Search
  • Follow NativePlanet
Share
» »ಈ ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಕರ್ನಾಟಕದ ಪ್ರವಾಸಿ ತಾಣಗಳು

ಈ ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಕರ್ನಾಟಕದ ಪ್ರವಾಸಿ ತಾಣಗಳು

ಬೇಸಿಗೆ ಬಂತೆಂದರೆ ಸಾಕು ವಾತಾವರಣ ಬಿಸಿಯಾಗುತ್ತದೆ ಮತ್ತು ನಿಮ್ಮನ್ನು ಅದು ನಿಮ್ಮನ್ನು ಹುಚ್ಚರನ್ನಾಗಿಸುತ್ತಿದೆಯೇ? ಹಾಗಾದ್ರೆ ಕೆಲವು ತಂಪಾದ ಸ್ಥಳಗಳಿಗೆ ಪ್ರಯಾಣಿಸಲು ನೀವು ಪ್ಲಾನ್ ಮಾಡುತ್ತಿದ್ದೀರಾ? ಕರ್ನಾಟಕದಲ್ಲಿರುವ ಈ ಪ್ರವಾಸಿ ಸ್ಥಳಗಳು ಬೇಸಿಗೆಯಲ್ಲಿ ನಿಮಗೆ ಆಹ್ಲಾದಕರವಾದ ಅನುಭವವನ್ನು ನೀಡುತ್ತವೆ. ಗುಡ್ಡಗಾಡು ಪ್ರದೇಶಗಳು ಅಥವಾ ಅರಣ್ಯ ಮೀಸಲು ಪ್ರದೇಶಗಳು ಈ ಸಮಯದಲ್ಲಿ ತಂಪಾದ ವಾತಾವರಣವನ್ನು ಹೊಂದಿರುತ್ತವೆ.

ಕರ್ನಾಟಕದಲ್ಲಿ ಅನ್ವೇಷಿಸಲು ಯೋಗ್ಯವಾದ ಹಲವಾರು ಗಿರಿಧಾಮಗಳಿವೆ. ಮುಂಗಾರು ನಂತರದ ಋತುಮಾನವು ಪ್ರವಾಸಿಗರ ಭೇಟಿ ನೀಡಲು ಉತ್ತಮ ಸಮಯವಾಗಿದ್ದರೂ, ಬೇಸಿಗೆಯಲ್ಲಿ ಈ ಸ್ಥಳಗಳು ಉತ್ತಮವಾಗಿರುತ್ತವೆ.

ಕೂರ್ಗ್‌ನಲ್ಲಿನರುವ ಮೋಡಿಮಾಡುವ ಪ್ರವಾಸಿ ಸ್ಥಳಗಳು, ಕಾಫಿ ಎಸ್ಟೇಟ್‌ಗಳು ಮತ್ತು ಚಿಕ್ಕಮಗಳೂರಿನ ಗಿರಿಧಾಮಗಳು ಇತ್ಯಾದಿ. ಆದ್ದರಿಂದ, ಈ ರಜಾ ತಾಣಗಳ ಸುತ್ತ ಉತ್ತಮ ಪ್ರವಾಸಕ್ಕಾಗಿ ನಿಮ್ಮ ಬ್ಯಾಗ್ಗಳನ್ನು ಈಗಲೇ ಪ್ಯಾಕ್ ಮಾಡಿ!

ಕೂರ್ಗ್

ಕೂರ್ಗ್

ಕೂರ್ಗ್ ಅನ್ನು 'ಭಾರತದ ಸ್ಕಾಟ್ಲೆಂಡ್' ಎಂದು ಕರೆಯಲಾಗುತ್ತದೆ, ಇಲ್ಲಿನ ವಾತಾವರಣ ಅದ್ಬುತವಾಗಿದ್ದು ಪಶ್ಚಿಮ ಘಟ್ಟಗಳಿಂದ ಆವೃತವಾದ ಈ ಗಿರಿಧಾಮವನ್ನು ಎಂದಿಗೂ ಮಿಸ್ ಮಾಡಿಕೊಳ್ಳಬಾರದು. ಇಲ್ಲಿನ ಆಹ್ಲಾದಕರ ಹವಾಮಾನವು ಬೇಸಿಗೆಯಲ್ಲಿ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ; ಜನರು ಇಲ್ಲಿ ಸಾಕಷ್ಟು ಅನ್ವೇಷಿಸಬಹುದು ಮತ್ತು ಕೂರ್ಗ್‌ನ ಅನೇಕ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದು.

ಚಿಕ್ಕಮಗಳೂರು

ಚಿಕ್ಕಮಗಳೂರು

ತಾಜಾ ಗಾಳಿ ಮತ್ತು ಕಾಫಿಯ ಸುವಾಸನೆ ಖಂಡಿತವಾಗಿಯೂ ನಿಮ್ಮನ್ನು ಚಿಕ್ಕಮಗಳೂರಿಗೆ ಕೈಬೀಸಿ ಕರೆಯುತ್ತದೆ. ಕಾಫಿ ಎಸ್ಟೇಟ್ಗಳು, ಜಲಪಾತಗಳು ಮತ್ತು ಗಿರಿಧಾಮಗಳ ಸುತ್ತಲೂ ಅಡ್ಡಾಡುವುದು ಖಂಡಿತವಾಗಿಯೂ ಬೇಸಿಗೆಯಲ್ಲಿ ನಿಮ್ಮನ್ನು ಆಕ್ರಮಿಸಿಕೊಳ್ಳುತ್ತದೆ. ಈ ಬೇಸಿಗೆಯಲ್ಲಿ ನಿಮಗೆ ಬೇಕಾಗಿರುವುದು ಕೆಲವು ತಂಪಾದ ಹವಾಮಾನಕ್ಕೆ ಈ ತಾಣವು ಸೂಕ್ತವಾಗಿದೆ. ನೀವು ಇಲ್ಲಿ ಹಲವಾರು ಗಿರಿಧಾಮಗಳಿಗೆ ಭೇಟಿ ನೀಡಬಹುದು ಮತ್ತು ಚಿಕ್ಕಮಗಳೂರಿನಲ್ಲಿ ತಂಪಾದ ಗಾಳಿಯನ್ನು ಅನುಭವಿಸಬಹುದು.

ಕೊಡಾಚಾದ್ರಿ

ಕೊಡಾಚಾದ್ರಿ

ನೈಸರ್ಗಿಕ ಅದ್ಭುತವಾದ ಕೊಡಚಾದ್ರಿ ಬೆಟ್ಟಗಳು ಬೇಸಿಗೆ ಪ್ರಯಾಣಕ್ಕೆ ಉತ್ತಮ ಸ್ಥಳಗಳಲ್ಲಿ ಒಂದಾಗಿದೆ. ಇದು ದಟ್ಟವಾದ ಕಾಡಿನಿಂದ ಆವೃತವಾಗಿದೆ, ಹೀಗಾಗಿ ಹಸಿರು ಹೊದಿಕೆಯು ಆಹ್ಲಾದಕರ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕೊಡಚಾದ್ರಿ ಮಳೆಗಾಲದ ನಂತರದ ಟ್ರೆಕಿಂಗ್ ಗೆ ಉತ್ತಮ ತಾಣವಾಗಿದೆ. ನಿಮ್ಮನ್ನು ತಂಪುಗೊಳಿಸಲು ಇದು ಒಂದು ಆದರ್ಶ ತಾಣಗಳಲ್ಲಿ ಒಂದಾಗಿದೆ.

ನಂದಿ ಬೆಟ್ಟಗಳು

ನಂದಿ ಬೆಟ್ಟಗಳು

ನಂದಿ ಹಿಲ್ಸ್ ಬೆಂಗಳೂರಿನಿಂದ ಅತ್ಯಂತ ಜನಪ್ರಿಯ ಸ್ಥಳವಾಗಿದೆ. ಜನರು ಈ ಸಣ್ಣ ಗಿರಿಧಾಮವನ್ನು ವರ್ಷಪೂರ್ತಿ ಭೇಟಿ ನೀಡುತ್ತಾರೆ. ನಗರದಿಂದ ಈ ಸುಂದರವಾದ ಸ್ಥಳಕ್ಕೆ ಒಂದು ದಿನದ ಪ್ರವಾಸವನ್ನು ಮಾಡಲು ಅನೇಕರು ಇಷ್ಟ ಪಡುತ್ತಾರೆ. ನಂದಿ ಬೆಟ್ಟ ಬೇಸಿಗೆಯ ಕಾಲದಲ್ಲಿ ಹೆಚ್ಚು ಆಹ್ಲಾದಕರ ವಾತಾವರಣವನ್ನು ಹೊಂದಿದ್ದು, ನೀವು ಮತ್ತೆ ಮತ್ತೆ ಭೇಟಿ ನೀಡುವಂತೆ ಮಾಡುತ್ತದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನ

ನಾಗರಹೊಳೆ ರಾಷ್ಟ್ರೀಯ ಉದ್ಯಾನ

ಅರಣ್ಯಗಳು ಸೂರ್ಯನ ಬಲವಾದ ಕಿರಣಗಳನ್ನು ನೇರವಾಗಿ ಭೂಮಿಗೆ ಬೀಳುವುದನ್ನು ತಡೆಯುತ್ತವೆ. ಆದ್ದರಿಂದ, ಬೇಸಿಗೆಯಲ್ಲಿ ತಂಪಾಗಿರಲು ಕಾಡುಗಳು ಅತ್ಯುತ್ತಮ ತಾಣಗಳಾಗಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಅಗಾಧವಾದ ಹಸಿರು ಹೊದಿಕೆಯಿಂದ ಆವೃತವಾದ ಉನ್ನತ ವನ್ಯಜೀವಿ ತಾಣಗಳಲ್ಲಿ ಒಂದಾಗಿದೆ. ಅನೇಕ ಪ್ರವಾಸಿಗರು ಮಾರ್ಚ್-ಮೇ ಅವಧಿಯಲ್ಲಿ ಈ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲು ಇಷ್ಟಪಡುತ್ತಾರೆ. ಆದ್ದರಿಂದ ಈ ರಾಷ್ಟ್ರೀಯ ಉದ್ಯಾನವನ್ನು ಭೇಟಿ ಮಾಡಲು ನಿಮ್ಮ ಬ್ಯಾಗ್ಗಳನ್ನು ಪ್ಯಾಕ್ ಮಾಡಿ!

ಹಾಸನ

ಹಾಸನ

ಹಾಸನ ಒಂದು ಸುಂದರ ಸ್ಥಳವಾಗಿದ್ದು, ಇದು ವರ್ಷದುದ್ದಕ್ಕೂ ತಂಪಾದ ವಾತಾವರಣವನ್ನು ಹೊಂದಿರುತ್ತದೆ. ಬೇಸಿಗೆಯಲ್ಲಿ ಸಹ ಹವಾಮಾನವು ತಂಪಾಗಿರುತ್ತದೆ ಮತ್ತು ಪ್ರಯಾಣಕ್ಕೆ ಸೂಕ್ತವಾಗಿರುತ್ತದೆ. ಹಾಸನವು ಅನೇಕ ಪ್ರವಾಸಿ ಸ್ಥಳಗಳನ್ನು ಹೊಂದಿದೆ ಮತ್ತು ಯಾವುದೇ ಸಮಯದಲ್ಲಿ (ಮಳೆಗಾಲವನ್ನು ಹೊರತುಪಡಿಸಿ) ಭೇಟಿ ನೀಡಲು ಯೋಗ್ಯವಾಗಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನ

ಬಂಡೀಪುರ ರಾಷ್ಟ್ರೀಯ ಉದ್ಯಾನ

ಬಂಡೀಪುರ ರಾಷ್ಟ್ರೀಯ ಉದ್ಯಾನವು ಕರ್ನಾಟಕದ ಸುಂದರವಾದ ವನ್ಯಜೀವಿ ತಾಣಗಳಲ್ಲಿ ಒಂದಾಗಿದೆ. ಈ ಮೀಸಲು ಪ್ರದೇಶದಲ್ಲಿ ಹೇರಳವಾದ ಸಸ್ಯ ಮತ್ತು ಪ್ರಾಣಿಗಳಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಾರ್ಚ್-ಮೇ ತಿಂಗಳ ಸಮಯವು ಅನೇಕ ಸಂದರ್ಶಕರನ್ನು ಆಕರ್ಷಿಸುತ್ತದೆ. ಅರಣ್ಯ ಪ್ರದೇಶದಿಂದಾಗಿ ಹವಾಮಾನವು ಆಹ್ಲಾದಕರವಾಗಿರುತ್ತದೆ ಆದರೆ ನವೆಂಬರ್ ನಿಂದ ಫೆಬ್ರವರಿ ಈ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more