Search
 • Follow NativePlanet
Share
ಮುಖಪುಟ » ಸ್ಥಳಗಳು» ಕಾಶ್ಮೀರ

ಕಾಶ್ಮೀರ: ಭೂಮಿಯ ಮೇಲಿನ ಸ್ವರ್ಗ

24

ಭೂಮಿಯ ಮೇಲೆ ಸ್ವರ್ಗ ಅನ್ನುವುದು ಇದೆ ಅಂದರೆ ಅದನ್ನೇ ಕಾಶ್ಮೀರ ಅನ್ನಬಹುದು. ಅಷ್ಟೊಂದು ಸುಂದರ ಪ್ರಕೃತಿದತ್ತ ತಾಣ ಇದಾಗಿದೆ. ನೈಸರ್ಗಿಕ ಸೌಂದರ್ಯವನ್ನು ಮೈವೆತ್ತಿಕೊಂಡಿರುವ ಈ ಭೂಪ್ರದೇಶವು, ದೇಶದ ವಾಯುವ್ಯ ದಿಕ್ಕಿನಲ್ಲಿದೆ. ಅತ್ಯಾಕರ್ಷಕ ಹಿಮಾಲಯ ಪರ್ವತಗಳಿಂದ ಕೂಡಿದ ತಾಣವಾಗಿರುವ ಇದು ಸಾಕಷ್ಟು ಕಣಿವೆಗಳನ್ನು ಒಳಗೊಂಡು ಸಮೃದ್ಧವಾಗಿದೆ. ಸ್ಥಳೀಯ ವಾಗ್ಮಿಗಳ ಪ್ರಕಾರ, ಕಾಶ್ಮೀರ ರಾಜ್ಯವು ಜನಪ್ರಿಯವಾಗಿರುವುದು ಜನಪ್ರಿಯ ಮುನಿ ಕಶ್ಯಪರಿಂದಾಗಿ. ಇವರು ಇಲ್ಲಿ ಬ್ರಾಹ್ಮಣರು ವಾಸಿಸುತ್ತಿದ್ದ ಸ್ಥಳದ ಕೆರೆಯೊಂದನ್ನು ಕುಗ್ಗಿಸಿ/ಒಣಗಿಸಿ ಅದರೊಳಗಿರುವ ಸುಂದರ ಭೂಮಿಯನ್ನು ಹೊರಪ್ರಕಟಗೊಳ್ಳುವಂತೆ ಮಾಡಿದರು. ಇದರಿಂದ ಕಾಶ್ಮೀರ ರಾಜ್ಯವು ಅಸ್ತಿತ್ವಕ್ಕೆ ಬಂದಿತೆಂದು ನಂಬಲಾಗಿದೆ.

ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಜಾರಿಬಾಲ್‌ ಮಸೀದಿ ನೋಡಲೇಬೇಕಾದ ತಾಣ. ಈ ಹಿಂದೆ ಇಸ್ರತ್‌ ಮಹಲ್‌ ಅಥವಾ ಸಾಜಿದ್‌ ಜಹಾನ್‌ರ 'ಪ್ಲೆಜರ್‌ ಹೌಸ್‌' ಅಂತ ಕರೆಸಿಕೊಳ್ಳುತ್ತಿತ್ತು. ಸಾಜಿದ್‌ ಜಹಾನ್‌ ಷಾಜಹಾನ್‌ ಸೈನ್ಯದಲ್ಲಿ ಅತ್ಯಂತ ಉನ್ನತ ದರ್ಜೆಯ ಅಧಿಕಾರಿ ಆಗಿದ್ದರು. ಈ ಕಟ್ಟಡವು ಜನಪ್ರಿಯ 'ದಾಲ್‌ ಕೆರೆ' ಯ ದಂಡೆಯಮೇಲಿದೆ. ಇಲ್ಲಿ ಜನಪ್ರಿಯ ಮುಸ್ಲಿಂ ಧರ್ಮಗುರು ಮೊಹಮ್ಮದ್‌ ಪೈಗಂಬರರ ಕೂದಲನ್ನು ಇರಿಸಲಾಗಿದೆ. ಇಲ್ಲಿರುವ ಮಸೀದಿ ಕೂಡ ಮೊಹಮ್ಮದ್‌ರಿಗೆ ಗೌರವ ಸಲ್ಲಿಸಲು ಅವರ ಅನುಯಾಯಿಗಳು ನಿರ್ಮಿಸಿದ್ದಾರೆ ಎನ್ನಲಾಗುತ್ತದೆ.

ಕಾಶ್ಮೀರದ ಅತ್ಯಂತ ಪುರಾತನ ಹಾಗೂ ಜನಪ್ರಿಯ ಮಂದಿರಗಳಲ್ಲಿ ದಿ ಚೇರ್‌-ಐ-ಷರೀಫ್‌ ಕೂಡ ಒಂದು. ಇದೊಂದು ಜನಪ್ರಿಯ ಪ್ರವಾಸಿ ತಾಣ. ಶ್ರೀನಗರದಿಂದ ಇದು 40 ಕಿ.ಮೀ. ದೂರದಲ್ಲಿದೆ. ಶೇಖ್‌ ನೂರ್‌-ಉದ್‌-ದೀನ್‌ರ ನೆನಪಿಗಾಗಿ ಈ ಮಂದಿರವನ್ನು ನಿರ್ಮಿಸಲಾಗಿದೆ. ಇವರು ಅತ್ಯಂತ ಜನಪ್ರಿಯ ಕಶ್ಮೀರಿ ಸೂಫಿ ಸಂತರು. ಇವರು ಜನರಿಗೆ ಸಸ್ಯಾಹಾರ, ಅಹಿಂಸೆ ಹಾಗೂ ಜಾತಿ ಸಾಮರಸ್ಯದ ಪಾಠವನ್ನು ಬೋಧಿಸಿದ್ದರು. ಷಾ ಅಹ್ಮನ್‌ ಅವರ ಖಾನ್ಖಾವು ಝೀಲಮ್ ನದಿ ದಂಡೆಯ ಮೇಲಿದೆ. ಇದು ಇನ್ನೊಂದು ಜನಪ್ರಿಯ ಪ್ರವಾಸಿ ತಾಣ. ಅತ್ಯಾಕರ್ಷಕ ನೇತಾಡುವ ಘಂಟೆಗಳು ಹಾಗೂ ಸುಂದರವಾಗಿ ಕೆತ್ತಲಾದ ಎಲೆಗಳು ಇಲ್ಲಿನ ಎರಡು ಪ್ರಮುಖ ಆಕರ್ಷಣೆಗಳು. ಇಲ್ಲಿನ ಮಂದಿರವು 1395 ರಲ್ಲಿ ನಿರ್ಮಾಣಗೊಂಡಿದ್ದು ಶಾಹ್‌ ಮಿರ್‌ ವಂಶದ ರಾಜ ಸುಲ್ತಾನ್‌ ಸಿಕಂದರ್‌ ನಿಂದ ನಿರ್ಮಿತವಾಗಿದೆ.

ಇಲ್ಲಿನ ಇನ್ನೊಂದು ಆಕರ್ಷಣೆ ಖೀರ್‌ ಭವಾನಿ ದೇವಾಲಯ. ಇದನ್ನು 1912 ರಲ್ಲಿ ಮಹಾರಾಜಾ ಪ್ರತಾಪ್‌ ಸಿಂಗ್‌ ನಿರ್ಮಿಸಿದ್ದರು. ಇದು ಶ್ರೀನಗರದಿಂದ 27 ಕಿ.ಮೀ. ದೂರದಲ್ಲಿದೆ. ಈ ದೇವಾಲಯದಲ್ಲಿ ಜನಪ್ರಿಯ ಹಿಂದು ದೇವತೆ ರಗ್ನಯ್ಯಾ ನೆಲೆಸಿದ್ದಾಳೆ. ನಂಬಿಕೆಗಳ ಪ್ರಕಾರ, ಹಿಂದು ದೇವರಾದ ರಾಮನು ತನ್ನ ಅಜ್ಞಾತವಾಸದ ಅವಧಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲು ಈ ಸ್ಥಳವನ್ನು ಬಳಸಿಕೊಳ್ಳುತ್ತಿದ್ದ. ಈ ದೇವಾಲಯಕ್ಕೆ ಖೀರ್‌ ಎಂಬ ಹೆಸರು ಕೂಡ ಜನಪ್ರಿಯ ಸಿಹಿ ಖಾದ್ಯ ಖಿರಿನಿಂದಾಗಿ ಬಂದಿದ್ದಾಗಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಹಾಲು ಕೊಟ್ಟು ಸತ್ಕರಿಸಲಾಗುತ್ತದೆ. ಸ್ಥಳೀಯರ ನಂಬಿಕೆ ಪ್ರಕಾರ, ಖೀರಿನ ಬಣ್ಣ ಸಾಮಾನ್ಯವಾಗಿ ಬೆಳ್ಳಗಿರುತ್ತದೆ. ಯಾವಾಗ ಇದು ಕಪ್ಪು ಬಣ್ಣಕ್ಕೆ ತಿರುಗುತ್ತದೊ ಅಂದು ಅನಿರೀಕ್ಷಿತ ಆಘಾತ ಎದುರಾಗಲಿದೆ.

ಶಂಕರಾಚಾರ್ಯ ಮಂದಿರವು ಇಲ್ಲಿನ ಇನ್ನೊಂದು ನೋಡಲೇಬೇಕಾದ ತಾಣ. ತಾಕತ್‌-ಎ-ಸುಲೈಮಾನ್‌ ಎಂಬ ಅತಿ ಎತ್ತರದ ಬೆಟ್ಟದ ಮೇಲೆ ಇದಿದೆ. ಮಾರ್ತಾಂಡ ಸೂರ್ಯ ದೇವಾಲಯವನ್ನು ಹಿಂದು ದೇವರಾದ ಸೂರ್ಯನಿಗಾಗಿ ನಿರ್ಮಿಸಿದ ದೇವಾಲಯವಾಗಿದೆ. ಭಾಸ್ಕರ ಎಂದೂ ಕೂಡ ಕೆರಸಿಕೊಳ್ಳುವ ಈ ದೇವರ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇದು ಅನಂತನಾಗ್‌ ಪಟ್ಟಣಕ್ಕೆ ಅತ್ಯಂತ ಸಮೀಪದಲ್ಲಿದೆ. ಈ ದೇಗುಲವನ್ನು ಸೂರ್ಯವಂಶದ ಅರಸು ಲಲಿತಾದಿತ್ಯ ನಿರ್ಮಿಸಿದ. ಇದನ್ನು ಈತನ ಅತ್ಯಂತ ಪ್ರಾಮಾಣಿಕ ಕೆಲಸಗಳಲ್ಲಿ ಒಂದು ಎಂದು ನಂಬಲಾಗುತ್ತದೆ.

ಶಿವಖೋರಿ ಎಂಬ ನೈಸರ್ಗಿಕ ಗುಹೆಯು ತೆಹ್ಸಿಲ್‌ ಎಂಬಲ್ಲಿದೆ. ರೇಶಿಯ ಕಾರ್ಯನಿರ್ವಹಣಾ ವಿಭಾಗವೂ ಇದಾಗಿದೆ. ಇಲ್ಲಿ ನೈಸರ್ಗಿಕವಾಗಿ ಶಿವಲಿಂಗ ನಿರ್ಮಾಣವಾಗಿದೆ. ಶಿವ ಇಲ್ಲಿನ ಆರಾಧ್ಯ ದೈವವಾಗಿದ್ದು, ಲಿಂಗ ಆತನ ಸೂಚಕವಾಗಿದೆ. ಜಮ್ಮುವಿನಿಂದ ಈ ತಾಣ 100 ಕಿ.ಮೀ. ದೂರದಲ್ಲಿದೆ. ಇದೇ ಗುಹೆಯಲ್ಲಿ ಮತ್ತೊಂದು ದೇವರಾದ ಶೇಷನಾಗ (ಸರ್ಪ ದೇವರು)ದ ಛಾಪು ಕೂಡ ಇದೆ. ಇಲ್ಲಿ ಶಿವನ ಜಡೆಯ ಕೂದಲಿನ ಸುತ್ತಿದ ಭಾಗವೂ ಇಲ್ಲಿ ಕಾಣುತ್ತದೆ.

ಅರಸು ಜಹಾಂಗೀರ್‌ ತನ್ನ ಪತ್ನಿ ನೂರ್‌ ಜಹಾನ್‌ಗೋಸ್ಕರ 1616 ರಲ್ಲಿ ನಿರ್ಮಿಸಿದ ಶಾಲಿಮಾರ್‌ ಉದ್ಯಾನ ಕಾಶ್ಮೀರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಇಲ್ಲಿನ ಇನ್ನೊಂದು ಉದ್ಯಾನ ಫೈಜ್‌ ಭಕ್ಷ್‌. ಈ ಹಿಂದೆ ಇದು ಇಲ್ಲಿನ ಶ್ರೀಮಂತ ಕುಟುಂಬದ ಮಹಿಳೆಯರ ಬಳಕೆಗೆ ಮೀಸಲಾಗಿತ್ತು. ನಾಲ್ಕನೆ ತಾರಸಿಯು ಅತ್ಯಂತ ಜನಪ್ರಿಯ ತಾಣವಾಗಿ ಈ ನಾಲ್ಕು ತಾರಸಿಯ ಉದ್ಯಾನದಲ್ಲಿ ಬಿಂಬಿತವಾಗಿದೆ. ಇದು ಟ್ಯಾಂಕ್‌ನ್ನು ಒಳಗೊಂಡಿದೆ. ಈ ಕೊಳದ ನಡುಭಾಗ ಕಪ್ಪು ಕಲ್ಲಿನಿಂದ ನಿರ್ಮಿಸಿದ್ದಾಗಿದೆ. ಬೆಳಕು ಮತ್ತು ಸಂಗೀತ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ. ಅದಕ್ಕಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಇಲ್ಲಿಗೆ ಬರುತ್ತಾರೆ.

ಕಾಶ್ಮೀರ ಪ್ರಸಿದ್ಧವಾಗಿದೆ

ಕಾಶ್ಮೀರ ಹವಾಮಾನ

ಉತ್ತಮ ಸಮಯ ಕಾಶ್ಮೀರ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕಾಶ್ಮೀರ

 • ರಸ್ತೆಯ ಮೂಲಕ
  ಜಮ್ಮು, ಕಾರ್ಗಿಲ್‌ ಹಾಗೂ ಸುತ್ತಲಿನ ಭಾಗಗಳಿಂದ ಕಾಶ್ಮೀರಕ್ಕೆ ಉತ್ತಮ ರಸ್ತೆ ಸಂಪರ್ಕ ಇದೆ. ರಾಷ್ಟ್ರೀಯ ಹೆದ್ದಾರಿ 1 ಎ ಶ್ರೀನಗರದಿಂದ ಜಮ್ಮುಗೆ ಸಂಪರ್ಕ ಕಲ್ಪಿಸುತ್ತದೆ. ಇದು ಈ ಮಾರ್ಗವಾಗಿಯೇ ಹಾದು ಹೋಗಿದ್ದು, ಸಾಕಷ್ಟು ಬಸ್‌, ಖಾಸಗಿ ವಾಹನ ಇಲ್ಲಿ ಹಾದು ಹೋಗುತ್ತವೆ. ಜಮ್ಮು- ಕಾಶ್ಮೀರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಜೆ&ಕೆಎಸ್‌ಆರ್‌ಟಿಸಿ) ಸಂಪರ್ಕವೂ ಉತ್ತಮವಾಗಿದೆ. ಪ್ರವಾಸಿಗರು ಖಾಸಗಿ ವಾಹನ ಪಡೆದು ಕೂಡ ಇಲ್ಲಿಗೆ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಜಮ್ಮುತಾವಿ ರೈಲು ನಿಲ್ದಾಣ ಕಾಶ್ಮೀರಕ್ಕೆ ಸಮೀಪದ ನಿಲ್ದಾಣವಾಗಿದೆ. ಕಾಶ್ಮೀರದಿಂದ ಇದು 305 ಕಿ.ಮೀ. ದೂರದಲ್ಲಿದೆ. ದೇಶದ ಪ್ರಮುಖ ನಗರಗಳಾದ ಕೋಲ್ಕತ್ತಾ, ದೆಹಲಿ, ಪುಣೆ, ಮುಂಬಯಿ ಮತ್ತಿತರ ನಗರಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಪ್ರವಾಸಿಗರು ಹೆಚ್ಚಾಗಿ ಆಗಮಿಸುವ ಸಂದರ್ಭದಲ್ಲಿ ಹೆಚ್ಚುವರಿ ರೈಲುಗಳ ಸಂಪರ್ಕವೂ ಇಲ್ಲಿಗಿರುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಶ್ರೀನಗರ ಅತ್ಯಂತ ಸಮೀಪದ ವಿಮಾನ ನಿಲ್ದಾಣ ಕಾಶ್ಮೀರಕ್ಕೆ. ಕೇವಲ 14 ಕಿ.ಮೀ. ದೂರದಲ್ಲಿದೆ. ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬಯಿ, ಪುಣೆ ಸೇರಿದಂತೆ ಹಲವೆಡೆಯಿಂದ ನಿತ್ಯ ವಿಮಾನ ಸಂಪರ್ಕವನ್ನು ಹೊಂದಿದೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಸಮೀಪದಲ್ಲಿಯೇ ಇರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಅಂತಾರಾಷ್ಟ್ರೀಯ ವಿಮಾನಗಳ ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ

ಕಾಶ್ಮೀರ ಲೇಖನಗಳು

One Way
Return
From (Departure City)
To (Destination City)
Depart On
24 Jun,Thu
Return On
25 Jun,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Jun,Thu
Check Out
25 Jun,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Jun,Thu
Return On
25 Jun,Fri

Near by City