Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಶ್ಮೀರ » ಹವಾಮಾನ

ಕಾಶ್ಮೀರ ಹವಾಮಾನ

ಮಾರ್ಚ್ ತಿಂಗಳಿಂದ ಅಕ್ಟೋಬರ್‌ ನಡುವಿನ ಅವಧಿ ಇಲ್ಲಿಗೆ ಭೇಟಿ ನೀಡಲು ಸಕಾಲ. ವಾತಾವರಣವೂ ಆಹ್ಲಾದಮಯವಾಗಿರುತ್ತದೆ. ಡಿಸೆಂಬರ್‌ ತಿಂಗಳಿಂದ ಮಾರ್ಚ್ ನಡುವಿನ ಕಾಲ ಚಳಿಗಾಲದ ಕ್ರೀಡೆ ಇಷ್ಟಪಡುವವರಿಗೆ ಸಕಾಲ. ಬರುವವರು ತಮ್ಮ ಆಸಕ್ತಿ ಆಧರಿಸಿ ದಿನ ಆಯ್ಕೆ ಮಾಡಿಕೊಳ್ಳಬಹುದು.

ಬೇಸಿಗೆಗಾಲ

(ಮೇ ನಿಂದ ಆಗಸ್ಟ್‌): ಕಾಶ್ಮೀರದಲ್ಲಿ ಮೇ ತಿಂಗಳಿಂದ ಆಗಸ್ಟ್‌ ನಡುವೆ ಬೇಸಿಗೆ ಕಾಲ ಇರುತ್ತದೆ. ತಾಪಮಾನ ಗರಿಷ್ಠ 25 ಡಿಗ್ರಿ ಸೆಲ್ಶಿಯಸ್‌ ತಲುಪುತ್ತದೆ. ದೇಶದ ಇತರೆ ಭಾಗಕ್ಕೆ ಹೋಲಿಸಿದರೆ ಈ ಸಮಯ ಇಲ್ಲಿ ತಂಪು ವಾತಾವರಣ ಹೆಚ್ಚಿರುತ್ತದೆ. ಬೇಸಿಗೆಯು ಪ್ರವಾಸಿಗರ ಪಾಲಿಗೆ ಅತ್ಯಂತ ಪ್ರಶಸ್ತ ಸಮಯ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್‌): ಜುಲೈನಲ್ಲಿ ಇಲ್ಲಿ ಮಳೆಗಾಲ ಆರಂಭವಾಗುತ್ತದೆ. ಇದು ಮುಂದುವರಿದು ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ಸಾಮಾನ್ಯ ಪ್ರಮಾಣದಲ್ಲಿ ಮಳೆ ಆಗುತ್ತದೆ. ಈ ಸಂದರ್ಭ ಇತ್ತ ಬರುವವರಿಗೆ ಮಳೆಗಾಲದಲ್ಲಿ ಕೈಗೊಳ್ಳಬಹುದಾದ ಸಿದ್ಧತೆಯೊಂದಿಗೆ ಬರಲು ಸೂಚಿಸಲಾಗುತ್ತದೆ.

ಚಳಿಗಾಲ

(ಡಿಸೆಂಬರ್‌ನಿಂದ ಮಾರ್ಚ್): ಅಪಾರ ಚಳಿಯಿಂದ ಕೂಡಿದ ಕಾಲ ಇದು. ವರ್ಷದಲ್ಲೇ ಅತಿಹೆಚ್ಚು ಹಿಮಪಾತ ಆಗುವ ಸಮಯ. ನೋಡಲು ಅತ್ಯಂತ ಮಧುರವಾಗಿರುವ ಸನ್ನಿವೇಶ. ಟ್ರೆಕ್ಕಿಂಗ್‌ ಹಾಗೂ ಇತರೆ ಸಾಹಸ ಕ್ರಿಯೆಗೆ ಇದು ಸಕಾಲ.