Search
  • Follow NativePlanet
Share
» »ಭಾರತ ದೇಶದಲ್ಲಿರುವ ವಿಚಿತ್ರವಾದ ದೇವಾಲಯಗಳು

ಭಾರತ ದೇಶದಲ್ಲಿರುವ ವಿಚಿತ್ರವಾದ ದೇವಾಲಯಗಳು

ನಮ್ಮ ಭಾರತ ದೇಶದಲ್ಲಿ ಅನೇಕ ರಹಸ್ಯಗಳನ್ನು ಹೊಂದಿರುವ ದೇವಾಲಯಗಳಿವೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆವಿಗೂ ಚಮತ್ಕಾರವನ್ನು ಮಾಡುವ ಪುಣ್ಯಕ್ಷೇತ್ರಗಳಿವೆ. ಒಂದೊಂದು ದೇವಾಲಯಗಳು ಅವುಗಳದೆ ಆದ ಮಹತ್ವವನ್ನು ಹೊಂದಿವೆ. ಕೆಲವು ದೇವಾಲಯಗಳು

By Sowmyabhai

ನಮ್ಮ ಭಾರತ ದೇಶದಲ್ಲಿ ಅನೇಕ ರಹಸ್ಯಗಳನ್ನು ಹೊಂದಿರುವ ದೇವಾಲಯಗಳಿವೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆವಿಗೂ ಚಮತ್ಕಾರವನ್ನು ಮಾಡುವ ಪುಣ್ಯಕ್ಷೇತ್ರಗಳಿವೆ. ಒಂದೊಂದು ದೇವಾಲಯಗಳು ಅವುಗಳದೆ ಆದ ಮಹತ್ವವನ್ನು ಹೊಂದಿವೆ. ಕೆಲವು ದೇವಾಲಯಗಳು ವಿಚಿತ್ರವಾದ ಹಾಗು ನಂಬಲು ಅಸಾಧ್ಯವಾದ ಘಟನೆಗಳನ್ನು ನಿರೂಪಿಸುತ್ತದೆ.

ಆ ವಿಚಿತ್ರವನ್ನು ಇಂದಿಗೂ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಭಾರತ ದೇಶದಲ್ಲಿ ಒಟ್ಟು 5 ವಿಚಿತ್ರವಾದ ದೇವಾಲಯಗಳು ಇವೆ. ಆ ರಹಸ್ಯಗಳನ್ನು ಇಷ್ಟೇ ಬೇಧಿಸಿದರು ಕೂಡ ಸಾಧ್ಯವಾಗುತ್ತಿಲ್ಲವಂತೆ. ಹಾಗಾದರೆ ಆ ನಿಗೂಢತೆಯನ್ನು ಹೊಂದಿರುವ ದೇವಾಲಯದ ಬಗ್ಗೆ ತಿಳಿದುಕೊಳ್ಳಬೇಕು ಅಲ್ಲವೇ?

1.ಪೂರಿ ಜಗನ್ನಾಥ ದೇವಾಲಯ

1.ಪೂರಿ ಜಗನ್ನಾಥ ದೇವಾಲಯ

PC:YOUTUBE

ಪೂರಿ ಜಗನ್ನಾಥ ದೇವಾಲಯದಲ್ಲಿಯೂ ಕೂಡ ನೆರಳು ಎಂಬುದು ಯಾವುದೇ ಸಮಯದಲ್ಲಿಯೂ ಕೂಡ ಕಾಣಿಸುವುದಿಲ್ಲ. ಅಷ್ಟೇ ಅಲ್ಲ ಪೂರಿಕ್ಷೇತ್ರಕ್ಕೆ ಸಮೀಪದಲ್ಲಿ ಬಂಗಾಳಕೊಲ್ಲಿ ಸಮುದ್ರ ಇದೆ. ಆ ಸಮುದ್ರದ ಶಬ್ಧ ಕೂಡ ಈ ದೇವಾಲಯದ ಪ್ರವೇಶ ದ್ವಾರದಲ್ಲಿ ಕೇಳಿಸುತ್ತದೆ. ಅಂದರೆ ಸಿಂಹದ್ವಾರದಲ್ಲಿ ಸಮುದ್ರಘೋಷ ಕೇಳಿಸುತ್ತದೆ. ಅದನ್ನು ದಾಟಿ ಒಳಗೆ ಪ್ರವೇಶಿಸಿ ಮತ್ತೇ ಆ ಸಿಂಹ ದ್ವಾರದ ಬಳಿ ಕಿವಿ ಇಟ್ಟು ಕೇಳಿಸಿಕೊಂಡರೆ ಮತ್ತೇ ಆ ಶಬ್ಧ ಕೇಳಿಸುವುದಿಲ್ಲ.

2.ಷೋಲಾಪೂರ್

2.ಷೋಲಾಪೂರ್

PC:YOUTUBE

ಮಹಾರಾಷ್ಟ್ರದಲ್ಲಿನ ಷೋಲಾಪೂರ್ ನಾವು ದಿನ ನಿತ್ಯ ಉಪಯೋಗಿಸುವ ಬೆಡ್ ಷೀಟ್‍ಗಳಿಗೆ ಇಟ್ಟಿರುವ ಹೆಸರಾಗಿದೆ. ಇಲ್ಲಿ ಒಂದು ವಿಭಿನ್ನವಾದ ಗ್ರಾಮವಿದೆ. ಆ ಗ್ರಾಮದಲ್ಲಿ ಹಾವುಗಳಿಗೆ ಪೂಜೆಯನ್ನು ಮಾಡುವುದು ಅಲ್ಲಿನ ಪದ್ಧತಿಯಾಗಿದೆ. ಆ ಗ್ರಾಮದ ಪ್ರತಿ ಮನೆಯಲ್ಲಿ ಹಾವುಗಳಿಗೇ ಎಂದು ಪ್ರತ್ಯೇಕವಾದ ಕೊಠಡಿ ಇರುತ್ತದೆ.

ಪ್ರತಿ ಮನೆಯಲ್ಲಿಯೂ ಮನುಷ್ಯರು ತಿರುಗಿದಂತೆ ಹಾವುಗಳು ಕೂಡ ಸಂಚಾರ ಮಾಡುತ್ತಾ ಇರುತ್ತದೆ. ಆದರೆ ಯಾವುದೇ ಕಾರಣಕ್ಕೂ ಇಂದಿನವರೆವಿಗೂ ಯಾರಿಗೂ ಹಾವುಗಳು ಕಚ್ಚಿಲ್ಲ.

3.ಕಬಿಸ್ ಬಾಬಾ ದೇವಾಲಯ

3.ಕಬಿಸ್ ಬಾಬಾ ದೇವಾಲಯ

PC:YOUTUBE

ಈ ದೇವಾಲಯವನ್ನು ಕಾಳ ಭೈರವ ದೇವಾಲಯ ಎಂದು ಕೂಡ ಕರೆಯುತ್ತಾರೆ. ಈ ದೇವಾಲಯವು ಉತ್ತರ ಪ್ರದೇಶದ ಸಿತಾಪೂರ್ ಜಿಲ್ಲೆಯಲ್ಲಿನ ಕಬಿಸ್ ಬಾಬಾ ದೇವಾಲಯವಾಗಿದೆ. ಇದೊಂದು ವಿಚಿತ್ರವಾದ ದೇವಾಲಯವಾಗಿದೆ. ಇಲ್ಲಿ ಮುಖ್ಯವಾಗಿ ದೇವರ ಮೂರ್ತಿ ಇರುವುದಿಲ್ಲ. ಪೂಜಾರಿ ಕೂಡ ಇರುವುದಿಲ್ಲ. ಈ ದೇವಾಲಯವು 150 ವರ್ಷಕ್ಕಿಂತ ಹಿಂದೆ ನಿರ್ಮಾಣ ಮಾಡಿದರು ಎಂದು ಅಲ್ಲಿನವರು ಹೇಳುತ್ತಾರೆ.

ಆದರೆ ಅಲ್ಲಿ ಒಬ್ಬ ಶಿವಭಕ್ತನಾದ ಕಬೀಸ್ ಬಾಬಾ ಇರುತ್ತಾನೆ. ಆತನು ಸಾಯಂಕಾಲದ ಸಮಯದಲ್ಲಿ ಭಕ್ತರು ಸರ್ಮಪಿಸುವ ಮದ್ಯವನ್ನು ಸೇವಿಸಿ ಭಕ್ತರಿಗೆ ಉಂಟಾದ ಅನಾರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡುತ್ತಾನಂತೆ.

4.ಮಿಸ್ಟರಿ ಮಮ್ಮಿ

4.ಮಿಸ್ಟರಿ ಮಮ್ಮಿ

PC:YOUTUBE

ಮತ್ತೊಂದು ವಿಚಿತ್ರ ಹಾಗು ಭಯಂಕರ ಕೂಡ ನಮ್ಮ ಭಾರತ ದೇಶದಲ್ಲಿ ರಹಸ್ಯವಾಗಿಯೇ ಉಳಿದಿದೆ. ಅದೇ ಒಂದು ಮಿಸ್ಟರಿ ಮಮ್ಮಿ. ಮಮ್ಮಿ ಎಂದರೆ ಮೊದಲಿಗೆ ಗುರುತಿಗೆ ಬರುವುದೇ ಈಜಿಫ್ಟ್. ಆದರೆ ಹಿಮಾಚಲ ಪ್ರದೇಶದಲ್ಲಿ ಗ್ಯೂ ಎಂಬ ಒಂದು ಗ್ರಾಮವಿದೆ. ಆ ಗ್ರಾಮದಲ್ಲಿ 500 ವರ್ಷಗಳ ಹಿಂದಿನ ಒಂದು ಮಮ್ಮಿ ಇದ್ದು, ಎಲ್ಲರನ್ನು ಆಶ್ಚರ್ಯಗೊಳಿಸುತ್ತಿದೆ. ಸಂಗಾತ್ ಎಂಬ ಟಿಬೆಟ್‍ಗೆ ಸೇರಿದ ಒಬ್ಬ ಸನ್ಯಾಸಿ ಅಲ್ಲಿ ಮಮ್ಮಿಯಾಗಿ ಕುಳಿತುಕೊಂಡಿದೆ.

ಆ ಮಮ್ಮಿ 500 ವರ್ಷಗಳ ಹಿಂದಿನದು. ಅದರ ಚರ್ಮ, ಹಲ್ಲುಗಳನ್ನು ನಾವು ಕಾಣಬಹುದು. ಆದರೆ ಇಷ್ಟು ವರ್ಷದ ಈ ಮಮ್ಮಿ ವಿಚಿತ್ರದ ಬಗ್ಗೆ ಯಾರಿಗೂ ಏನು ತಿಳಿದಿಲ್ಲ. ಇವೆಲ್ಲಾ ನಮ್ಮ ಭಾರತ ದೇಶದಲ್ಲಿ ಅಡಗಿರುವ ರಹಸ್ಯಗಳೇ ಆಗಿವೆ.

5.ತೆಪ್ಪೆರುಮನಲ್ಲೂರ್

5.ತೆಪ್ಪೆರುಮನಲ್ಲೂರ್

PC:YOUTUBE

ಶಿವಾಲಯ ತಮಿಳುನಾಡಿನಲ್ಲಿ ತೆಪ್ಪರುಮನಲ್ಲೂರ್ ಶಿವಾಲಯದಲ್ಲಿ ಹಲವಾರು ಆಶ್ಚರ್ಯಕರವಾದ ಘಟನೆಗಳು ನಡೆಯುತ್ತವೆ. ಈ ದೇವಾಲಯದಲ್ಲಿ ಒಂದು ಶಕ್ತಿವಂತ ನಾಗರಹಾವು ಸ್ವಯಂ ಶಿವನಿಗೆ ಪೂಜೆ ಮಾಡಿ ಎಲ್ಲರನ್ನು ಆಶ್ಚರ್ಯವನ್ನು ಉಂಟು ಮಾಡುತ್ತದೆ. 2010 ರಲ್ಲಿ ಒಂದು ದಿನ ಮುಂಜಾನೆ ದೇವಾಲಯದ ಪೂಜಾರಿ ದೇವಾಲಯಕ್ಕೆ ಬಂದು ದೇವಾಲಯದ ಬಾಗಿಲನ್ನು ತೆರೆಯುವ ಸಮಯಕ್ಕೆ ಒಂದು ಹಾವು ಶಿವಲಿಂಗದ ಮೇಲೆ ಇರುವುದು, ನಂತರ ಆ ಹಾವು ಅಲ್ಲಿಂದ ಬಿಲ್ವಾಪತ್ರೆಗಳನ್ನು ಶೇಖರಿಸುತ್ತದೆ ಎಂತೆ. ಆ ನಂತರ ಶಿವಲಿಂಗಕ್ಕೆ ಹಾವು ತನ್ನ ಬಾಯಿಯ ಸಹಾಯದಿಂದ ಬಿಲ್ವ ಪತ್ರೆಯನ್ನು ಶಿವನಿಗೆ ಪೂಜೆ ಮಾಡುತ್ತದೆಯಂತೆ. ಆ ಹಾವು ಏಕೆ ಹೀಗೆ ಮಾಡುತ್ತಿದೆ? ಆ ಹಾವನ್ನು ಆ ಮಹಾಶಿವನನ್ನೇ ಕಳುಹಿಸಿದ್ದಾನೆ ಎಂದು ಭಕ್ತರು ನಂಬುತ್ತಾರೆ. ಆದರೆ ಈ ರಹಸ್ಯವನ್ನು ಬೇಧಿಸಲು ಇಂದಿಗೂ ಸಾಧ್ಯವಾಗುತ್ತಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X