Search
  • Follow NativePlanet
Share
» »ಭಾರತದ ಪಟಾಕಿಗಳ ರಾಜಧಾನಿ ಶಿವಕಾಶಿ!

ಭಾರತದ ಪಟಾಕಿಗಳ ರಾಜಧಾನಿ ಶಿವಕಾಶಿ!

By Vijay

ನಿಮಗೆ ಗೊತ್ತೆ, ಭಾರತದಲ್ಲಿ ಉತ್ಪಾದಿಸಲಾಗುವ ಪಟಾಕಿ ಹಾಗೂ ಬೆಂಕಿಕಡ್ಡಿಗಳ ಒಟ್ಟು ಪ್ರಮಾಣದಲ್ಲಿ 70% ರಷ್ಟು ತಯಾರಾಗುವುದೆ ಶಿವಕಾಶಿ ಪಟ್ಟಣದಲ್ಲಿ. ಹಾಗಾಗಿ ಶಿವಕಾಶಿಯನ್ನು ಪಟಾಕಿಗಳ ರಾಜಧಾನಿ ಎಂದರೆ ತಪ್ಪಾಗಲಿಕ್ಕಿಲ್ಲ. ಸಾಕಷ್ಟು ಪಟಾಕಿ ತಯಾರಿಸುವ ಕಾರ್ಖಾನೆಗಳು ಇಲ್ಲಿದ್ದು ಇಲ್ಲಿ ತಯಾರಿಸಲಾದ ಪಟಾಕಿಗಳು ಕರ್ನಾಟಕ, ಕೇರಳ, ಆಂಧ್ರ ಸೇರಿದಂತೆ ಹಲವು ರಾಜ್ಯಗಳಿಗೆ ರಫ್ತಾಗುತ್ತವೆ.

ಇನ್ನೂ ಭಾರತದಲ್ಲಿ ಬೆಳಕಿನ ಹಬ್ಬ ದೀಪಾವಳಿಯಾಗಲಿ ಅಥವಾ ಗಣೇಶ ಚತುರ್ಥಿಯಾಗಲಿ ಹತ್ತಿರ ಬರುತ್ತಿದ್ದಂತೆ ಸಾಕಷ್ಟು ಮಕ್ಕಳಿಗೆ ಹಾಗೂ ಹದಿಹರೆಯದವರಿಗೂ ಸಹ ಒಂದು ರೀತಿಯ ರೋಮಾಂಚವಾಗುತ್ತದೆ, ಕಾರಣ ವಿವಿಧ ರೀತಿಯ ಪಟಾಕಿಗಳನ್ನು ಈ ಸಂದರ್ಭದಲ್ಲಿ ಹೊಡೆಯಬಹುದೆಂದು.

ದೀಪಾವಳಿಯ ಸಡಗರ ಇಲ್ಲಿ ಬಲು ಅಬ್ಬರ

ಮೊದಲಿನಿಂದಲೂ ಹಿಂದುಗಳು ಬೆಳಕಿನ ಹಬ್ಬವನ್ನು ಬದುಕಿನಲ್ಲಿ ಅಂಧಕಾರವನ್ನು ಬಿಟ್ಟು ಬೆಳಕಿನೆಡೆ ನಡೆಯುವುದರ ದ್ಯೋತಕವಾಗಿ ಆಚರಿಸುತ್ತ ಬಂದಿದ್ದಾರೆ. ಹೇಗೆ ಹಣತೆಯನ್ನು ಬೆಳಗಿದಾಗ ಅದು ಸುತ್ತಲೂ ಇರುವ ಅಂಧಕಾರವನ್ನು ಮಾಯ ಮಾಡುವುದೊ ಅದೇ ರೀತಿಯಲ್ಲಿ ಬೆಳಕು ನಮ್ಮ ಜೀವನದ ಕತ್ತಲೆಯನ್ನು ಕಳೆಯಬೇಕೆಂಬುದೆ ದೀಪಾವಳಿಯ ಮುಖ್ಯ ಉದ್ದೇಶವಾಗಿದೆ.

ಹೀಗೆ ಬೆಳಕನ್ನೆ ಆಚರಿಸುವ, ಬೆಳಕಿಗೆ ಪ್ರಾಮುಖ್ಯತೆಯಿರುವ ಈ ಹಬ್ಬದಲ್ಲಿ ವಿವಿಧ ರೀತಿಯ ಪಟಾಕಿಗಳು, ಬಾಣ ಬಿರುಸುಗಳು, ಹೀಗೆ ವೈವಿಧ್ಯಮಯ ಬಣ್ಣ ಬಣ್ಣದ ಪ್ರಕಾಶಗಳಿಂದ ಸಿಡಿಯುವ ಪಟಾಕಿಗಳು ಮೊದಲಿನಿಂದಲೂ ಹಬ್ಬದ ಭಾಗವಾಗಿ ಸೇರಿಕೊಂಡಿವೆ. ಹೀಗೆ ಮಕ್ಕಳ ಸಂತಸವನ್ನು ಹೆಚ್ಚು ಮಾಡುವ ಪಟಾಕಿಗಳು ಉತ್ಪಾದನೆಯಾಗುವ ಅದ್ಭುತ ತಾಣವೆ ಶಿವಕಾಶಿ.

ಶಿವಕಾಶಿ

ಶಿವಕಾಶಿ

ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿರುವ ಶಿವಕಾಶಿ ಎಷ್ಟು ಪ್ರಸಿದ್ಧವಾಗಿದೆ ಎಂದರೆ ದಕ್ಷಿಣ ಭಾರತದ ಯಾವ ರಾಜ್ಯಗಳಲ್ಲೆ ಆಗಲಿ ಯಾರಿಗಾದರೂ ಪಟಾಕಿಗಳು ಎಲ್ಲಿ ತಯಾರಾಗುತ್ತವೆ ಎಂದು ಕೇಳಿದರೆ ಸಾಕು ಬಹುತೇಕರು ಶಿವಕಾಶಿ ಎಂತಲೆ ಉತರಿಸುತ್ತಾರೆ. ಆ ರೀತಿಯಾಗಿ ಪಟಾಕಿ ದೃಷ್ಟಿಯಿಂದ ಎಲ್ಲರ ಬಾಯಲ್ಲಿ ಬರುವ ಊರು ಇದಾಗಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: UrbanUrban_ru

ಖಂಡಿತ ಇಲ್ಲ

ಖಂಡಿತ ಇಲ್ಲ

ಆದರೆ ಶಿವಕಾಶಿ ಎಂದರೆ ಕೇವಲ ಪಟಾಕಿಗಳು ಮಾತ್ರವೆ? ಖಂಡಿತವಾಗಿಯೂ ಇಲ್ಲ. ಪ್ರವಾಸಿ ದೃಷ್ಟಿಯಿಂದ ನೋಡಿದಾಗ ಇದೊಂದು ಸುಂದರ ಸ್ಥಳವಾಗಿಯೂ ಕಂಡುಬರುತ್ತದೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕ ಪ್ರವಾಸಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ ಶಿವಕಾಶಿ.

ಚಿತ್ರಕೃಪೆ: Joel Suganth

ಏನಿದರ ಕಥೆ

ಏನಿದರ ಕಥೆ

ಪಟ್ಟಣದ ಹೆಸರೆ ಸೂಚಿಸುವ ಹಾಗೆ ಇದು ಕಾಶಿಯ ಶಿವನು ನೆಲೆಸಿರುವ ತಾಣವೆ ಆಗಿದೆ ಎಂತಲೂ ಹೇಳಬಹುದು. ಈ ಹೆಸರು ಬರಲೂ ಸಹ ರೋಚಕ ಕಥೆಯೊಂದಿದೆ. ಆ ಕಥೆಗೂ ಮೊದಲು ಇಲ್ಲಿರುವ ಕಾಶಿ ವಿಶ್ವನಾಥರ ದೇವಾಲಯವನ್ನು ಪಾಂಡ್ಯರ ದೊರೆಯಾದ ಹರಿಕೇಸರಿ ಪರಕ್ಕಿರಮ ಪಾಂಡಿಯನ್ ನಿರ್ಮಿಸಿದ್ದಾನೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ.

ಚಿತ್ರಕೃಪೆ: Ssriram mt

ತೆನ್ಕಾಶಿ

ತೆನ್ಕಾಶಿ

ಈ ರಾಜನು ಹದಿನೈದನೇಯ ಶತಮಾನದ ಸಂದರ್ಭದಲ್ಲಿ ಮದುರೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಆಳುತ್ತಿದ್ದನು. ಸುತ್ತಮುತ್ತಲಿನ ಪ್ರದೇಶಗಳು ಇಂದಿನ ಶಿವಕಾಶಿಯನ್ನೂ ಒಳಗೊಂಡಿತ್ತು. ಇನ್ನೂ ಕಥೆಗೆ ಬರುವುದಾದರೆ ಪಾಂಡ್ಯ ರಾಜನಿಗೆ ತಿರುನೆಲ್ವೇಲಿಯಲ್ಲಿರುವ ತೆನ್ಕಾಶಿ (ದಕ್ಷಿಣದ ಕಾಶಿ)ಯಲ್ಲಿ ಶಿವನಿಗೆ ಮುಡಿಪಾದ ದೇವಾಲಯ ನಿರ್ಮಿಸುವ ಕುರಿತು ಆಸೆಯಿತ್ತು. ತೆನ್ಕಾಶಿ ದೇವಾಲಯ.

ಚಿತ್ರಕೃಪೆ: Koshy Koshy

ಶಿವಲಿಂಗ ತಂದಿದ್ದ

ಶಿವಲಿಂಗ ತಂದಿದ್ದ

ಅದಕ್ಕಾಗಿ ಅವನು ಸ್ವತಃ ಕಾಶಿಗೆ ತೆರಳಿ ಅಲ್ಲಿಂದಲೆ ಶಿವಲಿಂಗವೊಂದನ್ನು ಇಲ್ಲಿಗೆ ತಂದು ತೆನ್ಕಾಶಿಯಲ್ಲಿ ಪ್ರತಿಷ್ಠಾಪಿಸಲು ಬಯಸಿದ್ದ. ಅದರಂತೆ ಒಂದು ದಿನ ಕಾಶಿಗೆ ತೆರಳಿ ಅಲ್ಲಿ ಒಂದು ಸುಂದರವಾದ ಶಿವಲಿಂಗ ಖರೀದಿಸಿ ಅದನ್ನು ಅರಚಕ್ರಾದಿಗಳಿಂದ ಶುದ್ಧಗೊಳಿಸಿಕೊಂಡು ತನ್ನ ಬಳಿಯಿದ್ದ ಆಕಳ ಡುಬ್ಬದ ಮೇಲಿಟ್ಟು ತನ್ನ ರಾಜ್ಯಕ್ಕೆ ತೆರಳಿದ. ಕಾಶಿಯ ಗಂಗಾ ತಟ.

ಚಿತ್ರಕೃಪೆ: Jeeheon Cho

ಚಲಿಸಲೆ ಇಲ್ಲ!

ಚಲಿಸಲೆ ಇಲ್ಲ!

ಹೀಗೆ ಕ್ರಮಿಸುತ್ತ ಬಂದ ರಾಜನು ಇಂದಿನ ಶಿವಕಾಶಿಯಿರುವ ಸ್ಥಳಕ್ಕೆ ಬಂದಾಗ ಅವನಿಗೆ ಆಯಾಸವಾಗಿ ಅಲ್ಲೆ ಇದ್ದ ಬಿಲ್ವ ಮರದ ಕೆಳಗೆ ಅಲ್ಪ ವಿರಾಮ ಪಡೆದ. ತದನಂತರ ಮತ್ತೆ ತನ್ನ ಸ್ಥಳಕ್ಕೆ ಮುಂದುವರೆಯಲೆಂದು ಪ್ರಯಾಣಿಸಲು ಆರಂಭಿಸುತ್ತಿದ್ದಂತೆ ಶಿವಲಿಂಗ ಹೊತ್ತಿದ್ದ ಆಕಳು ಮುಂದೆ ನಡೆಯಲೆ ಇಲ್ಲ. ಎಷ್ಟೆ ಪ್ರಯತ್ನಿಸಿದರೂ ಅದು ಅಲ್ಲೆ ನಿಂತುಬಿಟ್ಟಿತು.

ಚಿತ್ರಕೃಪೆ: Ssriram mt

ಪ್ರತಿಷ್ಠಾಪಿಸಿದ

ಪ್ರತಿಷ್ಠಾಪಿಸಿದ

ಶಿವನ ಭಕ್ತನಾಗಿದ್ದ ರಾಜನಿಗೆ ಸ್ವಲ್ಪ ಸಮಯದ ನಂತರ, ಬಹುಶಃ ಶಿವನು ಇಲ್ಲಿಯೆ ನೆಲೆಸಬೇಕೆಂದು ಅಪೇಕ್ಷಿಸಿರಬಹುದೆಂದು ಬಲವಾಗಿ ಅನಿಸಿತು. ಆದ್ದರಿಂದ ತಡ ಮಾಡದೆ ಅಲ್ಲಿಯೆ ತಾನು ತಂದ ಶಿವಲಿಂಗ ಪ್ರತಿಷ್ಠಾಪಿಸಿ ದೇವಾಲಯ ನಿರ್ಮಿಸಿದ. ಅಂದಿನಿಂದ ಈ ಸ್ಥಳವು ಶಿವಕಾಶಿ ಎಂಬ ಹೆಸರಿನಿಂದಲೆ ಪ್ರಸಿದ್ಧವಾಯಿತು.

ಚಿತ್ರಕೃಪೆ: Ssriram mt

ವಿಶ್ವನಾಥ-ವಿಶಾಲಾಕ್ಷಿ

ವಿಶ್ವನಾಥ-ವಿಶಾಲಾಕ್ಷಿ

ಕಾಶಿ ವಿಶ್ವನಾಥರ್ ದೇವಾಲಯವು ಶಿವಕಾಶಿಯ ಗುರುತರವಾದ ಧಾರ್ಮಿಕ ತಾನವಾಗಿದ್ದು ಇಲ್ಲಿ ಶಿವನು ವಿಶ್ವನಾಥನಾಗಿಯೂ ಹಾಗೂ ಪಾರ್ವತಿಯು ವಿಶಾಲಾಕ್ಷಿಯಾಗಿಯೂ ನೆಲೆಸಿದ್ದಾರೆ. ದೇವಾಲಯವು ಸುಂದರ ಕಲ್ಯಾಣಿ ಹಾಗೂ ಇತರೆ ದೇವರ ಸನ್ನಿಧಿಗಳನ್ನು ಹೊಂದಿದೆ. ಹುಣ್ಣಿಮೆಯ ದಿನದಂದು ಪೂರ್ತಿಯಾಗಿ ತೆರೆದಿರುವ ಈ ದೇವಾಲಯವು ಇತರೆ ದಿನಗಳಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಘಂಟೆಯವರೆಗೂ ಹಾಗೂ ಸಂಜೆ 4 ರಿಂದ ರಾತ್ರಿ 8:30 ಘಂಟೆಯವರೆಗೂ ತೆರೆದಿರುತ್ತದೆ.

ಚಿತ್ರಕೃಪೆ: Ssriram mt

ಗುರುತರ ಆಕರ್ಷಣೆ

ಗುರುತರ ಆಕರ್ಷಣೆ

ಕಾಶಿ ವಿಶ್ವನಾಥರ್ ದೇವಾಲಯವನ್ನು ಹೊರತು ಪಡಿಸಿದರೆ ಇಲ್ಲಿ ಇನ್ನೊಂದು ಪ್ರಭಾವಶಾಲಿ ದೇವಾಲಯವಿದೆ. ಶಕ್ತಿ ದೇವಿಗೆ ಮುಡಿಪಾದ ಈ ದೇವಾಲಯ ಶಿವಕಾಶಿಯ ಮತ್ತೊಂದು ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಇದೆ ಭದ್ರಕಾಳಿ ಅಮ್ಮನವರ ದೇವಾಲಯ. ಶಿವಕಾಶಿಯ ಮತ್ತೊಂದು ಗುರುತರವಾದ ದೇವಸ್ಥಾನ.

ಚಿತ್ರಕೃಪೆ: Ssriram mt

ಹೆರಂಬ ಗಣೇಶ

ಹೆರಂಬ ಗಣೇಶ

ಭದ್ರಕಾಳಿ ದೇವಾಲಯವು ಪವಿತ್ರವಾದ ಕಲ್ಯಾಣಿಯನ್ನು ಹೊಂದಿದ್ದು ಇಲ್ಲಿ ಪಾರ್ವತಿಯ ಎಂಟು ಭಯಂಕರ ಅವತಾರಗಳನ್ನು ಕಾಣಬಹುದಾಗಿದೆ. ಅಲ್ಲದೆ, ಇಲ್ಲಿ ಅಪರೂಪವೆಂಬಂತೆ ಹೆರಂಬ ಗಣೇಶನ ಸನ್ನಿಧಿಯಿದೆ. ಹೆರಂಬ ಗಣೇಶನ ಸಾಮಾನ್ಯ ಗಣೇಶನ ರೌದ್ರ ಭಯಂಕರ ರೂಪವಾಗಿದೆ. ಈ ರೂಪದ ಗಣೇಶನ ವಾಹನ ಸಿಂಹವಾಗಿದೆ. ಆದರೆ ಇಲ್ಲಿ ಹೆರಂಬ ಗಣೇಶನ ವಾಹನವಾಗಿ ಮೂಷಕವಿರಿವುದು ವಿಶೇಷ.

ಚಿತ್ರಕೃಪೆ: Ssriram mt

ಆಕರ್ಷಕ

ಆಕರ್ಷಕ

ಭದ್ರಕಾಳಿ ದೇವಾಲಯವು ಅತಿ ಅದ್ಭುತವಾದ ಗೋಪುರವನ್ನು ಹೊಂದಿದ್ದು ಸುಂದರವಾಗಿ ನಿರ್ಮಿಸಲ್ಪಟ್ಟಿದೆ. ಇತಿಹಾಸ ಗಮನಿಸಿದಾಗ ತಿಳಿಯುವ ವಿಷಯವೆಂದರೆ ಈ ದೇವಾಲಯವು 18 ನೇಯ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದ್ದು ನಂತರ 19 ಹಾಗೂ 20 ನೇಯ ಶತಮಾನಗಳಲ್ಲಿ ನವೀಕರಣಗೊಂಡಿದೆ.

ಚಿತ್ರಕೃಪೆ: Ssriram mt

ಬೆಟ್ಟದ ಮೇಲೆ

ಬೆಟ್ಟದ ಮೇಲೆ

ಶಿವಕಾಶಿ-ವಿರುದುನಗರ ರಸ್ತೆಯ ಮೇಲೆ ಶಿವಕಾಶಿ ಪಟ್ಟಣದ ಹೊರವಲಯದಲ್ಲಿರುವ ತಿರುತಂಕಲ್ ಎಂಬಲ್ಲಿರುವ ನೂರು ಅಡಿಗಳ ಗ್ರಾನೈಟ್ ಶಿಲೆಯ ಬೆಟ್ಟವೊಂದರ ಮೇಲೆ ನೆಲೆಸಿರುವ ವಿಷ್ಣುವಿಗೆ ಮುಡಿಪಾದ ಅದ್ಭುತ ದೇವಾಲಯ ಇದಾಗಿದೆ. ಇಲ್ಲಿ ವಿಷ್ಣುವನ್ನು ನಿನ್ರ ನಾರಾಯಣನಾಗಿಯೂ ಲಕ್ಷ್ಮಿ ದೇವಿಯನ್ನು ಅರುಣಕಮಲ ಮಹಾದೇವಿಯಾಗಿಯೂ ಆರಾಧಿಸಲಾಗುತ್ತದೆ.

ಚಿತ್ರಕೃಪೆ: Ssriram mt

ಗೆದ್ದಳು

ಗೆದ್ದಳು

ದಂತಕಥೆಯ ಪ್ರಕಾರ, ಇದೆ ಸ್ಥಳದಲ್ಲಿ ಶ್ರೀದೇವಿಯು ಭೂದೇವಿ ಹಾಗೂ ನೀಲಾದೇವಿಗಿಂತ ತನಗೆ ವಿಷ್ಣುವಿನ ಮೇಲೆ ಹೆಚ್ಚು ಭಕ್ತಿಯಿದೆ ಎಂದು ರುಜುವಾತು ಪಡಿಸಿದ್ದಳು. ಅಲ್ಲದೆ ಇನ್ನೊಂದು ದಂತಕಥೆಯ ಕೃಷ್ಣನ ಮೊಮ್ಮಗ ಅನಿರುದ್ಧ ಇದೆ ಸ್ಥಳದಲ್ಲಿ ಮದುವೆಯಾಗಿದ್ದನಂತೆ.

ಚಿತ್ರಕೃಪೆ: Ssriram mt

ಪಶ್ಚಿಮಘಟ್ಟಗಳು

ಪಶ್ಚಿಮಘಟ್ಟಗಳು

ಇನ್ನೂ ಶಿವಕಾಶಿಯಿಂದ ಸ್ವಲ್ಪ ದೂರದಲ್ಲಿ ಪ್ರಾಕೃತಿಕ ಸೊಬಗಿನ ತಾಣ ನೋಡಬೇಕೆಂದಿದ್ದರೆ ಪೂರ್ವದಲ್ಲಿರುವ ಪಶ್ಚಿಮಘಟ್ಟಗಳ ಶ್ರೀಮಂತಿಕೆಯಿರುವ ಅಯ್ಯನಾರ ಜಲಪಾತ ತಾಣವನ್ನು ಕಾಣಬಹುದು. ಈ ತಾಣವು ದಟ್ಟ ನಿಸರ್ಗ ಸೌಂದರ್ಯದಿಂದ ಕೂಡಿದ್ದು ಶಿವಕಾಶಿ ಜನರ ನೆಚ್ಚಿನ ಪಿಕ್ನಿಕ್ ಸ್ಥಳವಾಗಿ ಜನಪ್ರೀಯವಾಗಿದೆ.

ಚಿತ್ರಕೃಪೆ: Pragadeeshraja

ಶಿವಕಾಶಿಯ ಜನರಿಗೆ

ಶಿವಕಾಶಿಯ ಜನರಿಗೆ

ಶಿವಕಾಶಿಯಿಂದ ಸುಮಾರು 30 ಕಿ.ಮೀ ಗಳಷ್ಟು ದೂರವಿರುವ ಈ ತಾಣವು ಮುಖ್ಯವಾಗಿ ಈಶಾನ್ಯ ಮಾನ್ಸೂನ್ ಮಳೆಯಿಂದ ನೀರನ್ನು ಪಡೆಯುತ್ತದೆ. ಇಲ್ಲಿ ಅಯ್ಯನಾರ್ ದೇವಾಲಯ ಹಾಗೂ ಆಣೆಕಟ್ಟು ಇರುವುದನ್ನು ಕಾಣಬಹುದು. ಈ ನೀರಿನ ಮೂಲದಿಂದ ನಗರಕ್ಕೆ ಕುಡಿಯುವ ನೀರಿನ ಸರಬರಾಜು ಮಾಡಲಗುತ್ತದೆ.

ಚಿತ್ರಕೃಪೆ: Srinivasan KB

ಪಟಾಕಿ ತಯಾರಿ

ಪಟಾಕಿ ತಯಾರಿ

ಇನ್ನೂ ಶಿವಕಾಶಿ ಪಟ್ಟಣಕ್ಕೆ ಸಂಬಂಧಿಸಿದಂತೆ ಇಲ್ಲಿ ಹೆಚ್ಚು ಹೆಚ್ಚು ರಾಸಾಯನಿಕ ಕಾರ್ಖಾನೆಗಳು, ಪಟಾಕಿ ಕಾರ್ಖಾನೆಗಳು, ಸೋಡಾ ತಯಾರಿಸುವ ಕಾರ್ಖಾನೆಗಳು ಹಾಗೂ ಹೆಚ್ಚಿನ ಸಂಖ್ಯೆಯ ಮುದ್ರಣಾಲಯಗಳನ್ನು ಕಾಣಬಹುದು. ಪಟಾಕಿಗೆ ಬಳಸಲಾಗುವ ಕಾಗದಗಳ ಮುದ್ರಣವೂ ಸಹ ಇಲ್ಲೆ ಆಗುತ್ತದೆ. ಅಲ್ಲದೆ ಭಾರತದಲ್ಲಿ ಉತ್ಪಾದಿಸಲಾಗುವ ಒಟ್ಟು ಡೈರಿ ಬುಕ್ಕುಗಳಲ್ಲಿ 30% ರಷ್ಟು ಶಿವಕಾಶಿಯಲ್ಲೆ ಉತ್ಪಾದಿಸಲಾಗುತ್ತದೆ. ಸುತುಳಿ ಬಾಂಬುಗಳ ತಯಾರಿಕೆಯ ಕೆಲಸದಲ್ಲಿ ನಿರತರಾದ ಮಹಿಳಾ ಕಾರ್ಮಿಕರು.

ಚಿತ್ರಕೃಪೆ: Mathanagopal

ತಲುಪುವ ಬಗೆ

ತಲುಪುವ ಬಗೆ

ಶಿವಕಾಶಿಯು ಚೆನ್ನೈನಿಂದ 540 ಕಿ.ಮೀ ಹಾಗೂ ಮದುರೈನಿಂದ 80 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಶಿವಕಾಶಿ ರೈಲು ನಿಲ್ದಾಣ ಹೊಂದಿದ್ದು ಕೇರಳದದೊಂದಿಗೆ ಸಂಪರ್ಕಿಸುವ ಹಲವಾರು ರೈಲುಗಳು ಇಲ್ಲಿ ಬರುತ್ತವೆ.

ಚಿತ್ರಕೃಪೆ: Ben

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more