Search
  • Follow NativePlanet
Share
» »ಈ ಬೆಟ್ಟವನ್ನು ಹತ್ತಿದರೆ ಮಕ್ಕಳಾಗದೇ ಇರುವ ದಂಪತಿಗಳಿಗೆ ಮಕ್ಕಳಾಗುತ್ತಂತೆ!

ಈ ಬೆಟ್ಟವನ್ನು ಹತ್ತಿದರೆ ಮಕ್ಕಳಾಗದೇ ಇರುವ ದಂಪತಿಗಳಿಗೆ ಮಕ್ಕಳಾಗುತ್ತಂತೆ!

ರಸ್ತೆಯ ಬದಿಯಲ್ಲಿ ವಿವಿಧ ಹಣ್ಣುಗಳಿಂದ ತುಂಬಿರುವ ಮರಗಳಿದ್ದರೆ ಎಷ್ಟೊಂದು ಚೆನ್ನಾಗಿರುತ್ತೆ ಅಲ್ವಾ...ಆ ಹಣ್ಣುಗಳನ್ನು ಕೀಳುತ್ತಾ, ತಿನ್ನುತ್ತಾ ನಡೆಯುವುದು ನಿಜಕ್ಕೂ ಮಜಾ ನೀಡುತ್ತದೆ. ಇನ್ನು ಚಾರಣಕ್ಕೆ ಹೋಗುವಾಗಂತೂ ದಾರಿಯುದ್ದಕ್ಕೂ ಇಂತಹ ಹಣ್ಣುಗಳಿಂದ ತುಂಬಿರುವ ಮರ ಸಿಕ್ಕಿದರೆ ಹೇಳೋದೇ ಬೇಡ ಆಗುವ ಸಂತೋಷಕ್ಕೆ ಪಾರವೇ ಇರೋದಿಲ್ಲ. ಅಂತಹದ್ದೇ ಸ್ಥಳದ ಬಗ್ಗೆ ನಾವು ಇಂದು ನಿಮಗೆ ಹೇಳ ಹೊರಟಿದ್ದೇವೆ.

ಮುಕ್ತೇಶ್ವರ

ಮುಕ್ತೇಶ್ವರ

PC: Sanjoyg

ರಸ್ತೆ ಬದಿಯಲ್ಲಿ ಪೀಚ್‌ ಹಣ್ಣು ಹಾಗೂ ಪ್ಲಮ್ ಹಣ್ಣುಗಳನ್ನು ಕೀಳುತ್ತಾ ಪೈನ್‌ ಕಾಡಿನ ಮಧ್ಯೆ ಟ್ರೆಕ್ಕಿಂಗ್ ಹೋಗಿ ಅಲ್ಲಿನ ಬೆಟ್ಟಗಳ ನಡುವೆ ಕುಳಿತುಕೊಳ್ಳುವುದರಲ್ಲಿರುವ ಅನುಭವವೇ ಬೇರೆ. ಕುಮೋನ್ ಬೆಟ್ಟಗಳ ನಡುವೆ ಇರುವ ಮುಕ್ತೇಶ್ವರವು ಸಮುದ್ರ ಮಟ್ಟದಿಂದ 7500 ಫೀಟ್ ಎತ್ತರದಲ್ಲಿದೆ. ದೆಹಲಿಯಿಂದ ರಜಾದಿನಗಳನ್ನು ಕಳೆಯಲು ಸಮೀಪದ ತಾಣವಾಗಿದೆ. ಇಲ್ಲಿ ಹಣ್ಣುಗಳ ಮರಗಳನ್ನು ಕಾಣಬಹುದು. ಪ್ಲಮ್, ಪೀಚ್, ಆಪ್ರಿಕೋಟ್‌ ಮರಗಳು ಕಾಣಸಿಗುತ್ತದೆ.

ಈ ಅನ್ನಪೂರ್ಣೇಯ ಸನ್ನಿಧಿಗೆ ಬಂದವರಿಗೆ ಎಂದೂ ಅನ್ನದ ಕೊರತೆ ಆಗೋದಿಲ್ಲವಂತೆ!

ಕಪಿಲೇಶ್ವರ ಟೆಂಪಲ್ ಟ್ರೆಕ್

ಕಪಿಲೇಶ್ವರ ಟೆಂಪಲ್ ಟ್ರೆಕ್

PC: Navya6238

ಮುಕ್ತೇಶ್ವರದಿಂದ 9 ಕಿ.ಮಿ ದೂರದಲ್ಲಿ ಕಪಿಲೇಶ್ವರ ದೇವಸ್ಥಾನವಿದೆ. ನಿಮಗೆ ಅಷ್ಟು ದೂರ ಚಾರಣ ಮಾಡಲು ಆಗೋದಿಲ್ಲವೆಂದಿದ್ದರೆ ನೀವು ವಾಹನದ ಮೂಲಕವೂ ಕಪಿಲೇಶ್ವರ ದೇವಸ್ಥಾನ ತಲುಪಬಹುದು. ಮುಕ್ತೇಶ್ವರದಿಂದ 45 ಮಿ. ಪ್ರಯಾಣಿಸಿದರೆ ಈ ದೇವಸ್ಥಾನ ಸಿಗುತ್ತದೆ. ಇದು ಬಹಳ ಪುರಾತನ ಶಿವನ ದೇವಾಲಯವಾಗಿದೆ. ಸುಮಾರು 8-10 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ.

ಚೌಲಿ ಕೀ ಜಲಿ

ಚೌಲಿ ಕೀ ಜಲಿ

PC: Ashish.sadh

ಮಂದಿರದ ಬಳಿ ಇರುವ ಕಲ್ಲಿನ ಮಾರ್ಗವು ನಿಮ್ಮನ್ನು ದೊಡ್ಡ ಬಂಡೆಯತ್ತ ಕೊಂಡೊಯ್ಯುತ್ತದೆ. ಇದನ್ನು ಚೌಲಿ ಕೀ ಜಲಿ ಎನ್ನಲಾಗುತ್ತದೆ. ಈ ಬಂಡೆಯ ಮೇಲೆ ನಿಂತು ನೀವು ಹಿಮಾಲಯದ ಪರ್ವತಗಳು ಹಾಗೂ ಕಮೋನ್ ಕಣಿವೆಯ ಅದ್ಭುತ ದೃಶ್ಯವನ್ನು ನೋಡಬಹುದು. ಈ ಸ್ಥಳದಲ್ಲಿ ರಾಕ್‌ ಕ್ಲೈಂಬಿಂಗ್, ಜಿಪ್‌ ಲಿನಿಂಗ್ ಹಾಗೂ ರ್ಯಾಪಲಿಂಗ್‌ನಂತಹ ಸಾಹಸ ಕ್ರೀಡೆಯ ಆನಂದವನ್ನು ಪಡೆಯಬಹುದು. ಯಾವ ದಂಪತಿಗಳಿಗೆ ಮಕ್ಕಳಾಗಿಲ್ಲವೋ ಅವರು ಶಿವರಾತ್ರಿಯ ದಿನ ಈ ಬೆಟ್ಟಕ್ಕೆ ಬಂದು ಬೆಟ್ಟದಲ್ಲಿರುವ ರಂಧ್ರವನ್ನು ದಾಟುತ್ತಾರೋ ಅವರಿಗೆ ಸಂತಾನಭಾಗ್ಯವಾಗುತ್ತದೆ ಎನ್ನುವುದು ಇಲ್ಲಿನ ಸ್ಥಳೀಯರ ನಂಬಿಕೆ. ವೀಕೆಂಡ್‌ನಲ್ಲಿ ಇಲ್ಲಿ ತುಂಬಾನೇ ಜನಜಂಗುಳಿ ಇರುವ ಕಾರಣ ವಾರದ ಉಳಿದ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡಬಹದು.

ಮುಕ್ತೇಶ್ವರ ಧಾಮ ದೇವಾಲಯ

ಮುಕ್ತೇಶ್ವರ ಧಾಮ ದೇವಾಲಯ

PC: Deepak Rohilla

350 ವರ್ಷ ಹಳೆಯ ಶಿವನ ದೇವಾಲಯವು ಬೆಟ್ಟದ ತುದಿಯಲ್ಲಿದೆ. ಇಲ್ಲಿ ಶಿವನು ಅಸುರನ್ನು ಕೊಂದು ಆತನಿಗೆ ಮುಕ್ತಿ ನೀಡಿದನು ಹಾಗಾಗಿ ಇಲ್ಲಿಗೆ ಮುಕ್ತೇಶ್ವರ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ. ಇಲ್ಲಿ ಮುಕ್ತೇಶ್ವರ ಮಹಾರಾಜ ಎನ್ನುವ ಸಂತರು ವಾಇಸುತ್ತಿದ್ದತು ಈಗ ಅವರ ಅನುಯಾಯಿಯಾಗಿರುವ ಸ್ವಾಮಿ ಸನ್‌ಶುದಾನಂದ ಜೀ ಇಲ್ಲಿ ವಾಸಿಸುತ್ತಿದ್ದಾರೆ. ಈ ಸ್ಥಳವು ಧ್ಯಾನಕ್ಕೆ ಯೋಗ್ಯವಾಗಿದೆ.

ಇಲ್ಲಿಗೆ ಹೋಗಲು ಉತ್ತಮ ಸಮಯ

ಇಲ್ಲಿಗೆ ಹೋಗಲು ಉತ್ತಮ ಸಮಯ

PC:Mallika Awesome

ಮುಕ್ತೇಶ್ವರಕ್ಕೆ ಹೋಗಬೇಕಾದರೆ ಮಾರ್ಚ್‌ನಿಂದ ಜುಲೈ ತಿಂಗಳಿನಲ್ಲಿ ಹೋಗೋದು ಉತ್ತಮ. ನಿಮಗೆ ಮಂಜಿನ ವಾತಾವರಣ ಬೇಕೆಂದಿದ್ದರೆ ನೀವು ಜನವರಿಯಿಂದ ಫೆಬ್ರವರಿ ತಿಂಗಳಿನಲ್ಲಿ ಹೋಗೋದು ಉತ್ತಮ. ಜೂನ್‌ ತಿಂಗಳಿನಲ್ಲಿ ಇಲ್ಲಿನ ಮರಗಳೆಲ್ಲಾ ಹಣ್ಣಿನಿಂದ ತುಂಬಿರುತ್ತವೆ.

ಈ ಮುಂಗಾರಿನಲ್ಲಿ ಸಕಲೇಶ್‌ಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ?

ಎಲ್ಲಿದೆ ಈ ಮುಕ್ತೇಶ್ವರ?

ಎಲ್ಲಿದೆ ಈ ಮುಕ್ತೇಶ್ವರ?

PC: Lalitgupta isgec

ಪ್ರವಾಸಿ ಕೇಂದ್ರವಾಗಿರುವ ಮುಕ್ತೇಶ್ವರವು ಉತ್ತರಖಂಡದ ನೈನಿತಾಲ್ ಜಿಲ್ಲೆಯಲ್ಲಿದೆ. ಇದು ಕುಮಾನ್ ಬೆಟ್ಟಗಳ ಮೇಲಿದೆ. ನೈನಿತಾಲ್‌ನಿಂದ ಸುಮಾರು 15 ಕಿ.ಮೀ ದೂರದಲ್ಲಿದ್ದರೆ, ಹಲ್ದವಾನಿಯಿಂದ 72ಕಿ.ಮೀ ದೂರದಲ್ಲಿದೆ. ದೆಹಲಿಯಿಂದ 343 ಕಿ.ಮೀ ದೂರದಲ್ಲಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ದೆಹಲಿಯಿಂದ ಮುಕ್ತೇಶ್ವರಕ್ಕೆ ರಸ್ತೆ ಮೂಲಕ ಹೋಗುವುದು ಬೆಸ್ಟ್. ಕಾರ್‌ ಮೂಲಕ ಹೋಗುವುದಾದರೆ ಸುಮಾರು 7 ಗಂಟೆ ಪ್ರಯಾಣ ಮಾಡಬೇಕು.

ರೈಲಿನ ಮೂಲಕ ಹೋಗುವುದಾದರೆ: ಮುಕ್ತೇಶ್ವರಕ್ಕೆ ಯಾವುದೇ ರೈಲ್ವೆ ನಿಲ್ದಾಣಗಳಿಲ್ಲ ಹಾಗಾಗಿ ಸಮೀಪದ ರೈಲ್ವೆ ನಿಲ್ದಾಣವೆಂದರೆ ಕಾತ್ಗೊಡಮ್. ಇದು ದೆಹಲಿಯಿಂದ 327 ಕಿ.ಮೀ ದೂರದಲ್ಲಿದೆ.

ಬಸ್‌ ಮೂಲಕ ಹೋಗುವುದಾದರೆ ದೇಶದ ಪ್ರಮುಖ ನಗರಗಳಿಂದ ಮುಕ್ತೇಶ್ವರಕ್ಕೆ ಬಸ್‌ ವ್ಯವಸ್ಥೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more