Search
  • Follow NativePlanet
Share
» »ಒಂದೇ ಗೋಡೆಯಲ್ಲಿದೆ ಮೂರು ಧರ್ಮದ ಮಂದಿರಗಳು

ಒಂದೇ ಗೋಡೆಯಲ್ಲಿದೆ ಮೂರು ಧರ್ಮದ ಮಂದಿರಗಳು

ಉತ್ತರ ಪ್ರದೇಶವು ಭಾರತದ ಒಂದು ದೊಡ್ಡ ರಾಜ್ಯವಾಗಿದೆ. ಇದು ತನ್ನ ಪೌರಾಣಿಕ ಐತಿಹಾಸಿಕ ಸ್ಥಳಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ನೀವು ಎಲ್ಲಾ ರೀತಿಯ ಪ್ರವಾಸಿ ತಾಣವನ್ನು ನೀವು ಸುತ್ತಾಡಬಹುದು. ಲಕ್ನೋವನನ್ನು ಹೊರತುಪಡಿಸಿ ವಾರಣಾಸಿ, ಇಲಾಹಾಬಾದ್, ಗೋರಖ್‌ಪುರ್‌ , ಮಥುರ, ಝಾಂಸಿ ಮುಂತಾದ ಸ್ಥಳಗಳನ್ನು ಸುತ್ತಾಡಬಹುದು. ಇಷ್ಟೆಲ್ಲಾ ಸ್ಥಳಗಳಲ್ಲಿ ಮುಜಾಫರ್ ನಗರ ಕೂಡಾ ಬಹಳ ಪ್ರಸಿದ್ಧವಾಗಿದೆ. ದೆಹಲಿ-ಹರಿದ್ವಾರ ರಸ್ತೆ ಮಾರ್ಗದಲ್ಲಿರುವ ಈ ನಗರವು ರಾಜ್ಯದ ಪ್ರಮುಖ ವ್ಯಾಪಾರಿ ಕೇಂದ್ರವೂ ಆಗಿದೆ.

ಗಣೇಶ್‌ ಧಾಮ

ಗಣೇಶ್‌ ಧಾಮ

ಮುಜಾಫರ್‌ ನಗರವು ತನ್ನ ಧಾರ್ಮಿಕ ಸ್ಥಳಗಳಿಗೆ ಬಹಳ ಪ್ರಸಿದ್ಧಿ ಹೊಂದಿದೆ. ಇಲ್ಲಿ ನೀವು ಗಣೇಶ ಧಾಮಕ್ಕೆ ಭೇಟಿ ನೀಡಬಹುದು. ಇಲ್ಲಿರುವ 35 ಫೀಟ್ ಎತ್ತರದ ಗಣೇಶನ ವಿಗ್ರಹವು ಇಲ್ಲಿನ ಪ್ರಮುಖ ಆಕರ್ಷಣೆ ಆಗಿದೆ. ಈ ವಿಶಾಲ ಮೂರ್ತಿಯನ್ನು ಸುಖಭೀರ್ ಸಿಂಗ್ ಹಾಗೂ ಲಾಲಾ ಲಕ್ಷ್ಮೀ ಚಂದ್‌ ಸಿಂಗಲ್ ದಾನ ನೀಡಿರುವುದು ಎನ್ನಲಾಗುತ್ತದೆ. ಇವರಿಬ್ಬರು ಇಲ್ಲಿನ ಸ್ಥಳೀಯ ನಿವಾಸಿಗಳು. ಇಲ್ಲಿ ಸಮೀಪದಲ್ಲಿ ಇನ್ನೂ ಅನೇಕ ದಾರ್ಶನಿಕ ಕೇಂದ್ರಗಳಿವೆ. ಅವುಗಳಲ್ಲಿ ವಟವೃಕ್ಷ, ಶುಖ್ ದೇವ ನದಿ ಕೂಡಾ ಸೇರಿದೆ. ಇಲ್ಲಿ ಪ್ರತಿದಿನ ಭಕ್ತರು ಆಗಮಿಸುತ್ತಾರೆ.

ಶಿವನ ಎದೆ ಮೇಲೆ ನಿಂತಿರುವ ಕಾಳಿ ; ತಂತ್ರ ಮಂತ್ರಗಳಿಗೆ ಫೇಮಸ್ ಈ ಮಂದಿರ

ಬಾಬಾ ಬೈರವ ಮಂದಿರ

ಬಾಬಾ ಬೈರವ ಮಂದಿರ

PC: Redtigerxyz

ಮುಜಾಫರ್‌ನಗರದ ಪ್ರಸಿದ್ಧ ಮಂದಿರಗಳಲ್ಲಿ ನೀವು ಇಲ್ಲಿನ ಬೈರವ ಮಂದಿರದ ದರ್ಶನ ಮಾಡಬಹುದು. ಇದು ನಗರದ ಮಧ್ಯಭಾಗದಲ್ಲಿದೆ. ಇಲ್ಲಿನ ಮುಖ್ಯ ಮಂದಿರದಲ್ಲಿ ಹನ್ನೊಂದು ಶಿವಲಿಂಗವಿದೆ. ಇದನ್ನು ಒಟ್ಟಾಗಿ ಏಕದಶ ಶಿವಲಿಂಗ ಎನ್ನಲಾಗುತ್ತದೆ. ಈ ಮಂದಿರದಲ್ಲಿ ನಡೆಯುವ ದಿನನಿತ್ಯದ ಪೂಜೆಗಳೆಲ್ಲವನ್ನು ಇಲ್ಲಿನ ಬ್ರಾಹ್ಮಣ ಪರಿವಾರವು ನೋಡಿಕೊಳ್ಳುತ್ತದೆ.

ವಹಲಾನ(ಸೆಕ್ಯೂಲರ್ ವಿಲೇಜ್)

ವಹಲಾನ(ಸೆಕ್ಯೂಲರ್ ವಿಲೇಜ್)

PC:Jainvaibhav1307

ಮುಜಾಫರ್ ನಗರದ ಮುಖ್ಯ ಆಕರ್ಷಣೆಗಳಲ್ಲಿ ನೀವು ಇಲ್ಲಿನ ವಹಲಾನ ಹಳ್ಳಿಯನ್ನು ಸುತ್ತಾಡಬಹುದು. ಈ ಹಳ್ಳಿಯನ್ನು ಸೆಕ್ಯೂಲರ್ ಹಳ್ಳಿ ಎಂದೂ ಕರೆಯಲಾಗುತ್ತದೆ. ಇಲ್ಲಿ ಹಿಂದೂ, ಮುಸ್ಲಿಂ ಹಾಗೂ ಜೈನ ಧರ್ಮದ ಒಂದು ಅದ್ಭುತ ಸಂಗಮವನ್ನು ಕಾಣಬಹುದು. ಇಲ್ಲಿ ಈ ಧರ್ಮಕ್ಕೆ ಸಂಬಂಧಿಸಿದ ಪವಿತ್ರ ಸ್ಥಳ ಕೇವಲ ಒಂದು ಭೂಮಿ ಮಾತ್ರವಲ್ಲ ಒಂದು ಗೋಡೆಯೂ ಸೇರಿದೆ. ಇಲ್ಲಿ ಒಂದೇ ಗೋಡೆಯಲ್ಲಿ ಹಿಂದೂ , ಮುಸ್ಲಿಂ ಹಾಗೂ ಜೈನ ಧರ್ಮಕ್ಕೆ ಸಂಬಂಧಿಸಿ ಮಂದಿರಗಳನ್ನು ಕಾಣಬಹುದು.

ಈ ಹಳ್ಳಿಯಲ್ಲಿ ಪಾಶ್ವನಾಥನ 31 ಫೀಟ್ ಎತ್ತರದ ಆಕರ್ಷಕ ಪ್ರತಿಮೆ ಇದೆ. ಅಲ್ಲಿ ಒಂದು ಶಿವಲಿಂಗವೂ ಇದೆ. ಮಸೀದಿಯೂ ಇದೆ. ಆಸುಪಾಸಿನ ಪ್ರದೇಶಗಳಲ್ಲಿ ಈ ಹಳ್ಳಿಯು ಬಹಳ ಪ್ರಸಿದ್ಧಹೊಂದಿದೆ. ನ್ಯಾಚುರೋಪಥಿ ಹಾಸ್ಪಿಟಲ್ ಹಾಗೂ ಶೋಧ ಕೇಂದ್ರ ಕೂಡಾ ಕಾಣಸಿಗುತ್ತದೆ.

 ಜಿಯೋಲಾಜಿಕಲ್ ಪಾರ್ಕ್

ಜಿಯೋಲಾಜಿಕಲ್ ಪಾರ್ಕ್

ಧಾರ್ಮಿಕ ಸ್ಥಳಗಳನ್ನು ಹೊರತುಪಡಿಸಿ ನೀವು ಇಲ್ಲಿ ಇತರ ಸ್ಥಳಗಳನ್ನೂ ಕಾಣಬಹುದು. ಇಲ್ಲಿನ ಜಿಯೋಲಾಜಿಕಲ್ ಪಾರ್ಕ್ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲೊಂದಾಗಿದೆ. ಇಲ್ಲಿ ನೀವು ವಿಭಿನ್ನ ಜಲಚರ ಪ್ರಾಣಿಗಳನ್ನು ಕಾಣಬಹುದು. 1970ರಲ್ಲಿ ಈ ಪಾರ್ಕ್‌ನ್ನು ನಿರ್ಮಿಸಲಾಗಿದೆ.

ಟ್ಯಾಕ್ಸ್‌ ಫ್ರೀ ಡ್ರಿಂಕ್ಸ್, ಬೀಚ್‌ನ್ನು ಹೊರತುಪಡಿಸಿ ಇನ್ನೇನೆಲ್ಲಾ ಇದೆ ಗೋವಾದಲ್ಲಿ

ಅಕ್ಷಯ್‌ವಟ ವಾಟಿಕ

ಅಕ್ಷಯ್‌ವಟ ವಾಟಿಕ

PC:Manojkhurana

ಈ ಮೇಲಿನ ತಾಣಗಳನ್ನು ಹೊರತುಪಡಿಸಿ ಅಕ್ಷಯ ವಟ ವಾಟಿಕವನ್ನೂ ಭೇಟಿ ನೀಡಬಹುದು. 5100 ವರ್ಷ ಹಳೆಯ ಆಲದ ಮರ ಇಲ್ಲಿನ ಮುಖ್ಯ ಆಕರ್ಷಕ ಕೇಂದ್ರವಾಗಿದೆ. ಇದನ್ನು ನೋಡಲು ದೂರ ದೂರದ ಊರುಗಳಿಂದ ಜನರು ಬರುತ್ತಾರೆ. ಈ ಮರದ ಎತ್ತರ ಸುಮಾರು 150 ಫೀಟ್ ಇದೆ. ಈ ಸ್ಥಳವು ಸಂತ ಸುಖದೇವ್‌ಗೆ ಸಂಬಂಧಿಸಿದ್ದಾಗಿದೆ. ಈ ಮರದ ಕೆಳಗೆ ಕೂತು ಭಗವದ್ಗೀತೆಯ ಪಾಠ ಮಾಡುತ್ತಿದ್ದರು ಎನ್ನಲಾಗುತ್ತದೆ. ಇದನ್ನು ಒಂದು ಧಾರ್ಮಿಕ ಸ್ಥಳದ ರೀತಿಯಲ್ಲಿ ಪೂಜಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X