Search
  • Follow NativePlanet
Share
» »ವಾರಾಂತ್ಯದಲ್ಲಿ ಕನ್ಯಾಕುಮಾರಿಯಿಂದ ಭೇಟಿ ನೀಡಬಹುದಾದ ಮನಮೋಹಕ ಸ್ಥಳಗಳು

ವಾರಾಂತ್ಯದಲ್ಲಿ ಕನ್ಯಾಕುಮಾರಿಯಿಂದ ಭೇಟಿ ನೀಡಬಹುದಾದ ಮನಮೋಹಕ ಸ್ಥಳಗಳು

ತಮಿಳುನಾಡು ರಾಜ್ಯದಲ್ಲಿರುವ ಕನ್ಯಾಕುಮಾರಿಯು ಅತ್ಯಂತ ಸುಂದರವಾದ ಮತ್ತು ಪವಿತ್ರ ಕ್ಷೇತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಕನ್ಯಾಕುಮಾರಿ ದೇವಿಯ ಪವಿತ್ರ ದೇವಾಲಯಕ್ಕೆ ತೀರ್ಥಯಾತ್ರೆ ಮಾಡುವ ಸಲುವಾಗಿ ಮತ್ತು ಇಲ್ಲಿಯ ಪ್ರಶಾಂತವಾದ ವಾತಾವರಣದಲ್ಲಿ ವಿಶ್ರಾಂತಿ ಪಡೆಯಲು ಮತ್ತು ಪರಿಸರದ ಶಾಂತತೆಯನ್ನು ಆಸ್ವಾದಿಸಲು ಪ್ರತೀ ವರ್ಷ ಇಲ್ಲಿಗೆ ಭಾರತಾದ್ಯಂತ ಮಾತ್ರವಲ್ಲದೆ ವಿದೇಶಗಳಿಂದಲೂ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

ಪ್ರವಾಸದ ಆಸೆಯು ಹೆಚ್ಚಿದ್ದು, ಅದ್ಬುತವಾದ ಸ್ಥಳಗಳನ್ನು ಅನ್ವೇಷಣೆ ಮಾಡುವ ಹಂಬಲವುಳ್ಳವರಿಗೆ ಕನ್ಯಾಕುಮಾರಿಯ ಸುತ್ತಮುತ್ತಲಿನ ಪ್ರದೇಶಗಳು ಅತ್ಯಂತ ಸೂಕ್ತವಾದುದು ಮತ್ತು ಯೋಗ್ಯವಾದುದಾಗಿದೆ. ಸುಂದರವಾದ ಕನ್ಯಾಕುಮಾರಿ ನಗರದ ಸುತ್ತಮುತ್ತಲಿನ ಕೆಲವು ಪ್ರದೇಶಗಳ ಸೌಂದರ್ಯತೆಯ ಅಗಾಧತೆಯು ಊಹೆಗೆ ನಿಲುಕದ್ದು. ಆದುದರಿಂದ ನಿಮ್ಮ ಪ್ರವಾಸವನ್ನು ಕನ್ಯಾಕುಮಾರಿಗಷ್ಟೇ ಸೀಮಿತಗೊಳಿಸದೆ ಇನ್ನೂ ಮುಂದಕ್ಕೆ ಸಾಗಿದಲ್ಲಿ ಇನ್ನೂ ಕೆಲವು ಅದ್ಬುತವಾದ ಸ್ಥಳಗಳನ್ನು ನೋಡಬಹುದಾಗಿದೆ. ಕನ್ಯಾಕುಮಾರಿಯ ಸುತ್ತಮುತ್ತಲಿನ ಈ ಪ್ರದೇಶಗಳು ಭೇಟಿ ಕೊಡಲು ಯೋಗ್ಯವಾದುದಾಗಿದೆ. ಇದರ ಬಗೆಗಿನ ಮಾಹಿತಿಯನ್ನು ಓದಿ ತಿಳಿಯಿರಿ.

1. ತಿರುವನಂತಪುರಂ

1. ತಿರುವನಂತಪುರಂ

ಕನ್ಯಾಕುಮಾರಿಯಿಂದ ಸುಮಾರು 100 ಕಿ.ಮೀ ಅಂತರದಲ್ಲಿ ತಿರುವನಂತಪುರಂ ಇದೆ ಇದನ್ನು ತ್ರಿವೆಂಡ್ರಮ್ ಎಂದೂ ಕರೆಯುತ್ತಾರೆ. ಕನ್ಯಾಕುಮಾರಿಯಿಂದ ಇಲ್ಲಿಗೆ ರಸ್ತೆಯ ಮೂಲಕ ತಲುಪಲು ಸುಮಾರು 2-3 ತಾಸು ಬೇಕಾಗುವುದು. ಇದು ಕೇರಳ ರಾಜ್ಯದ ಅತಿದೊಡ್ಡ ನಗರವಾಗಿರುವುದರಿಂದ ಇಲ್ಲಿಗೆ ಸುಲಭವಾಗಿ ಹೋಗಬಹುದಾಗಿದೆ. ಕೇರಳದ ಅತ್ಯಂತ ಹಳೆಯ ಸ್ಥಳಗಳಲ್ಲಿ ಒಂದಾಗಿರುವ ಇದು ಹಲವಾರು ಪುರಾತನ ಹಾಗೂ ಮೋಡಿಗೊಳಿಸುವಂತಹ ತಾಣಗಳು ಹಾಗೂ ದೃಶ್ಯಗಳನ್ನು ತನ್ನಲ್ಲಿ ಹೊಂದಿದೆ ಮಾತ್ರವಲ್ಲದೆ ಇಲ್ಲಿಯ ಹಸಿರು ಪರಿಸರವು ಪ್ರವಾಸಿಗರನ್ನು ಸೆಳೆಯುತ್ತದೆ. ಆದುದರಿಂದ ನಿಮ್ಮ ಮುಂದಿನ ವಾರಾಂತ್ಯದ ಭೇಟಿ ನೀಡುವ ತಾಣ ತಿರುವನಂತಪುರಕ್ಕೆ ಆಯೋಜಿಸಿ.

ಈ ನಗರವು ಭಾರತದ ಸದಾ ಹಸಿರು ನಗರವೆಂದು(ಎವರ್ ಗೀನ್ ಸಿಟಿ ಆಫ್ ಇಂಡಿಯಾ) ಮಹಾತ್ಮಾ ಗಾಂಧೀಜಿಯವರಿಂದ ಕರೆಯಲ್ಪಟ್ಟಿದ್ದು, ಇಂದಿಗೂ ಭಾರತದ ಅತ್ಯಂತ ಹಸಿರು ನಗರಗಳಲ್ಲೊಂದಾಗಿದೆ. ನಾಪಿಯರ್ ಮ್ಯೂಸಿಯಂ, ಕನಕಕುನ್ನು ಅರಮನೆ, ಕೊಯಿಕಲ್ ಅರಮನೆ, ಪುಥೇನ್ ಮಾಲಿಗಾ ಅರಮನೆ ವಸ್ತುಸಂಗ್ರಹಾಲಯ ಪಾಲ್ಕುಲಂಗರ ದೇವಿ ದೇವಾಲಯ, ಪದ್ಮನಾಭಸ್ವಾಮಿ ದೇವಸ್ಥಾನ ಮತ್ತು ಕುತಿರಾ ಮಲಿಕಾ ಇವುಗಳು ತ್ರಿವೇಂಡ್ರಮ್ ನಗರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ನೋಡಲೇ ಬೇಕಾದ ಸ್ಥಳಗಳು.

2. ಥೂತುಕ್ಕುಡಿ

2. ಥೂತುಕ್ಕುಡಿ

ಥೂತುಕ್ಕುಡಿ ಇದನ್ನು ಟ್ಯೂಟಿಕೋರಿನ್ ಎಂದೂ ಕರೆಯಲಾಗುತ್ತದೆ ಈ ಸ್ಥಳವು ಕನ್ಯಾಕುಮಾರಿಯಿಂದ ಕೇವಲ 130 ಕಿ.ಮೀ ಅಂತರದಲ್ಲಿದ್ದು ಇಲ್ಲಿಗೆ ರಸ್ತೆಯ ಮೂಲಕ ತಲುಪಲು ಸುಮಾರು 2.30 ತಾಸುಗಳು ಬೇಕಾಗುವುದು. ಇದು ಮುನ್ನಾರ್ ಕೊಲ್ಲಿಯನ್ನು ಮುಟ್ಟುವ ಕರಾವಳಿ ಪ್ರದೇಶವಾಗಿರುವುದರಿಂದ, ಥೂತುಕ್ಕುಡಿ ಯು ದಕ್ಷಿಣ ಭಾರತದ ಪ್ರಮುಖ ಕೈಗಾರಿಕಾ ಕೇಂದ್ರವಾಗಿದೆ. ಅಲ್ಲದೆ ಈ ಸ್ಥಳವು ಉಪ್ಪು, ಸಮುದ್ರದ ಮೂಲಕ ಮಾಡಲಾಗುವ ವ್ಯಾಪಾರಗಳು ಮತ್ತು ಮೀನುಗಾರಿಕೆಯಂತಹ ಇತ್ಯಾದಿ ವ್ಯಾಪಾರ ವಹಿವಾಟುಗಳಿಗೆ ಅನುಕೂಲಕರವಾಗಿದೆ.

ಪರ್ಲ್ ಫಿಶಿಂಗ್ ಇದು ಥೂತುಕ್ಕುಡಿಯಲ್ಲಿ ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವ ಚಟುವಟಿಕೆಗಳಲ್ಲಿ ಒಂದಾಗಿರುವುದರಿಂದ ಈ ನಗರವನ್ನು ಪರ್ಲ್ ಸಿಟಿ ಎಂಬ ಅಡ್ಡ ಹೆಸರಿನಿಂದಲೂ ಕರೆಯಲಾಗುತ್ತದೆ. ಈ ನಗರವು ಅದರ ಕೈಗಾರಿಕಾ ಪ್ರಾಮುಖ್ಯತೆಯ ಹೊರತಾಗಿಯೂ ಅನೇಕ ಮೋಡಿ ಮಾಡುವ ಕಡಲ ತೀರಗಳಿಗೆ ಹೆಸರುವಾಸಿಯಾಗಿದೆ. ಇವುಗಳು ನಿಜವಾಗಿಯೂ ಭೇಟಿಗೆ ಯೋಗ್ಯವಾದುದಾಗಿವೆ. ಅವುಗಳಲ್ಲಿ ಹಾರ್ಬರ್ ಬೀಚ್. ರೋಚೇ ಪಾರ್ಕ್, ಮುತ್ತು ನಗರ್ ನ್ಯೂ ಬೀಚ್, ಮತ್ತು ಟ್ಯೂಟಿಕೋರಿಯನ್ ಕೊಲ್ಲಿ ಇವುಗಳು ಭೇಟಿ ಕೊಡಲು ತಪ್ಪಿಸಲೇ ಬಾರದು ಎನ್ನುವಂತಹ ಸ್ಥಳಗಳಾಗಿವೆ.

3. ಮಧುರೈ

3. ಮಧುರೈ

ಕನ್ಯಾಕುಮಾರಿಯ ಸುತ್ತ ಮುತ್ತಲಿನ ಹೆಸರಾಂತ ಪ್ರದೇಶಗಳಲ್ಲಿ ಮತ್ತೊಂದು ಪ್ರಮುಖ ನಗರವೆಂದರೆ ಸುಮಾರು 250 ಕಿ.ಮೀ ಅಂತರದಲ್ಲಿರುವ ಮಧುರೈ. ಈ ಸ್ಥಳವನ್ನು ಕನ್ಯಾಕುಮಾರಿಯಿಂದ ರಸ್ತೆ ಮೂಲಕ ತಲುಪಲು ಸುಮಾರು 4 ತಾಸುಗಳು ಬೇಕಾಗುತ್ತದೆ.ನಗರದಾದ್ಯಂತ ಹರಡಿರುವ ಅನೇಕ ಸುಂದರವಾದ ದೇವಾಲಯಗಳಿಗೆ ಈ ಸ್ಥಳವು ಹೆಸರುವಾಸಿಯಾಗಿದೆ. ವೈಗೈ ನದಿಯ ದಂಡೆಯಲ್ಲಿರುವ ಮಧುರೈ ನಗರವು ಸುವಾಸನಾಯುಕ್ತ ಹಸಿರಿನಿಂದ ಕೂಡಿದ್ದು ನಗರದ ಸೌಂದರ್ಯತೆಯನ್ನು ಇಮ್ಮಡಿಗೊಳಿಸಲು ಸಹಕಾರಿಯಾಗಿದೆ.

ಮಧುರೈ ನಲ್ಲಿ ಭೇಟಿ ನೀಡಲು ತಪ್ಪಿಸಲೇ ಬಾರದಂತಹ ಸ್ಥಳಗಳಲ್ಲಿ ಮೀನಾಕ್ಷಿ ಅಮ್ಮನ್ ದೇವಾಲಯ,ಅಲಾಗರ್ ಕೋಯಿಲ್, ಕೂಡಲ್ ಅಝಾಗರ್ ದೇವಾಲಯ, ತಿರುಮಲೈ ನಾಯಕರ್ ಮಹಲ್, ತಿರುಪ್ಪರಂಕುನ್ರಾಮ್ ಮುರುಗನ್ ದೇವಸ್ಥಾನ, ಕಾಜಿಮಾರ್ ದೊಡ್ಡ ಮಸೀದಿ ಮತ್ತು ಯನೈಮಲೈ . ಪ್ರಮುಖವಾದುದಾಗಿವೆ. ಹಾಗಿದ್ದಲ್ಲಿ ಈ ವಾರಾಂತ್ಯದಲ್ಲಿ ಕನ್ಯಾಕುಮಾರಿಯಿಂದ ಮಧುರೈಗೆ ತನ್ನ ದೇವಾಲಯಗಳು ಮತ್ತು ಅದ್ಭುತ ಸ್ಥಳಗಳ ಮೂಲಕ ತನ್ನ ಭವ್ಯತೆಯನ್ನು ಸಾರುವ ಈ ಸ್ಥಳಗಳ ಅನ್ವೇಷಣೆ ಮಾಡಲು ಯೋಜಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು?

4. ಪೂವಾರ್

4. ಪೂವಾರ್

ಪೂವಾರ್ ಕೇರಳದ ಒಂದು ಮನಮೋಹಕ ತಾಣವಾಗಿದ್ದು ಇದು ಕನ್ಯಾಕುಮಾರಿಯಿಂದ ಸುಮಾರು 72ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಕನ್ಯಾಕುಮಾರಿಯಿಂದ ತಲುಪಲು 2 ತಾಸುಗಳಿಗಿಂತಲೂ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಕೇರಳದ ದಕ್ಷಿಣ ತುದಿಯಲ್ಲಿರುವ ಪೂವಾರ್ ಒಂದು ಕರಾವಳಿ ಪಟ್ಟಣವಾಗಿದ್ದು ತನ್ನಲ್ಲಿ ಅತ್ಯಂತ ಆಕರ್ಷಕವಾದ ಕಡಲತೀರಗಳನ್ನು ಹೊಂದಿದೆ. ಪೂವಾರ್‌ನಲ್ಲಿ ನೋಡಲೇಬೇಕಾದ ಕೆಲವು ಸ್ಥಳಗಳಲ್ಲಿ ಆಜಿಮಾಲಾ ಶಿವ ದೇವಾಲಯ, ರಾಯಲ್ ಬ್ಯಾಕ್‌ವಾಟರ್, ಕುಜಿಪಲ್ಲಂ ಬಟಾನಿಕಲ್ ಗಾರ್ಡನ್ ಮತ್ತು ಎಲಿಫೆಂಟ್ ರಾಕ್ ಪ್ರಮುಖವಾದವುಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X