್ಲಿ ಕಟ್ಟಲ್ಪಟ್ಟಿದೆ.. ಸೋಮನಾಥಪುರ ಶಿಲ್ಪಿಗಳ ಪ್ರತಿಭೆಯನ್ನು ತೋರಿಸುತ್ತದೆ. ದೇವಾಲಯದ ಶಿಖರ ೧೫೦ ಅಡಿ ಎತ್ತರವಿದೆ.

ಕೇದಾರನಾಥ ದೇವಾಲಯ

ಕೇದಾರನಾಥ ದೇವಾಲಯ

PC: Shaq774

ಶಿವನ ಪ್ರಮುಖ 12 ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥವು ಅತ್ಯಂತ ಮಹತ್ವವುಳ್ಳದ್ದಾಗಿದೆ. ಈ ದೇವಾಲಯವನ್ನು ಆದಿ ಶಂಕರಾಚಾರ್ಯರು ಸ್ಥಾಪಿಸಿರುವುದು ಎನ್ನಲಾಗುತ್ತದೆ. ಈ ದೇವಾಲಯದ ಸನೀಹದಲ್ಲೇ ಮಂದಾಕಿನಿ ನದಿಯು ಹರಿಯುತ್ತದೆ. ಸುಮಾರು 1000 ವರ್ಷ ಹಳೆಯದೆಂದು ಹೇಳಲಾಗುವ ಈ ದೇವಾಲಯವನ್ನು ಬೃಹತ್‌ ಕಲ್ಲು ಬಂಡೆಯೊಂದನ್ನು ಸೀಳಿ ನಿರ್ಮಿಸಲಾಗಿದೆ.

 ವರದರಾಜ ಪೆರುಮಾಳ್ ಕಂಚೀಪುರಂ

ವರದರಾಜ ಪೆರುಮಾಳ್ ಕಂಚೀಪುರಂ

ತಮಿಳುನಾಡಿನ ವರದರಾಜ ಪೆರುಮಾಳ್ ದೇವಾಲಯವು ಹಸ್ತಗಿರಿ ದೇವಸ್ಥಾನ ಅಥವಾ ಅಟಿಯುರಾನ್ ಎಂದೇ ಪ್ರಸಿದ್ಧವಾಗಿದೆ. ಈ ದೇವಸ್ಥಾನವು ವಿಷ್ಣುವಿಗೆ ಸಮರ್ಪಿಸಲ್ಪಟ್ಟಿದ್ದು ಆಳ್ವರ ಕಾಲದಲ್ಲಿ ನಿರ್ಮಿಸಲಾದ 108 ದೇವಾಲಯಗಳಲ್ಲಿ ಇದೂ ಒಂದಾಗಿದೆ.

ಬಾದಾವಿ ಗುಹಾ ದೇವಾಲಯ

ಬಾದಾವಿ ಗುಹಾ ದೇವಾಲಯ

ಈ ದೇವಾಲಯವು ಕರ್ನಾಟಕ ರಾಜ್ಯದ ಉತ್ತರಭಾಗದ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಪಟ್ಟಣದಲ್ಲಿದೆ. ಇದೊಂದು ಗುಹಾ ದೇವಾಲಯವಾಗಿದ್ದು, ಹಿಂದೂ, ಜೈನ ಮತ್ತು ಬೌದ್ಧ ಗುಹಾ ದೇವಾಲಯಗಳಿವೆ . ಬಾದಾಮಿಯನ್ನು ಹಿಂದೆ ಚಾಲುಕ್ಯ ರಾಜವಂಶದ ರಾಜಧಾನಿ ವಾತಪೀ ಎಂದು ಕರೆಯತ್ತಿದ್ದರು.

ವಿರೂಪಾಕ್ಷ ದೇವಾಲಯ ಹಂಪಿ

ವಿರೂಪಾಕ್ಷ ದೇವಾಲಯ ಹಂಪಿ

PC:Ajar

ವಿರೂಪಾಕ್ಷ ದೇವಾಲಯವು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಹೊಸಪೇಟೆ ಯ ಬಳಿ ಹಂಪಿಯಲ್ಲಿದೆ. ಈ ದೇವಾಲಯವು ಶಿವ ರೂಪವಾದ ವಿರೂಪಾಕ್ಷಕ್ಕೆ ಅರ್ಪಿತವಾಗಿದೆ. ತೀರ್ಥಯಾತ್ರೆಯ ಮುಖ್ಯ ಕೇಂದ್ರವಾಗಿರುವ ವಿರೂಪಾಕ್ಷ ದೇವಾಲಯವು ತುಂಗಭದ್ರಾ ನದಿ ತೀರದಲ್ಲಿದೆ.

ಶ್ರೀರಂಗನಾಥ ತಿರುಚಿನಾಪಲ್ಲಿ

ಶ್ರೀರಂಗನಾಥ ತಿರುಚಿನಾಪಲ್ಲಿ

PC:Richard Mortel

ತಮಿಳುನಾಡಿನ ತಿರುಚಿನಾಪಲ್ಲಿಯಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಾಲಯವನ್ನು ತಿರುವರಂಗಂ ಎಂದೂ ಕರೆಯಲಾಗುತ್ತದೆ. ವಿಷ್ಣುವಿಗೆ ಸಮರ್ಪಿತವಾಗಿರುವ ಈ ದೇವಾಲಯವು ಸುಮಾರು ೧೫೫ ಎಕರೆ ಪ್ರದೇಶದಲ್ಲಿದೆ.

ಮೀನಾಕ್ಷಿ ಮದುರೈ

ಮೀನಾಕ್ಷಿ ಮದುರೈ

PC: Bernard Gagnon

ಮೀನಾಕ್ಷಿ ಅಮ್ಮನ್ ದೇವಸ್ಥಾನ ವು ತಮಿಳುನಾಡಿನ ಮಧುರೈನಲ್ಲಿದೆ. ಇದು ತಮಿಳುನಾಡಿನ ಐತಿಹಾಸಿಕ ದೇವಾಲಯವಾಗಿದೆ. ಶಿವ ಹಾಪಾರ್ವತಿಗೆ ಸಮರ್ಪಿತವಾಗಿರುವ ಈ ದೇವಾಲಯವು 2500ವರ್ಷ ಪುರಾತನ ನಗರ ಮಧುರೈನ ಹೃದಯಭಾಗಲ್ಲಿದೆ.

ದುರ್ಗಾ ಐಹೊಳೆ

ದುರ್ಗಾ ಐಹೊಳೆ

PC: Bharath12345

ಬಾಗಲಕೋಟೆ ಜೆಲ್ಲೆಯ ಬಾದಾಮಿ ತಾಲ್ಲೂಕಿಗೆ ಸೇರಿದ ಐಹೊಳೆ ಚಾಲುಕ್ಯ ವಾಸ್ತುಶಿಲ್ಪದ ಒಂದು ದೊಡ್ಡ ಕೇಂದ್ರವಾಗಿದೆ. ಇದು ಮಲಪ್ರಭಾ ನದಿಯ ದಂಡೆಯಲ್ಲಿದೆ. ಇಲ್ಲಿನ ದೇವಾಲಯಗಳಲ್ಲಿ ದುರ್ಗಾ ದೇವಾಲಯ ಅತ್ಯಂತ ಪ್ರಮುಖವಾದದ್ದು. ಇದು ಮೂಲತ: ಸೂರ್ಯದೇವಾಲಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X