Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಮೇಶ್ವರಂ » ಹವಾಮಾನ

ರಾಮೇಶ್ವರಂ ಹವಾಮಾನ

ರಾಮೇಶ್ವರಂಗೆ ಭೇಟಿ ನೀಡಲು ಉತ್ತಮ ಸಮಯ, ಸೂರ್ಯನ ಬಿಸಿ, ಅಧಿಕ ಉಷ್ಣವಿಲ್ಲದ ಚಳಿಗಾಲ. ಬೆಳಗಿನಿಂದ ಸಂಜೆಯವರೆಗೂ ಇಲ್ಲಿನ ಎಲ್ಲಾ ಸ್ಥಳಗಳನ್ನು ವೀಕ್ಷಿಸಬಹುದಾದ ವಾತಾವರಣವಿರುತ್ತದೆ. ಸ್ಥಿರ ತಾಪಮಾನ ಮತ್ತು ಸೂರ್ಯನ ಉಷ್ಣತೆ ನಿಮ್ಮ ಕಾಲು ತ್ವಚೆಗೆ ತೊಂದರೆಯಾಗದಂತೆ ಒಂದು ಸ್ಥಳದಿಂದ ಇನ್ನೊಂದು ಭಾಗಕ್ಕೆ ಹೋಗಲೂ ಇದೇ ಸೂಕ್ತ ಸಮಯ.

ಬೇಸಿಗೆಗಾಲ

ರಾಮೇಶ್ವರದಲ್ಲಿ,  ಬೇಸಿಗೆಯು ಮಾರ್ಚ್ ಅಂತ್ಯದಲ್ಲಿ ಪ್ರಾರಂಭವಾಗಿ ಮೇ ಕೊನೆಯವರೆಗೆ ಮುಂದುವರಿಯುತ್ತದೆ. ಬೇಸಿಗೆ ದಿನಗಳಲ್ಲಿ ಸಾಮಾನ್ಯವಾಗಿ ಶಾಖ ಹಾಗು ಆರ್ದ್ರತೆಯಿಂದ ಕೂಡಿರುತ್ತದೆ.  ಆದರೂ ಸಂಜೆ ತಂಪಾದ ಮತ್ತು ಶಾಂತ ತಂಗಾಳಿ ಸಮುದ್ರದಿಂದ ಬೀಸುತ್ತಿದ್ದು ಆಹ್ಲಾದಕರವಾಗಿರುತ್ತದೆ. ಆದಾಗ್ಯೂ, ಮಧ್ಯಾಹ್ನದ ಸಮಯದಲ್ಲಿ ಈ ಸ್ಥಳದ ದೃಶ್ಯಗಳನ್ನು ನೋಡಲು ಹೊರಗೆ ಹೋಗಲು ಸಾಧ್ಯವಿಲ್ಲ. ಸೂರ್ಯನ  ಶಾಖದಿಂದ ಸ್ಥಳದ ಎಲ್ಲಾ ದೃಶ್ಯಗಳೂ  ಖಾಲಿಯಾದಂತೆ ಭಾಸವಾಗುತ್ತದೆ!

ಮಳೆಗಾಲ

ರಾಮೇಶ್ವರದಲ್ಲಿ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಭಾರೀ ಮಳೆಯಾಗುತ್ತದೆ. ಮಳೆಗಾಲವು ರಾಮೇಶ್ವರದಲ್ಲಿ  ಸೆಪ್ಟೆಂಬರ್ ಮಧ್ಯ ಭಾಗದವರೆಗೂ ವಿಸ್ತರಿಸಬಹುದು. ಇಡೀ ಪಟ್ಟಣ ನಿರಂತರ ಮಳೆಯ ಕಾರಣ ಕೆಸರಿನಿಂದ ಮಣ್ಣಿನಿಂದ ತುಂಬಿರುತ್ತದೆ. ತಾಪಮಾನ ಮುಂಗಾರಿನಿಂದಾಗಿ ಗಣನೀಯವಾಗಿ ಕೆಳಗಿಳಿಯುತ್ತದೆ. ಆದರೆ ಪ್ರವಾಸಿಗರು  ಚಂಡಮಾರುತ ಮಿಶ್ರಿತ ಮಳೆಯ ಕಾರಣ ಈ ಸಂದರ್ಭದಲ್ಲಿ ಸ್ಥಳಕ್ಕೆ ಬರದಿರುವುದೇ ಒಳಿತು.

ಚಳಿಗಾಲ

ರಾಮೇಶ್ವರದಲ್ಲಿ ಚಳಿಗಾಲವು ನವೆಂಬರ್ ಮಧ್ಯಭಾಗದಲ್ಲಿ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ ವರೆಗೆ ಮುಂದುವರಿಯುತ್ತದೆ. ರಾಮೇಶ್ವರದ ಚಳಿಗಾಲದಲ್ಲಿ ಉತ್ತರ ರಾಜ್ಯಗಳಂತೆ ಅಧಿಕ ಚಳಿಯನ್ನು ಅನುಭವಿಸುವುದಿಲ್ಲ. ದಿನಗಳಲ್ಲಿ ತಂಪಾದ ಮತ್ತು ಆಹ್ಲಾದಕರ ವಾತಾವರಣವಿದ್ದು ಈ ಸಮಯದಲ್ಲಿ ಸ್ಥಳದಲ್ಲಿ ಜನಸಂದಣಿ ಹೆಚ್ಚು. ರಾತ್ರಿ  ತಂಪಾದ  ಹಮಾವಾನವಿರುವುದರಿಂದ, ಒಂದು ಶಾಲು ಅಥವಾ ಜಾಕೆಟ್ ಇಟ್ಟುಕೊಳ್ಳುವುದು ಒಳ್ಳೆಯದು.