Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಜಫರ್ ನಗರ್ » ಹವಾಮಾನ

ಮುಜಫರ್ ನಗರ್ ಹವಾಮಾನ

ಉತ್ತರ ಪ್ರದೇಶ ಮತ್ತು ಉತ್ತರ ಭಾರತದ ಇತರ ನಗರ, ಪಟ್ಟಣಗಳಂತೆ ಮುಜಫರ್ ನಗರವು ಸಹ, ನವೆಂಬರ್ ನಿಂದ ಏಪ್ರಿಲ್ ನವರೆಗೆ ಹಿತಮಿತವಾದ ವಾತಾವರಣವನ್ನು ಹೊಂದಿದ್ದು, ಈ ಕಾಲಾವಧಿಯು ಇಲ್ಲಿಗೆ ಭೇಟಿ ನೀಡಲು ಅತಿ ಸೂಕ್ತವಾಗಿದೆ.  ಆದರೂ ಕೂಡ, ಇಲ್ಲಿನ ಧಾರ್ಮಿಕ ಸ್ಥಳಗಳು ಹಾಗೂ ದೇವಾಲಯಗಳು ವರ್ಷವಿಡೀ ಸಂದರ್ಶಕರನ್ನು ಆಕರ್ಷಿಸುತ್ತದೆ.

ಬೇಸಿಗೆಗಾಲ

ಮುಜಫರ್ ನಗರದಲ್ಲಿ ಬೇಸಿಗೆಯು ಮಾರ್ಚ್ ನಿಂದ ಮೇ ವರೆಗೆ ವಿಸ್ತ್ರುತಗೊಂಡಿದ್ದು, ಕೆಲವೊಮ್ಮೆ ಜೂನ್ ವರೆಗೂ ಮುಂದುವರಿಯುತ್ತದೆ.  ಉಷ್ಣಾಂಶವು 22 ರಿಂದ 40 ಡಿಗ್ರಿ ಸೆಲ್ಸಿಯಸ್ ನವರೆಗೆ ಬದಲಾಗುತ್ತದೆ ಹಾಗೂ ಈ ಕಾಲಾವಧಿಯು ಬಿಸಿಯಾದ ಮತ್ತು ಅಹಿತಕರವಾದ ಮಾರುತಗಳಿಂದ ಕೂಡಿರುತ್ತದೆ.

ಮಳೆಗಾಲ

ಜುಲೈ ನಿಂದ ಸೆಪ್ಟೆಂಬರ್ ವರೆಗೆ ಮಳೆಗಾಲವಾಗಿದ್ದು, ಈ ಕಾಲಾವಧಿಯಲ್ಲಿ, ಮುಜಫರ್ ನಗರವು ಆಗಾಗ್ಗೆ ಭಾರಿ ಮಳೆಯನ್ನು ಹೊಂದುತ್ತದೆ.  ಆಕಾಶದಲ್ಲಿ ಮೋಡ ಮುಸುಕಿರುತ್ತದೆ ಹಾಗೂ ವಾತಾವರಣವು ತೇವವಾಗಿರುತ್ತದೆ.

ಚಳಿಗಾಲ

ನವೆಂಬರ್ ನಿಂದ ಫೆಬ್ರವರಿ ಯವರೆಗಿನ ಅವಧಿಯು ಚಳಿಗಾಲವಾಗಿರುತ್ತದೆ.  ಈ ಅವಧಿಯಲ್ಲಿ ವಾತಾವರಣವು ಹಿತಕರವಾಗಿದ್ದು, ಉಷ್ಣಾಂಶವು 12 ರಿಂದ 20 ಡಿಗ್ರಿ ಸೆಲ್ಸಿಯಸ್ ನವರೆಗೆ ಇರುತ್ತದೆ.