Search
  • Follow NativePlanet
Share
» »ತಮಿಳುನಾಡಿನ ಜನಾಕರ್ಷಣೆಯ ತಾಣಗಳು

ತಮಿಳುನಾಡಿನ ಜನಾಕರ್ಷಣೆಯ ತಾಣಗಳು

By Vijay

ದಕ್ಷಿಣ ಭಾರತದ ಪ್ರಬುದ್ಧ ಪ್ರವಾಸಿ ಆಕರ್ಷಣೆಯ ರಾಜ್ಯಗಳ ಪೈಕಿ ತಮಿಳುನಾಡು ರಾಜ್ಯವೂ ಸಹ ಒಂದು. ವಿಶಿಷ್ಟ ತಮಿಳು ಸಂಸ್ಕೃತಿ, ಸಂಪ್ರದಾಯ ಹಾಗೂ ಆಚರಣೆಗಳನ್ನು ಹೊಂದಿರುವ ಈ ರಾಜ್ಯವು ದೇವಾಲಯಗಳಿಂದ ಹಿಡಿದು ಕಡಲ ತೀರಗಳವರೆಗೆ, ಆಧುನಿಕ ಕಟ್ಟಡಗಳಿಂದ ಕಂಗೊಳಿಸುವ ನಗರಗಳಿಂದ ಹಿಡಿದು ಪ್ರಕೃತಿ ಸೌಂದರ್ಯ ತುಂಬಿ ಹರಿಯುತ್ತಿರುವ ಕಾಡುಗಳವರೆಗೆ ಹಲವು ಜನಾಕರ್ಷಣೆಯ ತಾಣಗಳನ್ನು ಒದಗಿಸುತ್ತದೆ.

ತಮಿಳುನಾಡು ರಾಜ್ಯವು ಹೆಚ್ಚಾಗಿ ಗುರುತಿಸಲ್ಪಟ್ಟಿದ್ದು, ತನ್ನಲ್ಲಿರುವ ಪ್ರಮುಖ ದೇವಾಲಯಗಳಿಂದಾಗಿ. ಅಲ್ಲದೆ ಈ ರಾಜ್ಯವು ಹಲವು ಆಕರ್ಷಕ ಕಡಲ ತೀರಗಳನ್ನೂ ಸಹ ಹೊಂದಿದ್ದು ಚೆನ್ನೈ ನಗರದ ಮರಿನಾ ಕಡಲ ತೀರವು 13 ಕಿ.ಮೀ ಗಳಷ್ಟು ಉದ್ದವಿದ್ದು ದೇಶದ ಮೊದಲ ಹಾಗೂ ವಿಶ್ವದ ಎರಡನೇಯ ಉದ್ದದ ತೀರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ ಪ್ರಕೃತಿ ಸಂಪತ್ತನ್ನು ಆರಾಧಿಸುವವರಿಗೂ ಸಹ ಇಲ್ಲಿ ಸಾಕಷ್ಟು ಮನೋಹರವಾದ ಬೆಟ್ಟಗುಡ್ಡ ಪ್ರದೇಶಗಳು, ಗಿರಿಧಾಮಗಳು, ಕೆರೆ-ತೊರೆಗಳು, ನದಿಗಳು, ಹಚ್ಚ ಹಸಿರಿನಿಂದ ಕೂಡಿದ ಕಾಡುಗಳು ಕೈ ಚಾಚಿ ಬರಮಾಡಿಕೊಳ್ಳುತ್ತವೆ.

ಇನ್ನುಳಿದಂತೆ ಆಯಾ ಧರ್ಮಗಳ ಧಾರ್ಮಿಕಾಸಕ್ತರಿಗೆ ಮನ ತೃಪ್ತಿಯಾಗುವಂತೆ ಚರ್ಚುಗಳು, ಮಸೀದಿಗಳು, ಆಶ್ರಮಗಳು, ದೇವಸ್ಥಾನಗಳನ್ನು ರಾಜ್ಯದ ವಿವಿಧ ಪಟ್ಟಣ ಹಾಗೂ ನಗರಗಳಲ್ಲಿ ಕಾಣಬಹುದು. ಪ್ರಸ್ತುತ ಲೇಖನವು ಯಾವುದೆ ಒಂದು ನಿರ್ದಿಷ್ಟ ತಾಣಕ್ಕೆ ಸೀಮಿತವಾಗಿರದೆ ರಜ್ಯದಲ್ಲಿರುವ ಕೆಲವು ಪ್ರಮುಖ ಹಾಗೂ ಜನಾಕರ್ಷಣೆಯ ತಾಣಗಳ ಕುರಿತು ಪರಿಚಯಿಸುತ್ತದೆ.

ಅರಿಜ್ಞರ್ ಅನ್ನಾ ಪ್ರಾಣಿ ಸಂಗ್ರಹಾಲಯ:

ಅರಿಜ್ಞರ್ ಅನ್ನಾ ಪ್ರಾಣಿ ಸಂಗ್ರಹಾಲಯ:

ತಮಿಳುನಾಡಿನ ರಾಜಧಾನಿ ಚೆನ್ನೈ ನಗರದಲ್ಲಿರುವ ಈ ಪ್ರಾಣಿ ಸಂಗ್ರಹಾಲಯವು ಮಕ್ಕಳಿಂದ ಹಿಡಿದು ಹಿರಿಯರೂ ಇಷ್ಟ ಪಡುವ ನೆಚ್ಚಿನ ಆಕರ್ಷಣೆ. ನಗರ ಕೇಂದ್ರದಿಂದ ಸುಮಾರು 30 ಕಿ.ಮೀ ದೂರವಿರುವ ಈ ಪ್ರಾಣಿಸಂಗ್ರಹಾಲಯವು ಸ್ಥಾಪನೆಗೊಂಡಿದ್ದು 1855 ರಲ್ಲಿ. ಪ್ರಾರಂಭವಾದಾಗ ಇದು ದೇಶದ ಪ್ರಪ್ರಥಮ ಸಾರ್ವಜನಿಕೆ ಪ್ರಾಣಿ ಸಂಗ್ರಹಾಲಯವಾಗಿತ್ತು. 1490 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಆವರಿಸಿರುವ ಈ ಸಂಗ್ರಹಾಲಯದಲ್ಲಿ 2012 ರ ಅಂಕಿ ಅಂಶಗಳ ಪ್ರಕಾರ 2553 ಬಗೆಯ ಜೀವಸಂಕುಲಗಳ ವಾಸವಿತ್ತು.

ಚಿತ್ರಕೃಪೆ: Jbarta

ಅರಿಜ್ಞರ್ ಅನ್ನಾ ಪ್ರಾಣಿ ಸಂಗ್ರಹಾಲಯ:

ಅರಿಜ್ಞರ್ ಅನ್ನಾ ಪ್ರಾಣಿ ಸಂಗ್ರಹಾಲಯ:

ಇಂದಿಗೂ ಸಾಕಷ್ಟು ಸಂಖ್ಯೆಯಲ್ಲಿ ವಿವಿಧ ಪ್ರಾಣಿ, ಪಕ್ಷಿಗಳಲ್ಲದೆ ವಿವಿಧ ಸರಿಸೃಪಗಳು ಹಾಗೂ ಇತರೆ ಜೀವಿ ಜಂತುಗಳನ್ನು ಇಲ್ಲಿ ಕಾಣಬಹುದು. ಈ ಪ್ರಾಣಿ ಸಂಗ್ರಹಾಲಯ ದೇಶದಲ್ಲೆ ಬೃಹತ್ತಾಗಿರುವ ಪ್ರಾಣಿ ಸಂಗ್ರಹಾಲಯ.

ಚಿತ್ರಕೃಪೆ: Vinc3PaulS

ಮರಿನಾ ಕಡಲ ತೀರ:

ಮರಿನಾ ಕಡಲ ತೀರ:

ಚೆನ್ನೈ ನಗರದ ಮತ್ತೊಂದು ಪ್ರಮುಖ ಹಾಗೂ ಸದಾ ಪ್ರವಾಸಿಗರಿಂದ ತುಂಬಿರುವ ಆಕರ್ಷಣೆ ಎಂದರೆ ಮರಿನಾ ಕಡಲ ತೀರ. ಈ ಕಡಲ ತೀರವು 13 ಕಿ.ಮೀ ಗಳಷ್ಟು ಉದ್ದವಿದ್ದು ದೇಶದ ಮೊದಲ ಹಾಗೂ ವಿಶ್ವದ ಎರಡನೇಯ ಉದ್ದದ ತೀರ ಎಂಬ ಮನ್ನಣೆಗಳಿಸಿದೆ.

ಚಿತ್ರಕೃಪೆ: Aleksandr Zykov

ಆನಮಲೈ ಬೆಟ್ಟಗಳು:

ಆನಮಲೈ ಬೆಟ್ಟಗಳು:

ತಮಿಳುನಾಡು ಹಾಗೂ ಕೇರಳ ಎರಡೂ ರಾಜ್ಯಗಳಲ್ಲಿ ಆವರಿಸಿರುವ ಆನಮಲೈ ಬೆಟ್ಟಗಳು ಸುಂದರವಾದ ಪಶ್ಚಿಮ ಘಟ್ಟಗಳಲ್ಲಿ ಹುದುಗಿಕೊಂಡಿವೆ. ಈ ಶ್ರೇಣಿಗಳಲ್ಲಿ ಹಲವು ವಿಶಿಷ್ಟ ಪಕ್ಷಿ ಹಾಗೂ ಪ್ರಾಣಿ ಪ್ರಬೇಧಗಳು, ಜಲಪಾತ ಹಾಗೂ ಉತ್ಕೃಷ್ಟ ಮಟ್ಟದ ನಿಸರ್ಗ ಸೌಂದರ್ಯವನ್ನು ಅನುಭವಿಸಬಹುದು.

ಚಿತ್ರಕೃಪೆ: Siva301in

ಆನಮಲೈ ಬೆಟ್ಟಗಳು:

ಆನಮಲೈ ಬೆಟ್ಟಗಳು:

ಆನಮಲೈ ಬೆಟ್ಟಗಳ ಸರಹದ್ದಿನಲ್ಲಿ ಬರುವ ಮತ್ತೊಂದು ತಾಣ ವಾಲ್ಪಾರೈ. ಇದು "ತಮಿಳುನಾಡಿನ ಚೀರಾಪುಂಜಿ" ಎಂದೆ ಪ್ರಖ್ಯಾತವಾಗಿದೆ. ರಾಜ್ಯದ ಈ ನಿರ್ದಿಷ್ಟ ಭಾಗವು ಹೆಚ್ಚಿನ ಪ್ರಮಾಣದಲ್ಲಿ ಮಳೆಯನ್ನು ಪಡೆಯುತ್ತದೆ. ವಾಲ್ಪಾರೈನಲ್ಲಿರುವ ಚಿನ್ನಕಲ್ಲಾರ್ ಜಲಪಾತ.

ಅರೋವಿಲ್:

ಅರೋವಿಲ್:

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಅರೋವಿಲ್ ಪಾಂಡಿಚೆರಿಗೆ ಹತ್ತಿರದಲ್ಲಿರುವ ಒಂದು ಆಧುನಿಕ ಪಟ್ಟಣವಾಗಿದೆ. "ಮಾತೆ" ಎಂದೆ ಪ್ರಸಿದ್ಧರಾಗಿದ್ದ ಮಿರ್‍ರಾ ಅಲ್ಫಾಸಾರವರ ಇಚ್ಛೆಯಂತೆ ಈ ಪಟ್ಟಣವು ರೋಜರ್ ಆಂಗರ್ ಎಂಬ ವಾಸ್ತು ಶಿಲ್ಪಿಯ ಪರಿಕಲ್ಪನೆಯಿಂದ 1968 ರೂಪಿತವಾಗಿದೆ. ಈ ಪಟ್ಟಣದ ಮುಖ್ಯ ಉದ್ದೇಶ, ಸರ್ವ ಜನರು ಯಾವುದೆ ಜಾತಿ, ಧರ್ಮ, ಬಣ್ಣ, ರಾಷ್ಟ್ರ ಎಂಬ ಭೇದ ಭಾವ ಮಾಡದೆ ಸಾಮರಸ್ಯದಿಂದ ಜೀವನ ನಡೆಸುವುದಾಗಿದೆ. ಇಲ್ಲಿರುವ ಮಾತ್ರಿಮಂದಿರ ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರಕೃಪೆ: Santoshnc

ಗಾಂಧಿ ಮಂಟಪ:

ಗಾಂಧಿ ಮಂಟಪ:

ತಮಿಳುನಾಡಿನ ಪ್ರಸಿದ್ಧ ಕ್ಷೇತ್ರ ಕನ್ಯಾಕುಮಾರಿಯಲ್ಲಿರುವ ಗಾಂಧಿ ಮಂಟಪವು ಒಂದು ವಿಶಿಷ್ಟವಾದ ಗಾಂಧಿ ದೇವಾಲಯವಾಗಿದ್ದು ಜನಾಕರ್ಷಣೆಯ ಕೇಂದ್ರವಾಗಿದೆ. ಗಂಧೀಜಿಯವರ ಬೂದಿಗಡಿಗೆಯನ್ನು ನೀರಿನಲ್ಲಿ ವಿಸರ್ಜಿಸುವುದಕ್ಕಿಂತ ಮುಂಚೆ ಈ ಸ್ಥಳದಲ್ಲಿ ಇರಿಸಲಾಗಿತ್ತು. ಈ ಮಂಟಪವನ್ನು ಹೇಗೆ ನಿರ್ಮಿಸಲಾಗಿದೆ ಎಂದರೆ ಅಕ್ಟೋಬರ್ 2 ಗಾಂಧೀಜಿಯವರ ಹುಟ್ಟು ದಿನದಂದು ಪ್ರಥಮ ಸೂರ್ಯ ಕಿರಣವು ಅವರ ಅಸ್ಥಿ ಇರಿಸಿದ ಜಾಗದಲ್ಲೆ ಬೀಳುತ್ತದೆ.

ಹೊಗೇನಕಲ್ ಜಲಪಾತ:

ಹೊಗೇನಕಲ್ ಜಲಪಾತ:

ಕನ್ನಡದ ಹೊಗೆ ಎಂಬ ಪದದಿಂದ ಕೂಡಿರುವ ಜಲಪಾತವು ಅಕ್ಷರಶಃ ಹೊಗೆ ಆವರಿಸಿದಂತೆ ಗೋಚರಿಸುತ್ತದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಈ ಜಲಪಾತವು ಕರ್ನಾಟಕ - ತಮಿಳುನಾಡುಗಳ ಗಡಿ ಭಾಗದಲ್ಲಿದ್ದು ಕಾವೇರಿ ನದಿಯಿಂದ ಉಂಟಾಗಿದೆ. ಇದು ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Mithun Kundu

ಹೊಗೇನಕಲ್ ಜಲಪಾತ:

ಹೊಗೇನಕಲ್ ಜಲಪಾತ:

ಮತ್ತೊಂದು ವಿಶೇಷತೆ ಎಂದರೆ ಈ ಜಲಪಾತ ತಾಣದಲ್ಲಿ ಮೀನುಗಳನ್ನು ಮಾರಲಾಗುತ್ತದೆ ಹಾಗೂ ನೀವು ನಿಗದಿಪಡಿಸುವ ಬೆಲೆಯಲ್ಲಿ ಬರಿ ಮೀನು ಮಾತ್ರವಲ್ಲ ಅದನ್ನು ತಿನ್ನಲು ಸಿದ್ಧ ಅನ್ನುವಂತೆ ಬೇಯಿಸಿ ಕೂಡ ಕೊಡಲಾಗುತ್ತದೆ.

ಚಿತ್ರಕೃಪೆ: Justinvijesh

ಜವಾದ್ ಬೆಟ್ಟ ಶ್ರೇಣಿ:

ಜವಾದ್ ಬೆಟ್ಟ ಶ್ರೇಣಿ:

ತಮಿಳುನಾಡಿನ ವೇಲೂರು (ವೆಲ್ಲೋರ್) ಜಿಲ್ಲೆಯಲ್ಲಿ ಕಂಡುಬರುವ ಜವಾದ್ ಬೆಟ್ಟ ಶ್ರೇಣಿಯು ಪೂರ್ವ ಘಟ್ಟಗಳಲ್ಲಿ ಕಂಡುಬರುವ ಎತ್ತರದ ಪರ್ವತ ಶ್ರೇಣಿಗಳಲ್ಲಿ ಒಂದಾಗಿದ್ದು ವೈವಿಧ್ಯಮಯ ಕೀಟಗಳ ಸಂಪತ್ತಿನಿಂದ ಸಂಪದ್ಭರಿತವಾಗಿದೆ. 80 ಕಿ.ಮೀ ಅಗಲ ಹಾಗೂ 50 ಕಿ.ಮೀ ಗಳಷ್ಟು ಉದ್ದವಿರುವ ಈ ಪರ್ವತ ಶ್ರೇಣಿಯು ಪೂರ್ವ ಹಾಗೂ ಪಶ್ಚಿಮ ಭಾಗಗಳು ಎಂದು ಚೆಯ್ಯಾರ್ ಹಾಗೂ ಅಗರಂ ನದಿಗಳಿಂದ ವಿಂಗಡನೆಗೊಂಡಿದೆ.

ಚಿತ್ರಕೃಪೆ: Saravananrajm

ಕನ್ಯಾಕುಮಾರಿ:

ಕನ್ಯಾಕುಮಾರಿ:

ತಮಿಳುನಾಡಿನ ಕನ್ಯಾಕುಮಾರಿ ಪಟ್ಟಣವು ಭಾರತದ ದಕ್ಷಿಣದ ತುತ್ತ ತುದಿಯಾಗಿದೆ. ಪುರಾತನ ಪಟ್ಟಣವಾದ ಕನ್ಯಾಕುಮಾರಿಯು ಧಾರ್ಮಿಕ ಕ್ಷೇತ್ರವಾಗಿಯೂ, ಪ್ರವಾಸಿ ಆಕರ್ಷಣೆಯಾಗಿಯೂ ಹೆಸರುವಾಸಿಯಾಗಿದೆ. ಇಲ್ಲಿರುವ ಮುಖ್ಯ ದೇವಾಲಯದ ಕನ್ಯಾ ಕುಮಾರಿಯು ಒಬ್ಬ ದೇವಿಯಾಗಿದ್ದು ಇವಳನ್ನು ಶ್ರೀಕೃಷ್ಣನ ತಂಗಿ ಎಂದು ಪರಿಗಣಿಸಲಾಗಿದೆ.

ಚಿತ್ರಕೃಪೆ: 5061RR

ಕೊಡೈಕೆನಲ್ ಕೆರೆ:

ಕೊಡೈಕೆನಲ್ ಕೆರೆ:

ಕೊಡೈ ಕೆರೆ ಎಂತಲೂ ಕರೆಯಲ್ಪಡುವ ಈ ಸುಂದರವಾದ ಸರೋವರವು ದಿಂಡುಗಲ್ ಜಿಲ್ಲೆಯ ಕೊಡೈಕೆನಲ್ ಗಿರಿಧಾಮದಲ್ಲಿದೆ. ಸುಂದರವಾದ ಹಸಿರಿನ ಮಧ್ಯೆ ಅದರಲ್ಲೂ ವಿಶೇಷವಾಗಿ ಬೇಸಿಗೆಯ ಸಮಯದಲ್ಲಿ ಇಲ್ಲಿನ ಕೆರೆಯಲ್ಲಿ ದೋಣಿ ವಿಹಾರ ಮಾಡುವುದು ಅತಿ ಸಂತೋಷದಾಯಕ ಅನುಭವ ನೀಡುತ್ತದೆ. ಆದ್ದರಿಂದ ಈ ಕೆರೆಯು ಒಂದು ಜನಾಕರ್ಷಣೆಯ ಕೇಂದ್ರವಾಗಿದೆ.

ಚಿತ್ರಕೃಪೆ: Challiyan

ಮದುರೈ ಮೀನಾಕ್ಷಿ ದೇವಾಲಯ:

ಮದುರೈ ಮೀನಾಕ್ಷಿ ದೇವಾಲಯ:

ಮೀನಾಕ್ಷಿ ಸುಂದರೇಶ್ವರ ಅಥವಾ ಮೀನಾಕ್ಷಿ ಅಮ್ಮನವರ ದೇವಾಲಯದಿಂದಾಗಿ ಮದುರೈ ಅತಿ ಪ್ರಮುಖವಾದ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ. ಮತ್ತೊಂದು ರೋಚಕದ ಸಂಗತಿ ಎಂದರೆ ಮದುರೈ ನಗರವು ಇಂದಿಗೂ ಜನವಸತಿ ಇರುವ ಜಗತ್ತಿನ ಅತಿ ಪುರಾತನ ನಗರಗಳ ಪೈಕಿ ಒಂದಾಗಿದೆ. ಎಂದೂ ನಿದ್ರಿಸಲಾರದ ನಗರ ಎಂಬ ಹಣೆಪಟ್ಟಿಯ ಮದುರೈ ಕುರಿತು ಹೆಚ್ಚು ಓದಿ.

ಚಿತ್ರಕೃಪೆ: Rengeshb

ಮಹಾಬಲಿಪುರಂ:

ಮಹಾಬಲಿಪುರಂ:

ಮಾಮಲ್ಲಪುರಂ ಎಂತಲೂ ಕರೆಯಲ್ಪಡುವ ಮಹಾಬಲಿಪುರಂ ಕಾಂಚೀಪುರಂ ಜಿಲ್ಲೆಯಲ್ಲಿರುವ ಒಂದು ಅಮೋಘ ಪಟ್ಟಣವಾಗಿದೆ. ಚೆನ್ನೈನಿಂದ 60 ಕಿ.ಮೀ ದೂರದಲ್ಲಿರುವ ಮಹಾಬಲಿಪುರಂ ಪಾಲವರ ಕಾಲದ ಒಂದು ಪುರಾತನ ಬಂದರು ನಗರಿಯಾಗಿದ್ದು ಹಲವು ಐತಿಹಾಸಿಕ ಮಹತ್ವವುಳ್ಳ ಅದ್ಭುತ ಸ್ಮಾರಕಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: J'ram DJ

ಮಂಜಂಪಟ್ಟಿ ಕಣಿವೆ:

ಮಂಜಂಪಟ್ಟಿ ಕಣಿವೆ:

ಇದೊಂದು ಕೊಯಮತ್ತೂರಿನಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಉದ್ಯಾನದ ಪೂರ್ವದಲ್ಲಿರುವ ರಕ್ಷಿತ ಪ್ರದೇಶವಾಗಿದೆ. ವೈವಿಧ್ಯಮಯ ಜೀವಸಂಕುಲದಿಂದ ಸಂಪದ್ಭರಿತವಾಗಿದೆ ಈ ಕಣಿವೆ ಪ್ರದೇಶ.

ಚಿತ್ರಕೃಪೆ: Marcus334

ಮೆಟ್ಟುಪಾಳ್ಯಂ:

ಮೆಟ್ಟುಪಾಳ್ಯಂ:

ಕೊಯಮತ್ತೂರು ಗ್ರಾಮೀಣ ಜಿಲ್ಲೆಯ ಕೊಯಮತ್ತೂರು ಪಟ್ಟಣದಿಂದ ಸುಮಾರು 38 ಕಿ.ಮೀ ದೂರದಲ್ಲಿ ಊಟಿಗೆ ಹೋಗುವ ದಾರಿಯಲ್ಲಿದೆ ಮೆಟ್ಟುಪಾಳ್ಯಂ ಪಟ್ಟಣ. ಜನಪ್ರಿಯ ಪ್ರವಾಸಿ ಆಕರ್ಷಣೆ ನೀಲ್ಗಿರಿ ಮೌಂಟೆನ್ ರೈಲಿನ ಜಂಕ್ಷನ್ ಆಗಿ ನೀಲ್ಗಿರಿ ಬೆಟ್ಟಗಳ ತುದಿಯಲ್ಲಿರುವ ಈ ತಾಣವು ಕಾರ್ಯ ನಿರ್ವಹಿಸುತ್ತದೆ.

ಚಿತ್ರಕೃಪೆ: AHEMSLTD

ಪದ್ಮನಾಭಪುರಂ ಅರಮನೆ:

ಪದ್ಮನಾಭಪುರಂ ಅರಮನೆ:

ಕನ್ಯಾಕುಮಾರಿ ಜಿಲ್ಲೆಯ ಪದ್ಮನಾಭಪುರಂ ನಗರದಲ್ಲಿರುವ ಈ ಅರಮನೆಯು ಕೇರಳದ ಸಂಸ್ಕೃತಿ ಹಾಗೂ ವಾಸ್ತುಶಿಲ್ಪ ಸಮ್ಮಿಳಿಸಿರುವುದರ ಪ್ರತೀಕವಾಗಿದೆ. ಇದು ಕೂಡ ಒಂದು ಪ್ರಸಿದ್ಧ ಜನಾಕರ್ಷಣೆಯಾಗಿದೆ.

ಚಿತ್ರಕೃಪೆ: Infocaster

ಪುಲಿಕಟ್ ಕೆರೆ:

ಪುಲಿಕಟ್ ಕೆರೆ:

ತಮಿಳಿನಲ್ಲಿ ಪಳವೇರ್ಕಾಡು ಎಂದು ಕರೆಯಲ್ಪಡುವ, ಭಾರತದಲ್ಲಿ ಕಂಡುಬರುವ ಲವಣಯುಕ್ತ ನೀರಿನ ಕೆರೆಗಳ ಪೈಕಿ ಎರಡನೇಯ ಅತಿ ದೊಡ್ಡ ಕೆರೆಯಾಗಿದೆ. ಆಂಧ್ರ ಹಾಗೂ ತಮಿಳುನಾಡು ರಾಜಯಗಳ ಗಡಿಗಳಲ್ಲಿ ಆವರಿಸಿರುವ ಈ ಕೆರೆಯನ್ನು ಶ್ರೀಹರಿಕೋಟಾ ಎಂಬ ದ್ವೀಪವು ಬಂಗಾಳ ಕೊಲ್ಲಿಯಿಂದ ಪ್ರತ್ಯೇಕಿಸುತ್ತದೆ.

ಚಿತ್ರಕೃಪೆ: Santhosh Janardhanan

ರಾಮೇಶ್ವರಂ:

ರಾಮೇಶ್ವರಂ:

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿರುವ ರಾಮೇಶ್ವರಂ ಹಿಂದೂಗಳು ನಡೆದುಕೊಳ್ಳುವ ನಾಲ್ಕು ಪವಿತ್ರ ಧಾಮಗಳ ಪೈಕಿ ಒಂದಾಗಿದೆ. ಭಾರತದ ಮುಖ್ಯ ಭೂಮಿಯಿಂದ ಹೊರಭಾಗದಲ್ಲಿರುವ ಪಂಬನ್ ದ್ವೀಪದಲ್ಲಿ ರಾಮೇಶ್ವರಂ ಸ್ಥಿತವಿದೆ. ಇದನ್ನು ರಾಮೇಶ್ವರಂ ದ್ವೀಪವೆಂತಲೂ ಕರೆಯುತ್ತಾರೆ. ಈ ಸ್ಥಳದಿಂದಲೆ ಶ್ರೀ ರಾಮನು ರಾವಣನ ಲಂಕೆಗೆ ತೆರಳಲು ಸೇತು ನಿರ್ಮಿಸಿದ್ದನೆಂದು ಹೇಳಲಾಗಿದೆ. ಇಲ್ಲಿರುವ ಪಂಬನ್ ಸೇತುವೆಯಿಂದ ಈ ತಾಣವು ಭಾರತ ಮುಖ್ಯ ಭೂಮಿಯೊಂದಿಗೆ ಸಂಪರ್ಕ ಸಾಧಿಸುತ್ತದೆ.

ಚಿತ್ರಕೃಪೆ: Pramaanik

ರಾಮನಾಥಸ್ವಾಮಿ ದೇವಸ್ಥಾನ:

ರಾಮನಾಥಸ್ವಾಮಿ ದೇವಸ್ಥಾನ:

ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಸ್ಥಾನವು ಅತಿ ಪ್ರಮುಖವಾಗಿರುವುದಲ್ಲದೆ ಪವಿತ್ರವಾದ ಹನ್ನೆರಡು ಜ್ಯೋತಿರ್ಲಿಂಗ ತಾಂಅಗಳ ಪೈಕಿ ಒಂದಾಗಿದೆ. ರಾಮಾಯಣದ ಪ್ರಕಾರ, ರಾಮನು ಇಲ್ಲಿ ನೆಲೆಸಿರುವ ಶಿವನನ್ನು ಕುರಿತು, ತನ್ನ ಮಾನವ ಜನ್ಮದಲ್ಲಿ ತಿಳಿಯದೆ ಯಾವುದಾದರೂ ಪಾಪಗಳನ್ನು ಮಾಡಿದ್ದರೆ ಮನ್ನಿಸ ಬೇಕೆಂದು ಪ್ರಾರ್ಥಿಸಿದ್ದನಂತೆ.

ಚಿತ್ರಕೃಪೆ: Purshi

ಬೃಹದೇಶ್ವರ ದೇವಸ್ಥಾನ:

ಬೃಹದೇಶ್ವರ ದೇವಸ್ಥಾನ:

ವಾಸ್ತು ಶಿಲ್ಪ ಕಲೆಯ ದೃಷ್ಟಿಯಿಂದ ಹಿಂದೂ ದೇವಾಲಯಗಳನ್ನು ಗಮನಿಸುವಾಗ ಅಗ್ರಗಣ್ಯ ದೇವಸ್ಥಾನಗಳ ಪೈಕಿ ಒಂದಾಗಿ ನಿಲ್ಲುತ್ತದೆ ತಂಜಾವೂರಿನ ಬೃಹದೇಶ್ವರ ದೇವಸ್ಥಾನ. ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಈ ದೇವಸ್ಥಾನವು ಇರುವುದು ದೇವಾಲಯಗಳ ರಾಜ್ಯ ತಮಿಳುನಾಡಿನ ತಂಜಾವೂರು ಪಟ್ಟಣದಲ್ಲಿ. ಚೋಳ ಸಾಮ್ರಾಜ್ಯದ ದೊರೆ ಒಂದನೇಯ ರಾಜ ರಾಜ ಚೋಳನಿಂದ 1010 ರಲ್ಲಿ ನಿರ್ಮಿಸಲಾದ ಈ ದೇವಾಲಯ 2010 ಕ್ಕೆ ತನ್ನ ಸಾವಿರ ವರ್ಷಗಳನ್ನು ಪೂರ್ಣಗೊಳಿಸಿದೆ. ಬೃಹದೇಶ್ವರ ದೇವಸ್ಥಾನದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Thamizhpparithi Maari

ತಿರುಮಲೈ ನಾಯಕ್ಕರ್ ಮಹಲ್:

ತಿರುಮಲೈ ನಾಯಕ್ಕರ್ ಮಹಲ್:

ಮದುರೈನಲ್ಲಿರುವ ತಿರುಮಲೈ ನಾಯಕ್ಕರ್ ಮಹಲ್ ಅರಮನೆಯು ಒಂದು ಜನಾಕರ್ಷಣೆಯ ಕೇಂದ್ರವಾಗಿದೆ. ಮದುರೈ ನಾಯಕರ ಸಾಮ್ರಾಜ್ಯಾವಧಿಯಲ್ಲಿ ಆಳುತ್ತಿದ್ದ ತಿರುಮಲೈ ನಾಯಕ ದೊರೆಯಿಂದ ಸುಮಾರು 17 ನೇಯ ಶತಮಾನದಲ್ಲಿ ಈ ಅರಮನೆಯ ನಿರ್ಮಾಣವಾಗಿದೆ. ಈ ಅರಮನೆಯ ಸುಂದರವಾದ ವಾಸ್ತು ಶಿಲ್ಪವೆ ಜನಾಕರ್ಷಣೆಯ ಪ್ರಮುಖ ಅಂಶವಾಗಿದೆ.

ಚಿತ್ರಕೃಪೆ: Thamizhpparithi Maari

ತಿರುವಳ್ಳುವರ್ ಪ್ರತಿಮೆ:

ತಿರುವಳ್ಳುವರ್ ಪ್ರತಿಮೆ:

133 ಅಡಿಗಳಷ್ಟು ಎತ್ತರದ ತಮಿಳಿನ ಪುರಾತನ ಕವಿ ಶ್ರೇಷ್ಠ ತಿರುವಳ್ಳುವರ್ ಅವರ ಪ್ರತಿಮೆಯು ಕನ್ಯಾಕುಮಾರಿಯಲ್ಲಿದ್ದು ಒಂದು ಪ್ರಮುಖ ಜನಾಕರ್ಷಣೆಯಾಗಿದೆ. ಜನವರಿ 1, 2000 ದಂದು ಈ ಪ್ರತಿಮೆಯ ಉದ್ಘಾಟನೆ ಮಾಡಲಾಯಿತು. ಕನ್ಯಾಕುಮಾರಿ ಪಟ್ಟಣದ ಒಂದು ಚಿಕ್ಕ ದ್ವೀಪದಲ್ಲಿ ಈ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದ್ದು, ಈ ದ್ವೀಪವು ಎರಡು ಸಮುದ್ರಗಳು ಹಾಗೂ ಒಂದು ಸಾಗರವು ಸಮಾಗಮಗೊಳ್ಳುವ ಸ್ಥಳದಲ್ಲಿ ನೆಲೆಸಿದೆ.

ಚಿತ್ರಕೃಪೆ: Docku

ತೀರ್ಪಾರಪ್ಪು ಜಲಪಾತ:

ತೀರ್ಪಾರಪ್ಪು ಜಲಪಾತ:

ಕನ್ಯಾಕುಮಾರಿ ಜಿಲ್ಲೆಯಲ್ಲಿರುವ ತೀರ್ಪಾರಪ್ಪು ಎಂಬ ಸ್ಥಳದಲ್ಲಿ ಇದೆ ಹೆಸರಿನ ಈ ಸುಂದರ ಜನಾಕರ್ಷಣೆಯ ಜಲಪಾತವನ್ನು ಕಾಣಬಹುದು. ಕೊಡಯಾರ್ ನದಿಯಿಂದುಂಟಾಗುವ ಈ ಜಲಪಾತದ ನೀರು ಸುಮಾರು 50 ಅಡಿಗಳಷ್ಟು ಎತ್ತರದಿಂದ ಧುಮುಕುತ್ತದೆ. ಇದೂ ಕೂಡ ಒಂದು ಜನಪ್ರಿಯ ಜಲಪಾತವಾಗಿದೆ.

ಚಿತ್ರಕೃಪೆ: BishkekRocks

ತಿರುವಣ್ಣಾಮಲೈ:

ತಿರುವಣ್ಣಾಮಲೈ:

ತಮಿಳುನಾಡಿನ ತಿರುವಣ್ಣಾಮಲೈ ಪಟ್ಟಣವು ತನ್ನಲ್ಲಿರುವ ಅಣ್ಣಾಮಲಯರ್ ಅಥವಾ ಅರುಣಾಚಲೇಶ್ವರ ದೇವಸ್ಥಾನದಿಂದಾಗಿ ಹೆಚ್ಚು ಪ್ರಸಿದ್ಧವಾಗಿದೆ. ಇಲ್ಲಿ ಮಾಡಲಾಗುವ ಗಿರಿ ಪ್ರದಕ್ಷಿಣೆಯು ಪ್ರಖ್ಯಾತಿಗಳಿಸಿದೆ. ಪಂಚ ಮಹಾಭೂತಗಳಲ್ಲಿ ಒಂದಾಗಿರುವ ಇಲ್ಲಿನ ಅರುಣಾಚಲೇಶ್ವರ ದೇವಸ್ಥಾನವು ಅಗ್ನಿಯ ಪ್ರತೀಕವಾಗಿದೆ.

ಚಿತ್ರಕೃಪೆ: Adam Jones

ಊಟಿ:

ಊಟಿ:

ತಮಿಳುನಾಡಿನಲ್ಲಿರುವ ಮತ್ತೊಂದು ಹೆಸರಾಂತ ಗಿರಿಧಾಮ ಊಟಿ ಅಥವಾ ಉದಕಮಂಡಲಂ. ನೀಲ್ಗಿರಿ ಜಿಲ್ಲೆಯಲ್ಲಿ ಬರುವ ಊಟಿ ಗಿರಿಧಾಮವು ಪ್ರವಾಸಿಗರ ಅದರಲ್ಲೂ ನವ ದಂಪತಿಗಳ ಅತಿ ನೆಚ್ಚಿನ ಸ್ಥಳವಾಗಿದೆ.

ಚಿತ್ರಕೃಪೆ: Ghost Particle

ಊಟಿ:

ಊಟಿ:

ಊಟಿಯಲ್ಲಿರುವ ಜೈವಿಕ ಸಸ್ಯೋದ್ಯಾನವು ಮತ್ತೊಂದು ಜನಪ್ರಿಯ ಆಕರ್ಷಣೆಯಾಗಿದೆ. 22 ಎಕರೆಯಷ್ಟು ವಿಶಾಲವಾಗಿ ಹರಡಿರುವ ಈ ಉದ್ಯಾನದಲ್ಲಿ ನೂರಾರು ಬಗೆಯ, ಸಸ್ಯ ಸಂಕುಲಗಳನ್ನು ಕಾಣಬಹುದು. ಅಲ್ಲದೆ 20 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಪಳಿಯುಳಿಕೆಗೊಂಡ ಮರ ಇಲ್ಲಿರುವುದು ವಿಶೇಷ.

ಚಿತ್ರಕೃಪೆ: Marselectronics

ಊಟಿ ಕೆರೆ:

ಊಟಿ ಕೆರೆ:

ಸುಂದರವಾದ ಗಿರಿಧಾಮದಲ್ಲಿ ಹಚ್ಚ ಹಸಿರಿನ ಹಿತಕರವಾದ ವಾತಾವರಣದಲ್ಲಿ ಬಿಸಿ ಬಿಸಿ ಕಾಫಿ ಸೇವಿಸಿ ದೋಣಿ ವಿಹಾರವೆಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಊಟಿ ಕೆರೆಯು ಈ ಸುಂದರವಾದ ಅನುಭವವನ್ನು ನಿಮ್ಮದಾಗಿಸುತ್ತದೆ.

ಚಿತ್ರಕೃಪೆ: Woodthought

ಕಂಚಿ:

ಕಂಚಿ:

ಕಾಮಾಕ್ಷಿ ಅಮ್ಮನವರ ದೇವಸ್ಥಾನದಿಂದಾಗಿ ಪ್ರಸಿದ್ಧವಾಗಿರುವ ಕಾಂಚಿಪುರಂ ಕ್ಷೇತ್ರವು ತಮಿಳುನಾಡು ರಾಜ್ಯದಲ್ಲಿದ್ದು, ರಾಜಧಾನಿ ಚೆನ್ನೈ ನಗರದಿಂದ 72 ಕಿ.ಮೀ ದೂರದಲ್ಲಿದೆ. ಶೈವ ಹಾಗೂ ವೈಷ್ಣವ ಎರಡೂ ಸಮುದಾಯದವರಿಗೂ ಇದು ಪುಣ್ಯ ಕ್ಷೇತ್ರವಾಗಿದೆ. ಕಾಮಾಕ್ಷಿಯಲ್ಲದೆ ಅತಿ ಪುರಾತನವಾದ ಕೈಲಾಸನಾಥರ್ ದೇವಾಲಯ, ಪರಮೇಶ್ವರ ವಿನ್ನಗರಂ ದೇವಾಲಯ, ಏಕಾಂಬರೇಶ್ವರರ್ ದೇವಾಲಯ ಹಾಗೂ ವರದರಾಜ ಪೆರುಮಾಳ ದೇವಾಲಯಗಳನ್ನು ಕಾಣಬಹುದು.

ಚಿತ್ರಕೃಪೆ: Pratheepps

ವಿವೇಕಾನಂದ ಬಂಡೆ ಸ್ಮಾರಕ ದೇವಾಲಯ:

ವಿವೇಕಾನಂದ ಬಂಡೆ ಸ್ಮಾರಕ ದೇವಾಲಯ:

ಕನ್ಯಾಕುಮಾರಿ ಪಟ್ಟಣದಲ್ಲಿರುವ ವಾವತುರೈ ಎಂಬ ಹಳ್ಳಿಯಲ್ಲಿ ಸಮುದ್ರದಲ್ಲಿರುವ ಒಂದು ಅಗಾಧವಾದ ಬಂಡೆಯ ಮೇಲೆ ಈ ಸುಂದರ ಸ್ಮಾರಕ ದೇವಾಲಯವನ್ನು ಕಾಣಬಹುದು. ಭಾರತದ ಪ್ರಸಿದ್ಧ ಹಿಂದೂ ಧರ್ಮದ ಪ್ರವರ್ತಕರಾಗಿದ್ದ ಸ್ವಾಮಿ ವಿವೇಕಾನಂದರ ಇಲ್ಲಿಗೆ ಭೇಟಿ ನೀಡಿದ್ದರ ಗೌರವಾರ್ಥವಾಗಿ ಈ ಸ್ಮಾರಕವನ್ನು 1970 ರಲ್ಲಿ ನಿರ್ಮಿಸಲಾಗಿದೆ.

ಚಿತ್ರಕೃಪೆ: Coolgama

ವಿವೇಕಾನಂದ ಬಂಡೆ ಸ್ಮಾರಕ ದೇವಾಲಯ:

ವಿವೇಕಾನಂದ ಬಂಡೆ ಸ್ಮಾರಕ ದೇವಾಲಯ:

ರಾತ್ರಿಯ ಸಮಯದಲ್ಲಿ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಸ್ಮಾರಕ.

ಚಿತ್ರಕೃಪೆ: Nomad Tales

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X