Search
  • Follow NativePlanet
Share
» »ತಿರುಮಲದಲ್ಲಿರುವ ಬಂಗಾರದ ನೀರಿನ ಬಾವಿಯನ್ನು ನೋಡಿದ್ದೀರಾ?

ತಿರುಮಲದಲ್ಲಿರುವ ಬಂಗಾರದ ನೀರಿನ ಬಾವಿಯನ್ನು ನೋಡಿದ್ದೀರಾ?

ತಿರುಮಲದಲ್ಲಿ ಬಂಗಾರದ ಬಾವಿ ಇದೆ ಎನ್ನುವುದು ನಿಮಗೆ ಗೊತ್ತಾ? ತಿರುಮಲದಲ್ಲಿನ ಈ ಬಾವಿಯ ನೀರನ್ನು ವಿಶೇಷವಾಗಿ ಸ್ವಾಮಿಯ ನೈವೇದ್ಯಕ್ಕೆ ಬಳಸಲಾಗುತ್ತದಂತೆ. ಒಮ್ಮೆ ಶ್ರೀದೇವಿ ಹಾಗೂ ಭೂ ದೇವಿ ಜೊತೆ ಸ್ವಾಮಿಯು ವೈಕುಂಠದಿಂದ ಭೂಮಿಯಲ್ಲಿ ಸಂಚರಿಸುತ್ತಿರುವಾಗ ಸ್ವಾಮಿಯ ಅಡುಗೆಗಾಗಿ ಶ್ರೀ ದೇವಿ ಹಾಗೂ ಭೂ ದೇವಿ ಎರಡು ತೀರ್ಥವನ್ನು ನಿರ್ಮಿಸುತ್ತಾರೆ. ಶ್ರೀ ದೇವಿಯ ತೀರ್ಥವನ್ನು ಶ್ರೀ ತೀರ್ಥ ಎಂದೂ ಭೂದೇವಿಯ ತೀರ್ಥವನ್ನು ಭೂ ತೀರ್ಥ ಎಂದೂ ಕರೆಯಲಾಗುತ್ತದೆ.

ಎರಡು ತೀರ್ಥಗಳು

ಎರಡು ತೀರ್ಥಗಳು

Pc: youtube

ಕ್ರಮೇಣ ಆ ಎರಡು ತೀರ್ಥಗಳು ಕಣ್ಮರೆಯಾದವು. ಪ್ರಧಾನ ಅರ್ಚಕನಾದ ಗೋಪಿನಾಥ ಹಾಗು ಆತನ ಸಹಾಯಕ ಆರ್ಚಕನಾದ ರಂಗದಾಸು ಸ್ವಾಮಿಯ ಪೂಜೆಗೆ ಅವಶ್ಯಕವಾದ ಹೂವಿನ ತೋಟವನ್ನು ಬೆಳೆಸುವುದಕ್ಕಾಗಿ ಎರಡು ಬಾವಿಗಳನ್ನು ನಿರ್ಮಿ ಸಿದರು. ಆಗಲೇ ಹಳೆಯ ಎರಡು ತೀರ್ಥಗಳು ಕಾಣಿಸಿಕೊಳ್ಳುತ್ತವೆ. ಆ ನಂತರ ರಂಗದಾಸು ಮರಣ ಹೊಂದುತ್ತಾರೆ. ನಂತರ ಆ ಬಾವಿಗಳೂ ಶಿಥಿಲಗೊಂಡವು.

ಚಕ್ರವರ್ತಿಯಾಗಿ ಜನಿಸಿದ ರಂಗದಾಸು

ಚಕ್ರವರ್ತಿಯಾಗಿ ಜನಿಸಿದ ರಂಗದಾಸು

Pc: youtube
ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸಲು ತೋಟವನ್ನು ನಿರ್ಮಾಣ ಮಾಡಿ ಪುಷ್ಪಗಳನ್ನು ಸರ್ಮಪಿಸಿದ್ದರಿಂದ ಆ ರಂಗದಾಸುವಿಗೆ ಅನಂತರದ ಕಾಲದಲ್ಲಿ ಒಂದು ಚಕ್ರವರ್ತಿಯಾಗಿ ಜನಿಸಿ ಮತ್ತೇ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಸೇರಿಕೊಂಡನು.

 ಶ್ರೀ ತೀರ್ಥ- ಭೂ ತೀರ್ಥ

ಶ್ರೀ ತೀರ್ಥ- ಭೂ ತೀರ್ಥ

Pc: youtube
ತೊಡಮಾನ್ ಚಕ್ರವರ್ತಿಗೆ ಸ್ವಾಮಿಯು ಕನಸ್ಸಿನಲ್ಲಿ ಬಂದು ತನ್ನ ಪೂರ್ವ ಜನ್ಮದ ವೃತ್ತಾಂತವನ್ನೆಲ್ಲಾ ತಿಳಿಸಿ, ಒಂದು ದೇವಾಲಯವನ್ನು ನಿರ್ಮಾಣ ಮಾಡಿ ಅದರ ಮೇಲೆ ಬಂಗಾರದ ವಿಮಾನವನ್ನು ನಿರ್ಮಾಣ ಮಾಡಿ, ಪೂರ್ವ ಜನ್ಮದಲ್ಲಿ ನಿರ್ಮಾಣ ಮಾಡಿದ್ದಹಾಗು ಭೂ ತೀರ್ಥವನ್ನು ಮತ್ತೆ ಪುನರ್ ಸ್ಥಾಪಿಸಬೇಕೆಂದು ಆಜ್ಞಾಪಿಸುತ್ತದೆ.

ಬಂಗಾರದ ಬಾವಿ

ಬಂಗಾರದ ಬಾವಿ

ತೊಡಮಾನ್ ಚಕ್ರವರ್ತಿಗೆ ಸ್ವಾಮಿ ಹೇಳಿದಂತೆ ಶ್ರೀತೀರ್ಥವನ್ನು ಮತ್ತೆ ಪುನರ್ ಅಭಿವೃದ್ಧಿ ಮಾಡಿದನು. ಅದಕ್ಕೆ ಬಂಗಾರದ ಲೇಪನ ಮಾಡಿಸಿದನು. ಅಂದಿನಿಂದ ಇದು ಬಂಗಾರದ ಬಾವಿ ಎಂದು ಕರೆಯಲ್ಪಟ್ಟಿತು.

ಸುಂದರಸ್ವಾಮಿ ಬಾವಿ

ಸುಂದರಸ್ವಾಮಿ ಬಾವಿ

Pc: youtube

ಭೂ ತೀರ್ಥವನ್ನು ಪುನರ್ ಅಭಿವೃದ್ಧಿ ಮಾಡಿ ಮೆಟ್ಟಿಲುಗಳಾಗಿ ನಿರ್ಮಿಸಿದನು. ಅದು ಕ್ರಮೇಣ ಮೆಟ್ಟಿಲು ಬಾವಿ ಎಂದು ಕರೆಯಲಾಯಿತು. ಶ್ರೀ ತೀರ್ಥವನ್ನು ಸ್ವಾಮಿಯ ಅಡುಗೆ ಹಾಗು ತೀರ್ಥಕ್ಕೆ ಬಳಸಲಾಗುತ್ತದೆ. ಈ ಶ್ರೀತೀರ್ಥವನ್ನು ಸುಂದರಸ್ವಾಮಿ ಬಾವಿ ಎಂದೂ ಕರೆಯಲಾಗುತ್ತದೆ.

 ಪ್ರತಿ ಶುಕ್ರವಾರ ಅಭಿಷೇಕ

ಪ್ರತಿ ಶುಕ್ರವಾರ ಅಭಿಷೇಕ

Pc: youtube

ಇಲ್ಲಿನ ಸ್ವಾಮಿಯ ಮೂಲ ಮೂರ್ತಿಗೆ ಪ್ರತಿ ಶುಕ್ರವಾರ ಅಭಿಷೇಕ ನಡೆಯುತ್ತದೆ. 11 ನೇ ಶತಮಾನದಲ್ಲಿ ತಿರುಮಲನಂಬಿ ಎನ್ನುವ ವ್ಯಕ್ತಿಯು ಪಾಪವಿನಾಶ ತೀರ್ಥದಿಂದ ಪ್ರತಿನಿತ್ಯವು ಈ ಪವಿತ್ರವಾದ ಜಲವನ್ನು ತೆಗೆದುಕೊಂಡು ಸ್ವಾಮಿಗೆ ಅರ್ಪಿಸುತ್ತಿದ್ದರಂತೆ.

 ಶ್ರೀ ತೀರ್ಥ

ಶ್ರೀ ತೀರ್ಥ

Pc: youtube
ಒಂದು ದಿನ ಅಭಿಷೇಕದ ಸಮಯದಲ್ಲಿ ಅತ್ಯಂತ ಭಾರಿ ಮಳೆ ಸುರಿಯುತ್ತಿರುತ್ತದೆ. ಹಾಗಾಗಿ ಪಾಪವಿನಾಶದಿಂದ ಅಭಿಷೇಕದ ಜಲವನ್ನು ತರಲು ಸಾಧ್ಯವಾಗೋದಿಲ್ಲ. ಆದ್ದರಿಂದ ಅಭಿಷೇಕಕ್ಕೆ ಧಕ್ಕೆ ಬರಬಾರದೆಂದು ಇತರ ತೀರ್ಥಗಳಿಗಿಂತ ನೀನು ನೆಲೆಸಿರುವ ಶ್ರೀ ತೀರ್ಥಜಲವು ಸರ್ವಶೇಷ್ಟವಾದುದು. ಹಾಗಾಗಿಯೇ ಈ ಜಲವನ್ನು ಇನ್ನು ಮುಂದೆ ಶ್ರೀ ವೆಂಕಟೇಶ್ವರ ಸ್ವಾಮಿಯ ಅಭಿಷೇಕಕ್ಕೆ ಯೋಗ್ಯವಾಗಿರು ತಾಯಿ ಎಂದು ಕೇಳಿಕೊಂಡನಂತೆ.

ಸ್ವಾಮಿ ಕೂಪ

ಸ್ವಾಮಿ ಕೂಪ

Pc: youtube
ತಿರುಮಾಮಣಿ ಮಂಟಪದ ಎದುರಿಗೆ ಕಾಣಿಸುವ ಬಾವಿಯೇ ಬಂಗಾರದ ಬಾವಿ. ಬಂಗಾರು ಬಾವಿಯನ್ನು ಸ್ವಾಮಿ ಕೂಪ ಎಂದು ನಾಮಕರಣ ಮಾಡಲಾಯಿತು. ಸ್ವಾಮಿಯ ನೈವೇದ್ಯಕ್ಕೆ ಈ ತೀರ್ಥವನ್ನೇ ಬಳಸಲಾಗುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+