Search
  • Follow NativePlanet
Share
» »ಹನಿಮೂನ್ ಪ್ರವಾಸಕ್ಕಾಗಿ 5 ರೋಮ್ಯಾಂಟಿಕ್ ಸ್ಥಳಗಳು

ಹನಿಮೂನ್ ಪ್ರವಾಸಕ್ಕಾಗಿ 5 ರೋಮ್ಯಾಂಟಿಕ್ ಸ್ಥಳಗಳು

ಮದುವೆಯೆಂದರೆ ಒಂದು ಸಮಾರಂಭವಲ್ಲ. ಅದು ಗಂಡು ಹೆಣ್ಣಿನ ನಡುವೆ ಸಾಯುವವರೆವಿಗೂ ಭಧ್ರವಾಗಿ ಬೆಸೆಯುವ ಸಂಬಂಧ. ಇಂತಹ ಪವಿತ್ರ ಸಂಬಂಧವನ್ನು ಗಟ್ಟಿಗೊಳಿಸಲು ದಂಪತಿಗಳು ಕೆಲವು ಪ್ರದೇಶಗಳಿಗೆ ಹೋಗುವುದುಂಟು. ಇದರಿಂದ ಇಬ್ಬರ ನಡುವೆ ಇರುವ ಹಲವಾರು ಅಭಿರುಚಿಗಳನ್ನು ಒಬ್ಬರಿಗೊಬ್ಬರು ತಿಳಿದುಕೊಳ್ಳಬಹುದಾಗಿದೆ.

ಸಾಮಾನ್ಯವಾಗಿ ಲವ್ ಮ್ಯಾರೆಜ್ ಮಾಡಿಕೊಂಡಿರುವವರು ಮೊದಲೇ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡಿರುತ್ತಾರೆ. ಆದರೆ ಕುಟುಂಬಿಕರು ಒಪ್ಪಿ ನಡೆಸುವ ಮದುವೆಯಲ್ಲಿ ಅಷ್ಟಾಗಿ ಸಂಗಾತಿಗಳ ನಡುವೆ ಅಭಿರುಚಿಯ ಬಗ್ಗೆ ತಿಳಿಯದೇ ಇರಬಹುದು. ಹನಿಮೂನ್ ಎಂದರೇ ಕೇವಲ ರಜಾ ದಿನಗಳಲ್ಲ ಬದಲಾಗಿ ನಿಮ್ಮ ಸಂಗಾತಿಯನ್ನು ಪರಸ್ಪರ ಅರ್ಥ ಮಾಡಿಕೊಳ್ಳುವುದೇ ಆಗಿದೆ.

ಈ ಮಧುರವಾದ ಸಂಬಂಧವು ಕೆಲವು ಸುಂದರವಾದ ಪ್ರದೇಶಗಳಲ್ಲಿ ಪ್ರಾರಂಭಿಸಬೇಕು ಎಂಬುದು ಪ್ರತಿಯೊಬ್ಬರ ಬಯಕೆಯಾಗಿದೆ. ಅಂತಹ ಸುಮಧುರವಾದ ಮಧುಚಂದ್ರದ 5 ಪ್ರದೇಶಗಳು ನಿಮ್ಮ ಜೀವನ ಸಂಗಾತಿಯೊಂದಿಗೆ ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುತ್ತದೆ.

ಅಂತಹ ಸುಂದರವಾದ 5 ಹನಿಮೂನ್ ಸೂಕ್ತವಾದ ಪ್ರದೇಶಗಳ ಬಗ್ಗೆ ಲೇಖನದ ಮೂಲಕ ತಿಳಿಯಿರಿ.

ಗೋವಾ

ಗೋವಾ

ಗೋವಾದ ಬಗ್ಗೆ ಹೆಚ್ಚು ವಿವರಣೆಯ ಅಗತ್ಯವಿಲ್ಲ ಏಕೆಂದರೆ ಯುವಕರ ಫೆವರೆಟ್ ಪ್ಲೆಸ್‍ಗಳಲ್ಲಿ ಗೋವಾ ಫಸ್ಟ್. ಗೋವಾ ಕೇವಲ ಸ್ನೇಹಿತರ ಜೊತೆ ಏನ್‍ಜಾಯ್ ಮಾಡುವ ಸ್ಥಳವೇ ಅಲ್ಲದೇ ಸಂಗಾತಿಯೊಂದಿಗೂ ಕಾಲ ಕಳೆಯಲು ಸೂಕ್ತವಾದ ತಾಣ. ಗೋವಾ ಭಾರತದ ಅತ್ಯಂತ ಜನಪ್ರಿಯ ಹನಿಮೂನ್ ಪ್ಲೆಸ್ ಆಗಿದೆ.

ಶಾಂತಿಯುತವಾದ ವಾತಾವರಣ, ತಂಪಾದ ಗಾಳಿ, ಸುಂದರವಾದ ಬೀಚ್‍ಗಳು, ನೀರಿನ ಕೆಲವು ಆಟಗಳು ನಿಮಗೆ ಇಷ್ಟವಾಗದೇ ಇರದು. ಇಲ್ಲಿನ ಹಲವು ಭವ್ಯವಾದ ಕಟ್ಟಡಗಳು, ಸಮುದ್ರ ಮೀನಿನ ಆಹಾರಗಳು, ವೈಭವದಿಂದ ಕೂಡಿರುವ ಹೋಟೆಲ್‍ಗಳು ಇವೆಲ್ಲಾ ಸಂಗಾತಿಯೊಂದಿಗೆ ಅನುಭವ ಹೊಂದಲು ಇನ್ನಷ್ಟು ಸುಂದರವಾಗಿರುತ್ತದೆ. ಈ ಸುಂದರವಾದ ಗೋವಾದ ಪ್ರದೇಶದಲ್ಲಿ ನಿಮ್ಮ ಸಂಗಾತಿಗೆ ಮತ್ತೊಮ್ಮೆ "ಐ ಲವ್ ಯು" ಎಂದು ಹೇಳುವ ಆ ಸಮಯ ಜೀವನದಲ್ಲಿ ಎಂದೂ ಮರೆಯಲಾಗದ ಸಿಹಿ ನೆನೆಪಾಗದೇ ಇರದು.


pc:: Ian D. Keating

ಕೇರಳ(ಮುನ್ನಾರ್)

ಕೇರಳ(ಮುನ್ನಾರ್)

ಹನಿಮೂನ್‍ಗೆ ಮತ್ತೊಂದು ಸುಂದರವಾದ ತಾಣವೆಂದರೆ ಅದು ಕೇರಳದ ಮುನ್ನಾರ್. ಇಲ್ಲಿ ಸುಂದರವಾದ ಕಾಫಿ ತೋಟಗಳು, ಪರ್ವತಗಳು ಮತ್ತು ಸರೋವರಗಳು ಮನಸ್ಸಿಗೆ ಮುದ ನೀಡುತ್ತದೆ. ಕೇರಳದ ಮೋಡಿ ನಿಮಗೆ ಮತ್ತಷ್ಟು ಸಂತೋಷವನ್ನು ಉಂಟು ಮಾಡುತ್ತದೆ.

ಇಲ್ಲಿ ದೋಣಿಯ ಮೂಲಕ ತೆರಳುವ ಸುಖವನ್ನು ಅನುಭವಿಸಬಹುದು. ಮುನ್ನಾರ್ ಮೂರು ಪರ್ವತದ ತೊರೆಗಳಾದ ಮುದುಪುಳ, ನಲ್ಲತನ್ನಿ ಮತ್ತು ಕೂಡಲ ಸಂಗಮ. ಇಲ್ಲಿ ಒಂದು ಸುಂದರವಾದ ಅರಣ್ಯ ಪ್ರದೇಶವಿದೆ. ಇಲ್ಲಿ ಮಟ್ಟುಪೆಟ್ಟಿ ಡ್ಯಾಮ್, ಕುಂದಲ ಸರೋವರ, ಟಾಪ್ ಸ್ಟೇಷನ್, ಏಕೋ ಪಾಯಿಂಟ್, ರಾಜಾ ಮಾಲಯಿ, ಟೀ ಮ್ಯೂಸಿಯಂ, ಇನ್ನೂ ಹಲವಾರು ಸುಂದರವಾದ ಪ್ರದೇಶಗಳಿಗೆ ನಿಮ್ಮ ಸಂಗಾತಿಯೊಂದಿಗೆ ಏಕಾಂತವಾಗಿ ಕಳೆಯಬಹುದಾಗಿದೆ.


PC:Travelling Slacker

ಕಾಶ್ಮೀರ್

ಕಾಶ್ಮೀರ್

ಕಾಶ್ಮೀರವನ್ನು ಭಾರತದಲ್ಲಿನ ಅತ್ಯಂತ ಸುಂದರವಾದ ತಾಣವಾಗಿದೆ. ಕಾಶ್ಮೀರದ ವಾತಾವರಣ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಅಲ್ಲಿನ ಚಳಿ ಹಾಗೂ ಮಂಜಿಗೆ ಸಂಗಾತಿಯೊಂದಿಗಿರಲು ಮತ್ತಷ್ಟು ರಮಣೀಯವಾಗಿರುತ್ತದೆ. ಕಾಶ್ಮೀರ ಹನಿಮೂನ್‍ಗೆ ಸೂಕ್ತವಾದ ಸ್ಥಳವಾಗಿದೆ. ಹಿಮದಿಂದ ಕೂಡಿದ ವಾತಾವರಣ ಅಂತಹ ಸಮಯದಲ್ಲಿ ಬೆಂಕಿಯ ಮುಂದೆ ಸ್ನೇಹಶೀಲವಾಗಿ ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಕಳೆಯಬಹುದಾಗಿದೆ.

ಇಲ್ಲಿನ ವಾತಾವರಣವು ಹಿಮದ ಮಳೆ, ಬೆಚ್ಚಗಿನ ಪರ್ವತಗಳು, ಕಾಡು ಹೂವುಗಳ ಸಾಲು ಮತ್ತು ಅದ್ಭುತವಾದ ದಾಲ್ ಸರೋವರವನ್ನು ಕಾಣಬಹುದಾಗಿದೆ. ಕಾಶ್ಮೀರದ ಸೌಂದರ್ಯವು ನಿಮ್ಮನ್ನು ಮಂತ್ರ ಮುಗ್ಧರನ್ನಾಗಿಸದೆ ಇರದು. ಪ್ರಕೃತಿಯೊಡನೆ ನಿಮ್ಮ ಹನಿಮೂನ್ ಪ್ರವಾಸ ಮತ್ತಷ್ಟು ಸುಖಕರವಾಗಿರುತ್ತದೆ. ಗೊಂಡೊಲಾದಲ್ಲಿ ಸವಾರಿಯನ್ನು ಮಾಡಿ, ಶ್ರೀ ನಗರದಲ್ಲಿನ ದಾಲ್ ಸರೋವರದಲ್ಲಿ ನೌಕಯಾನ ನಡೆಸಿ, ಇನ್ನೂ ಹಲವಾರು ತಾಣಗಳಿಗೆ ಒಮ್ಮೆ ಭೇಟಿ ಕೊಡಿ.


PC:Colin Tsoi

ರಾಜಸ್ಥಾನ (ಉದಯಪುರ್)

ರಾಜಸ್ಥಾನ (ಉದಯಪುರ್)

ರಾಜಸ್ಥಾನವು ಮರುಭೂಮಿಯ ಒಂದು ಸುಂದರವಾದ ವಾತಾವರಣ. ಇಲ್ಲಿನ ವಾತಾವರಣವು ನಿಮ್ಮನ್ನು ರಾಜ ರಾಣಿಯರಂತೆ ಸ್ವಾತಿಗತಿಸುತ್ತಿದೆ ಈ ಸ್ಥಳ. ಇಲ್ಲಿನ ವೈಭವವನ್ನು ನೋಡಲೇ ಅನುಭವಿಸಬೇಕು. ಇಲ್ಲಿ ಸಂಪ್ರದಾಯಿಕ ಅರಮನೆಗಳು, ವಸ್ತು ಸಂಗ್ರಹಾಲಯಗಳು ಮತ್ತು ಸುಂದರವಾದ ಸರೋವರಗಳು ರಾಜಸ್ಥಾನದ ಉದಯಪುರದ ವೈಭವ. ಭಾರತದ ಅತ್ಯಂತ ರೋಮ್ಯಾಂಟಿಕ್ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ.

ಉದಯಪುರದ ಹೋಟೆಲ್ ಅತ್ಯಂತ ಪ್ರಸಿದ್ಧಿ ಹಾಗೂ ದುಬಾರಿಯಾಗಿದ್ದು, ಇಲ್ಲಿ ಹಲವಾರು ನವ ಜೋಡಿಗಳು ಹಾಗೂ ಮದುವೆ ಸಮಾರಂಭಗಳು ನಡೆಯುತ್ತವೆ. ರಾಜಸ್ಥಾನ ಸಂಸ್ಕøತಿಯ ಕಲಾ ದೃಶ್ಯಗಳನ್ನು ಇಲ್ಲಿ ನಿಮಗೆ ನೆನೆಪಿಸುತ್ತದೆ. ಇಲ್ಲಿ ಪಿಚೋಲಾ ಸರೋವರವಿದೆ. ಸೂರ್ಯಾಸ್ತದ ಸಮಯದಲ್ಲಿ ನಿಮ್ಮ ಸಂಗಾತಿಯ ಜೊತೆ ಬೋಟ್ ಕ್ರೂಸ್ ತೆಗೆದುಕೊಳ್ಳಿ.

PC:naishh

ಆಂಧ್ರ ಪ್ರದೇಶ, ವಿಶಾಖಪಟ್ಟಣಂ

ಆಂಧ್ರ ಪ್ರದೇಶ, ವಿಶಾಖಪಟ್ಟಣಂ

ಆಂಧ್ರ ಪ್ರದೇಶ ನಮ್ಮ ಕರ್ನಾಟಕಕ್ಕೆ ಹತ್ತಿರವಾಗಿರುವ ರಾಜ್ಯ. ಇಲ್ಲಿಯೂ ಕೂಡ ಅತ್ಯಂತ ಸುಂದರವಾದ ರೋಮ್ಯಾಂಟಿಕ್ ವಾತಾವರಣವಿದೆ. ವಿಶಾಖ ಪಟ್ಟಣವನ್ನು ವೈಜಾಗ್ ಎಂಬ ಹೆಸರಿನಿಂದಲೂ ಕೂಡ ಕರೆಯಲಾಗುತ್ತದೆ. ವಿಶಾಖ ಪಟ್ಟಣವು ಆಂಧ್ರ ಪ್ರದೇಶದ ಅತಿ ದೊಡ್ಡ ರಾಜ್ಯವಾಗಿದೆ.

ವೈಜಾಗ್‍ನಲ್ಲಿ ಒಂದು ಸುಂದರವಾದ ಪಟ್ಟಣವಾಗಿದ್ದು, ಸಾಕಷ್ಟು ಪ್ರಖ್ಯಾತಿ ಪಡೆದಿದೆ. ಇಲ್ಲಿ ಕೂಡ ಅತ್ಯಂತ ಸುಂದರವಾದ ಬೀಚ್‍ಗಳನ್ನು ಹೊಂದಿದೆ. ಇಲ್ಲಿ ಹಲವಾರು ದೇಶ ವಿದೇಶಗಳಿಂದಲೂ ಕೂಡ ಪ್ರವಾಸಿಗರು ಭೇಟಿ ನೀಡುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಉತ್ತಮವಾದ ಸ್ಥಳಗಳಲ್ಲಿ ಇದೂ ಕೂಡ ಒಂದು.


PC:Raj

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more