Search
  • Follow NativePlanet
Share
» »ಈ ದೇವಿಯನ್ನು ಪೂಜಿಸಿದ್ರೆ ಸರ್ಪದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯೂ ಆಗುತ್ತಂತೆ!

ಈ ದೇವಿಯನ್ನು ಪೂಜಿಸಿದ್ರೆ ಸರ್ಪದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯೂ ಆಗುತ್ತಂತೆ!

ಉತ್ತರಖಂಡದ ಹರಿದ್ವಾರದಲ್ಲಿ ಈ ಮಾನಸ ದೇವಿ ದೇವಸ್ಥಾನ ಇದೆ. ಈ ದೇವಾಲಯವು ಹರಿದ್ವಾರದಲ್ಲಿರುವ ಮೂರು ಶಕ್ತಿಪೀಠಗಳಲ್ಲಿ ಒಂದಾಗಿದೆ. ಇತರ ಎರಡು ಪೀಠಗಳು ಎಂದರೆ ಒಂದು ಚಂಡಿ ದೇವಿ ದೇವಾಲಯ ಮತ್ತೊಂದು ಮಾಯಾ ದೇವಿ ದೇವಾಲಯವಾಗಿದೆ. ಈ ದೇವಾಲಯಕ್ಕೆ ಬಂದು ಪೂಜಿಸಿದ್ರೆ ಸರ್ಪದೋಷ ನಿವಾರಣೆಯಾಗಿ ಸಂತಾನಭಾಗ್ಯ ದೊರೆಯುತ್ತದೆ ಎನ್ನುತ್ತಾರೆ.

ಋಷಿಕೇಶ್‌ಗೆ ಹೋಗಿ ಇದನ್ನ ಮಾಡಿದ್ರೆ ಪಾಪ ಸುತ್ತುಕೊಳ್ಳುತ್ತಂತೆ..ಹಾಗಾಗಿ ಜಾಗ್ರತೆಯಿಂದಿರಿಋಷಿಕೇಶ್‌ಗೆ ಹೋಗಿ ಇದನ್ನ ಮಾಡಿದ್ರೆ ಪಾಪ ಸುತ್ತುಕೊಳ್ಳುತ್ತಂತೆ..ಹಾಗಾಗಿ ಜಾಗ್ರತೆಯಿಂದಿರಿ

ಈ ಭೂಮಂಡಲದಲ್ಲಿರುವ ಎಲ್ಲಾ ಸರ್ಪಗಳಿಗೆ ಅಧಿಪತಿ ಈ ಮಾನಸಾದೇವಿ ಎನ್ನಲಾಗುತ್ತದೆ. ಮಳೆಗಾಲದಲ್ಲಿ ಈ ದೇವಿಗೆ ಹೆಚ್ಚಿನ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಸರ್ಪದೋಷದಿಂದ ನರಳುತ್ತಿದ್ದಾಗ ಈ ದೇವಿಯ ಪೂಜಿಸಿದ್ದಲ್ಲಿ ಸರ್ಪದೋಷ ನಿವಾರಣೆಯಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಕಷ್ಯಪ ಮಹಾಮುನಿಯ ಮನಸ್ಸಿನಿಂದ ಹುಟ್ಟಿದ ಈ ದೇವಿಗೆ ಮಾನಸ ಎನ್ನುವ ಹೆಸರಿಡಲಾಗಿದೆ. ಹರಿದ್ವಾರಕ್ಕೆ ಹೋಗುವ ಯಾತ್ರಿಗಳು ಈ ದೇವಸ್ಥಾನಕ್ಕೂ ಭೇಟಿ ನೀಡುತ್ತಾರೆ.

ಸರ್ಪಗಳಿಗೆ ಅಧಿಪತಿ

ಸರ್ಪಗಳಿಗೆ ಅಧಿಪತಿ

PC:Ekabhishek

ಈ ದೇವಾಲಯವು ಹಿಮಾಲಯದ ದಕ್ಷಿಣ ಪರ್ವತ ಶ್ರೇಣಿಯಲ್ಲಿರುವ ಸಿವಾಲಿಕ್ ಬೆಟ್ಟಗಳ ಮೇಲೆ ಬಿಲ್ವಾ ಪರ್ವತದ ಮೇಲೆ ಇದೆ. ವಿಶೇಷವಾಗಿ ಈ ತೀರ್ಥಕ್ಷೇತ್ರವನ್ನು ಬಿಲ್ವಾ ತೀರ್ಥ ಎಂದೇ ಕರೆಯುಲಾಗುತ್ತದೆ. ಈ ಭೂಮಂಡಲದಲ್ಲಿರುವ ಎಲ್ಲಾ ಸರ್ಪಗಳಿಗೆ ಅಧಿಪತಿ ಈ ಮಾನಸದೇವಿ ಎನ್ನಲಾಗುತ್ತದೆ. ಪಶ್ಚಿಮ ಬಂಗಾಳದ ಈಶಾನ್ಯ ರಾಷ್ಟ್ರದಲ್ಲಿ ಮಾನಸದೇವಿಯನ್ನು ತಮ್ಮ ಕುಲದೇವತೆಯನ್ನಾಗಿ ಮಂದಿ ಪೂಜಿಸುತ್ತಾರೆ.

ಮಳೆಗಾಲದಲ್ಲಿ ಹೆಚ್ಚಿನ ಪೂಜೆ

ಮಳೆಗಾಲದಲ್ಲಿ ಹೆಚ್ಚಿನ ಪೂಜೆ

PC:Antoine Taveneaux

ಮಳೆಗಾಲದಲ್ಲಿ ಈ ಪ್ರಾಂತ್ಯದಲ್ಲಿ ಮಾನಸದೇವಿಗೆ ಹೆಚ್ಚಿನ ಪೂಜೆಗಳು ನಡೆಯುತ್ತದೆ. ಮಳೆಗಾಲದಲ್ಲಿ ಹಾವುಗಳು ಬಹಳ ಸಕ್ರೀಯವಾಗಿರುತ್ತದೆ. ಹಾಗಾಗಿ ಇವುಗಳಿಂದ ಪಾರಾಗಲು ಭಕ್ತರು ಮಾನಸದೇವಿಗೆ ಪೂಜೆ ಮಾಡುತ್ತಾರೆ. ಹಾವು ಕಚ್ಚಿದಾಗ ಹಾವು ಕಚ್ಚಿದಾಗ ಮಾನಸದೇವಿಗೆ ಪೂಜೆ ನಡೆಸುತ್ತಾರೆ. ಇದರಿಂದ ಪ್ರಯೋಜನವಾಗುತ್ತದೆ ಎನ್ನುವುದು ಹಲವರ ನಂಬಿಕೆ.

ಮಾನಸದೇವಿಗೆ ಪೂಜೆ

ಮಾನಸದೇವಿಗೆ ಪೂಜೆ

PC:Antoine Taveneaux

ಇನ್ನು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮಾನಸದೇವಿಗೆ ಪೂಜೆ ಮಾಡುವ ಸಂಪ್ರದಾಯ ಈಗಲೂ ಇದೆ. ಶಿವನ ಪುತ್ರಿ ಎನ್ನಲಾಗುತ್ತದೆ. ಮಾನಸ ದೇವಿಯ ಹುಟ್ಟಿನ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಮಾನಸದೇವಿ ಶಿವನ ಪುತ್ರಿ ಎಂದು ಕೆಲವು ಪುರಾಣಗಳಲ್ಲಿ ಹೇಳಿದರೆ ಇನ್ನೂ ಕೆಲವು ಪುರಾಣಗಳಲ್ಲಿ ಕಷ್ಯಪಮುನಿಯ ಮುನಿಯ ಪುತ್ರಿ ಎನ್ನಲಾಗುತ್ತದೆ.

ವಾಸುಕಿಯ ಸೋದರಿ

ವಾಸುಕಿಯ ಸೋದರಿ

PC: Antoine Taveneaux

ಕಷ್ಯಪ ಮುನಿಯ ಮನಸ್ಸಿನಿಂದ ಹುಟ್ಟಿದ ಈಕೆಗೆ ಮಾನಸದೇವಿ ಎನ್ನುವ ಹೆಸರಿಡಲಾಗಿದೆ ಎಂದು ಹೇಳಲಾಗುತ್ತದೆ. ಸಮುದ್ರಮಂಥನ ಸಂದರ್ಭದಲ್ಲಿ ದೇವತೆಗಳಿಗೆ ಸಹಾಯಮಾಡಿದ ವಾಸುಕಿ ಎನ್ನುವ ಹಾವಿನ ಸಹೋದರಿ ಈ ಮಾನಸದೇವಿ ಎನ್ನಲಾಗುತ್ತದೆ. ಶಿವನನ್ನು ಕಾಪಾಡಿದ್ದು ವಾಸುಕಿ ಬೆಂಗಾಲಿ ಜಾನಪದ ಕಥೆಗಳ ಪ್ರಕಾರ ಸಮುದ್ರಮಂಥನ ಸಂದರ್ಭ ಬಂದ ಹಾಲಾಹಲವನ್ನು ಕುಡಿದ ಶಿವನನ್ನು ಕಾಪಾಡಿದ್ದು ಈ ವಾಸುಕಿ ದೇವಿ ಎನ್ನಲಾಗುತ್ತದೆ ಆಗ ಪರಮಶಿವನು ಆಕೆಯನ್ನು ಮೆಚ್ಚಿ ತನ್ನ ಮಗಳಾಗಿ ಸ್ವೀಕಾರ ಮಾಡಿದನು ಎಂಬ ಕಥೆಯು ಪ್ರಚಾರದಲ್ಲಿದೆ.

ಅಷ್ಟಿಕ ಎನ್ನುವ ಪುತ್ರ

ಅಷ್ಟಿಕ ಎನ್ನುವ ಪುತ್ರ

PC: Antoine Taveneaux

ಕಷ್ಯಪಮುನಿಯ ಕೋರಿಕೆಯ ಮೇರೆಗೆ ಮಾನಸದೇವಿಯನ್ನು ಜರ್ತತ ಎನನುವ ಮುನಿ ಮದುವೆಯಾದರು. ಆದರೆ ಅವರ ವೈವಾಹಿಕ ಜೀವನ ಕೇವಲ ಮೂರು ವರ್ಷ ಮಾತ್ರ ಉಳಿಯಿತು. ಮಾನಸದೇವಿ ಗಂಡನ ಜೊತೆ ನಿರ್ಲಕ್ಷ್ಯದಿಂದ ವರ್ತಿಸಲು ಪ್ರಾರಂಭಿಸುತ್ತಾಳೆ. ಇದನ್ನು ಸಹಿಸದ ಜರ್ಕತ ಬೇರೆ ವಿವಾಹವಾದರು ಆಗ ಗರ್ಭವತಿಯಾಗಿದ್ದ ಮಾನಸಗೆ ಅಷ್ಟಿಕ ಎನ್ನುವ ಮಗು ಜನಿಸುತ್ತಾನೆ ಎನ್ನಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X