Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀರಂಗಂ » ಹವಾಮಾನ

ಶ್ರೀರಂಗಂ ಹವಾಮಾನ

ಶ್ರೀರಂಗಂಗೆ ಭೇಟಿ ನೀಡಲು ಪ್ರಶಸ್ತವಾದ ಸಮಯವೆಂದರೆ ಅಕ್ಟೋಬರ್ ನಿಂದ ಫೇಬ್ರವರಿಯವರೆಗೆ. ಈ ಸಮಯದಲ್ಲಿ ಉಷ್ಣಾಂಶ ಕಡಿಮಯಿರುತ್ತದೆ. ಈ ಸಮಯದಲ್ಲಿ ಹಿತವಾದ ವಾತಾವರಣವಿರುವುದರಿಂದ ಹಲವು ಹಬ್ಬಗಳು ಇದೇ ಸಮಯದಲ್ಲಿ ಜರುಗುತ್ತವೆ. ಈ ತಿಂಗಳಲ್ಲಿ ಶ್ರೀರಂಗಂಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಅಧಿಕ.

ಬೇಸಿಗೆಗಾಲ

ಶ್ರೀರಂಗಂನಲ್ಲಿ ಸಮಶೀತೋಷ್ಣ ವಾತಾವರಣವಿರುವುದರಿಂದ ಬೇಸಿಗೆ ಅತಿಯಾಗಿ ಬಿಸಿಯಿಂದ ಕೂಡಿದ್ದು ಒಣಹವೆಯಿರುತ್ತದೆ. ಬೇಸಿಗೆಯಲ್ಲಿ ಉಷ್ಣಾಂಶ 38 ಡಿಗ್ರಿಗೂ ಅಧಿಕ ಏರುತ್ತದೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಾಡುವ ಬೇಸಿಗೆ ಅತ್ಯಂತ ತ್ರಾಸದಾಯಕ, ಬಿಸಿಯಾಗಿದ್ದು, ಹೊರಗೆ ಸುತ್ತಾಡುವುದೇ ಕಷ್ಟ ಎನಿಸುವಂತೆ ಮಾಡುತ್ತದೆ. ಸಂಜೆಯ ಸಮಯ ಸ್ವಲ್ಪ ತಂಪಾಗಿರುತ್ತದೆ.

ಮಳೆಗಾಲ

ಜೂನ್ ತಿಂಗಳಲ್ಲಿ ಶುರುವಾಗುವ ಮಳೆ ಸೆಪ್ಟೆಂಬರ್ ನಲ್ಲಿ ಅಂತ್ಯ ಕಾಣುತ್ತದೆ. ಸಾಧಾರಣದಿಂದ ಅತ್ಯಧಿಕ ಮಳೆಯಾಗುತ್ತದೆ. ಗರಿಷ್ಠ ಮಳೆಯ ಪ್ರಮಾಣ 835 ಮಿಮಿ. ಮಳೆಗಾಲದಲ್ಲಿ ಉಷ್ಣಾಂಶ 30 ಡಿಗ್ರಿಗೆ ಕುಸಿಯುತ್ತದೆ. ಆದರೆ  ಶುಷ್ಕತೆ ಏರುತ್ತದೆ.

ಚಳಿಗಾಲ

ನವೆಂಬರ್ ನಲ್ಲಿ ಚಳಿಗಾಲ ಶುರುವಾಗಿ ಮಧ್ಯ- ಫೇಬ್ರವರಿಯವರೆಗೆ ಇರುತ್ತದೆ. ಚಳಿಗಾಲ ಉತ್ತರ ಭಾರತದಲ್ಲಿರುವಂತೆ ಕೊರೆಯುವುದಿಲ್ಲ. ಗರಿಷ್ಠ ಉಷ್ಣಾಂಶ 31ಡಿಗ್ರಿ ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿಯಷ್ಟಿರುತ್ತದೆ.