Search
  • Follow NativePlanet
Share
» »ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಭೇಟಿ ಕೊಡಿ.

ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಭೇಟಿ ಕೊಡಿ.

ಪ್ರವಾಸಿಗರು ಬನವಾಸಿಗೆ ಪ್ರವಾಸದಲ್ಲಿದ್ದಾಗ ಮಧುಕೇಶ್ವರ ದೇವಾಲಯವು ಭೇಟಿ ಕೊಡಲೇಬೇಕು ಎನ್ನುವಂತಹ ಶಿವನಿಗರ್ಪಿತವಾದ ದೇವಾಲಯವಾಗಿದ್ದು, ಇದನ್ನು ಒಂಬತ್ತನೇ ಶತಮಾನದ ಸಮಯದಲ್ಲಿ ಕದಂಬ ಚಕ್ರವರ್ತಿಯಿಂದ ನಿರ್ಮಿಸಲ್ಪಟ್ಟಿತು. ಈ ದೇವಾಲಯವು ಅದರ ಸೌಂದರ್ಯತೆ ಮತ್ತು ವಿಭಿನ್ನವಾದ ವಾಸ್ತುಶಿಲ್ಪ ಕೆತ್ತನೆಗಳು ಮತ್ತು ಮಾದರಿಗಳಿಗಾಗಿ ಪ್ರಯಾಣಿಕರಲ್ಲಿ ಪ್ರಸಿದ್ದಿಯನ್ನು ಪಡೆದಿದೆ.

ಮಧುಕೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ನಂತರ ಇಲ್ಲಿ ಏಕಶಿಲೆಯ ಮೇಲೆ ಮಾಡಿರುವ ಸುಂದರ ಕೆಲಸಗಳನ್ನು ಕಾಣಬಹುದಾಗಿದ್ದು ಅವುಗಳಲ್ಲಿ ಒಂದು ಕಲ್ಲಿನ ಮಂಚ ಮತ್ತು ತ್ರಿಲೋಕ ಮಂಟಪವು ಭೂಮಿ, ಸ್ವರ್ಗ ಮತ್ತು ಪಾತಾಳವನ್ನು ಪ್ರದರ್ಶಿಸುತ್ತದೆ. ಅಷ್ಟೇ ಅಲ್ಲದೆ ಯಾತ್ರಾಸ್ಥಳದ ಪ್ರಧಾನ ಆಕರ್ಷಣೆಯು ಗಣೇಶನ ವಿಗ್ರಹದ ಅರ್ಧ ಭಾಗವು ಇಲ್ಲಿದ್ದು ವಿಗ್ರಹದ ಇನ್ನರ್ಧ ಭಾಗವು ವಾರಣಾಸಿಯಲ್ಲಿದೆ ಎಂದು ನಂಬಲಾಗಿದೆ.

madukeshwaratemple-1

ಗಣೇಶ ದೇವರ ಹೊರತಾಗಿ, ಮಧುಕೇಶ್ವರ ದೇವಾಲಯದಲ್ಲಿ ನರಸಿಂಹ ದೇವರ ವಿಗ್ರಹವನ್ನೂ ಕಾಣಬಹುದು. ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು 2 ನೇ ಶತಮಾನದ ಐದು ಹೆಡೆಯ ನಾಗನ ಶಿಲ್ಪವನ್ನು ನೋಡಬಹುದು. ಯಾತ್ರಿಕರು ಈ ನಾಗ ಶಿಲ್ಪದ ಮೇಲೆ ಸೂಕ್ಷ್ಮವಾಗಿ ಗಮನಿಸಿದರೆ ಶಾಸನವನ್ನು (ಪ್ರಾಕೃತ ಭಾಷೆಯಲ್ಲಿ) ಕಾಣಬಹುದು.

banavasi-temple1

ಶಾಸನದಿಂದ ಪಡೆದ ಮಾಹಿತಿಯ ಪ್ರಕಾರ, ವಿಹಾರ ಮತ್ತು ತೊಟ್ಟಿಯನ್ನು ಸ್ಥಾಪಿಸಿದ ನಂತರ ರಾಜಕುಮಾರಿ ಶಿವಸ್ಕಂದ ನಾಗಶ್ರೀ ಅವರು ಇಲ್ಲಿ ಶಿಲ್ಪವನ್ನು ಸ್ಥಾಪಿಸಿದರು. ಶಿವರಾತ್ರಿಯ ಸಂದರ್ಭದಲ್ಲಿ ಮಧುಕೇಶ್ವರ ದೇವಸ್ಥಾನಕ್ಕೆ ದೇಶಾದ್ಯಂತದ ಶಿವನ ಭಕ್ತರು ಭೇಟಿ ನೀಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X