Search
  • Follow NativePlanet
Share
» »ಭಾರತದ ಅದ್ಭುತ ಜಲಸವಾರಿಯ ತಾಣಗಳು

ಭಾರತದ ಅದ್ಭುತ ಜಲಸವಾರಿಯ ತಾಣಗಳು

ಈ ಲೇಖನವು ನಿಮಗೆ ಕೇರಳ, ಚಿಲ್ಕಾ ಸರೋವರ, ಮುಂತಾದ ಹಿನ್ನೀರಿನ ನೆಲೆಯಿರುವಂತಹ ಭಾರತದ ಅತ್ಯಂತ ಸುಂದರವಾದ ನೀರಿನ ಸಮುದ್ರಯಾನಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

By Manjula Balaraj Tantry

ದೇಶದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಜಲವಿಹಾರಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಇದು ಕೇರಳದ ಹಿನ್ನೀರುಗಳಿಂದ ಅಂಡಮಾನ್ ನ ನಂಬಲಾಗದಷ್ಟು ಸುಂದರವಾದ ದ್ವೀಪ ಮೂಹದವರೆಗೆ ತನ್ನ ಪ್ರಾಮುಖ್ಯತೆಯನ್ನು ಗಳಿಸಿವೆ. ಈ ಜಲ ಸಂಚಾರಿ ಹಡಗುಗಳು ನೀರಿನ ಬಳಿ ಇರುವ ಪ್ರಮುಖ ಪ್ರವಾಸೀ ತಾಣಗಳಿಂದ ಬಂದಿರುವುದಾಗಿರುತ್ತದೆ.

ಸಮುದ್ರವು ವಿಶಾಲವಾದ ಸ್ಥಳವಾಗಿದೆ ಮತ್ತು ಅದು ತನ್ನದೇ ಆದ ಜಗತ್ತು, ಹಲವಾರು ರಹಸ್ಯಗಳನ್ನು ಹೊಂದಿದೆ, ಇದರ ಆಳವಾದ ಜಗತ್ತಿನ ಅನ್ವೇಷಣೆಗಾಗಿ ನಿಮ್ಮನ್ನು ಕಾಯುತ್ತಿದೆ. ಸಮುದ್ರದ ಅಲೆಗಳು ಬಂಡೆಗಳಿಗೆ ಹೊಡೆಯುವುದನ್ನು ನೋಡಲು ಇಷ್ಟಪಡುವವರಿಗೆ ಈ ಬಂಡೆಗಳ ಮೇಲೆ ನಿಮಗಿಷ್ಟವಾದ ಪೇಯವನ್ನು ಹಿಡಿದುಕೊಂಡು ನಿಂತು ವಿಕ್ಷಣೆ ಮಾಡುವುದು ಬೆಲೆ ಕಟ್ಟಲಾಗದ ಒಂದು ಅನುಭವವಾಗಿದೆ. ಇಂತಹ ಅನುಭವವನ್ನು ನೀವು ನೋಡಬೇಕಾದಲ್ಲಿ ಕಡಲ ತೀರಗಳಿಗೆ ನೀವು ಭೇಟಿಕೊಡಬೇಕು.

ಭಾರತದಲ್ಲಿ ಅನೇಕ ಸಮುದ್ರ ಸಂಚಾರದ ತಾಣಗಳಿವೆ ಇಲ್ಲಿಗೆ ನಿಮ್ಮ ಕುಟುಂಬದವರು, ಸ್ನೇಹಿತರು ಮತ್ತು ನಿಮಗೆ ಪ್ರೀತಿ ಪಾತ್ರರ ಜೊತೆಗೆ ಇಲ್ಲಿಯ ಶ್ರೀಮಂತಿಕೆಯ ಅನುಭವವನ್ನು ಪಡೆಯಬಹುದು.

ಸಮುದ್ರ ತೀರಗಳಿಗೆ ಹೋಗುವುದಕ್ಕೆ ಯಾವುದೇ ನಿರ್ಭಂದವಿರಬಾರದು ಮತ್ತು ನೀರಿನ ಸೌಂದರ್ಯತೆಯನ್ನು ಸವಿಯಲು ಬಯಸುವ ಜನರಿಗೆ ಕ್ರೂಸ್ ಪ್ಯಾಕೇಜ್ ಗಳನ್ನು ಭಾರತವು ಒದಗಿಸುತ್ತದೆ

ಕೇರಳದ ಹಿನ್ನೀರುಗಳು

ಕೇರಳದ ಹಿನ್ನೀರುಗಳು

ಸಮುದ್ರದ ಬದಿಯಲ್ಲಿ ನಿಂತು ಸೂರ್ಯಾಸ್ತಮಾನವನ್ನು ನೋಡಲು ಬಯಸುವವರಿಗೆ ಕೇರಳದ ಹಿನ್ನೀರಿನ ನೆಲೆಗಳು ಸೂಕ್ತವಾಗಿದೆ. ಅಲ್ಲೆಪ್ಪಿ, ಕುಟ್ಟನಾಡು, ಕುಮಾರಕೋಂನ ಹಿನ್ನೀರಿನ ತಾಣಗಳು ಇಲ್ಲಿಯ ಪ್ರಖ್ಯಾತವಾದುದಾಗಿದ್ದು,

ದೇವರ ಸ್ವಂತ ನಾಡೆನಿಸಿದ ಇಂತಹ ಜಾಗಗಳಲ್ಲಿ ಹೌಸ್ ಬೋಟ್ ನಲ್ಲಿ ಸವಾರಿ ಮಾಡುವುದು ಜನಪ್ರಿಯವಾಗಿದೆ. ಈ ಶ್ರೀಮಂತ ಕರಾವಳಿ ಪ್ರದೇಶದಲ್ಲಿನ ಅದ್ಭುತವಾದ ಹವಾಮಾನ, ಇಲ್ಲಿಯ ಹಿನ್ನೀರು ಇತ್ಯಾದಿಗಳಿಂದ ಕೇರಳವು ನಿಜವಾಗಿಯೂ ಸೌಂದರ್ಯಮಯವಾಗಿದೆ.

PC: Sarath Kuchi

ಸುಂದರ್ಬನ್ಸ್

ಸುಂದರ್ಬನ್ಸ್

ಸುಂದರ್ಬನ್ಸ್ ನ ಸುತ್ತಲಿರುವ ಅದ್ಭುತವಾದ ನದಿಗಳು ಈವಾಗ ತಾನೇ ಅನ್ವೇಷಿಸಲ್ಪಟ್ಟಿದುದಾಗಿದೆ. ಬಂಗಾಳದ ಇನ್ನೂ ಅನ್ವೇಷಣೆಯಲ್ಲಿರುವ ಈ ಜಲಮಾರ್ಗಗಳ ಮೂಲಕ ಸಂಚಾರವು ನಿಜವಾಗಿಯೂ ದೇಶದ ಒಂದು ಅದ್ಬುತವಾದ ಅನುಭವವಾಗಿದೆ.

ಈ ಸಮುದ್ರ ಸಂಚಾರವು ನಿಮ್ಮನ್ನು ಸುಂದರವಾದ ಸಮುದ್ರದಲ್ಲಿ ಕೊಂಡೊಯ್ಯುತ್ತದೆ. ದ್ವೀಪಗಳು ಮತ್ತು ಸುಂದರ್ಬನ್ಸ್ ನ ತಳಗಳು, ಅವುಗಳ ಶ್ರೀಮಂತ ಸಸ್ಯಗಳು ಮತ್ತು ಪ್ರಾಣಿಗಳು ಇತ್ಯಾದಿಗಳನ್ನು ನೋಡಲು ಪ್ರಕೃತಿ ಪ್ರೇಮಿಗಳು ಇಲ್ಲಿಗೆ ಭೇಟಿ ನೀಡಬೇಕು.

PC: joiseyshowaa

ಅಂಡಮಾನ್ ದ್ವೀಪಗಳು

ಅಂಡಮಾನ್ ದ್ವೀಪಗಳು

ಗ್ರೀಸ್ ಭಾರತದಲ್ಲಿದ್ದರೆ, ಅದು ಅಂಡಮಾನಿನ ಆಕರ್ಷಕ ದ್ವೀಪಗಳಲ್ಲಿ ಕಂಡುಬರುತ್ತದೆ. ಭಾರತದ ಮುಖ್ಯ ಭೂಮಿಯಿಂದ ಅಂಡಮಾನ್ ಗೆ ಸಮುದ್ರ ಸಂಚಾರ ಮಾಡುವುದು ನಿಜವಾಗಿಯೂ ಭಾರತದ ಒಂದು ಉತ್ತಮ ಸಮುದ್ರ ಸಂಚಾರಗಳಿಗೆ ಉದಾಹರಣೆಯಾಗಿದೆ ಮತ್ತು ಬೀಚ್ ಮತ್ತು ಇದರ ಆಳಗಳಲ್ಲಿ ಇಳಿಯುವ ಉತ್ಸಾಹಿಗಳಿಗೆ ಇದು ಒಂದು ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ಅನೇಕ ಬೋಟ್ ಗಳನ್ನು ಕಾಣಬಹುದು ಇವುಗಳು ನಿಮ್ಮನ್ನು ಈ ದ್ವೀಪಗಳಿಗೆ ಸುತ್ತಾಡಿಸುತ್ತವೆ. ಇವುಗಳಲ್ಲಿ ಗಾಜಿನ ಅಂತಸ್ತಿರುವವು ಉತ್ತಮವಾಗಿರುತ್ತದೆ ಇದರಿಂದ ನೀವು ಸಮುದ್ರದ ಮಾಂತಿಕ ನೋಟವನ್ನು ನೋಡಲು ಅನುಕೂಲವಾಗುತ್ತದೆ.

PC: mOTHrEPUBLIC

ಡಿಬ್ರು - ಸೈಕ್ಹೋಹಾ

ಡಿಬ್ರು - ಸೈಕ್ಹೋಹಾ

ದೇಶದಲ್ಲಿ ಯಾವ ರೀತಿಯ ಸಸ್ಯ ಮತ್ತು ಪ್ರಾಣಿಗಳ ಅಸ್ತಿತ್ವವು ನಿಜವಾಗಿಯೂ ಅಸ್ತಿತ್ವದಲ್ಲಿದೆಯೆಂದು ನೀವು ಯೋಚಿಸಿದ್ದೀರಾ? ಅಸ್ಸಾಂನ ಈ ವಿಹಾರ ನೌಕೆಯು ಇದರ ದೃಶ್ಯಾವಳಿಗಳು ನಿಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತದೆ.

ಇಲ್ಲಿ ಸಂಚಾರ ಮಾಡುತ್ತಿರುವಾಗ ನಿಮ್ಮ ಸುತ್ತಲೂ ವಿವಿಧ ಪ್ರಭೇದದ ಮತ್ತು ಅಪರೂಪದ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಕಾಣಬಹುದು. ಮೋಡಗಳಿಲ್ಲದ ಆಕಾಶದ ಹಿನ್ನೆಲೆಯಲ್ಲಿ ಭವ್ಯವಾದ ಹಸಿರು ಬೆಟ್ಟಗಳು ಸಹ ಇವೆ, ನೀವು ವಿಶ್ರಾಂತಿ ಮಾಡುವಾಗ ಅದು ಖಂಡಿತವಾಗಿಯೂ ನಿಮ್ಮ ಮೇಲೆ ನಿಧಾನವಾಗಿ ಉತ್ತಮ ಪ್ರಭಾವವನ್ನು ಬೀರುತ್ತದೆ.

PC: Trideep Dutta Photography

ಚಿಲ್ಕಾ ಸರೋವರ

ಚಿಲ್ಕಾ ಸರೋವರ

ಚಿಲ್ಕಾ ಸರೋವರದಲ್ಲಿ ವಿಹಾರ ಮಾಡುವುದು ನಿಜವಾಗಿಯೂ ಒಂದು ಅದ್ಬುತವಾದ ಅನುಭವವಾಗಿದ್ದು ಇದು ನಯನಮನೋಹರವಾದ ಸವಾರಿ ಮಾತ್ರವಲ್ಲದೆ ಇಲ್ಲಿ ವಲಸೆ ಬಂದ ವಿವಿಧ ಬಗೆಯ ಹಲವಾರು ಪಕ್ಷಿಗಳನ್ನು ಕಾಣಬಹುದು.

ಇಲ್ಲಿ ವಾಸಿಸುವ ಜಲಪಕ್ಷಿ, ಕೊಕ್ಕರೆಗಳು, ಎಲ್ಲವೂ ಒಂದು ಸ್ವರ್ಗದ ಅನುಭವನ್ನುಂಟು ಮಾಡುತ್ತದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ರಾಜಹಂಸ ಬೀಚ್ ನಲ್ಲಿ ಕಾಣಸಿಗುವ ಡಾಲ್ಫಿನ್ ಗಳು. ಪಕ್ಷಿ ಪ್ರೀಯರು ಮತ್ತು ಛಾಯಗ್ರಹಣ ಉತ್ಸಾಹಿಗಳಿಗೆ ತಮ್ಮ ಅಭಿರುಚಿಯನ್ನು ಹೆಚ್ಚಿಸಲು ಖಂಡಿತವಾಗಿಯೂ ಈ ಸರೋವರದ ಭೇಟಿಯು ಒಂದು ಸ್ವರ್ಣ ಅವಕಾಶವಾಗಿದೆ.

PC: Arpitargal1996

ಯಾನಮ್

ಯಾನಮ್

ಯನಮ್ ನದಿಯು ಗೋದಾವರಿ ನದಿಯ ಪ್ರಮುಖ ಉಪನದಿಯಾಗಿದೆ, ಇದು ಕೆಲವು ಸುಂದರ ದೃಶ್ಯ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಇಲ್ಲಿಯ ದಿನವಿಡೀಯ ವಿಹಾರವು ನಿಮಗೆ ತೆಂಗಿನ ಮರಗಳು ಮತ್ತು ಹಿನ್ನೀರಿನ ಹಸಿರು ಬಣ್ಣವನ್ನು ಹೊಂದಿರುವ ತೀರಗಳನ್ನೊಳಗೊಂಡ ಹಲವಾರು ಮೀನುಗಾರಿಕಾ ಹಳ್ಳಿಗಳನ್ನು ಕಾಣಬಹುದು.

ಈ ವಿಹಾರವು ನಿಮ್ಮನ್ನು ನದಿ ಮತ್ತು ಬಂಗಾಳಕೊಲ್ಲಿಯ ಸಂಗಮ ಸ್ಥಳಕ್ಕೆ ಕೊಂಡೊಯ್ಯುತ್ತದೆ. ಇದು ವೈಡೂರ್ಯ ಮತ್ತು ಬೂದಿ ಬಣ್ಣದ ನೀರಿನ ಒಂದು ಅದ್ಭುತ ನೋಟವನ್ನು ನೀಡುತ್ತದೆ.

PC: Imahesh3847


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X