Search
  • Follow NativePlanet
Share
» »ನಿಮ್ಮ ಮದುವೆ ಸ್ವರ್ಗದಂತಹ ಸ್ಥಳಗಳಲ್ಲಿ ಆಗಬೇಕೆಂದುಕೊಂಡಿದ್ದೀರಾ? ಹಾಗಾದ್ರೆ ಇದನ್ನು ಓದಿ

ನಿಮ್ಮ ಮದುವೆ ಸ್ವರ್ಗದಂತಹ ಸ್ಥಳಗಳಲ್ಲಿ ಆಗಬೇಕೆಂದುಕೊಂಡಿದ್ದೀರಾ? ಹಾಗಾದ್ರೆ ಇದನ್ನು ಓದಿ

ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುವ ಮಾತಿನಂತೆ, ಇತ್ತೀಚಿನ ದಿನಗಳಲ್ಲಿ ಯುವಕರು ತಮ್ಮ ವಿವಾಹವನ್ನು ಅದ್ಧೂರಿಯಾಗಿ ಹಾಗೂ ಸ್ವರ್ಗವೇ ಭೂಮಿಗಿಳಿದು ಬಂದಂತೆ ಭಾಸವಾಗುವ ರೀತಿಯಲ್ಲಿ ಮಾಡಿಕೊಳ್ಳಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಈಗಿನ ಕಾಲದ ಯುವ ಜನತೆ ಬಗ್ಗೆ ಕೇಳಲೇ ಬೇಡಿ, ತಮ್ಮ ಮದುವೆಯ ಬಗ್ಗೆ ಬೆಟ್ಟದಷ್ಟು ಆಸೆಯಿಟ್ಟುಕೊಂಡಿರುತ್ತಾರೆ.

ಮದುವೆಗಳನ್ನು ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಆಚರಿಸಬೇಕಾಗುತ್ತದೆ. ಭಾರತದ ಹಿಮಭರಿತ ಪರ್ವತಗಳು, ಬೆರಗುಗೊಳಿಸುವ ವಾಸ್ತುಶಿಲ್ಪ, ಬಿಳಿ-ಮರಳಿನ ಕಡಲತೀರಗಳು, ವಿಸ್ಮಯಕಾರಿ ಹಿನ್ನೀರು, ಐತಿಹಾಸಿಕ ನಗರಗಳು, ಶ್ರೀಮಂತ ಸಂಸ್ಕೃತಿ, ಸಂಪ್ರದಾಯಗಳು ಖಂಡಿತವಾಗಿಯೂ ನಿಮ್ಮ ವಿವಾಹವನ್ನು ಮರೆಯಲಾಗದ ಸಿಹಿ ನೆನಪುಗಳಾಗಿ ಮಾಡುತ್ತವೆ. ಆದ್ದರಿಂದ ನೀವು ಈ ಅನನ್ಯ ವಿವಾಹ ತಾಣಗಳನ್ನು ಆಯ್ಕೆಮಾಡುವಾಗ, ನಿಮ್ಮ ಅತಿಥಿಗಳನ್ನು ನಿಮ್ಮ ಮದುವೆ ಸಮಾರಂಭಕ್ಕೆ ಕರೆಸಿಕೊಳ್ಳುವುದು ಮಾತ್ರವಲ್ಲದೆ ಅವರನ್ನು ರಜೆಯ ತಾಣಕ್ಕೂ ಕರೆದುಕೊಂಡು ಹೋದ ಅನುಭವವಾಗುತ್ತದೆ .

ಭಾರತದಲ್ಲಿನ ಅತ್ಯುತ್ತಮ ವಿವಾಹ ತಾಣಗಳು ಯಾವವು ಈ ಬಗ್ಗೆ ಇನ್ನಷ್ಟು ತಿಳಿಯೋಣ:

1.ಉದಯಪುರ

1.ಉದಯಪುರ

ಇದು ರಾಜಸ್ಥಾನದ ಅತ್ಯಂತ ಮಧುರವಾದ ಮತ್ತು ಬೆರಗುಗೊಳಿಸುವ ಸ್ಥಳವಾಗಿದೆ. ಉದಯಪುರವು ಮದುವೆಯಾಗಲು ಅನನ್ಯ ಮತ್ತು ಕನಸಿನ ತಾಣಗಳಲ್ಲಿ ಒಂದಾಗಿದೆ. ಇಲ್ಲಿನ ಸಮಕಾಲೀನ ಶೈಲಿಯ ಭವ್ಯವಾದ ಅರಮನೆಗಳಾದ, ದಿ ಲೀಲಾ, ದಿ ತಾಜ್ ಲೇಕ್ ಪ್ಯಾಲೇಸ್ ಮತ್ತು ದಿ ಟ್ರೈಡೆಂಟ್ ಜೊತೆಗೆ ಭವ್ಯವಾದ ಮತ್ತು ಐಷಾರಾಮಿ ಸ್ಥಳಗಳನ್ನು ಹೊಂದಿದೆ. ಈ ನಗರವು ನಿಮ್ಮ ಕನಸಿನ ಮದುವೆಗೆ ಸೂಕ್ತವಾದ ಹಿನ್ನೆಲೆಯನ್ನು ನೀಡುತ್ತದೆ.

2. ಜೈಪುರ

2. ಜೈಪುರ

ವಿಶ್ವದ ಅದ್ಭುತ ವಿವಾಹ ತಾಣವಾಗಿ ಹೆಸರುವಾಸಿಯಾದ ಜೈಪುರ, ಅನೇಕ ಹಾಲಿವುಡ್ ಮತ್ತು ಬಾಲಿವುಡ್ ಸೆಲೆಬ್ರಿಟಿಗಳಿಗೆ ನೆಚ್ಚಿನ ತಾಣವಾಗಿದೆ. ಭಾರತದ ಗುಲಾಬಿ ನಗರ ಎಂದು ಪ್ರಸಿದ್ಧಿ ಪಡೆಡಿದ್ದು ಉತ್ತಮ ಪರಂಪರೆ ಮತ್ತು ರಮಣೀಯ ಸೌಂದರ್ಯವನ್ನು ನೀಡುತ್ತದೆ. ಇಲ್ಲಿನ ಹಬ್ಬದ ವಾತಾವರಣ ಮತ್ತು ಸ್ಥಳಗಳ ಆಯ್ಕೆ ಈ ನಗರವನ್ನು ಒಂದು ಪರಿಪೂರ್ಣ ರಾಜಮನೆತನದ ವಿವಾಹ ತಾಣವಾಗಿಸಿದೆ.

3.ಕೇರಳ

3.ಕೇರಳ

ದೇವರ ನಾಡು ಎಂದು ಕರೆಯಲ್ಪಡುವ ಕೇರಳವು ಅನೇಕ ವಿಲಕ್ಷಣ ಮತ್ತು ವಿಶಿಷ್ಟ ವಿವಾಹ ತಾಣಗಳನ್ನು ಹೊಂದಿದೆ. ಇಲ್ಲಿನ ಬೀಚ್ ಗಳು, ನಿಮ್ಮ ಪ್ರಣಯ ವಿವಾಹವನ್ನು ಮತ್ತಷ್ಟು ಮೆರಗುಗೊಳಿಸುವಂತೆ ಮಾಡುತ್ತದೆ. ಕೊಚ್ಚಿಯ ಪಾರಂಪರಿಕ ಅರಮನೆಗಳಿಂದ ಹಿಡಿದು, ಮುನ್ನಾರ್ ನ ಚಹಾ ತೋಟಗಳು, ಕುಮಾರಕೋಮ್ ನ ಹಿನ್ನೀರಿನವರೆಗು ಕೇರಳವು ವಿವಾಹಗಳಿಗೆ ಅತ್ಯುತ್ತಮ ತಾಣವಾಗಿದೆ.

4. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

4. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ನಿಮ್ಮ ಜೀವನಕ್ಕೆ ಸಂತೋಷಕರ ಮತ್ತು ಪ್ರಣಯ ಆರಂಭವನ್ನು ನೀವು ಬಯಸಿದರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ನಿಮ್ಮ ಮದುವೆಗೆ ಸೂಕ್ತ ತಾಣವಾಗಿದೆ. ಇಲ್ಲಿನ ದ್ವೀಪಗಳ ಹಿತವಾದ ಮತ್ತು ಆಹ್ಲಾದಕರ ವಾತಾವರಣವು ನಿಮ್ಮ ಪ್ರಣಯ ಸ್ಥಳಕ್ಕೆ ಹೆಚ್ಚು ಮೆರುಗನ್ನು ಕೊಡುತ್ತದೆ. ಹೆವ್ಲಾಕ್ ದ್ವೀಪವು ನಿಮ್ಮ ಮದುವೆಯ ಕ್ಷಣಗಳನ್ನು ಅಚ್ಚಳಿಯದಂತೆ ನೆನಪಿನಲ್ಲಿ ಉಳಿಸುತ್ತದೆ ಅಲ್ಲದೆ ಈ ದ್ವೀಪಗಳ ಕಡಲತೀರದ ಉದ್ದಕ್ಕೂ ತೆಂಗಿನಕಾಯಿಯ ಮರಗಳು ನಿಮ್ಮ ವಿವಾಹದ ಸಮುದ್ರಯಾನಕ್ಕೆ ಮತ್ತೊಂದು ಗರಿಯನ್ನು ಸೇರಿಸಿದಂತಾಗುತ್ತದೆ.

5. ಶಿಮ್ಲಾ

5. ಶಿಮ್ಲಾ

ಶಿಮ್ಲಾ ಭಾರತದ ಜನಪ್ರಿಯ ವಿವಾಹ ತಾಣಗಳಲ್ಲಿ ಒಂದಾಗಿದೆ. ಇಲ್ಲಿನ ಅನೇಕ ಪುರಾತನ ವಸಾಹತುಶಾಹಿ ವಾಸ್ತುಶಿಲ್ಪಗಳನ್ನು ಹೊಂದಿರುವ ಹಾಗೂ ಹಿಮದಿಂದ ಆವೃತವಾದ ಪರ್ವತಗಳು ಆಕಾಶವನ್ನು ತಲುಪುತ್ತದೆ ಎಂದು ಭಾಸವಾಗುತ್ತದೆ. ಇಲ್ಲಿನ ಪ್ರಶಾಂತ ವಾತಾವರಣ, ವಿಹಂಗಮ ಭೂದೃಶ್ಯಗಳು ಮತ್ತು ಹಿತವಾದ ಹವಾಮಾನವನ್ನು ಹೊಂದಿದೆ , ಶಿಮ್ಲಾದಲ್ಲಿ ವಿವಾಹದ ಅನುಭವವು ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಖಂಡಿತವಾಗಿಯೂ ನೀವು ಇಲ್ಲಿ ಹಿಮಾಲಯದಂತೆಯೇ ರೋಮ್ಯಾಂಟಿಕ್ ವಿವಾಹವನ್ನು ಮರುಸೃಷ್ಟಿಸಬಹುದು.

 6. ನೀಮ್ರಾನಾ ಕೋಟೆ

6. ನೀಮ್ರಾನಾ ಕೋಟೆ

ಈ ಕೋಟೆ ಗುರಗಾಂವ್ ‌ನಲ್ಲಿದೆ. ಈ ಪ್ರದೇಶವನ್ನು ಭಾರತದ ಅಹಿರ್ವಾಲ್ ಪ್ರದೇಶ ಎಂದು ಕರೆಯುತ್ತಾರೆ. ಇದು ಕೆಸ್ರೋಲಿ ದೆಹಲಿ, ಆಗ್ರಾ ಮತ್ತು ಜೈಪುರದ ಪ್ರವಾಸಿ ತಾಣಗಳಿಂದ ಬಹುತೇಕ ಸಮಾನ ಅಂತರದಲ್ಲಿದೆ. ಐತಿಹಾಸಿಕ ಮತ್ತು ಇದರ ನಂಬಲಾಗದ ವಾಸ್ತುಶಿಲ್ಪವು ಖಂಡಿತವಾಗಿಯೂ ನಿಮ್ಮ ಸಂಗಾತಿಯೊಂದಿಗೆ ಸುಂದರವಾದ ಕ್ಷಣಗಳನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ಈ ಪ್ರಸಿದ್ಧ ಕೋಟೆ ಸಾಮಾನ್ಯವಾಗಿ ದೆಹಲಿ ಮತ್ತು ಸುತ್ತಮುತ್ತಲಿನ ಜನರಿಗೆ ವಾರಾಂತ್ಯದ ರಜಾ ತಾಣವಾಗಿದೆ. ಆದಾಗ್ಯೂ, ವಾಸ್ತುಶಿಲ್ಪ, ವಾತಾವರಣ ಗುರ್ಗೊವಾನ್ ‌ನ ನೀಮ್ರಾನಾ ಕೋಟೆಯನ್ನು ಭಾರತದ ಆಹ್ಲಾದಕರ ಮತ್ತು ವಿಶಿಷ್ಟ ವಿವಾಹ ತಾಣವಾಗಿ ಮಾಡುತ್ತದೆ.

7 ಗೋವಾ

7 ಗೋವಾ

ಗೋವಾ ಎಂದಾಕ್ಷಣ ಮೊದಲು ನೆನಪಾಗುವುದು ಪ್ರಶಾಂತ ಕಡಲತೀರಗಳು, ತಾಳೆ ಮರಗಳು, ಶಾಂತತೆ ಮತ್ತು ಸಮುದ್ರದಿಂದ ಮೃದುವಾದ ತಂಪಾದ ಗಾಳಿ. ದೇಶಾದ್ಯಂತದ ಲಕ್ಷಾಂತರ ಜನರು ಇಷ್ಟಪಡುವ ವಿವಾಹ ತಾಣಗಳಲ್ಲಿ ಗೋವಾ ಒಂದಾಗಿದೆ. ಮಿನುಗುವ ನೀಲಿ ನೀರಿನಿಂದ ಸುತ್ತುವರೆದಿರುವ ಕಡಲತೀರಗಳ ಹಿನ್ನೆಲೆಯಲ್ಲಿ ಅನೇಕರು ತಮ್ಮ ಕಾಲ್ಪನಿಕ ಮದುವೆಯನ್ನು ಮತ್ತೆ ಮರುಸೃಷ್ಟಿಸಲು ಪ್ರಯತ್ನಿಸಿದ್ದಾರೆ. ನಿರಾತಂಕದ ಜೀವನ ವಿಧಾನ, ಶಾಂತಿಯುತತೆ ಮತ್ತು ಅರೇಬಿಯನ್ ಸಮುದ್ರದ ಸೌಮ್ಯ ಅಲೆಗಳು ಒಟ್ಟಾಗಿ ಈ ಸ್ಥಳವನ್ನು ಪ್ರಣಯ ತಾಣವನ್ನಾಗಿ ಮಾಡುತ್ತದೆ. ಗೋವಾದ ಮೋಡಿ ಅಂತಹದು. ಇಲ್ಲಿರುವ ತಾಜ್, ಲೀಲಾ, ಪಾರ್ಕ್ ಹಯಾಟ್ ಗೋವಾ, ಮತ್ತು ರಾಡಿಸನ್ ರೆಸಾರ್ಟ್‌ಗಳು ಕೆಲವು ಅತ್ಯಾಕರ್ಷಣೀಯ ವಿವಾಹದ ಸ್ಥಳಗಳಾಗಿವೆ.

8. ಬೆಂಗಳೂರು

8. ಬೆಂಗಳೂರು

ಬೆಂಗಳೂರು ಭಾರತದ ಐಟಿ ರಾಜಧಾನಿ ಎಂದೇ ಹೆಸರುವಾಸಿಯಾಗಿದೆ ಮತ್ತು ಎಂಜಿನಿಯರ್‌ಗಳಿಂದ ತುಂಬಿ ತುಳುಕುತ್ತಿರುವ ಬೆಂಗಳೂರು ಬೇರೆ ಯಾವುದೇ ಸ್ಥಳಗಳಿಗೆ ಹೊಂದಿಕೆಯಾಗದ ವಿಭಿನ್ನ ವಿವಾಹ ಸ್ಥಳವನ್ನು ಹೊಂದಿದೆ. ಇಲ್ಲಿರುವ ನೆಚ್ಚಿನ 'ದಿ ಪ್ಯಾಲೇಸ್ ಗ್ರೌಂಡ್' ಭಾರತದಲ್ಲಿ ನೀವು ಕಾಣುವ ಐಷಾರಾಮಿ ಸ್ಥಳಗಳಲ್ಲಿ ಒಂದಾಗಿದೆ. ಈ ಅರಮನೆಯ ಸುಂದರವಾಗಿ ಬೆಳಗಿದ ಹಿನ್ನೆಲೆಯನ್ನು ನೀಡುವುದು, ಇದು ರಾಜಮನೆತನದ ನಿಜವಾದ ಸಾಕಾರವಾಗಿದೆ. ಈ ಅರಮನೆಯಲ್ಲಿ ಆಕರ್ಷಕವಾದ ಅಂದಗೊಳಿಸಿದ ಉದ್ಯಾನಗಳು, ದರ್ಬಾರ್ ಹಾಲ್ ಗಳಿವೆ, ಅಲ್ಲಿ ವಿಜೃಂಭಣೆಯಿಂದ ವಿವಾಹ ಸಮಾರಂಭಗಳನ್ನು ಆಯೋಜಿಸಬಹುದು. ನಿಮ್ಮ ಮದುವೆಗೆ ರಾಜರ ಕಳೆಯನ್ನು ಸೇರಿಸುವ ತೆರೆದ ಗಾಳಿ ವಿವಾಹದ ಸ್ಥಳದಲ್ಲಿ ಮದುವೆಯಾಗಲು ಬಯಸುವಿರಾ? ಆಗಾದರೆ ಜಯಮಹಲ್ ಅರಮನೆ ನಿಮಗೆ ಸರಿಯಾದ ಆಯ್ಕೆಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more