Search
  • Follow NativePlanet
Share
» »ಮನದಲ್ಲಿ ನಿರಂತರ ನೆಲೆಯುರುವ ತಿರುವನಂತಪುರಂ ನಗರ

ಮನದಲ್ಲಿ ನಿರಂತರ ನೆಲೆಯುರುವ ತಿರುವನಂತಪುರಂ ನಗರ

By Vijay

ಹಕ್ಕಿಗಳ ಇಂಚರ, ನೀರಿನ ಜುಳು ಜುಳು ನಾದ, ಚಾಮರದಂತೆ ಬೀಸುವ ಮರಗಿಡಗಳು, ಚಿಲಿಪಿಲಿ ಗುಟ್ಟುತ್ತ ಸ್ವಚ್ಛಂದವಾಗಿ ವಿಹರಿಸುತ್ತಿರುವ ಪ್ರಾಣಿ ಪಕ್ಷಿಗಳ ಸಂಕುಲ, ಶುಭ್ರ ಆಕಾಶದಲ್ಲಿ ಸೂರ್ಯನ ಕಿರಣಗಲು ಬೆಳಗಾದುದುದನ್ನು ಸೂಚಿಸುವುದು, ಮಳೆಗಾಲದಲ್ಲಿ ವರುಣನ ಕೃಪಾ ಕಟಾಕ್ಷ...ನಿತ್ಯ ಹರಿದ್ವರ್ಣದ ಪರಿಸರ ಇವೆಲ್ಲ ಶ್ರೀಮಂತಿಕೆಯಿಂದ ಕೂಡಿದೆ ತಿರುವನಂತಪುರಂ ಅಲಿಯಾಸ್ ತ್ರಿವೇಂದ್ರಂ.

ಗೋ ಐಬಿಬೊದಿಂದ ಹೋಟೆಲ್ ಮತ್ತು ಫ್ಲೈಟ್ ಬುಕ್ಕಿಂಗ್ ಮೇಲೆ 65% ರಷ್ಟು ಕಡಿತ

ದೇವರ ನಾಡು ಎಂದೇ ಬಿಂಬಿತವಾಗಿರುವ ಕೇರಳದ ರಾಜ್ಯದ ರಾಜಧಾನಿ ತಿರುವನಂತಪುರಂ ದೇವತೆಗಳ ನಾಡು ಎಂದೂ ಸಹ ಕರೆಯಲ್ಪಡುತ್ತದೆ. ಇಲ್ಲಿನ ಪರಿಸರದಲ್ಲಿ ದೇಗುಲಗಳ ಘಂಟಾ ನಾದಗಳು, ಅಲ್ಲಲ್ಲಿ ಕಂಡುಬರುವ ದೇವಾಲಯಗಳು ಹಾಗೂ ಅವುಗಳನ್ನು ಪ್ರವೇಶಿಸುತ್ತಿರುವ ಭಕ್ತವೃಂದ ಕಂಡಾಗ ಹೌದು ಇದು ದೇವತೆಗಳ ನಾಡು ಎಂದೆನಿಸದೆ ಇರಲಾರದು.

ವಿಶೇಷ ಲೇಖನ : ಬೆಂಗಳೂರಿನಲ್ಲೊಂದು ದಿನ

ತಿರುವನಂತಪುರಂ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿ ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ಸಹ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನೆರೆಯ ರಾಜ್ಯಗಳಾದ ತಮಿಳುನಾಡು, ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಿಂದಲೂ ಸಹ ಸಾಕಷ್ಟು ಜನ ಪ್ರವಾಸಿಗರು ಕೇರಳದ ಈ ಧಾರ್ಮಿಕ ನಗರಕ್ಕೆ ಭೇಟಿ ನೀಡಲು ಇಷ್ಟಪಡುತ್ತಾರೆ.

ವಿಶೇಷ ಲೇಖನ : ಕೊಲ್ಕತ್ತಾ ನಗರ ಸುತ್ತಾಟ

ಹಾಗಾದರೆ ತಿರುವನಂತಪುರಂನಲ್ಲಿ ನೋಡಲು ಅಂತದ್ದೇನಿದೆ ಎಂಬ ಸಂಶಯ ಹಲವರಲ್ಲಿ ಉಂಟಾಗಬಹುದು. ಅದಕ್ಕೆ ಉತ್ತರವೆಂಬಂತೆ ಈ ಲೇಖನವನ್ನು ಪ್ರಸ್ತುತಪಡಿಸಲಾಗಿದೆ. ತಿರುವನಂತಪುರಂನಲ್ಲಿದ್ದಾಗ ಏನೇಲ್ಲ ನೀವು ನೋಡಬಹುದು ಆಸ್ವಾದಿಸಬಹುದು ಎಂಬುದರ ಕುರಿತು ಇಲ್ಲಿ ತಿಳಿಸಲಾಗಿದೆ. ತಿರುವನಂತಪುರಂಗೆ ಹೋಗಲು ಉತ್ತಮವಾದ ರಸ್ತೆ ಸಾರಿಗೆ ವ್ಯವಸ್ಥೆಯಿದ್ದು ಬೆಂಗಳೂರು ಹಾಗೂ ಚೆನ್ನೈ ನಗರಗಳಿಂದ ಬಸ್ಸುಗಳು ದೊರೆಯುತ್ತವೆ. ತಿರುವನಂತಪುರಂ ಬೆಂಗಳೂರಿನಿಂದ 685 ಕಿ.ಮೀ ಗಳಷ್ಟು ದೂರದಲ್ಲಿದ್ದು ರಸ್ತೆಯ ಮೂಲಕ ಸುಮಾರು 15 ಘಂಟೆಗಳ ಪ್ರಯಾಣಾವಧಿಯಷ್ಟು ದೂರದಲ್ಲಿದೆ. ಸರ್ಕಾರಿ ಐರಾವತ ಬಸ್ಸು ಲಭ್ಯವಿದೆ.

ಉಪಯುಕ್ತ ಕೊಂಡಿಗಳು : ತಿರುವನಂತಪುರಂಗೆ ರೈಲು ವೇಳಾಪಟ್ಟಿ ತಿರುವನಂತಪುರಂ ಹೋಟೆಲುಗಳು

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ಅತ್ಯಂತ ಹಿಂದಿನಿಂದಲೂ ಅಂದರೆ ಪುರಾಣಗಳ ಕಾಲದಿಂದ ಮಧ್ಯಕಾಲೀನ ಯುಗದ ವರೆಗೂ ಅನೇಕಾನೇಕ ವಿದೇಶಿಯರು ವ್ಯಾಪಾರ, ಸಂಶೋಧನೆ ಮೊದಲಾದ ಕಾರಣಕ್ಕೆ ಕೇರಳಕ್ಕೆ ಬರುತ್ತಲೇ ಇದ್ದರೆಂಬುದಕ್ಕೆ ಇಂದು ತಿರುವನಂತಪುರಂನಲ್ಲಿ ಕಂಡುಬರುವ ಪಾರಂಪರಿಕ ಕಟ್ಟಡಗಳು ಹಾಗೂ ವಸ್ತು ಸಂಗ್ರಹಾಲಯಗಳು ಜೀವಂತ ಸಾಕ್ಷಿಗಳಾಗಿವೆ.

ಚಿತ್ರಕೃಪೆ: Bijoy Mohan

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ಅದ್ಭುತ ಆಕರ್ಷಣೆಗಳನ್ನು ಅಡಗಿಸಿಕೊಂಡಿರುವ ಕೇರಳ ರಾಜ್ಯ ಹಾಗು ಅದರ ಶ್ರೀಮಂತ ರಾಜಧಾನಿ ತಿರುವನಂತಪುರಂಗೆ ಪ್ರವಾಸಕ್ಕೆಂದು ಬರುವವದ ಸಂಖ್ಯೆ ವರ್ಷ ದಿಂದ ವರ್ಷಕ್ಕೆ ಏರುತ್ತಲೇ ಸಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಿದೇಶಿಯರೂ ಕೂಡಾ ಸಂಶೋಧನೆ, ಪ್ರವಾಸ ಹೀಗೆ ಇನ್ನಿತರ ಹಲವು ಕಾರಣಗಳಿಗಾಗಿ ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ.

ಚಿತ್ರಕೃಪೆ: Thejas Panarkandy

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ಭಾರತದ ದಕ್ಷಿಣ ತುದಿಯ ಪಶ್ಚಿಮ ಕರಾವಳಿಯಲ್ಲಿ ನೆಲೆಸಿದ್ದು ಇತ್ತೀಚಿಗೆ "ನ್ಯಾಶನಲ್ ಜಿಯೋಗ್ರಫಿ ಟ್ರಾವೆಲರ್" ಈ ಸ್ಥಳವನ್ನು ನೋಡಲೇಬೇಕಾದ ಸ್ಥಳಗಳಲ್ಲಿ ಒಂದು ಎಂದು ಪಟ್ಟಿಮಾಡಿದ್ದಾರೆ. ಅಷ್ಟೆ ಏಕೆ, ಮಹಾತ್ಮಾ ಗಾಂಧಿ ಈ ಸ್ಥಳಕ್ಕೆ ಭೇಟಿ ನೀಡಿದ್ದಾಗ ಇದರ ಹಸಿರು ಸಂಪತ್ತಿಗೆ ಮನಸೋತು ಇದನ್ನು "ಭಾರತದ ಸದಾ ಹಸಿರಿನ ನಗರ" ಎಂದು ಕರೆದಿದ್ದರು. ತ್ರಿವೇಂದ್ರಂ ನಗರವು 'ಭಾರತದ 10 ಹಚ್ಚ ಹಸಿರಿನ ನಗರಗಳಲ್ಲಿ ಒಂದು ಎಂದು ಪರಿಗಣಿಸಲಾದೆ.

ಚಿತ್ರಕೃಪೆ: Easa Shamih

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ಪೌರಾಣಿಕ ಕಾಲದ ಪರಶುರಾಮರಿಂದ ಹಿಡಿದು ಫಾ ಹಿಯಾನ್, ಮಾರ್ಕೊ ಪೋಲೊ, ಕೊಲಂಬಸ್, ವಾಸ್ಕೋ -ಡ- ಗಾಮಾ ಮತ್ತು ಇನ್ನೂ ಅನೇಕ ಹೆಚ್ಚಿನ ಮಧ್ಯಕಾಲೀನ ಪರಿಶೋಧಕರು ಕೇರಳದ ತಿರುವನಂತಪುರಂ ಗೆ ಬಂದು ಹೋದ ದಾಖಲೆಗಳು ಇತಿಹಾಸದ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಣಗಳಿಂದಲೂ ಸಹ ತಿರುವನಂತಪುರಂ ಪ್ರಸಿದ್ಧಿಯನ್ನು ಗಳಿಸಿದೆ.

ಚಿತ್ರಕೃಪೆ: Kerala Tourism

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ಕೇರಳದ ರಾಜಧಾನಿಯಾಗಿರುವುದರಿಂದ ಸಾಕಷ್ಟು ಅಭಿವೃದ್ಧಿ ಕಂಡಿದೆ. ಅನೇಕ ವಾಣಿಜ್ಯ ಹಾಗೂ ಸರ್ಕಾರಿ ಕಚೇರಿಗಳು, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು ಹಾಗೂ ಇನ್ನುಳಿದಂತೆ ಅನೇಕ ಶೈಕ್ಷಣಿಕ ಸಂಸ್ಥೆಗಳು ತಿರುವನಂತಪುರಂನಲ್ಲಿರುವುದನ್ನು ಕಾಣಬಹುದು.

ಚಿತ್ರಕೃಪೆ: Easa Shamih

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ (VSSC), ಮಾಹಿತಿ ತಂತ್ರಜ್ಞಾನ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಸೆಂಟರ್ ಆಫ್ ಇಂಡಿಯನ್ ಇನ್ಸ್ಟಿಟ್ಯೂಟ್, ಉಚಿತ ಮತ್ತು ಮುಕ್ತ ಮೂಲ ತಂತ್ರಾಂಶ ಅಂತಾರಾಷ್ಟ್ರೀಯ ಕೇಂದ್ರ (ICFOSS), ಭಾರತೀಯ ನೆಲೆಯಾಗಿರುವ ವಿಜ್ಞಾನ, ಶಿಕ್ಷಣ ಮತ್ತು ಸಂಶೋಧನೆ (IISER) ಸಂಸ್ಥೆ, ಪ್ರಾದೇಶಿಕ ರಿಸರ್ಚ್ ಲ್ಯಾಬೊರೇಟರಿ, ಜೈವಿಕ ತಂತ್ರಜ್ಞಾನ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ, ರಾಜೀವ್ ಗಾಂಧಿ ಸೆಂಟರ್ ಫಾರ್ ಶ್ರೀ ಚೈತ್ರ ತಿರುಮಲ ಇನ್ಸ್ಟಿಟ್ಯೂಟ್, ಭೂ ವಿಜ್ಞಾನ ಅಧ್ಯಯನ ಮತ್ತು ಟೆಕ್ನೋಪಾರ್ಕ್ ಕೇಂದ್ರಗಳನ್ನು ಕೂಡಾ ಇಲ್ಲಿ ಕಾಣಬಹುದು.

ಚಿತ್ರಕೃಪೆ: Rajith

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ಜಿಲ್ಲೆಯ ಹೃದಯ ಭಾಗದಲ್ಲಿ ಶ್ರೀ ಪದ್ಮನಾಭ ಸ್ವಾಮಿ ದೇವಾಲಯವಿದೆ. ಇದು ಶ್ರೀ ವಿಷ್ಣುವಿನ ದೇವಸ್ಥಾನವಾಗಿದೆ. ಈ ದೇವಾಲಯದ ಆಡಳಿತವನ್ನು ತಿರುವಾಂಕೂರಿನ ಶ್ರೀಮಂತ ರಾಜ ಮನೆತನದವರಿಂದ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದೆ. ಪದ್ಮನಾಭ ಸ್ವಾಮಿ ದೇವಾಲಯವು 12,000 ಸಾಲಿಗ್ರಾಮಗಳಿಂದ ಮಾಡಲ್ಪಟ್ಟಿದೆ ಹಾಗೂ ಈ ದೇವಾಲಯದಲ್ಲಿ 90,000 ಕೋಟಿ ಬೆಲೆ ಬಾಳುವ ಚಿನ್ನದ ವಿಗ್ರಹಗಳು, ಬಂಗಾರ , ಪ್ರಾಚೀನ ಬೆಳ್ಳಿ, ವಜ್ರ ವೈಢೂರ್ಯಗಳು, ಮುತ್ತು ರತ್ನದ ಹರಳುಗಳು ಇವೆ. ಇಲ್ಲಿ ಎರಡು ಚಿನ್ನದ ತೆಂಗಿನ ಕಾಯಿಗಳಿದ್ದು ಅದರಲ್ಲಿ ಬೆಲೆಬಾಳುವ ಹರಳುಗಳೂ ಇವೆ. ಮಹಾ ವಿಷ್ಣು ಸಹಸ್ರ ತಲೆಯಿರುವ, ಹೆಡೆಯೆತ್ತಿರುವ ಕಾಳಿಂಗ ಸರ್ಪದ ಮೇಲೆ ವಿರಾಜಮಾನವಾಗಿ ಮಲಗಿರುವ ಮಹಾ ವಿಷ್ಣುವಿನ ಮೂರ್ತಿ ಇಲ್ಲಿನ ದೇವಾಲಯದ ಪ್ರಮುಖ ಆಕರ್ಷಣೆಯಾಗಿದ್ದು ತಿರುವನಂತಪುರ ನಗರದ ಕೀರ್ತಿಯನ್ನು ಹೆಚ್ಚಿಸಿದೆ. ವಿಷ್ಣುವಿನ ಪಕ್ಕದಲ್ಲಿ ವಿಷ್ಣುವಿನ ಪತ್ನಿ ಶ್ರೀದೇವಿ ಮತ್ತು ಭೂದೇವಿಯ ವಿಗ್ರಹಗಳನ್ನು ಕಾಣಬಹುದು.

ಚಿತ್ರಕೃಪೆ: Bijoy Mohan

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ಕನಕಕುನ್ನು ಅರಮನೆ ಆಕರ್ಷಣೀಯ ಅರಮನೆ. ಇಲ್ಲಿನ ಕೆತ್ತನೆ ಮತ್ತು ವಿನ್ಯಾಸಗಳು ನೋಡುಗರನ್ನು ಬೆಕ್ಕಸ ಬೆರಗಾಗಿಸುತ್ತವೆ. ಈ ಹಿಂದೆ ಕೇರಳದಲ್ಲಿದ್ದ ರಾಜ ರಾಣಿಯರ ಕಾಲದ ಶ್ರೀಮಂತಿಕೆಯ ವೈಭವದ ಚಿತ್ರಣವನ್ನು ಈ ಅರಮನೆಯನ್ನು ನೋಡಿದರೆ ಮನದಟ್ಟಾಗಿತ್ತದೆ. ಈ ಅರಮನೆಯ ಸೊಬಗು ಇಂದಿಗೂ ಅಂದಿನಂತೆಯೇ ಕಳೆಯಿಂದ ಕೂಡಿದೆ. ಸಹಸ್ರಾರು ಸಂಖ್ಯೆಯಲ್ಲಿ ವಿದೇಶಿಯರು ಕೂಡಾ ಈ ಅರಮನೆಯನ್ನು ನೋಡಿ ಭಾರತದ ವೈಭವವನ್ನು ಮನಸಾರೆ ಹೊಗಳುತ್ತಾರೆ.

ಚಿತ್ರಕೃಪೆ: Drdsudheer

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವಂತಪುರಂ ನಗರ ದಲ್ಲಿರುವ ನೇಪಿಯರ್ ವಸ್ತು ಸಂಗ್ರಹಾಲಯ ಒಂದು ಪ್ರವಾಸಿ ಆಕರ್ಷಣೆಯಾಗಿದೆ. ಇದನ್ನು 1855 ರಲ್ಲಿ ಕಟ್ಟಲಾರಂಭಿಸಿದಾದರೂ ಇದರ ಕಾಮಗಾರಿ ಪೂರ್ಣಗೊಂಡಿದ್ದು 1880 ರಲ್ಲಿ. ಇದನ್ನು ನೈಸರ್ಗಿಕವಾದ ಐತಿಹಾಸಿಕ ವಸ್ತು ಸಂಗ್ರಹಾಲಯ ಎಂದು ಕರೆಯಲಾಗಿದೆ. ಇಲ್ಲಿನ ವಸ್ತು ಸಂಗ್ರಹಾಲಯಾದಲ್ಲಿರುವ ವಿನ್ಯಾಸಗಳನ್ನು ನೋಡಿ ಕಣ್ತುಂಬಿಸಿ ಕೊಳ್ಳಲೇಂದೇ ದೇಶ ವಿದೇಶಗಳಿಂದ ದಿನವೂ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಾರೆ.

ಚಿತ್ರಕೃಪೆ: Kafziel

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ಅಗಸ್ತ್ಯ ಮಾಲಾ ಶಿಖರವನ್ನು ಅಗಸ್ತ್ಯಾಕೂಡಮ್ ಎಂದು ಕೂಡ ಕರೆಯಲಾಗುತ್ತದೆ. 1,868 ಮೀ ಎತ್ತರದಲ್ಲಿರುವ ಇದು ತಿರುವಂತಪುರಂ ನಗರದಲ್ಲಿರುವ ಅತ್ಯಂತ ಎತ್ತರದ ಶಿಖರವಾಗಿದೆ. ತಾಮಿರಬರಣಿ ನದಿಯು ಇಲ್ಲಿಂದಲೆ ಹುಟ್ಟುತ್ತದೆ. ಈ ಪವಿತ್ರ ಅಗಸ್ತ್ಯ ಮಾಲಾ ಶಿಖರಕ್ಕೆ ನಡೆದುಕೊಂಡೆ ತೆರಳಬೇಕಾಗಿದ್ದು ಇಲ್ಲಿಗೆ ಹೋಗುವ ಮುಂಚೆ ಅರಣ್ಯ ಇಲಾಖೆಯವರ ಅನುಮತಿ ಪಡೆಯ ಬೇಕಾಗುತ್ತದೆ. ಇಲ್ಲಿಗೆ ಟ್ರಕ್ಕಿಂಗ್ ಹೋಗಲು ಜನವರಿ ಮತ್ತು ಫೆಬ್ರವರಿ ತಿಂಗಳುಗಳು ಅನುಕೂಲಕರವಾಗಿದ್ದು ಆ ಸಮಯದಲ್ಲಿ ಮಾತ್ರ ಹೋಗಲು ಅನುಮತಿ ನೀಡಲಾಗುತ್ತದೆ. ಉಳಿದ ಸಮಯದಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ನಿರ್ಬಂಧ ಹಾಕಲಾಗಿದೆ.

ಚಿತ್ರಕೃಪೆ: Ajay Kuyiloor

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ಅಕ್ಕುಲಮ್ ಸರೋವರ ತಿರುವನಂತಪರಂದಿಂದ 10 ಕಿ. ಮೀ ದೂರದಲ್ಲಿದೆ. ಇಲ್ಲಿ ಪ್ರಕೃತಿ ಸೌಂದರ್ಯ ಮನ ಸೆಳೆಯುವಂತಿದ್ದು ಅತ್ಯಂತ ರಮಣೀಯವಾಗಿದೆ. ಈ ಸ್ಥಳ ಪಿಕ್ ನಿಕ್ ಹೋಗಲು, ಒಬ್ಬರನ್ನೊಬ್ಬರು ಭೇಟಿ ಮಾಡಲು ಸೂಕ್ತ ಸ್ಥಳವಾಗಿದೆ. ಅಷ್ಟೇ ಅಲ್ಲದೆ ಈ ಸ್ಥಳ ಪ್ರವಾಸಿಗರನ್ನೂ ಹೆಚ್ಚಾಗಿ ಆರ್ಕಷಿಸುತ್ತದೆ. ಅಕ್ಕೂಲಮ್ ಸರೋವರಕ್ಕೆ ಬಂದರೆ ಬೋಟಿಂಗ್ ಮಾಡಬಹುದು.

ಚಿತ್ರಕೃಪೆ: Thejas Panarkandy

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ಮುಖಾಂತರ ಕರಮಣ ನದಿ ಪ್ರವಹಿಸುತ್ತದೆ. ಈ ನದಿಯ ಮೂಲ ಸ್ಥಾನ ಅಗಸ್ತ್ಯರಕೂಡಂ ಶಿಖರ. ಪಶ್ಚಿಮ ಘಟ್ಟದ ದಕ್ಷಿಣ ಭಾಗದಲ್ಲಿ ಈ ಶಿಖರವಿದೆ. ನದಿ ಪನತ್ತುರ ಎಂಬ ಪ್ರದೇಶದಲ್ಲಿ ಪಶ್ಚಿಮಾಭಿಮುಖವಾಗಿ ಕೊವಲಂ ಬಳಿ 68 ಕಿಮೀ ದೂರವನ್ನು ಆವರಿಸಿದ್ದು, ನಂತರ ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ. ತಿರುವನಂತಪುರಂ ನ ಉಪನಗರವಾದ ಕರಮಣದ ಮೂಲಕ ಈ ನದಿ ಹರಿಯುವುದರಿಂದ ಇದಕ್ಕೆ ಈ ನಗರದ ಹೆಸರಿಡಲಾಗಿದೆ. ಈ ಕರಮಣ ನದಿ ತೀರದಲ್ಲಿ ಸ್ವಸ್ಛಂದವಾದ ನೀಲ ನೀರನ್ನು ನೋಡುತ್ತಾ, ಚಿಕ್ಕದಾದ ಮರಳಿನ ದಂಡೆಯ ಮೇಲೆ ನಡೆಯುತ್ತಾ ಪ್ರಕೃತಿಯ ಸೌಂದರ್ಯವನ್ನು ಸವೆಯಬಹುದು.

ಚಿತ್ರಕೃಪೆ: Deep Goswami

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ನೆಯ್ಯರ್ ಅಣೆಕಟ್ಟನ್ನು 1958 ರಲ್ಲಿ ಕಟ್ಟಲಾಯಿತು. ಈ ಅಣೆಕಟ್ಟನ್ನು ನೆಯ್ಯರ್, ಕಲ್ಲಾರ್ ಮತ್ತು ಮುಲ್ಯಾರ್ ಈ ಮೂರು ನದಿಗಳು ಸೇರುವಲ್ಲಿ ಕಟ್ಟಲಾಗಿದೆ. ಈ ಸ್ಥಳ ಪಿಕ್ ನಿಕ್ ಗೆ ಮತ್ತು ಕುಟುಂಬ ವಿಹಾರಕ್ಕೆ ಹೋಗಲು ಅತ್ಯುತ್ತಮವಾದ ಸ್ಥಳವಾಗಿದೆ. ಇಲ್ಲಿಂದ 7 ಕಿ. ಮೀ ದೂರಲ್ಲಿ ಆನೆಗಳಿಗಾಗಿಯೇ ಮೀಸಲಿಟ್ಟ ತಂಗುದಾಣವಿದೆ. ಇಲ್ಲಿ ಆನೆ ಸವಾರಿ ಕೂಡ ಹೋಗಬಹುದು. ಇಲ್ಲಿಗೆ ನಿಮ್ಮ ಮಕ್ಕಳನ್ನು ಕರೆ ತಂದರೆ ಅವರು ಹಿಂತಿರುಗಿ ಮನೆಗೆ ಹೋಗುವ ಮಾತನ್ನೇ ಆಡುವುದಿಲ್ಲ ! ಅಂತಹ ಸೊಬಗಿನ ತಾಣ ತಿರುವನಂತಪುರಂ ನಲ್ಲಿರುವ ವನ್ಯ ಮೃಗ ಅಭಯಾರಣ್ಯ! ನೆಯ್ಯಾರ್ ಜಲಾಶಯದ ಚಿತ್ರ.

ಚಿತ್ರಕೃಪೆ: Martin Maravattickal

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ಶ್ರೀ ಚಿತ್ರಾ ಆರ್ಟ ಗ್ಯಾಲರಿಯಲ್ಲಿ ಅದ್ಭುತವಾದ ಚಿತ್ರಕಲೆಗಳನ್ನು ಕಾಣಬಹುದು. ಈ ಚಿತ್ರಗಳೆಲ್ಲವೂ ಪ್ರಸಿದ್ಧ ಚಿತ್ರಕಾರರು ರಚಿಸಿದ ಚಿತ್ರಗಳಾಗಿವೆ. ರವಿವರ್ಮನ ಕುಂಚದಲ್ಲಿ ಮೂಡಿ ಬಂದ ಚಿತ್ರಗಳು ಎಲ್ಲರ ಮನ ಸೂರೆಗೊಳ್ಳುತ್ತವೆ ಯಲ್ಲವೇ? ಅಂತಹ ಅತ್ಯತ್ತಮ ಚಿತ್ರಗಳು ಚಿತ್ರ ಆರ್ಟ್ ಗ್ಯಾಲರಿಯಲ್ಲಿ ನೋಡಲು ಲಭ್ಯ. ಅಷ್ಟೇ ಅಲ್ಲದೇ ಇನ್ನೂ ಅನೇಕ ಪ್ರಸಿದ್ಧ ಚಿತ್ರಕಾರರು ರಚಿಸಿದ ಚಿತ್ರಗಳ ಸಂಗ್ರಹ ಇಲ್ಲಿದೆ. ಜೊತೆಗೆ ಇಲ್ಲಿ ನಾವು ರಾಜಾಸ್ಥಾನಿ ಮತ್ತು ಮೊಘಲ್ ಶೈಲಿಯ ಚಿತ್ರಕಲೆಯನ್ನು ನೋಡಬಹುದು.

ಚಿತ್ರಕೃಪೆ: Ajeeshcphilip

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ಅರಬ್ಬಿ ಸಮುದ್ರದ ಉತ್ತಮ ಕಡಲ ಕಿನಾರೆಯನ್ನು ಹೊಂದಿರುವ ಕೊವಲಂ ವಿದೇಶಿ ಪ್ರವಾಸಿಗರಲ್ಲೂ ಸಹ ಹೆಸರುವಾಸಿಯಾಗಿದೆ. ತಿರುವನಂತಪುರಂ ನಗರ ಕೇಂದ್ರದಿಂದ ಕೇವಲ 12 ಕಿ.ಮೀ ಗಳಷ್ಟು ದೂರವಿರುವ ಈ ಕಡಲ ಪಟ್ಟಣ ಕೊವಲಂಗೆ ತೆರಳಲು ಸಾಕಷ್ಟು ಬಸ್ಸುಗಳು, ರಿಕ್ಷಾಗಳು, ಬಾಡಿಗೆ ಕಾರುಗಳು ತಿರುವನಂತಪುರಂನ ಕೇಂದ್ರ ಬಸ್ಸು, ರೈಲು ಹಾಗೂ ವಿಮಾನ ನಿಲ್ದಾಣಗಳಿಂದ ನಿರಾಯಾಸವಾಗಿ ಲಭಿಸುತ್ತವೆ.

ಚಿತ್ರಕೃಪೆ: Girish...

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ರೋಚಕವಾದ ಇತಿಹಾಸವನ್ನು ಹೊಂದಿರುವ ಕೊವಲಂ ಪಟ್ಟಣಕ್ಕೆ, ಇತಿಹಾಸ ಪ್ರೀಯರು, ಉತ್ಸಾಹಿಗಳು, ಪ್ರವಾಸಿಗಳು ದೊಡ್ಡ ಸಂಖ್ಯೆಯಲ್ಲಿ ಬರುತ್ತಿರುತ್ತಾರೆ. ಈ ಸ್ಥಳದಲ್ಲಿ ಸಮಯ ಕಳೆಯುವುದೆಂದರೆ ಅನೇಕರಿಗೆ ಬಲು ಇಷ್ಟ.

ಚಿತ್ರಕೃಪೆ: deepgoswami

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ಕೇವಲ ದೇಶದ ಪ್ರವಾಸಿಗರು ಮತ್ರವಲ್ಲದೆ ವಿದೇಶೀಯರೂ ಕೂಡಾ ಈ ಕಡಲ ತೀರವನ್ನು ನೋಡುವುದಕ್ಕಾಗಿ, ಸಮಯ ಕಳೆಯುವುದಕ್ಕಾಗಿ ಅಷ್ಟೆಅ ಅಲ್ಲ ಸಂಶೋಧನೆಗಳಿಗಾಯೂ ಸಹ ಬರುತ್ತಾರೆ.

ಚಿತ್ರಕೃಪೆ: Roberto Faccenda

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ಕೊವಲಂನ ಇತಿಹಾಸ ಕೊಂಚ ಕೆದಕಿದಾಗ ತಿಳಿದುಬರುವ ವಿಷಯವೆಂದರೆ ತಿರುವಾಂಕೂರಿನ ಮನೆತನಗಳು ಇಲ್ಲಿ ಆಡಳಿತ ನಡೆಸುತ್ತಿದ್ದರು ಎಂಬುದು. ಅಲ್ಲದೇ ಈ ಪ್ರದೇಶಗಳ ಬಗ್ಗೆ ಅನೇಕಾನೇಕ ಕಥೆಗಳೂ ಸಹ ಕೇಳಿ ಬರುತ್ತವೆ.

ಚಿತ್ರಕೃಪೆ: Ian Armstrong

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ಆಸಮಯದಲ್ಲಿ, ತಿರುವಾಂಕೂರಿನ ರಾಜ ಪ್ರತಿನಿಧಿ ಮಹಾರಾಣಿ ಸೇರು ಲಕ್ಷ್ಮೀ ಬಾಯಿ ಆಡಳಿತ ನಡೆಸುತ್ತಿದ್ದು, ತನ್ನ ಅಗತ್ಯಕ್ಕೆ ಬೇಕಾದ ಹಾಗೆ ಬೀಚ್ / ನದಿಯ ತೀರ, ವಿಹಾರ ಧಾಮ / ವಿರಾಮ ತಾಣಗಳನ್ನು ನಿರ್ಮಿಸಿಕೊಂಡಿದ್ದಳು. ಇವೆಲವೂ ನಡೆದಿದ್ದು ಸರಿ ಸುಮಾರು 1920 ರಲ್ಲಿ. ಇದರಿಂದಲೆ ಕೊವಲಂ ಹೆಸರು ಪ್ರವರ್ಧಮಾನಕ್ಕೆ ಬರತೊಡಗಿತು.

ಚಿತ್ರಕೃಪೆ: Jebin Daniel Varghese

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ಇದೆ ಮುಂದುವರಿದು ಈಗಲೂ ಸಮುದ್ರ ತೀರ, ನದಿ ತೀರ ಹಾಗೂ ವಿಹಾರ ಧಾಮಗಳಿಂದ ಅಲಂಕೃತಗೊಂಡು 'ಪ್ರಶಾಂತ ಕೋಟೆ' ಎಂದೇ ಕರೆಯಲ್ಪಡುವ ಕೊವಲಂ ಪ್ರವಾಸಿಗರರನ್ನು ಕೈಬೀಸಿ ಕರೆಯುತ್ತದೆ.

ಚಿತ್ರಕೃಪೆ: Mehul Antani

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂನಲ್ಲಿ ಹಿಂದೂ ಹಬ್ಬಗಳಾದ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಶಿವರಾತ್ರಿ ಮುಂತಾದ ಇನ್ನೂ ಹಲವಾರು ಸ್ಥಳೀಯ ಉತ್ಸವಗಳನ್ನು ಬಹಳ ಆದರ, ಸಡಗರದಿಂದ ಆಚರಿಸುತ್ತಾರೆ ಇಲ್ಲಿನ ಸ್ಥಳೀಯರು. ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಕೃಷ್ಣನ ವಿಗ್ರಹವನ್ನು ಆನಂದ ಹಾಗೂ ಸಡಗರದಿಂದ ಮೆರವಣಿಗೆ ಒಯ್ಯುತ್ತಿರುವುದು.

ಚಿತ್ರಕೃಪೆ: Thejas Panarkandy

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂನಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿರುವ ಗಣೇಶ ಚತುರ್ಥಿ ಹಬ್ಬ.

ಚಿತ್ರಕೃಪೆ: Thejas Panarkandy

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ಶಂಕುಮುಗಂ ಕಡಲ ತೀರ ತಿರುವನಂತಪುರಂನಲ್ಲಿರುವ ಮತ್ತೊಂದು ಪ್ರವಾಸಿ ಆಕರ್ಷಣೆಯ ಕಡಲ ತೀರ. ಇದು ನಗರ ಕೇಂದ್ರದಿಂದ ಕೇವಲ ಹತ್ತು ಕಿ.ಮೀ ಗಳಷ್ಟು ದೂರದಲ್ಲಿದ್ದು ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Thejas Panarkandy

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ಪುತೇನ್ಮಾಲಿಕ ಅರಮನೆ ಸಂಗ್ರಹಾಲಯ ತಿರುವನಂತಪುರಂನ ಪ್ರವಾಸಿ ಆಕರ್ಷಣೆಯಾಗಿದೆ. ಇಲ್ಲಿ ಹಿಂದಿನ ಕಾಲದ ರಾಜವಂಶಸ್ಥಕ್ಕೆ ಸಂಬಂಧಪಟ್ಟ ಹಲವಾರು ವಸ್ತುಗಳನ್ನು ಪ್ರದರ್ಶಿಸಲಾಗಿದೆ.

ಚಿತ್ರಕೃಪೆ: Thejas Panarkandy

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂನ ಕಡಲ ತೀರದಲ್ಲಿರುವ ಸಮುದ್ರ ಸೇತುವೆ. ಇದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇದನ್ನು ವಲಿಯಾತುರಾ ಸಮುದ್ರ ಸೇತುವೆ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Thejas Panarkandy

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರದ ಪಾಲಯಂ ಪ್ರದೇಶದಲ್ಲಿರುವ ಜುಮ್ಮಾ ಮಸೀದಿ. ಇದು ನಗರದ ಪ್ರಮುಖ ಹಾಗೂ ಪ್ರಧಾನ ಮಸೀದಿಯಾಗಿದೆ. ಇದನ್ನು ಪಾಲಯಂ ಪಲ್ಲಿ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Aleksandr Zykov

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರದ ಪಾಲಯಂ ಪ್ರದೇಶದಲ್ಲಿರುವ ಸಂತ ಕ್ಯಾಥೇಡ್ರಲ್ ಚರ್ಚ್. ಇದನ್ನು ಪಾಲಯಂ ಚರ್ಚ್ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಇದು ಗೋಥಿಕ್ ಶೈಲಿಯ ವಾಸ್ತು ಶಿಲ್ಪ ರಚನೆಯನ್ನು ಹೊಂದಿದೆ.

ಚಿತ್ರಕೃಪೆ: Aleksandr Zykov

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರದಲ್ಲಿರುವ ವಿಕ್ಟೋರಿಯಾ ಜುಬಿಲಿ ಟೌನ್ ಹಾಲ್.

ಚಿತ್ರಕೃಪೆ: Aleksandr Zykov

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ಇಟಾಲಿಯನ್ ವಾಸ್ತುಶಿಲ್ಪ ಶೈಲಿಯಲ್ಲಿ ರಚಿತವಾದ ಮನಸೆಳೆವ ಸೆಕ್ರೇಟರಿಯಾಟ್ ಕಚೇರಿ.

ಚಿತ್ರಕೃಪೆ: Aleksandr Zykov

ತಿರುವನಂತಪುರಂ ನಗರ ಪ್ರದಕ್ಷಿಣೆ:

ತಿರುವನಂತಪುರಂ ನಗರ ಪ್ರದಕ್ಷಿಣೆ:

ಸ್ವಚ್ಛ ಸುಂದರ ತಿರುವನಂತಪುರಂ ನಗರ ಬೀದಿಗಳು.

ಚಿತ್ರಕೃಪೆ: Aleksandr Zykov

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X