Search
  • Follow NativePlanet
Share
» »ವೇದಗಳನ್ನು ಹಿಂಪಡೆದ, ವರಾಹನಾಗಿ ನೆಲೆಸಿದ!

ವೇದಗಳನ್ನು ಹಿಂಪಡೆದ, ವರಾಹನಾಗಿ ನೆಲೆಸಿದ!

By Vijay

ಸೃಷ್ಟಿಕರ್ತ ಬ್ರಹ್ಮನು ತನ್ನ ಸೃಷ್ಟಿಯ ಕಾರ್ಯದಲ್ಲಿ ನಿರತನಾದಾಗ ಅದೆಷ್ಟೊ ಪ್ರಸಂಗಗಳು, ಘಟನೆಗಳು ಜರುಗಿ ಇಂದು ವೇದ-ಪುರಾಣಗಳಲ್ಲಿ ಅವು ಕಥೆಗಳಾಗಿ ಉಲ್ಲೇಖಿಸಲ್ಪಟ್ಟಿವೆ. ಈ ತ್ರಿಮೂರ್ತಿಗಳು ಸೃಷ್ಟಿಯ ಸಮಯದಿಂದಲೂ ತಮ್ಮನ್ನು ತಾವು ಒಂದೊಂದು ಘಟನೆಗಳಲ್ಲಿ ಸಮರ್ಪಿಸಿಕೊಂಡಿದ್ದರೆಂದು ತಿಳಿದುಬರುತ್ತದೆ.

1200 ವರ್ಷದ ಮಾರೇಹಳ್ಳಿ ಲಕ್ಷ್ಮಿ ನರಸಿಂಹ ದೇವಾಲಯ

ಇಂತಹ ಒಂದು ಘಟನೆಗೆ ಸಾಕ್ಷಿಯಾಗಿ ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ವರಾಹ ಜನ್ಮದ ಹಿಂದಿರುವ ಹಿನ್ನಿಲೆಯನ್ನು ತಿಳಿಸುತ್ತ, ವಿಷ್ಣುವಿನ ವರಾಹ ರೂಪಕ್ಕೆಂದೆ ಮುಡಿಪಾದ ದೇವಾಲಯವೊಂದರ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ. ಇದೆ ವರಾಹನಾಥ ದೇವಾಲಯ. ಇದನ್ನು ಯಜ್ಞ ವರಾಹಸ್ವಾಮಿ ದೇವಾಲಯ ಎಂತಲೂ ಸಹ ಕರೆಯುತ್ತಾರೆ.

ವೇದಗಳನ್ನು ಹಿಂಪಡೆದ, ವರಾಹನಾಗಿ ನೆಲೆಸಿದ!

ಚಿತ್ರಕೃಪೆ: wikimedia

ವೈತರಣಿ ಎಂಬ ನದಿಯು ಎರಡು ಕವಲೊಡೆದು ಮಧ್ಯದಲ್ಲಿ ನಿರ್ಮಿಸಿದ ನಡುಗಡ್ಡೆಯೊಂದರ ಮೇಲೆ ಈ ಅದ್ಭುತ ದೇವಾಲಯ ನೆಲೆಸಿದೆ. ಒಡಿಶಾ ರಾಜ್ಯದ ಜಜಪುರ್ ಎಂಬಲ್ಲಿ ಹದಿನೈದು ಹಾಗೂ ಹದಿನಾರನೇಯ ಶತಮಾನಕ್ಕೆ ಸಂಬಂಧಿಸಿದ ವರಾಹನ ಈ ಪುರಾತನ ದೇವಾಲಯವಿದೆ. ವಿಷ್ಣು ವರಾಹ ರೂಪದಲ್ಲಿ ನೆಲೆಸಿದ್ದು ಅವನ ಮಡದಿಯಾಗಿ ಲಕ್ಷಿಯು ನೆಲೆಸಿದ್ದಾಳೆ.

ವೇದಗಳನ್ನು ಹಿಂಪಡೆದ, ವರಾಹನಾಗಿ ನೆಲೆಸಿದ!

ವರಾಹನಾಥ ದೇವಾಲಯ, ಚಿತ್ರಕೃಪೆ: Rajku6070

ನಿರ್ದಿಷ್ಟವಾಗಿ ಈ ದೇವಾಲಯಕ್ಕಿರುವ ಹಿನ್ನಿಲೆ ಎಂದರೆ, ಒಂದೊಮ್ಮೆ ಬ್ರಹ್ಮನು ಅಶ್ವಮೇಧ ಯಾಗ ಮಾಡಬೇಕೆಂದಾದ ಅವನ ಬಳಿಯಿದ್ದ ಎಲ್ಲ ವೇದಗ್ರಂಥಗಳನ್ನು ಅಸುರನೊಬ್ಬನು ಕದ್ದು ಭೂಗ್ರಭದಲ್ಲಿ ಹೋಗಿ ಬಚ್ಚಿಟ್ಟುಕೊಂಡ. ಇದರಿಂದ ಚಿಂತತನಾದ ಬ್ರಹ್ಮನಿಗೆ ವಿಷ್ಣು ಸಂತೈಸಿ ಆ ವೇದಗಳನ್ನು ತಂದು ಕೊಡುವುದಾಗಿ ಮಾತು ಕೊಟ್ಟ.

ವೇದಗಳನ್ನು ಹಿಂಪಡೆದ, ವರಾಹನಾಗಿ ನೆಲೆಸಿದ!

ವರಾಹನಾಥ ದೇವಾಲಯ, ಚಿತ್ರಕೃಪೆ: Rajku6070

ಅದರಂತೆ ವಿಷ್ಣು ಭೂಮಿಯನ್ನು ಅಗೆದು ಆ ರಾಕ್ಷಸನನ್ನು ಹುಡುಕಲು ಭಯಂಕರವಾದ ಕೋರೆ ಹಲ್ಲುಗಳುಳ್ಳ ಕಾಡು ಹಂತಿಯಂತಹ ರುಪ ಧರಿಸಿ ಅಸುರನನ್ನು ಹುಡುಕಿ ಕೊಂದು ಅವನಿಂದ ಕದಿಯಲ್ಪಟ್ಟ ಎಲ್ಲ ವೇದ ಗ್ರಂಥಗಳನ್ನು ಮರಳಿ ಪಡೆದು ಮತ್ತೆ ಬ್ರಹ್ಮನಿಗೆ ಹಿಂತಿರುಗಿಸಿದ. ಹೀಗೆ ವಿಷ್ಣುವಿನ ವರಾಹ ರುಪವು ಅವನ ದಶಾವತಾರಗಳಲ್ಲಿ ಒಂದಾಯಿತು.

ವೇದಗಳನ್ನು ಹಿಂಪಡೆದ, ವರಾಹನಾಗಿ ನೆಲೆಸಿದ!

ವರಾಹನಾಥ ದೇವಾಲಯ, ಚಿತ್ರಕೃಪೆ: Rajku6070

ಇನ್ನೂ ಕೆಲವು ಕಡೆ ವಿವರಿಸಿರುವಂತೆ ಅಸುರನೊಬ್ಬನು ಭೂದೇವಿಯನ್ನು (ಭೂಮಿಯ ಸಂಕೇತ) ಅಪಹರಿಸಿದಾಗ ಅವಳನ್ನು ರಕ್ಷಿಸಲು ವಿಷ್ಣು ವರಾಹ ರೂಪ ತಳೆದ ಅಮ್ತಲೂ ಹೇಳಲಾಗಿದೆ. ಇನ್ನೂ ಈ ದೇವಾಲಯದಲ್ಲಿ ಮುಖ್ಯ ದೇವನಾಗಿ ವರಾಹ ನೆಲೆಸಿದ್ದರೆ ಕ್ಷೇತ್ರದ ವಿಮಲಾ ದೇವಿ (ಗಿರಿಜಾ ದೇವಿ), ವಿಷ್ಣು ಹಾಗೂ ಶಿವ ಹೀಗೆ ಕೆಲವು ದೇವರುಗಳಿಗೆ ಮುಡಿಪಾದ ಸನ್ನಿಧಿಗಳಿವೆ.

ಶಕ್ತಿಶಾಲಿ ಬಾಬಾ ಗೋರಕನಾಥ ದೇವಾಲಯ

ವರಾಹ ಸ್ವಾಮಿಯಾಗಿ ವಿಷ್ಣು ಉಪಯೋಗಿಸಿದ ಆಯುಧವಾದ ಗದದ ಪ್ರತೀಕವಾಗಿರುವ ಈ ದೇವಾಲಯದ ಕ್ಷೇತ್ರವು ಗದ ಕ್ಷೇತ್ರ ಎಂತಲೆ ಪ್ರಸಿದ್ಧಿ ಪಡೆದಿದೆ ಹಾಗೂ ಈ ದೇವಾಲಯಕ್ಕೆ ಒಡಿಶಾ ರಾಜ್ಯದ ಹಲವಾರು ಮುಖ್ಯ ನಗರಗಳಿಂದ ಸಾಕಷ್ಟು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X