Search
  • Follow NativePlanet
Share
» »ಕೊಲ್ಲೂರಿನಿಂದ ಗೋಕರ್ಣದವರೆಗೆ ಪ್ರಸಿದ್ಧವಾದ ಸ್ಥಳಗಳ ದಿವ್ಯ ದರ್ಶನ

ಕೊಲ್ಲೂರಿನಿಂದ ಗೋಕರ್ಣದವರೆಗೆ ಪ್ರಸಿದ್ಧವಾದ ಸ್ಥಳಗಳ ದಿವ್ಯ ದರ್ಶನ

ನಮ್ಮ ಕರ್ನಾಟಕ ರಾಜ್ಯದಲ್ಲಿ ಹಲವಾರು ಸುಂದರವಾದ ಪ್ರವಾಸಿ ತಾಣಗಳು ಇವೆ. ಸುಂದರವಾದ ಪ್ರಕೃತಿಯ ಮಡಿಲಲ್ಲಿ ಕೆಲವು ದಿನಗಳು ದೀರ್ಘವಾದ ಪ್ರಯಾಣ ಮಾಡಲು ಸೂಕ್ತವಾದ ಸ್ಥಳಗಳು ಇಲ್ಲಿವೆ. ಒಂದೆಡೆ ಪಶ್ವಿಮ ಘಟ್ಟಗಳ ರಮಣೀಯ ಸೌಂದರ್ಯವಿದ್ದರೆ ಇನ್ನೊಂದೆಡೆ ಅರಬ್ಬಿ ಸಮುದ್ರದ ಅದ್ಭುತವಾದ ಸೌಂದರ್ಯವನ್ನು ಕಾಣಬಹುದಾಗಿದೆ.

ಪ್ರಸ್ತುತ ಲೇಖನದಲ್ಲಿ ಕೊಲ್ಲೂರಿನಿಂದ ಗೋಕರ್ಣದವರೆಗೆ ಒಂದು ಸುಂದರವಾದ ಹಾಗು ಜೀವನದಲ್ಲಿ ಎಂದೂ ಮರೆಯಲಾಗದಂತಹ ಪ್ರವಾಸಿ ಮಾರ್ಗದ ಬಗ್ಗೆ ತಿಳಿಯೋಣ. ಈ ಮಾರ್ಗವು ಸುಮಾರು 150 ಕಿ,ಮೀ ದೂರವಿದೆ. ಆದರೆ ಮಾರ್ಗದಲ್ಲಿ ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದೆ.

ಕೊಲ್ಲೂರಿನಿಂದ ಗೋರ್ಕಣದವೆರೆಗೆ ಇರುವ ಅದ್ಭುತವಾದ ತಾಣಗಳ ಬಗ್ಗೆ ಲೇಖನದಲ್ಲಿ ಮಾಹಿತಿಯನ್ನು ಪಡೆಯೋಣ.

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿರುವ ಕೊಲ್ಲೂರು ಕ್ಷೇತ್ರವು ಪ್ರಮುಖವಾಗಿ ಮೂಕಾಂಬಿಕ ತಾಯಿ ದೇವಾಲಯಕ್ಕೆ ಪ್ರಸಿದ್ಧಿ ಪಡೆದಿದೆ. ಇಲ್ಲಿ ನೀವು ಮೂಕಾಂಬಿಕಾ ವನ್ಯಜೀವಿ ಧಾಮವನ್ನು ಕೂಡ ಕಾಣಬಹುದು.

syam

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಇಲ್ಲಿನ ಕೊಡಚಾದ್ರಿ ಬೆಟ್ಟಗಳ ರಮಣೀಯತೆ, ದಟ್ಟವಾದ ಕಾಡುಗಳು, ಹಚ್ಚ ಹಸಿರಿನಿಂದ ಕೂಡಿದ ಸುಂದರವಾದ ವಾತಾವಣ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸದೇ ಬಿಡದು. ಕೊಲ್ಲೂರಿಗೆ ಭೇಟಿ ನೀಡಿದಾಗ ಈ ಸುಂದರ ಸೊಬಗನ್ನು ನೋಡವುದು ಮರೆಯಲೇಬಾರದು.

syam

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಲ್ಲಿ ಮಾಹಿಮಾನ್ವಿತವಾದ ತಾಯಿ ಮೂಕಾಂಬಿಕೆ ನೆಲೆಸಿದ್ದಾಳೆ. ಇದೊಂದು ಕೊಲ್ಲೂರಿನ ಪ್ರಖ್ಯಾತವಾದ ಪುಣ್ಯ ಕ್ಷೇತ್ರವಾಗಿದೆ. ಈ ದೇವಾಲಯಕ್ಕೆ ಕರ್ನಾಟಕದಿಂದಲೇ ಅಲ್ಲದೇ ಕೇರಳ ರಾಜ್ಯದಿಂದಲೂ ಭಕ್ತರು ಭೇಟಿ ನೀಡುತ್ತಾರೆ.

Rojypala

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಈ ತಾಯಿಯನ್ನು ಶ್ರೀ ಚಕ್ರದ ಮೇಲೆ ಸ್ಥಾಪಿಸಲಾಗಿದೆ. ಮೂಕಾಂಬಿಕಾ ದೇವಿಯ ವಿಗ್ರಹವನ್ನು ಪಂಚಲೋಹದಿಂದ ತಯಾರಿಸಲಾಗಿದ್ದು, ಆದಿಗುರು ಶಂಕರಾಚಾರ್ಯರು ಈ ಸ್ಥಳದಲ್ಲಿ ಪ್ರತಿಷ್ಟಾಪಿಸಿದರು ಎನ್ನಲಾಗಿದೆ.


Iramuthusamy

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಸ್ಥಳ ಪುರಾಣದ ಪ್ರಕಾರ, ಮೂಕಾಂಬಿಕಾ ದೇವಿಯು ಕೊಡಚಾದ್ರಿ ಶಿಖರದ ಮೇಲೆ ನೆಲೆಸಿದ್ದು, ಈ ಶಿಖರವನ್ನು ಏರುವ ಸಮಯದಲ್ಲಿಯೇ ಹಲವಾರು ಪ್ರವಾಸಿಗರು ಏಂಜಾಯ್ ಮಾಡುತ್ತಾರೆ.


Rajeevvsm

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಇನ್ನು ಇಲ್ಲಿನ ಮುಖ್ಯವಾದ ಆರು ಸುಂದರವಾದ ತಾಣಗಳು ಎಂದರೆ ಅವು ಉಡುಪಿ, ಸುಬ್ರಹ್ಮಣ್ಯ, ಕುಂಬಾಶಿ, ಕೋಟೇಶ್ವರ, ಶಂಕರನಾರಾಯಣ ಹಾಗು ಗೋಕರ್ಣ.

GaneshSB

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಮೂಕಾಂಬಿಕಾ ದೇವಾಲಯವು ಅತ್ಯಂತ ದೊಡ್ಡದಾದ ದೇವಾಲಯವಾಗಿದ್ದು, ಇಲ್ಲಿ ಶ್ರೀ ಪಂಚಮುಖಿ ಗಣಪತಿ, ಶ್ರೀ ಚಂದ್ರಮೌಳೀಶ್ವರ, ಆಂಜನೇಯ, ಶ್ರೀ ವೆಂಕಟರಮಣ, ಶ್ರೀ ತುಳಸಿ ಗೋಪಾಲಕೃಷ್ಣ, ಶ್ರೀ ಪ್ರಾಣಲಿಂಗೇಶ್ವರ, ಶ್ರೀ ನಂಜುಡೇಶ್ವರ, ಶ್ರೀ ಸುಬ್ರಹ್ಮಣ್ಯ ಹಾಗು ಶ್ರೀ ಪಾರ್ಥೀಶ್ವರ ದೇವಾಲಯವನ್ನು ಇಲ್ಲಿ ಕಾಣಬಹುದಾಗಿದೆ.


Deepugn

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಪಶ್ಚಿಮಕ್ಕೆ ಸುಮಾರು 30 ಕಿ.ಮೀ ದೂರದಲ್ಲಿ ಬೈಂದೂರು ಎಂಬ ಸುಂದರವಾದ ಕರಾವಳಿ ಪಟ್ಟಣವಿದೆ. ಇಲ್ಲಿ ಸೋಮೇಶ್ವರ ಕಡಲತೀರ, ಕೋಸಳ್ಳಿ ಜಲಪಾತಗಳನ್ನು ಕಾಣಬಹುದಾಗಿದೆ.


Rohanmontherio

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಬೈಂದೂರಿನ ಭೇಟಿಯ ನಂತರ ರಾಷ್ಟ್ರೀಯ ಹೆದ್ಧಾರಿ 66 ರ ಮೂಲಕ ಮುಂದೆ ಸಾಗಿದರೆ ಮತ್ತೊಂದು ಸುಂದರವಾದ ಸ್ಥಳ ದೊರೆಯುತ್ತದೆ ಅದೇ ಭಟ್ಕಳ. ಇಲ್ಲಿಂದ ಭಟ್ಕಳಕ್ಕೆ ಸುಮಾರು 22 ಕಿ.ಮೀ ದೂರ ಮಾತ್ರ ಇದೆ. ಇದು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ.

Nishant puranik

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಇಲ್ಲಿ ಹಲವಾರು ಬೀಚ್‍ಗಳು ಇವೆ. ಭಟ್ಕಳದಿಂದ ಸುಮಾರು 5 ಕಿ.ಮೀ ದೂರದಲ್ಲಿ ಶಿರಾಲಿ ಎಂಬ ಕರಾವಳಿ ಹಳ್ಳಿ ಇದೆ. ಈ ಸ್ಥಳವು 2 ತಾಣಗಳಿಗೆ ಪ್ರಸಿದ್ಧವಾಗಿದೆ. ಅವುಗಳು ಯಾವುವೆಂದರೆ ಒಂದು ಚಿತ್ರಾಪುರ ಮಠವಾದರೆ ಮತ್ತೊಂದು ಮಹಾಗಣಪತಿ ದೇವಾಲಯ.


Nishant puranik

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಶಿರಾಲಿ ಗ್ರಾಮದಲ್ಲಿ ಸಮಯ ಕಳೆದು ಮತ್ತೆ ಎಡಪಲ್ಲಿ-ಪನ್ವೇಲ್ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಉತ್ತರಕ್ಕೆ ಸುಮಾರು 9 ಕಿ.ಮೀ ಮುಂದೆ ಸಾಗಿದಾಗ ಅತಿ ಪ್ರಸಿದ್ಧ ಧಾರ್ಮಿಕ ತಾಣ ಮುರುಡೇಶ್ವರ ತೀರ್ಥಕ್ಷೇತ್ರವಿದೆ.


varun suresh

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಈ ಪುಣ್ಯಕ್ಷೇತ್ರವು ಜಗತ್ತಿನಲ್ಲಿ 2 ನೇ ಅತಿದೊಡ್ಡದಾದ ಶಿವನ ಪ್ರತಿಮೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಈ ದೇವಾಲಯದ ಸ್ಥಳ ಪುರಾಣವು ರಾಮಾಯಣದ ಮೂಲ ಹೊಂದಿದೆ. ಇಲ್ಲಿನ ಶಿವನ ಪ್ರತಿಮೆ ಜಗತ್ ಪ್ರಸಿದ್ಧವಾಗಿದೆ.

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ದೇವಾಲಯವನ್ನು ಹೊರತು ಪಡಿಸಿ ಇತರೆ ಆಕರ್ಷಣೆಗಳು ಎಂದರೆ ಇಲ್ಲಿನ ಬೀಚ್‍ಗಳಲ್ಲಿ ದೋಣಿ ವಿಹಾರ ಮಾಡುವುದು, ಈಜುವುದು ಮುಂತಾದ ಚಟುವಟಿಕೆಯನ್ನು ಇಲ್ಲಿ ಮಾಡಬಹುದಾಗಿದೆ. ಹಾಗಾಗಿಯೇ ಇಲ್ಲಿಗೆ ಪ್ರವಾಸಿಗರ ದಂಡೇ ಭೇಟಿ ನೀಡುತ್ತದೆ.

Thejas Panarkandy

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಮುರುಡೇಶ್ವರದಿಂದ ನೇರವಾದ ರಾಷ್ಟ್ರೀಯ ಹೆದ್ದಾರಿಯನ್ನು ಬಳಸಿಕೊಂಡು ತೆರಳಿದರೆ ಸುಮಾರು 28 ಕಿ.ಮೀಗಳಷ್ಟು ಪ್ರಯಾಣ ಮಾಡಿದರೆ ದೊರೆಯುವ ಮತ್ತೊಂದು ಸುಂದರವಾದ ಸ್ಥಳವೇ ಹೊನ್ನಾವರ. ಇದು ಅಪ್ಸರ ಕೊಂಡ ಜಲಪಾತಕ್ಕೆ ಹೆಸರುವಾಸಿಯಾಗಿದೆ.


Ashok Neelakanta

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಅಪ್ಸರ ಕೊಂಡ ಎಂದರೆ ಅಪ್ಸರೆಯರ ಕೊಳ ಎಂದು ಹೇಳಬಹುದು. ಈ ಕೊಳದ ಸ್ಥಳ ಪುರಾಣದ ಪ್ರಕಾರ ಅಪ್ಸರೆಯರು ಈ ಕೊಳದಲ್ಲಿ ಸ್ನಾನ ಮಾಡುತ್ತಿದ್ದರಂತೆ ಹಾಗಾಗಿ ಇದಕ್ಕೆ ಅಪ್ಸರಕೊಂಡ ಎಂಬ ಹೆಸರು ಬಂದಿತು.

Isroman.san

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ನಂತರ ಹೊನ್ನಾವರದಿಂದ ಅದೇ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಸುಮಾರು 22 ಕಿ.ಮೀ ದೂರದಲ್ಲಿ ಕುಮಟಾ ಸ್ಥಳವಿದೆ. ಇಲ್ಲಿ ಹಲವಾರು ಬೀಚ್‍ಗಳು, ಸ್ಮಾರಕಗಳನ್ನು ಕಾಣಬಹುದಾಗಿದೆ.


rajesh kamat

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಕುಮಟಾದಿಂದ ಮುಂದೆ ಸಾಗಿದರೆ ಅಂದರೆ 11 ಕಿ.ಮೀ ದೂರದಲ್ಲಿ ಮಿರ್ಜಾನ್ ಎಂಬ ಐತಿಹಾಸಿಕ ಕೋಟೆ ದೊರೆಯುತ್ತದೆ. ನೀವು ಇತಿಹಾಸ ಪ್ರಿಯರಾಗಿದ್ದಲ್ಲಿ ಒಮ್ಮೆ ಈ ಕೋಟೆಗೆ ಭೇಟಿ ಕೊಡಿ.


Lisa.davis

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಕೊನೆಯದಾಗಿ ಮಿರ್ಜಾನ್ ಕೋಟೆ ನೋಡಿದ ನಂತರ ನೇರವಾಗಿ ಅದೇ ರಾಷ್ಟ್ರೀಯ ಹೆದ್ಧಾರಿ ಬಳಸಿಕೊಂಡು ಎಡ ತಿರುವು ಪಡೆದು ಗೋಕರ್ಣ ರಸ್ತೆ ಹಿಡಿದು ಸುಮಾರು 24 ಕಿ.ಮೀ ಪ್ರಯಾಣ ಮಾಡಿದರೆ ಪ್ರವಿತ್ರ ಕ್ಷೇತ್ರ ಗೋಕರ್ಣ ಸಿಗುತ್ತದೆ.

Nechyporuk Iuliia

ಕೊಲ್ಲೂರಿನಿಂದ ಗೋರ್ಕರ್ಣ

ಕೊಲ್ಲೂರಿನಿಂದ ಗೋರ್ಕರ್ಣ

ಗೋಕರ್ಣದಲ್ಲಿ ಶಿವನು ಮಹಾಬಲೇಶ್ವರನಾಗಿ ನೆಲೆಸಿದ್ದು, ಅಸಂಖ್ಯಾತ ಭಕ್ತರು ಶಿವನ ದರ್ಶನಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಶಿವಲಿಂಗವನ್ನು ರಾವಣನಿಂದ ಪ್ರತಿಷ್ಟಾಪನೆಗೊಂಡಿರುವುದಾಗಿದೆ. ಇಲ್ಲಿ ಹಲವಾರು ಪವಿತ್ರವಾದ ದೇವಾಲಯವನ್ನು ಕಾಣಬಹುದಾಗಿದೆ.


Sbblr geervaanee

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X