Search
  • Follow NativePlanet
Share
» »ಶ್ರೀರಂಗಂನಲ್ಲಿ ದೇಶದ ಅತಿ ದೊಡ್ಡ ರಂಗನ ದರ್ಶನ

ಶ್ರೀರಂಗಂನಲ್ಲಿ ದೇಶದ ಅತಿ ದೊಡ್ಡ ರಂಗನ ದರ್ಶನ

By Vijay

ರಂಗನಾಥ, ಶ್ರೀನಿವಾಸ, ವೆಂಕಟೇಶ ಎಂಬೆಲ್ಲ ಹೆಸರುಗಳಿಂದ ಕರೆಸಿಕೊಳ್ಳುವ, ನಾನಾ ಅವತಾರಗಳನ್ನು ತಾಳಿ ಭಕ್ತರನ್ನು ಸಲಹಿರುವ, ತ್ರಿಮೂರ್ತಿಗಳ ಪೈಕಿ ಒಬ್ಬನಾದ ವಿಷ್ಣು ದೇವರಿಗೆ ನಡೆದುಕೊಳ್ಳುವ ಭಕ್ತರ ಸಂಖ್ಯೆ ಅಪಾರ. ಅಂತೆಯೆ ವಿಷ್ಣುವಿನ ಹಲವು ರೂಪಗಳ ವಿವಿಧ ದೇವಾಲಯಗಳು ದೇಶದೆಲ್ಲೆಡೆ ಕಂಡುಬರುತ್ತವೆ.

ವಿಷ್ಣುವಿನ ಹಲವು ಅವತಾರಗಳಲ್ಲಿ ಶ್ರೀರಂಗನಾಥಸ್ವಾಮಿಯ ಅವತಾರ ವಿಶಿಷ್ಟವಾದುದಾಗಿದೆ. ಪೌರಾಣಿಕವಾಗಿ ರಂಗನಾಥನು ಶಯನಾವಸ್ಥೆಯಲ್ಲಿದ್ದಾಗ ಶಿರ, ನಾಭಿ ಹಾಗೂ ಪಾದಗಳ ಸಂಕೇತವಾಗಿ ಆದಿ, ಮಧ್ಯ ಹಾಗೂ ಅಂತ್ಯ ರಂಗಗಳಾಗಿ ವಿಂಗಡಿಸಲ್ಪಟ್ಟಿದ್ದು ಆಯಾ ಸ್ಥಳಗಳಲ್ಲಿ ಶ್ರೀರಂಗನಾಥಸ್ವಾಮಿಯ ದೇವಾಲಯಗಳಿವೆ.

ಮೊದಲ ಎರಡು ದೇವಾಲಯಗಳು ಕರ್ನಾಟಕದಲ್ಲಿದ್ದರೆ ಕೊನೆಯ ದೇವಸ್ಥಾನವು ಶ್ರೀರಂಗಂನಲ್ಲಿದ್ದು, ವಿಷ್ಣುವಿನ ಪರಿಪಾಲಕರಾದ ಶ್ರೀವೈಷ್ಣವರ ಪರಮ ಪಾವನ ದೇವಾಲಯವಾಗಿದೆ. ಅಲ್ಲದೆ ಇಂದಿಗೂ ಕಾರ್ಯಚಟುವಟಿಕೆಯಲ್ಲಿರುವ ಭಾರತದ ಅತಿ ದೊಡ್ಡ ದೇವಾಲಯವಾಗಿ ಶ್ರೀರಂಗಂನ ದೇವಸ್ಥಾನ ಪ್ರಸಿದ್ಧವಾಗಿದೆ.

ವಿಶೇಷ ಲೇಖನ : ಆದಿ ಮಧ್ಯ ಅಂತ್ಯ ರಂಗಗಳ ರಂಗನ ದರ್ಶನ

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಮೂಲತಃ ಶ್ರೀರಂಗಂ ಒಂದು ನಡುಗಡ್ಡೆ ಪ್ರದೇಶವಾಗಿದ್ದು ತಿರುಚ್ಚಿ ನಗರದ ಪ್ರಮುಖ ಭಾಗವಾಗಿ ನಿರ್ವಹಿಸಲ್ಪಡುತ್ತಿದೆ. ಇಲ್ಲಿನ ಪ್ರಮುಖ ಆಕರ್ಷಣೆಯೆ ಅತಿ ವಿಶಾಲವಾದ ಶ್ರೀರಂಗನಾಥಸ್ವಾಮಿಯ ದೇವಾಲಯ ಸಂಕೀರ್ಣ.

ಚಿತ್ರಕೃಪೆ: Prabhu B Doss

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಶ್ರೀರಂಗಂ ಒಂದು ಕಡೆಯಿಂದ ಕಾವೇರಿ ನದಿಯಿಂದ ಸುತ್ತುವರೆದಿದ್ದರೆ ಇನ್ನೊಂದು ಕಡೆಯಿಂದ ಕಾವೇರಿಯ ಉಪನದಿಯಾದ ಕೊಳ್ಳಿಡಂನಿಂದ ಸುತ್ತುವರೆದಿದೆ. ಕಾವೇರಿಗೆ ಅಡ್ಡಲಾಗಿ ಕಟ್ಟಲಾದ ವಿಶಾಲವಾದ ಸೇತುವೆಯಿಂದ ಶ್ರೀರಂಗಂ ಅನ್ನು ತಿರುಚ್ಚಿ ನಗರದಿಂದ ಪ್ರವೇಶಿಸಬಹುದು.

ಚಿತ್ರಕೃಪೆ: wikimedia

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಎರಡು ನದಿಗಳ ಮಧ್ಯದಲ್ಲಿರುವ ಶ್ರೀರಂಗಂನ ಪಾಕ್ಷಿಕ ನೋಟ.

ಚಿತ್ರಕೃಪೆ: Planemad

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಶ್ರೀರಂಗಂನ ರಂಗನಾಥಸ್ವಾಮಿ ದೇವಾಲಯವು ಹಿಂದುಗಳಲ್ಲಿ ಅದರಲ್ಲೂ ವಿಶೇಷವಾಗಿ ಶ್ರೀವೈಷ್ಣವರಿಗೆ ಪವಿತ್ರ ಯಾತ್ರಾ ಕೇಂದ್ರವಾಗಿದ್ದು ಸಾಕಷ್ಟು ವಿದೇಶಿ ಪ್ರವಾಸಿಗರನ್ನೂ ಸಹ ಸೆಳೆಯುತ್ತದೆ.

ಚಿತ್ರಕೃಪೆ: Jean-Pierre Dalbéra

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ದೇವಸ್ಥಾನ ಮಂಡಳಿಯ ವೆಬ್ ತಾಣದ ಪ್ರಕಾರ, ಇದನ್ನು ಪ್ರಸ್ತುತ ದೇಶದ ಕಾರ್ಯಚಟುವಟಿಕೆಯಲ್ಲಿರುವ ಅತಿ ದೊಡ್ಡ ಹಿಂದು ದೇವಾಲಯವೆಂದು ಪರಿಗಣಿಸಬಹುದಾಗಿದೆ.

ಚಿತ್ರಕೃಪೆ: Simply CVR

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಸ್ಥಳ ಪುರಾಣದಂತೆ, ಕೆಲವೆ ಕೆಲವು ವಿಷ್ಣುವಿನ ಸ್ವಯಂವ್ಯಕ್ತ ಕ್ಷೇತ್ರಗಳ ಪೈಕಿ ಶ್ರೀರಂಗಂ ಸಹ ಒಂದಾಗಿದೆ. ಆದ್ದರಿಂದ ಧಾರ್ಮಿಕವಾಗಿ ಬಹು ಮಹತ್ವವುಳ್ಳ ಯಾತ್ರಾ ಕೇಂದ್ರವಾಗಿ ಶ್ರೀರಂಗಂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Nagarjun Kandukuru

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಇನ್ನೂ ಈ ದೇವಸ್ಥಾನದ ಗಾತ್ರಕ್ಕೆ ಬರುವುದಾದರೆ ಇದರ ಸಂಕೀರ್ಣ ವಿಶಾಲವಾಗಿದ್ದು 156 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಭವ್ಯವಾಗಿ ಹರಡಿದೆ. ಈ ಸಂಕೀರ್ಣದ ಸುತ್ತಳತೆಯೆ ಸುಮಾರು ನಾಲ್ಕು ಕಿ.ಮೀ ಗಳಷ್ಟೆಂದರೆ ನೀವೇ ಊಹಿಸಿಕೊಳ್ಳಬಹುದು.

ಚಿತ್ರಕೃಪೆ: BOMBMAN

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಈ ದೇವಾಲಯ ಸಂಕೀರ್ಣದಲ್ಲಿ ಒಟ್ಟು ಏಳು ಪ್ರಾಕಾರಗಳಿದ್ದು ಒಟ್ಟಾರೆಯಾಗಿ 21 ಸುಂದರ ಗೋಪುರಗಳಿವೆ. ಮುಖ್ಯ ದೇವಾಲಯದ ಗೋಪುರವು ರಾಜಗೋಪುರವಾಗಿದ್ದು ಇದು ಏಷಿಯಾದಲ್ಲೆ ಅತಿ ಎತ್ತರದ (236 ಅಡಿಗಳು) ಗೋಪುರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಚಿತ್ರಕೃಪೆ: Giridhar Appaji Nag Y

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ದಕ್ಷಿಣ ಭಾರತದ 12 ಪ್ರಸಿದ್ಧ ಅಳ್ವಾರ್ (ತಮಿಳು ಸಂತ ಕವಿಗಳು ಹಾಗೂ ವಿಷ್ಣುವನ್ನು ಪಾಲಿಸುವವರು) ಗಳ ಪೈಕಿ ಅಂಡಾಳ್ ಏಕೈಕ ಸ್ತ್ರೀ ಸಂತ ಕವಿಯಾಗಿದ್ದು ಅವಳಿಗೆ ಮುಡಿಪಾದ ದೇವಾಲಯವೊಂದು ಶ್ರೀರಂಗಂ ದೇವಾಲಯ ಸಂಕೀರ್ಣದಲ್ಲಿದೆ.

ಚಿತ್ರಕೃಪೆ: wikipedia

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಶ್ರೀರರಂಗಂನ ರಂಗನಾಥಸ್ವಾಮಿಯ ಕುರಿತಂತೆ ಕುತೂಹಲಕರವಾದ ಹಿನ್ನಿಲೆಯೊಂದಿದೆ. ಹಿಂದೆ ರಾಮನು ಸೀತೆಯನ್ನು ಗೆದ್ದು ಅಯೋಧ್ಯೆಗೆ ಮರಳಿ ಬಂದು ರಾಜ್ಯಾಭಾರ ಮಾಡುತ್ತಿದ್ದಾಗ ಒಂದು ದಿನ ವಿಷ್ಣುವಿನ ಮೂರ್ತಿಗೆ ಪೂಜೆ ಸಲ್ಲಿಸಿ ಅದನ್ನು ಆಗ ಲಂಕಾ ದೊರೆಯಾಗಿದ್ದ ವಿಭೀಷಣನಿಗೆ ಅರ್ಪಿಸಿದ ಹಾಗೂ ಲಂಕೆಯನ್ನು ತಲುಪುವವರೆಗೂ ಆ ಮೂರ್ತಿಯನ್ನು ಎಲ್ಲಿಯೂ ಇಡಕೂಡದೆಂದು ಆಜ್ಞಾಪಿಸಿದ.

ಚಿತ್ರಕೃಪೆ: wikipedia

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಈ ರೀತಿಯಾಗಿ ವಿಭೀಷಣನು ಆ ರಂಗನ ವಿಸ್ಗ್ರಹವನ್ನು ತೆಗೆದುಕೊಂಡು ಹೋಗುವಾಗ ಕಾವೇರಿ ನದಿ ಹರಿದ ಈಗಿನ ಶ್ರೀರಂಗಂನಲ್ಲಿ ಬೀಡು ಬಿಟ್ಟು ಮೂರ್ತಿಯನ್ನು ಅಲ್ಲಿಯೆ ಇರಿಸಿದ. ನಂತರ ತನ್ನ ಕಾರ್ಯಗಳನ್ನು ಪೂರೈಸಿದ ನಂತರ ಲಂಕೆಗೆ ಮರಳಲು ಸಿದ್ಧವಾದಾಗ ಮೂರ್ತಿಯನ್ನು ಕಿಂಚಿತ್ತೂ ಎತ್ತಲಾಗಲಿಲ್ಲ.

ಚಿತ್ರಕೃಪೆ: Giridhar Appaji Nag Y

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಶ್ರೀರಂಗನಾಥಸ್ವಾಮಿ ಶ್ರೀರಂಗಂ:

ಕೊನೆಗೆ ಭಕ್ತಿಯಿಂದ ವಿಷ್ಣುವನ್ನು ಬೇಡಿಕೊಂಡಾಗ ವಿಷ್ಣು ಪ್ರಸನ್ನನಾಗಿ ತನಗೆ ಈ ಕ್ಷೇತ್ರ ಇಷ್ಟವಾಗಿದ್ದು, ತಾನು ಇಲ್ಲಿಯೆ ನೆಲೆಸುವುದಾಗಿ, ಆದರೆ ದಕ್ಷಿಣಕ್ಕೆ ಮುಖ ಮಾಡಿ ನಿನ್ನನ್ನು ಸದಾ ಅಶೀರ್ವದಿಸುವುದಾಗಿ ಹೇಳಿದ. ಹೀಗಾಗಿ ಶ್ರೀರಂಗಂ ರಂಗನಾಥಸ್ವಾಮಿಯು ಶ್ರೀಲಂಕಾ ಇರುವ ದಿಕ್ಕಿನಲ್ಲಿ ಅಂದರೆ ದಕ್ಷಿಣಕ್ಕೆ ಮುಖ ಮಾಡಿ ನಿಂತಿದ್ದಾನೆ.

ಚಿತ್ರಕೃಪೆ: opalpeterliu

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X