Search
  • Follow NativePlanet
Share
» »ಅಂಡಮಾನ್ ದ್ವೀಪದಲ್ಲಿ ಟ್ರಕ್ಕಿಂಗ್ ಮಜಾ ರೋಮಾಂಚಕ

ಅಂಡಮಾನ್ ದ್ವೀಪದಲ್ಲಿ ಟ್ರಕ್ಕಿಂಗ್ ಮಜಾ ರೋಮಾಂಚಕ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪವು ಹಲವಾರು ಬೆಟ್ಟಗಳನ್ನು ಹೊಂದಿವೆ. ಹಾಗಾಗಿ ಅಂಡಮಾನ್‌ ಟ್ರೆಕ್ಕಿಂಗ್‌ಗಾಗಿ ಪರಿಪೂರ್ಣ ತಾಣವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅತ್ಯಂತ ಜನಪ್ರಿಯ ಸಾಹಸ ಕ್ರೀಡೆಗಳಲ್ಲಿ ಟ್ರೆಕ್ಕಿಂಗ್ ಕೂಡಾ ಒಂದಾಗಿದೆ. ಟ್ರಾಂಪಿಂಗ್, ಬ್ಯಾಕ್ಪ್ಯಾಕಿಂಗ್ ಮತ್ತು ಬುಷ್ವಾಕ್ಕಿಂಗ್ ಈ ರೋಮಾಂಚಕ ಚಟುವಟಿಕೆಯ ಸಮಾನಾರ್ಥಕಗಳಾಗಿವೆ.

ಮೋಜಿನ ಟ್ರಕ್ಕಿಂಗ್

ಮೋಜಿನ ಟ್ರಕ್ಕಿಂಗ್

PC:Shefali mithra
ಅಂಡಮಾನ್ ದ್ವೀಪಗಳಲ್ಲಿನ ಅತ್ಯಂತ ಮೋಜಿನ ಸಂಗತಿಗಳಲ್ಲಿ ಟ್ರೆಕ್ಕಿಂಗ್ ನಿಜವಾಗಿಯೂ ಒಂದು. ಈ ಪ್ರದೇಶವು ದಟ್ಟವಾದ ಉಷ್ಣವಲಯದ ಮಳೆಕಾಡುಗಳಿಂದ ಸುತ್ತುವರಿಯಲ್ಪಟ್ಟಿದೆ. ಅಪರೂಪದ ವನ್ಯಜೀವಿ ಮತ್ತು ಸ್ಥಳೀಯ ಸಸ್ಯಗಳಿಂದ ಕೂಡಿದೆ. ಇದು 270 ಜಾತಿಗಳು ಮತ್ತು 2200 ರೀತಿಯ ಸಸ್ಯಗಳನ್ನು ಹೊಂದಿದೆ. ಕೆಲವೊಮ್ಮೆ, ಟ್ರೆಕ್ಕಿಂಗ್ ದಂಡಯಾತ್ರೆಗಳು ಒಂದು ದಿನ ಅಥವಾ ಎರಡು ದಿನಗಳಾಗಿದ್ದರೆ, ಕೆಲವೊಮ್ಮೆ ಅವುಗಳು ವಾರಗಳಷ್ಟು ಉದ್ದವಾಗಿರಬಹುದು.

ಮೌಂಟ್ ಹ್ಯಾರಿಯೆಟ್ - ಮಧುಬಾನ್

ಅಂಡಮಾನ್ ನಲ್ಲಿ ಹಲವಾರು ಟ್ರೆಕ್ಕಿಂಗ್ ತಾಣಗಳಿವೆ. ಆದರೆ ಅವುಗಳಲ್ಲಿ ಎರಡು ಅತ್ಯಂತ ಜನಪ್ರಿಯವಾಗಿವೆ. ಅವುಗಳೆಂದರೆ ಒಂದು 16 ಕಿಮೀ ಉದ್ದದ ಮೌಂಟ್ ಹ್ಯಾರಿಯೆಟ್ - ಮಧುಬಾನ್ ಚಾರಣ. ವಿವಿಧ ಕಾಡು ಪ್ರಾಣಿಗಳು, ಸ್ಥಳೀಯ ಹಕ್ಕಿಗಳು ಮತ್ತು ವರ್ಣಮಯ ಚಿಟ್ಟೆಗಳು ಈ ಕಾಡುಪ್ರದೇಶದ ಪ್ರಮುಖ ಆಕರ್ಷಣೆಗಳಾಗಿವೆ.

ಡಿಗ್ಲಿಪುರ್ - ಸ್ಯಾಡಲ್ ಪೀಕ್ ಟ್ರೆಕ್

ಇನ್ನೊಂದು ಡಿಗ್ಲಿಪುರ್ - ಸ್ಯಾಡಲ್ ಪೀಕ್ ಟ್ರೆಕ್, ಶ್ರೀಮಂತ ಜೈವಿಕ ವೈವಿಧ್ಯಮಯ ಪ್ರಕೃತಿ ಸ್ವರ್ಗ. ದ್ವೀಪಗಳ ಮೇಲಿನ ಅತಿ ಎತ್ತರದ ಸ್ಥಳವೆಂದರೆ ಸ್ಯಾಡಲ್ ಶಿಖರವು ಅದರ ಟ್ರೆಕ್ಕಿಂಗ್ ಅನುಭವಗಳಿಗೆ ಬಹಳ ಪ್ರಸಿದ್ಧವಾಗಿದೆ. ಹುಲ್ಲುಗಾವಲು ಅರಣ್ಯ ಪ್ರದೇಶವು 6 ವಿಧದ ಸ್ಥಳೀಯ ಮರಗಳನ್ನು ಹೊಂದಿದೆ, 13 ಸ್ಥಳೀಯ ಅವಿಫುನಾ ಜಾತಿಗಳು ಮತ್ತು 36 ಸ್ಥಳೀಯ ಜಾತಿಯ ಕೀಟಗಳನ್ನು ಇಲ್ಲಿ ಕಾಣಬಹುದು.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಟ್ರೆಕ್ಕಿಂಗ್‌ಗೆ ಉತ್ತಮ ಸಮಯವೆಂದರೆ ನವೆಂಬರ್ ಮತ್ತು ಏಪ್ರಿಲ್ ನಡುವೆ. ಆದರೂ ಗರಿಷ್ಠ ಅವಧಿಯು ಡಿಸೆಂಬರ್ ನಿಂದ ಜನವರಿ ವರೆಗೆ ಇರುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Kaila5hravi
ಅಂಡಮಾನ್‌ಗೆ ಪ್ರಯಾಣಿಸಲು ಸುಲಭ ಮಾರ್ಗವೆಂದರೆ ವಿಮಾನ. ಈ ಪ್ರವಾಸಿ ತಾಣವು ತನ್ನದೇ ಆದ ವಿಮಾನ ನಿಲ್ದಾಣವನ್ನು ಪೋರ್ಟ್ ಬ್ಲೇರ್‌ನಲ್ಲಿ ಹೊಂದಿದೆ. ಇದು ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ ಮತ್ತು ಬೆಂಗಳೂರಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ದೆಹಲಿ ಮತ್ತು ಮುಂಬೈಯಿಂದ ವಿಮಾನವು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಚೆನ್ನೈ ಮತ್ತು ಕೋಲ್ಕತಾದಿಂದ ಪ್ರಯಾಣಿಕರು ಕೇವಲ 2 ಗಂಟೆಗಳಲ್ಲಿ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X