Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ರೇಟ್ ನಿಕೋಬಾರ್ » ಹವಾಮಾನ

ಗ್ರೇಟ್ ನಿಕೋಬಾರ್ ಹವಾಮಾನ

ಇಲ್ಲಿನ ಸಮೀಪದ ಥೈಲ್ಯಾಂಡ್ ಮತ್ತು ಸಿಂಗಾಪುರ ಗಳಲ್ಲಿರುವಂತೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಾಮಾನ್ಯವಾಗಿ ವರ್ಷವಿಡಿ ಒಂದೆ ರೀತಿಯ ವಾಯುಗುಣ ಇರುತ್ತದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಮೇ ವರೆಗಿನ ಅವಧಿ ಸೂಕ್ತವಾಗಿದೆ. ಇದೆ ಸಮಯದಲ್ಲಿ ವಾರ್ಷಿಕ ಪ್ರವಾಸಿ ಉತ್ಸವವನ್ನೂ ಆಯೋಜಿಸಲಾಗುತ್ತದೆ. ಇದು ಮಾನ್ಸೂನ್ ನಂತರದ ಅವಧಿಯಾಗಿರುವ ಕಾರಣ ನೀರು ಅಪ್ಪಟ ಸ್ವಚ್ಛವಾಗಿರುತ್ತದೆ ಹಾಗೂ ಕಡಲ ತಡಿಯಲ್ಲಿ ಇಡಿ ದಿನ ಕಳೆಯುವವರಾದರೂ ಅಷ್ಟೊಂದು ಬಿಸಿ ಇರುವುದಿಲ್ಲ.ಉಷ್ಣತೆ ಮಳೆಗಾಲದ ನಂತರ ಸಾಮಾನ್ಯವಾಗಿ 24 ರಿಂದ 32 ಡಿಗ್ರಿ ಸೆಲ್ಶಿಯಸ್ ಇರುತ್ತದೆ ಹಾಗೂ ಚಳಿಗಾಲದ ಅವಧಿಯಲ್ಲಿ ಎರಡರಿಂದ ಮೂರು ಡಿಗ್ರಿ ಕಡಿಮೆಯಾಗುತ್ತದೆ. ಹವಾಮಾನವನ್ನು ಗಣನೆಗೆ ತೆಗೆದುಕೊಳ್ಳದೆ ಇದು ಇಡಿ ವರ್ಷ ಶುಷ್ಕವಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆ ಕಾಲವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಬಿಸಿ ಹಾಗೂ ಆರ್ದ್ರತೆಯಿಂದ ಕೂಡಿರುತ್ತದೆ. ಈ ಬೇಸಿಗೆಯ ಅವಧಿ ಪ್ರವಾಸಿಗರು ಇಲ್ಲಿಗೆ ಆಗಮಿಸಲು ಪ್ರಶಸ್ತವಾದ ಸಮಯವಲ್ಲ. ಅಕ್ಷಾಂಶಕ್ಕೆ ಹತ್ತಿರವಾಗಿರುವ ಕಾರಣ ಇಲ್ಲಿನ ತಾಪಮಾನ 32 ಡಿ. ಸೆ ನಿಂದ 36ಡಿ .ಸೆ ವರೆಗೆ ಹೆಚ್ಚಾಗುವ ಸಾಧ್ಯತೆಗಳಿವೆ.

ಮಳೆಗಾಲ

ಅಂಡಮಾನ್ ಮತ್ತು ನಿಕೋಬಾರ್ ಅದರಲ್ಲೂ ಪೋರ್ಟ್ ಬ್ಲೇರ್ ಉತ್ತಮ ಪ್ರಮಾಣದ ಮಳೆಯನ್ನು ಪಡೆಯುತ್ತದೆ. ಮೇ ನಂತರದ ಅವಧಿಯು ಮಳೆಗಾಲವಿರುತ್ತದೆ. ವಾರ್ಷಿಕ ಸರಾಸರಿ ಮಳೆ ಪ್ರಮಾಣವು 3000 ಮಿ.ಮಿ ಆಗಿದ್ದು ಸಾಮಾನ್ಯವಾಗಿ ತಾಪಮಾನವು 24 ಡಿಗ್ರಿ ಸೆಲ್ಶಿಯಸ್ ಆಗಿರುತ್ತದೆ.

ಚಳಿಗಾಲ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಚಳಿಗಾಲವು, ಚಳಿಗಾಲದ ಲಕ್ಷಣಗಳನ್ನೆ ಹೊಂದಿಲ್ಲ. ಹಗಲಿನಲ್ಲಿ ಇಲ್ಲಿನ ತಾಪಮಾನ 24 – 30 ಡಿಗ್ರಿ ಸೆಲ್ಶಿಯಸ್ ನಷ್ಟಿರುತ್ತದೆ ಹಾಗೂ ರಾತ್ರಿಯಲ್ಲಿನ ವಾತಾವರಣ ತುಸು ಶಾಂತವಾಗಿರುತ್ತದೆ.