Search
  • Follow NativePlanet
Share
» »ದೇಶದಲ್ಲಿರುವ ಈ ಮಿನಾರ್‌ಗಳಲ್ಲಿ ಯಾವುದನ್ನೆಲ್ಲಾ ನೀವು ನೋಡಿದ್ದೀರಿ?

ದೇಶದಲ್ಲಿರುವ ಈ ಮಿನಾರ್‌ಗಳಲ್ಲಿ ಯಾವುದನ್ನೆಲ್ಲಾ ನೀವು ನೋಡಿದ್ದೀರಿ?

By Manjula Balaraj Tantry

ಮಿನಾರ್ ಸಾಮಾನ್ಯವಾಗಿ ಒಂದು ತೆಳುವಾದ ಗೋಪುರವಾಗಿದ್ದು ಇದು ಮಸೀದಿಯ ಒಂದು ಮಹತ್ವಪೂರ್ಣವಾದ ಭಾಗವಾಗಿರುತ್ತದೆ. ಅಥವಾ ಒಂದು ಸ್ಥಳದ ಮೇಲೆ ಕಾಣುವ ಕಟ್ಟಡವಾಗಿದೆ. ಭಾರತವು ಒಂದು ಅತ್ಯಂತ ಪ್ರಾಚೀನವಾದ ದೇಶವಾಗಿದ್ದು ಇದು ಅನೇಕ ಎತ್ತರವಾದ ಪ್ರಾಚೀನ ಕಾಲದ ಮಿನಾರ್ ಗಳಿಗೆ ನೆಲೆಯಾಗಿದೆ.

ಈ ಸುಂದರವಾದ ಗೋಪುರಗಳು ಇನ್ನೂ ಮತ್ತು ಅದರ ಸುತ್ತಲೂ ಸಂಭವಿಸುವ ಘಟನೆಗಳ ಕಥೆಗಳನ್ನು ಬಲವಾಗಿ ನಿರೂಪಿಸುತ್ತವೆ. ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಅತ್ಯಂತ ಜನಪ್ರಿಯ ಮಿನಾರ್ ಗಳ ಪಟ್ಟಿ ಹೀಗಿವೆ. ಅವುಗಳ ಪೈಕಿ ಸುಮಾರು 12ನೇ ಶತಮಾನಗಳಿಂದ ಹಿಡಿದು ಹೊಸತಾತಿ ರಚಿಸಲಾದ ಮಿನಾರ್ ಗಳ ವರೆಗೂ ಒಳಗೊಂಡಿದೆ. ಈ ಪಟ್ಟಿಯಲ್ಲಿ ಭಾರತದ ಅತ್ಯಂತ ಪ್ರಸಿದ್ದಿಯನ್ನು ಹೊಂದಿದ ಮಿನಾರ್ ಗಳನ್ನು ಹೊಂದಿದೆ.

ಕುತುಬ್ ಮಿನಾರ್

ಕುತುಬ್ ಮಿನಾರ್

PC- Sakeeb Sabakka

ಮಿನಾರ್ ಗಳ ಪಟ್ಟಿಯಲ್ಲಿ ಅತ್ಯಂತ ಪ್ರಸಿದ್ದವಾದ ಕುತುಬ್ ಮಿನಾರ್ ಅನ್ನು ಸೇರಿಸದೇ ಇರಲು ಸಾಧ್ಯವೇ ಇಲ್ಲ. ಭಾರತದ ಒಂದು ಅತ್ಯಂತ ಹಳೆಯ ಮಿನಾರ್ ಗಳಲ್ಲಿ ಒಂದಾದ ಇದು ಇದರ ಸುತ್ತಲೂ ಅನೇಕ ಐತಿಹಾಸಿಕ ಮಹತ್ವವನ್ನು ಒಳಗೊಂಡ ಕಟ್ಟಡಗಳನ್ನು ಹೊಂದಿದೆ.

ಕುತುಬ್ ಮಿನಾರ್ ಭಾರತದಲ್ಲಿಯ ಒಂದು ಅತ್ಯಂತ ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲೊಂದೆನಿಸಿದ್ದು ಇದು ದೆಹಲಿಯಲ್ಲಿದೆ ಇದನ್ನು 12ನೇ ಶತಮಾನದಲ್ಲಿ ಕಟ್ಟಲಾಯಿತು. ಇದು ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲೊಂದಾಗಿದೆ.

ಅಫಘಾನಿಸ್ಥಾನದ ಜಾಮ್ ಮಿನಾರಿನಿಂದ ಪ್ರೇರೇಪಿಸಲ್ಪಟ್ಟ ಕುತುಬ್ ಮಿನಾರ್ 240 ಅಡಿ ಎತ್ತರವಿದ್ದು ಇದು ಸುರುಳಿಯಾಕಾರದ 379 ಮೆಟ್ಟಿಲುಗಳನ್ನು ಹೊಂದಿದೆ. ಇದು ಮಿಂಚು ಮುಂತಾದ ಅನೇಕ ನೈಸರ್ಗಿಕ ವೈಪರೀತ್ಯಗಳಿಗೆ ಗುರಿಯಾಗಿದ್ದರೂ ಕೂಡಾ ಕುತುಬ್ ಮಿನಾರ್ ನ ಒಟ್ಟಾರೆ ಸೌಂದರ್ಯವು ಇನ್ನೂ ಮಾಸಿಲ್ಲ. ಇದಕ್ಕೆ ಸಾಕ್ಷಿಯಾಗಿ ಕುತುಬ್ ಮಿನಾರ್ ನ ಸಂಕೀರ್ಣದಲ್ಲಿ ಪ್ರತೀ ದಿನ ಎಲ್ಲಾ ಕಡೆ ಕಾಣ ಸಿಗುವ ನೂರಾರು ಪ್ರವಾಸಿಗರನ್ನು ಇಲ್ಲಿ ಕಾಣಬಹುದಾಗಿದೆ.

ಜೂಲ್ತಾ ಮಿನಾರ್

ಜೂಲ್ತಾ ಮಿನಾರ್

PC- Palak gajrawala

ಝುಲ್ತಾ ಮಿನಾರ್, ಸಿದಿ ಬಶೀರ್ ಮಸೀದಿ ಎಂದು ಕರೆಯಲ್ಪಡುವ ಪುರಾತನ ಮಸೀದಿಯ ಭಾಗವಾಗಿರುವ ಎರಡು ಮಿನಾರ್ ಗಳ ಒಂದು ಗುಂಪಾಗಿದ್ದು 15 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇಂದು ಈ ಮಸೀದಿ ಶಿಥಿಲಗೊಂಡಿರುವ ಸ್ಥಿತಿಯಲ್ಲಿದೆಯಾದರೂ ಕಳೆದ ಕೆಲವು ದಶಕಗಳಿಂದ ಅಸಂಖ್ಯಾತ ಪ್ರವಾಸಿಗರನ್ನು ಮತ್ತು ಇತಿಹಾಸಕಾರರನ್ನು ಆಕರ್ಷಿಸುವ ಆಕರ್ಷಣೆಯ ಕೇಂದ್ರವಾಗಿದ್ದು ಇದು ಇನ್ನೂ ತಮ್ಮ ಸೌಂದರ್ಯತೆಯನ್ನು ಉಳಿಸಿಕೊಂಡಿದೆ.

ಚಾರ್ ಮಿನಾರ್

ಚಾರ್ ಮಿನಾರ್

PC- Abhinaba Basu

ನಿಸ್ಸಂದೇಹವಾಗಿಯೂ, ಜಗತ್ತಿನ ಅತ್ಯಂತ ಮಿನಾರ್ ಗಳಲ್ಲಿ ಒಂದಾಗಿರುವ ಚಾರ್ ಮಿನಾರ್ ತೆಲಂಗಾಣ ರಾಜ್ಯದ ಹೈದರಾಬಾದಿನ ಮಧ್ಯ ಭಾಗದಲ್ಲಿದೆ. ಇದೊಂದು ದೊಡ್ಡದಾದ ಮಸೀದಿಯಾಗಿದ್ದು ಪ್ರತೀ ಭಾಗದಲ್ಲೂ ನಾಲ್ಕು ಮಿನಾರ್ ಗಳನ್ನು ಹೊಂದಿದೆ ಮತ್ತು 1591 ರಲ್ಲಿ ಕುತುಬ್ ಶಹಾ ಅವರ ಆಡಳಿತದ ಅವಧಿಯಲ್ಲಿ ನಿರ್ಮಿಸಲಾಯಿತು.

ಇಂದು, ಚಾರ್ಮಿನಾರ್ ಒಂದು ಜಾಗತಿಕ ಮಟ್ಟದಲ್ಲಿಯ ಪ್ರಸಿದ್ದಿಯನ್ನು ಪಡೆದ ಸ್ಮಾರಕ ಎನಿಸಿದ್ದು ಅದರ ಶಾಶ್ವತವಾದ ಸೌಂದರ್ಯ ಮತ್ತು ವಾಸ್ತುಶಿಲ್ಪದ ಅದ್ಭುತದ ಕಾರಣದಿಂದಾಗಿ ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದೆ. ಚಾರ್ ಮಿನಾರ್ ನ ರಚನೆಯ ಕುರಿತಾದ ಸ್ಪಷ್ಟವಾದ ಮಾಹಿತಿ ದೊರೆತಿಲ್ಲವಾದರೂ ಕಾಲರಾವನ್ನು , ಈ ಸಮಯದಲ್ಲಿ ಈ ಪ್ರಾಂತ್ಯದುದ್ದಕ್ಕೂ ಹರಡಿದ್ದ ಕಾಲರಾ ರೋಗವು ನಿರ್ಮೂಲನೆ ಮಾಡಲಾದ ಸಂತೋಷಕ್ಕಾಗಿ ಚಾರ್ ಮಿನಾರನ್ನು ನಿರ್ಮಿಸಲಾಯಿತು ಎಂದು ನಂಬಲಾಗುತ್ತದೆ. ಪ್ರಾಚೀನ ಸೌಂದರ್ಯದ ಅನ್ವೇಷಣೆಗಾಗಿ ಈ ಋತುವಿನಲ್ಲಿ ಚಾರ್ ಮಿನಾರ್ ಭೇಟಿ ಹೇಗಿರಬಹುದು?

ಫತೇ ಬುರ್ಜ್

ಫತೇ ಬುರ್ಜ್

PC- Narendra Kashyap

ಇದನ್ನು ವಿಜಯದ ಗೋಪುರವೆಂದೂ ಕರೆಯಲಾಗುತ್ತದೆ. ಫತೇ ಬುರ್ಜ್ ಒಂದು ಹೊಸದಾಗಿ ನಿರ್ಮಿತವಾದ ಮಿನಾರ್ ಆಗಿದೆ ಮತ್ತು ಪಂಜಾಬ್ ರಾಜ್ಯದ ಪ್ರಾಚೀನ ಹಳ್ಳಿಯಾದ ಚಪ್ಪರ್ ಚಿರಿ ಯಲ್ಲಿ ನೆಲೆಸಿದೆ. ಈ ಪ್ರದೇಶದಲ್ಲಿ ಮೊಘಲ್ ಸಾಮ್ರ್ಯಾಜ್ಯದ ಆಡಳಿತದ ಅಧಪತನದ ನಂತರ ಹಾಗೂ ಸಿಖ್ಖರ ಗೆಲುವಿನ ಸ್ಮರಣಾರ್ಥವಾಗಿ ಇದನ್ನು ನಿರ್ಮಿಸಲಾಯಿತು,

328 ಅಡಿ ಎತ್ತರವಿರುವ ಫತೇ ಬುರ್ಜ್ ಕೂಡಾ ಭಾರತದ ಅತ್ಯಂತ ಎತ್ತರವಾದ ಮಿನಾರ್ ಎನಿಸಿದೆ. ಈ ಸ್ಮಾರಕದಿಂದ ರಾತ್ರಿ ಹೊತ್ತಿನ ಒಂದು ನೋಟವು ತಪ್ಪಿಸಲೇ ಬಾರದಂತಹುದಾಗಿದೆ. ಫತೇ ಬುರ್ಜ್ ನ ಮೋಡಿ ಮಾಡುವ ಮತ್ತು ಸೆರೆ ಮುಂಜಾನೆ ಮತ್ತು ಮುಸ್ಸಂಜೆಯ ಸೆರೆ ಹಿಡಿಯುವಂತಹ ಸೌಂದರ್ಯವು ಅತ್ಯಂತ ನಯನ ಮನೋಹರವಾದುದಾಗಿದೆ.

ಚಾಂದ್ ಮಿನಾರ್

ಚಾಂದ್ ಮಿನಾರ್

PC- Sankarshan Mukhopadhyay

ಚಾಂದ್ ಮಿನಾರ್ ಮಹಾರಾಷ್ಟ್ರ ರಾಜ್ಯದ ದೌಲತಾ ಬಾದಿನಲ್ಲಿ ನೆಲೆಸಿದ್ದು ಇದರ ಇತಿಹಾಸವು 14ನೇ ಶತಮಾನಕ್ಕೆ ಸೇರಿದುದು ಎಂದು ಪರಿಗಣಿಸಲಾಗಿದೆ. ಇದನ್ನು 1445 ರಲ್ಲಿ ಅಲಾ-ಉದ್- ದಿನ್ ಬಹ್ ಮನಿಯಿಂದ ನಿರ್ಮಿಸಲಾಯಿತು.

ಈ ಕೋಟೆಯ ಎಲ್ಲಾ ಪ್ರದೇಶವನ್ನು ತನ್ನ ಹಿಡಿತಕ್ಕೆ ಒಳಪಡಿಸಿಕೊಂಡ ವಿಜಯದ ಸಂಕೇತವಾಗಿ ಇದನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. 210 ಅಡಿ ಎತ್ತರ ಮತ್ತು 70 ಅಡಿ ಸುತ್ತಳತೆ ಹೊಂದಿರುವ ಚಾಂದ್ ಮಿನಾರ್ ಭಾರತದ ಅತಿ ಎತ್ತರವಾದ ಗೋಪುರಗಳಲ್ಲಿ ಒಂದಾಗಿದೆ.

ಇದನ್ನು ಮೂಲತಃ ಪರ್ಷಿಯನ್ ಅಂಚುಗಳಿಂದ ಅಲಂಕರಿಸಲಾಗಿತ್ತು. ಹಲವಾರು ದಾಳಿಯ ಸಂದರ್ಭದಲ್ಲಿ, ಚಾಂದ್ ಮಿನಾರ್ ನ ಸೌಂದರ್ಯವು ಮರೆಯಾದರೂ ಇಂದು, ಇದು ದೌಲಾತಾಬಾದಿನಲ್ಲಿರುವ ಒಂದು ಪ್ರಮುಖ ಪ್ರವಾಸಿ ತಾಣವಾಗಿದ್ದು ದೇಶಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

Read more about: ಭಾರತ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more