Search
  • Follow NativePlanet
Share
» »ತಿರುಪತಿ ತಿರುಮಲ ದೇವಸ್ಥಾನ : ಶ್ರೀ ವೆಂಕನ ತಾಣ

ತಿರುಪತಿ ತಿರುಮಲ ದೇವಸ್ಥಾನ : ಶ್ರೀ ವೆಂಕನ ತಾಣ

By Vijay

ಏಳು ಬೆಟ್ಟಗಳ ಒಡೆಯ, ಸಂಕಟ ಹರಣ ದೇವನಾದ ಶ್ರೀ ವೆಂಕಟೇಶ್ವರನು ನೆಲೆಸಿರುವ ತಿರುಪತಿ ತಿರುಮಲ ದೇವಸ್ಥಾನವು ಜಗದ್ವಿಖ್ಯಾತವಾದ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಆಂಧ್ರ ದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿಯಿರುವ ತಿರುಮಲ ಬೆಟ್ಟದ ಶ್ರೀ ವೆಂಕಟೇಶ್ವರನ ದೇವಸ್ಥಾನಕ್ಕೆ ಪ್ರತಿ ವರ್ಷ ಏನಿಲ್ಲವೆಂದರೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಹೈದರಾಬಾದ್ ನಗರದಿಂದ 600 ಕಿ.ಮೀ ದೂರವಿರುವ ಈ ಕ್ಷೇತ್ರವು ಚೆನ್ನೈನಿಂದ 138 ಕಿ.ಮೀ ಹಾಗು ಬೆಂಗಳೂರು ನಗರದಿಂದ 291 ಕಿ.ಮೀ ಗಳಷ್ಟು ಅಂತರದಲ್ಲಿದೆ.

ತಿರುಮಲ ಬೆಟ್ಟ ಪ್ರದೇಶವು ಸಮುದ್ರ ಮಟ್ಟದಿಂದ 853 ಮೀ ಗಳಷ್ಟು ಎತ್ತರದಲ್ಲಿದ್ದು, ಸುಮಾರು 27 ಚ.ಕಿ.ಮೀ ವ್ಯಾಪ್ತಿಯಷ್ಟು ಪ್ರದೇಶದಲ್ಲಿ ಹರಡಿದೆ. ಈ ಕ್ಷೇತ್ರದ ಆರಾಧ್ಯ ದೈವ ಶ್ರೀ ವೆಂಕಟೇಶ್ವರನು ಶ್ರೀನಿವಾಸ, ಬಾಲಾಜಿ, ಗೋವಿಂದ ಮುಂತಾದ ಹಲವು ನಾಮಗಳಿಂದ ಪೂಜಿಸಲ್ಪಡುತ್ತಾನೆ. ಹಿಂದೂ ಶಾಸ್ತ್ರದ ಪ್ರಕಾರ, ವೆಂಕಟೇಶ್ವರನು ಭಗವಾನ್ ವಿಷ್ಣುವಿನ ಅವತಾರವಾಗಿದ್ದಾನೆ. ಬಾಲಾಜಿಯ ಈ ಸನ್ನಿಧಾನವು ಶ್ರೀ ಸ್ವಾಮಿ ಪುಷ್ಕರಿಣಿ ಎಂಬ ಪವಿತ್ರವಾದ ನೀರಿನ ಕೊಳದ ದಕ್ಷಿಣ ತಟದಲ್ಲಿ ನೆಲೆಸಿದೆ.

ಮತ್ತೊಂದು ಪ್ರಸಿದ್ಧ ಕ್ಷೇತ್ರ ಗುರು ರಾಯರ ಮಂತ್ರಾಲಯದ ಕುರಿತು ತಿಳಿಯಿರಿ.

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ಬೆಟ್ಟ ಪ್ರದೇಶವು ಒಟ್ಟು ಏಳು ಶಿಖರಗಳನ್ನು ಒಳಗೊಂಡಿದ್ದು ಮಾರ್ಮಿಕವಾಗಿ ವೆಂಕಟೇಶ್ವರನ್ನು ಏಳು ಬೆಟ್ಟಗಳ ಒಡೆಯನೆಂದು ಸಂಭೋದಿಸಲಾಗಿದೆ.

ಚಿತ್ರಕೃಪೆ: Raji.srinivas

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಇಲ್ಲಿರುವ ಆ ಏಳು ಬೆಟ್ಟಗಳ ಹೆಸರುಗಳು ಶೇಷಾದ್ರಿ, ನೀಲಾದ್ರಿ, ಗರುಡಾದ್ರಿ, ಅಂಜನಾದ್ರಿ, ವೃಷಭಾದ್ರಿ, ನಾರಾಯಣಾದ್ರಿ ಹಾಗು ವೆಂಕಟಾದ್ರಿ. ಈ ಏಳು ಬೆಟ್ಟಗಳು ಭಗವಾನ್ ವಿಷ್ಣು ಆಸೀನವಾಗಿರುವ ಆದಿಶೇಷ ಸರ್ಪ(ಹಾವು)ದ ಏಳು ಹೆಡೆಗಳನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.

ಚಿತ್ರಕೃಪೆ: bssasidhar

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಪ್ರಸ್ತುತ, ದೇವಸ್ಥಾನವು ಏಳನೇಯ ಬೆಟ್ಟವಾದ ವೆಂಕಟಾದ್ರಿಯ ಮೇಲೆ ನೆಲೆಸಿದೆ. ಆದ್ದರಿಂದ ಈ ಕ್ಷೇತ್ರವನ್ನು ವೆಂಕಟಗಿರಿ ಅಥವಾ ವೆಂಕಟಾಚಲ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ.

ಚಿತ್ರಕೃಪೆ: Kiral

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಕೇರಳದ ತಿರುವನಂತಪುರಂನಲ್ಲಿರುವ ಶ್ರೀ ಪದ್ಮನಾಭ ಸ್ವಾಮಿ ದೇವಾಲಯದ ನಂತರ ದೇಶದ ಎರಡನೇಯ ಅತಿ ಶ್ರೀಮಂತ ದೇವಾಲಯ ಎಂಬ ಖ್ಯಾತಿಗೆ ಈ ದೇವಸ್ಥಾನವು ಪಾತ್ರವಾಗಿದೆ. ಅಲ್ಲದೆ ಜಗತ್ತಿನಲ್ಲೆ ಅತಿ ಹೆಚ್ಚು ಭೇಟಿ ನೀಡಲ್ಪಟ್ಟ ಪೂಜಾ ಸ್ಥಳ ಎಂಬ ಹಿರಿಮೆಯೂ ಈ ದೇಗುಲಕ್ಕಿದೆ.

ಚಿತ್ರಕೃಪೆ: Adiseshkashyap

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಸಾಮಾನ್ಯವಾಗಿ ಈ ದೇವಸ್ಥಾನವು ಪ್ರತಿನಿತ್ಯ ಸುಮಾರು 50000 ರಿಂದ 100000 ದ ವರೆಗೆ ಭಕ್ತಾರ್ಥಿಗಳನ್ನು ಕಾಣುತ್ತದೆ. ಇನ್ನೂ ವಿಶೇಷ ಹಬ್ಬ ಹರಿದಿನಗಳಲ್ಲಿ ಈ ಸಂಖ್ಯೆಯು 500000 ಗಡಿಯನ್ನೂ ದಾಟುತ್ತದೆ.

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಭಗವಾನ್ ವಿಷ್ಣು ತಿರುಮಲದಲ್ಲಿ ನೆಲೆಸಿರುವುದರ ಹಿಂದೆ ಸಾಕಷ್ಟು ದಂತ ಕಥೆಗಳಿವೆ. ಒಂದು ನಂಬಿಕೆಯ ಪ್ರಕಾರ ಇಲ್ಲಿರುವ ವೆಂಕಟೇಶ್ವರನ ವಿಗ್ರಹವು ಕಲಿಯುಗ ಪೂರ್ಣಗೊಳ್ಳುವ ತನಕವಿರುತ್ತದೆ ಎನ್ನಲಾಗಿದೆ.

ಚಿತ್ರಕೃಪೆ: Vimalkalyan

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ತೆಲುಗು ಭಾಷೆಯು ಕ್ಷೇತ್ರದ ಅಧಿಕೃತ ಭಾಷೆಯಾಗಿದ್ದು, ಹೆಚ್ಚಾಗಿ ತಮಿಳು ಭಾಷೆಯು ಬಳಸಲ್ಪಡುತ್ತದೆ. ಅಲ್ಲದೆ ಇಲ್ಲಿ ಕಾಣಬಹುದಾದ ಸೂಚನಾಫಲಕಗಳು ಬಹು ಭಾಷೆಗಳಲ್ಲಿದ್ದು ಕನ್ನಡವನ್ನೂ ಸಹ ಕಾಣಬಹುದು.

ಚಿತ್ರಕೃಪೆ: Sluffs

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ತೆಲುಗು ಭಾಷೆಯಲ್ಲಿ ತಿರು ಎಂದರೆ ಪವಿತ್ರ ಎಂಬರ್ಥವಿದ್ದು ಮಲಾ ಎಂದರೆ ಬೆಟ್ಟ ಎಂದಾಗುತ್ತದೆ. ಆದ್ದರಿಂದ ತಿರುಮಲ ಎಂದರೆ ಪವಿತ್ರ ಬೆಟ್ಟವೆಂದು ಮನಗಾಣಬಹುದು. ಅಲ್ಲದೆ ವೆಂಕಟೇಶ್ವರ ಎಂಬ ಹೆಸರು ಕೂಡ ಸಂಸ್ಕೃತ ಭಾಷೆಯಿಂದ ಬಂದಿದೆ. ಸಂಸ್ಕೃತದಲ್ಲಿ ವೆಂ ಎಂದರೆ, ತನ್ನೆಲ್ಲ ಕರ್ಮಗಳಿಗೆ ಸಂಬಂಧ ಹೊಂದಿದವ, ಕಟ ಎಂದರೆ ಎಲ್ಲವನ್ನು ನಾಶಪಡಿಸಿಕೊಳ್ಳುವುದು ಎಂದಾಗುತ್ತದೆ ಹಾಗು ಈಶ್ವರ ಎಂದರೆ ಮಹಾದೈವ ಎಂದಾಗುತ್ತದೆ. ಈ ರೀತಿಯಾಗಿ ವೆಂಕಟೇಶ್ವರನೆಂದರೆ ತನ್ನೆಲ್ಲ ಪಾಪಕರ್ಮ, ಅಹಂಕಾರ ಇತ್ಯಾದಿಗಳನ್ನು ನಾಶಪಡಿಸಿಕೊಂಡು ಮಹಾದೈವನಿಗೆ ಶರಣಾದವ ಎಂದಾಗುತ್ತದೆ.

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಕಂಚೀಪುರಂನ ಪಲ್ಲವರು (ಒಂಬತ್ತನೇಯ ಶತಮಾನ), ತಂಜಾವೂರಿನ ಚೋಳರು (ಹನ್ನೊಂದನೇಯ ಶತಮಾನ) ಹಾಗು ವಿಜಯನಗರದ ಅರಸರು(14, 15 ನೇಯ ಶತಮಾನ) ಕ್ಷೇತ್ರದ ಶ್ರೀ ವೆಂಕಟೇಶ್ವರನ ಅಪ್ರತಿಮ ಭಕ್ತರಾಗಿದ್ದರು.

ಚಿತ್ರಕೃಪೆ: Wiki-uk

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಸುಮಾರು 1517 ರಲ್ಲಿ ವಿಜಯನಗರದ ಸಾಮ್ರಾಜ್ಯವಿದ್ದಾಗ ಈ ದೇವಸ್ಥಾನವು ಹೆಚ್ಚಿನ ಮಟ್ಟಿಗೆ ಕಾಣಿಕೆಗಳನ್ನು ಪಡೆದು ಶ್ರೀಮಂತಿಕೆಯನ್ನು ಗಳಿಸಿತು. ವಿಜಯನಗರದ ಪ್ರೌಢ ಅರಸನಾಗಿದ್ದ ಶ್ರೀ ಕೃಷ್ಣ ದೇವರಾಯನು ಸಾಕಷ್ಟು ಬಾರಿ ಈ ದೇಗುಲಕ್ಕೆ ಭೇಟಿ ನೀಡಿ ಗಾಣನೀಯವಾದ ಕಾಣಿಕೆಗಳನ್ನು ಸಲ್ಲಿಸಿದ್ದಾನೆ. ಇಂದಿಗೂ ದೇವಾಲಯದಲ್ಲಿ ಶ್ರೀ ಕೃಷ್ಣ ದೇವಾರಾಯ ಹಾಗು ಅವನ ಮಡದಿಯ ಭಾವಚಿತ್ರವನ್ನು ಕಾಣಬಹುದಾಗಿದೆ.

ಚಿತ್ರಕೃಪೆ: gsnewid

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಮೈಸೂರು ಹಾಗು ಗಡ್ವಾಲ್ ರಾಜ್ಯಗಳ ಅರಸರುಗಳೂ ಈ ದೇವಾಲಯ ತಾಣಕ್ಕೆ ಭೇಟಿ ನೀಡಿದ್ದರು ಹಾಗು ಕಾಣಿಕೆಗಳನ್ನು ಅರ್ಪಿಸಿದ್ದರು.

ಚಿತ್ರಕೃಪೆ: vimal_kalyan

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಮರಾಠಾ ಸಾಮ್ರಾಜ್ಯದ ಪ್ರಧಾನ ಅಥವಾ ಜನರಲ್ ಆಗಿದ್ದ ಒಂದನೇಯ ರಾಘೋಜಿ ಭೋಂಸ್ಲೆ ತಿರುಮಲಕ್ಕೆ ಭೇಟಿ ನೀಡಿ ದೇವಾಲಯದಲ್ಲಿ ಪೂಜಾ ವಿಧಿ ವಿಧಾನಗಳು ಸಾಂಗೋಪವಾಗಿ ನೆರವೇರಲೆಂಬುವ ಉದ್ದೇಶದಿಂದ ಖಾಯಂ ಆಡಲೀತವನ್ನು ಸ್ಥಾಪಿಸಿದ್ದ.

ಚಿತ್ರಕೃಪೆ: Ilya Mauter

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಪ್ರಸ್ತುತ ದೇವಾಲಯವು ತಿರುಮಲ ತಿರುಪತಿ ದೇವಸ್ಥಾನಗಳು (ಟಿ.ಟಿ.ಡಿ) ಎಂಬ ಹೆಸರಿನ ತನ್ನದೆ ಆದ ಆಡಳಿತ ಮಂಡಳಿಯನ್ನು ಹೊಂದಿದ್ದು ನಿರ್ವಹಿಸಲ್ಪಡುತ್ತದೆ. ಈ ಮಂಡಳಿಯ ಜವಾಬ್ದಾರಿಯು ಸರ್ಕಾರವು ಆಯ್ಕೆ ಮಾಡಿರುವ ಕಾರ್ಯನಿರ್ವಾಹಕ ಅಧಿಕಾರಿಯ ಮೇಲಿರುತ್ತದೆ.

ಚಿತ್ರಕೃಪೆ: Matteo

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಪ್ರತಿ ವರ್ಷವೂ ಅಧಿಕ ಮೊತ್ತದ ಅಯ ವ್ಯಯ ಅಥವಾ ಮುಂಗಡ ಪತ್ರವನ್ನು ಮಂಡಿಸಲಾಗುತ್ತದೆ. ಕಾಣಿಕೆ ಅಥವಾ ದೇಣಿಗೆಯ ಮೂಲಕವೆ ದೇವಸ್ಥಾನವು ಹೆಚ್ಚು ಹಣವನ್ನು ಗಳಿಸುತ್ತದೆ. 2008 ರಲ್ಲಿ ದೇವಸ್ಥಾನದ ವಾರ್ಷಿಕ ಆದಾಯ 1000 ಕೋಟಿಯವರೆಗೆಂದು ಅಂದಾಜಿಸಲಾಗಿತ್ತು.

ಚಿತ್ರಕೃಪೆ: Raji.srinivas

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ವೆಂಕಟೇಶ್ವರನ ದೇಗುಲದ ಕಳಶವು ಭವ್ಯವಾಗಿದ್ದು, ಬಂಗಾರದ ಛಾವಣಿಯನ್ನು ಹೊಂದಿದೆ. ಚಿನ್ನದ ಲೇಪನವಿರುವ ಆನಂದ ನಿಲಯ ದಿವ್ಯ ವಿಮಾನ ಎಂಬ ಗುಮ್ಮಟದ ಕೆಳಗೆ ವೆಂಕಟೇಶ್ವರನ ಮೂಲ ವಿಗ್ರಹವಿದೆ.

ಚಿತ್ರಕೃಪೆ: Raji.srinivas

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಅತ್ಯುತ್ತಮವಾಗಿ ಕೆತ್ತಲಾದ ವೆಂಕಟೇಶ್ವರನ ಮೂಲ ವಿಗ್ರಹವು ಯಾರಿಂದಲೂ ನಿರ್ಮಿಸಲ್ಪಡದೆ ಅಥವಾ ಯಾರಿಂದಲೂ ಪ್ರತಿಷ್ಠಾಪಿಸಲ್ಪಡದೆ ಸ್ವಯಂ ಆಗಿ ಉದ್ಭವಗೊಂಡಿದೆ ಎಂದು ಹೇಳುತ್ತದೆ ಇಲ್ಲಿನ ಸ್ಥಳ ಪುರಾಣ.

ಚಿತ್ರಕೃಪೆ: Vimalkalyan

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ವೆಂಕಟೇಶ್ವರನ ಮೂಲ ವಿಗ್ರಹವು ಪಚ್ಚೆ ಕಲ್ಲುಗಳನ್ನು ಬಳಸಲಾಗಿರುವ ಬಂಗಾರದ ಕಿರೀಟವನ್ನು ತೊಟ್ಟಿದ್ದು ವಿಶೇಷ ಸಂದರ್ಭಗಳಲ್ಲಿ ವಜ್ರದ ಕಿರೀಟ ತೊಟ್ಟು ಝಗಮಗಿಸುತ್ತ ಭಕ್ತರಿಗೆ ಆನಂದವನ್ನು ಕರುಣಿಸುತ್ತಾನೆ.

ಚಿತ್ರಕೃಪೆ: Vimalkalyan

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ವೆಂಕಟೇಶ್ವರನ ಮುಖದ ತಿಲಕವಿಟ್ಟುಕೊಳ್ಳುವ ಹಣೆಯ ಭಾಗವು ದಟ್ಟವಾದ ಎರಡು ಗೆರೆಗಳುಳ್ಳ ತಿಲಕದಿಂದ ಆವೃತವಾಗಿದ್ದು ಎರಡೂ ಕಣ್ಣುಗಳ ಸ್ವಲ್ಪ ಭಾಗವನ್ನು ಇದು ಆವರಿಸಿದೆ.

ಚಿತ್ರಕೃಪೆ: vimal_kalyan

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಕಿವಿಗಳು ಬಂಗಾರದ ರಿಂಗುಗಳಿಂದ ಸಿಂಗರಿಸಲ್ಪಟ್ಟಿದ್ದು ಬಲಗೈ ತೊಡೆಯ ಮೇಲೆ ವಿರಮಿಸುತ್ತಿರುವುದನ್ನು ಕಾಣಬಹುದು. ಇನ್ನು ಎಡಗೈ ಟೊಕಕ್ಕೆ ಕೈಕಟ್ಟಿ ನಿಂತಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: Kiral

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಎಡ ಭುಜದಿಂದ ಬಲಭಾಗವಾಗಿ ಹಾಯ್ದಿರುವ ಯಜ್ಞೋಪವಿತ್ (ಜನೀವಾರ) ಧರಿಸಿರುವ ವೆಂಕಟೇಶ್ವರನ ವಿಗ್ರಹದ ಬಲ ಭಾಗದಲ್ಲಿ ಲಕ್ಷ್ಮಿ ದೇವಿಯೂ ಎಡ ಭಾಗದಲ್ಲಿ ಪದ್ಮಾವತಿಯೂ ವಿರಾಜಮಾನರಾಗಿದ್ದಾರೆ.

ಚಿತ್ರಕೃಪೆ: Anshuldubey

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಈ ವೆಂಕಟೇಶ್ವರನ ದೇವಸ್ಥಾನವು ಭಾರತೀಯ ಹಿಂದೂ ಸಂಸ್ಕೃತಿಯಲ್ಲೆ ಪವಿತ್ರವಾದ ಸ್ಥಳಗಳಲ್ಲಿ ಒಂದೆಂದು ಪರಿಗಣಿತವಾಗಿದ್ದು ದಕ್ಷಿಣ ಭಾರತದ ಅತಿ ಪ್ರಸಿದ್ಧ ಧಾರ್ಮಿಕ ಯಾತ್ರಾ ಕ್ಷೇತ್ರಗಳಲ್ಲಿ ಮಹತ್ತರವಾದ ಸ್ಥಾನವನ್ನು ಪಡೆದಿದೆ.

ಚಿತ್ರಕೃಪೆ: Drsreeganesh

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಶಾಸ್ತ್ರಗಳು, ಪುರಾಣ, ಸ್ಥಳ ಪುರಾಣ, ಸ್ಥಳ ಮಹಾತ್ಮೆಗಳ ಪ್ರಕಾರ, ಕಲಿಯುಗದಲ್ಲಿ ಶ್ರೀ ವಂಕಟೇಶ್ವರನನ್ನು ಭಕ್ತಿಯಿಂದ ಪೂಜಿಸುವುದರ ಮೂಲಕ ಯಾರೋಬ್ಬನೆ ಆಗಲಿ ಜನನ ಮರಣಗಳ ಚಕ್ರದಿಂದ ಮುಕ್ತಿ ಪಡೆಯುತ್ತಾನೆ ಎನ್ನಲಾಗಿದೆ.

ಚಿತ್ರಕೃಪೆ: Bhaskaranaidu

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಶ್ರೀ ವೆಂಕಟೇಶ್ವರನ ದರ್ಶಿಸುವುದರ ಮೂಲಕ ಪ್ರಾಪತವಾಗುವ ಉಪಯೋಗಗಳ ಕುರಿತು ಋಗ್ವೇದ ಹಾಗು ಅಷ್ಟಾದಶ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇವುಗಳಲ್ಲಿ ವೆಂಕಟೇಶ್ವರನನ್ನು ವರಗಳನ್ನು ದಯಪಾಲಿಸುವ ಮಹಾನ್ ದೈವನೆಂದು ವರ್ಣಿಸಲಾಗಿದೆ.

ಚಿತ್ರಕೃಪೆ: Bhaskaranaidu

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ವೈಷ್ಣವ ಮೂಲವನ್ನು ಹೊಂದಿರುವ ಈ ದೇವಾಲಯವು ವೆಂಕಟೇಶ್ವರನ ಬೃಹತ್ ಹಾಗು ಭವ್ಯವಾದ ವಿಗ್ರಹವನ್ನು ಇಲ್ಲಿ ಕಾಣಬಹುದಾದ ಮುಖ್ಯ ದೇಗುಲದಲ್ಲಿ ಹೊಂದಿದೆ.

ಚಿತ್ರಕೃಪೆ: Bhaskaranaidu

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ದೇವಾಲಯ ಸಂಕೀರ್ಣದ ತಿರುಮಾಮಣಿ ಮಂಟಪಂ ನಿಂದ ಬಂಗಾರು ವಕಿಲಿ (ಸ್ವರ್ಣ ದ್ವಾರ) ಮೂಲಕ ಗರ್ಭ ಗುಡಿಯನ್ನು ಪ್ರವೇಶಿಸಬೇಕಾಗುತ್ತದೆ. ಇಲ್ಲಿ ದ್ವಾರದ ಎರಡೂ ಬದಿಯಲ್ಲಿ ಜಯ, ವಿಜಯ ರೆಂಬ ಇಬ್ಬರು ದ್ವಾರಪಾಲಕರ ತಾಮ್ರದ ವಿಗ್ರಹಗಳನ್ನು ಕಾಣಬಹುದು.

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ನಂತರ ದಪ್ಪದಾದ ಕಟ್ಟಿಗೆಯ ದ್ವಾರವೊಂದಿದ್ದು ಅದರ ಮೇಲೆ ಸ್ವರ್ಣ ಲೇಪಿತ ವಿಷ್ಣುವಿನ ದಶಾವತಾರಗಳನ್ನು ಕಾಣಬಹುದು. ನಸುಕಿನಲ್ಲಿ ಸ್ವಾಮಿಗೆ ಸುಪ್ರಭಾತವನ್ನು ಈ ದ್ವಾರದ ಮುಂದಿನಿಂದಲೆ ಹೇಳಲಾಗುತ್ತದೆ.

ಚಿತ್ರಕೃಪೆ: Bhaskaranaidu

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ನಂತರ ಗರ್ಭಗೃಹದಲ್ಲಿ ಸ್ವಾಮಿಯ ಸೌಮ್ಯತಾ ಭಾವವುಳ್ಳ ಭವ್ಯವಾದ ವಿಗ್ರಹವನ್ನು ಆನಂದ ನಿಲಯ ದಿವ್ಯ ವಿಮಾನ ಸ್ವರ್ಣ ಕಳಶದ ಕೆಳಗೆ ಕಾಣಬಹುದು. ಇಷ್ಟು ಅಚ್ಚುಕಟ್ಟಾಗಿ ಮೂಡಿರುವ ವಿಗ್ರಹವು ಸ್ವಯಂಭೂ ಎಂದು ಹೇಳಲಾಗಿದೆ. ಅಲ್ಲದೆ ಯಾವೋಬ್ಬ ಮಾನವನು ಇದನ್ನು ಪ್ರತಿಷ್ಠಾಪಿಸಿಲ್ಲ ಎನ್ನುತ್ತದೆ ಸ್ಥಳ ಪುರಾಣ.

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಸ್ವಾಮಿಯ ವಿಭಿನ್ನ ವಿಗ್ರಹಗಳು ಇಲ್ಲಿದ್ದು ಹಲವು ನಾಮಗಳಿಂದ ಕರೆಯಲ್ಪಡುತ್ತವೆ. ಧ್ರುವ ಬೇರಂ/ಮೂಲವಿರಾಟ: ಇದು ಮೂಲ ವೆಂಕಟೇಶ್ವರನ ವಿಗ್ರಹವಾಗಿದ್ದು 8 ಅಡಿಗಳಷ್ಟು ಎತ್ತರವಾಗಿದೆ. ಕೌಟುಕ ಬೇರಂ/ಭೋಗ ಶ್ರೀನಿವಾಸ: ಸುಮಾರು 614 ರಲ್ಲಿ ಪಲ್ಲವ ರಾಣಿಯಾದ ಸಮಾವೈ ಪರಿಂದೇವಿ ನೀಡಲೆನ್ನಲಾದ ಬೆಳ್ಳಿಯ ಒಂದು ಅಡಿಯ ವಿಗ್ರಹವಾಗಿದೆ. ಸ್ನಾಪನ ಬೇರಂ/ಉಗ್ರ ಶ್ರೀನಿವಾಸ: ವೆಂಕಟೇಶ್ವರನ ಕೋಪವನ್ನು ಅನಾವರಣಗೊಳಿಸುವ ವಿಗ್ರಹ ಇದಾಗಿದೆ. ವರ್ಷದಲ್ಲಿ ಒಂದು ದಿನ ಅಂದರೆ ಕೈಶಿಕ ದ್ವಾದಶಿಯ ಸಂದರ್ಭದಲ್ಲಿ ಮಾತ್ರ ದರುಶನ ನೀಡುತ್ತಾನೆ. ಅದು ಕೂಡ ಸೂರ್ಯೋದಯದ ಮುಂಚೆ. ಇವುಗಳಲ್ಲದೆ ಉತ್ಸವ ಬೇರಂ ಹಾಗುಬಲಿ ಬೇರಂ ಗಳೆಂಬ ಎರಡು ವಿಗ್ರಹಗಳನ್ನು ಕಾಣಬಹುದು.

ಚಿತ್ರಕೃಪೆ: Prasoon

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಸಂಪ್ರದಾಯದಲ್ಲಿರುವಂತೆ ದಿನಕ್ಕೆ ಆರು ಬಾರಿ ವೆಂಕಟೇಶ್ವರನನ್ನು ಪೂಜಿಸಲಾಗುತ್ತದೆ. ಅವುಗಳೆಂದರೆ ಉಷಾ ಕಾಲ (ಸೂರ್ಯೋದಯದ ಮುಂಚೆಯೆ ಪ್ರಾರಂಭವಾಗಿ ಮುಗಿಯುತ್ತದೆ), ಪ್ರಾತಃ ಕಾಲ (ಸೂರ್ಯೋದಯದ ಸಮಯದಲ್ಲಿ ಪ್ರಾರಂಭವಾಗಿ ಮುಗಿಯುತ್ತದೆ), ಮಧ್ಯಾಹ್ನಿಕ ಕಾಲ (ಮಧ್ಯಾಹ್ನದಲ್ಲಿ ಜರುಗುತ್ತದೆ), ಅಪರಾಹ್ನ ಕಾಲ (ಮಧ್ಯಾಹ್ನದ ನಂತರ ಪ್ರಾರಂಭಗೊಂಡು ಮುಗಿಯುತ್ತದೆ), ಸಂಧ್ಯಾ ಕಾಲ (ಸೂರ್ಯಾಸ್ತದ ಸಮಯದಲ್ಲಿ ಪ್ರಾರಂಭಗೊಂಡು ಮುಗಿಯುತ್ತದೆ) ಹಾಗು ಅರ್ಧ ರಾತ್ರಿ ಕಾಲ (ಸೂರ್ಯಾಸ್ತದ ನಂತರ ಪ್ರಾರಂಭಗೊಂಡು ಮುಗಿಯುತ್ತದೆ). ವೈಕುಂಠ ಏಕಾದಶಿ, ರಾಮನವಮಿ, ಜನ್ಮಾಷ್ಟಮಿ ಮುಂತಾದ ಉತ್ಸವಗಳನ್ನು ಇಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅದರಲ್ಲೂ ಪ್ರತಿ ವರ್ಷ ಸೆಪ್ಟಂಬರ್ ನಲ್ಲಿ ಜರುಗುವ ಬ್ರಹ್ಮೋತ್ಸವ ಅತಿ ಪ್ರಮುಖವಾದ ಉತ್ಸವವಾಗಿದೆ.

ಚಿತ್ರಕೃಪೆ: Venkat2336

ತಿರುಮಲ ತಿರುಪತಿ ದೇವಸ್ಥಾನ:

ತಿರುಮಲ ತಿರುಪತಿ ದೇವಸ್ಥಾನ:

ಹೈದರಾಬಾದ್ ನಗರದಿಂದ 600 ಕಿ.ಮೀ ದೂರವಿರುವ ಈ ಕ್ಷೇತ್ರವು ಚೆನ್ನೈನಿಂದ 138 ಕಿ.ಮೀ ಹಾಗು ಬೆಂಗಳೂರು ನಗರದಿಂದ 291 ಕಿ.ಮೀ ಗಳಷ್ಟು ಅಂತರದಲ್ಲಿದೆ. ಸಾಕಷ್ಟು ರೈಲುಗಳು ಹಾಗು ಬಸ್ಸುಗಳು ಈ ಕ್ಷೇತ್ರಕ್ಕೆ ದಕ್ಷಿಣ ಭಾರತದ ಹಲವು ಪ್ರಮುಖ ನಗರಗಳಿಂದ ಲಭ್ಯವಿದೆ.

ಚಿತ್ರಕೃಪೆ: Chandrashekhar Basumatary

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X