Search
  • Follow NativePlanet
Share
» »ಮಕರ ಸಂಕ್ರಾಂತಿಯಂದು ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗೋದನ್ನು ಮಿಸ್ ಮಾಡಬೇಡಿ

ಮಕರ ಸಂಕ್ರಾಂತಿಯಂದು ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗೋದನ್ನು ಮಿಸ್ ಮಾಡಬೇಡಿ

ಮಹಾರಾಷ್ಟ್ರದ ಸೋಲಾಪುರದಲ್ಲಿರುವ ಶ್ರೀ ಸಿದ್ದೇಶ್ವರ ದೇವಸ್ಥಾನವು ಮಹಾರಾಷ್ಟ್ರದಲ್ಲದೆ ಇಡೀ ಭಾರತದಲ್ಲೇ ಅತ್ಯಂತ ಸುಂದರ ದೇವಾಲಯಗಳಲ್ಲಿ ಒಂದಾಗಿದೆ. ಮಕರ ಸಂಕ್ರಾಂತಿಯಂದು ಈ ದೇವಾಲಯಕ್ಕೆ ಭೇಟಿ ನೀಡೋದು ಒಳ್ಳೆಯದಂತೆ. ಹಾಗಾಗಿ ಯಾರೆಲ್ಲಾ ಇನ್ನೂ ಈ ದೇವಾಲಯಕ್ಕೆ ಭೇಟಿ ನೀಡಿಲ್ಲವೋ ಮಕರ ಸಂಕ್ರಾಂತಿಯಂದು ಇಲ್ಲಿಗೆ ಭೇಟಿ ನೀಡೋದನ್ನು ಮರೆಯಬೇಡಿ.

ಶಿವ, ವಿಷ್ಣುವಿನ ಅವತಾರ

ಶಿವ, ವಿಷ್ಣುವಿನ ಅವತಾರ

PC: Uddhavghodake
ಶಿವ ಮತ್ತು ವಿಷ್ಣುವಿನ ಅವತಾರವೆಂದು ಸಿದ್ದೇಶ್ವರರನ್ನು ಪರಿಗಣಿಸಲಾಗುತ್ತದೆ . ಶ್ರೀ ಸಿದ್ದೇಶ್ವರ್ ಸಮಾಧಿಯನ್ನು ಪಡೆದ ಸ್ಥಳದಲ್ಲಿ ಭಕ್ತರು ಪೂಜೆಸಲ್ಲಿಸುತ್ತಾರೆ. ಮಹಾರಾಷ್ಟ್ರ ಯಾತ್ರಾಸ್ಥಳವಾಗಿರುವ ಈ ದೇವಾಲಯವು ಪ್ರಶಾಂತವಾದ ಸರೋವರದ ಮೇಲೆ ನಿಂತಿದೆ.

ಶಿವನಿಗೆ ಸಮರ್ಪಿತವಾದ ದೇವಾಲಯ

ಶಿವನಿಗೆ ಸಮರ್ಪಿತವಾದ ದೇವಾಲಯ

PC:Dharmadhyaksha

ಸಿದ್ಧೇಶ್ವರ ದೇವಸ್ಥಾನವನ್ನು ಯೋಗಿ ನಿರ್ಮಿಸಿದರು. ಶ್ರೀಶೈಲಂ ಶ್ರೀ ಮಲ್ಲಿಕಾರ್ಜುನನ ಭಕ್ತನಾಗಿದ್ದ ಸಿದ್ಧರಾಮೇಶ್ವರ ತನ್ನ ಗುರುಗಳ ಸೂಚನೆಗಳ ಪ್ರಕಾರ 68 ಶಿವ ಲಿಂಗಗಳನ್ನು ದೇವಾಲಯದಲ್ಲಿ ನಿರ್ಮಿಸಿದರು.

ಸಿದ್ದೇಶ್ವರರ ಸಮಾಧಿ

ಸಿದ್ದೇಶ್ವರರ ಸಮಾಧಿ

ಮುಖ್ಯ ದೇವಸ್ಥಾನ ಸಂಕೀರ್ಣದಲ್ಲಿ, ಸುಂದರವಾದ ಗರ್ಭಗುಡಿ ಇದೆ, ಇದು ಸಿದ್ದೇಶ್ವರ ವಿಗ್ರಹವನ್ನು ಒಳಗೊಂಡಿದೆ. ಮುಖ್ಯ ಅಂಗಣದಡಿಯಲ್ಲಿ, 68 ಶಿವ ಲಿಂಗಂಗಳು ಇವೆ. ಅಮೃತ್ ಲಿಂಗ ಮತ್ತು ಗಣೇಶ ದೇವಾಲಯಗಳು ಇಲ್ಲಿ ವಿಶೇಷವಾದವುಗಳಾಗಿವೆ. ಬೆಳ್ಳಿಯ ಲೇಪಿತ ನಂದಿ, ಮತ್ತು ರುಕ್ಮಿಣಿಯೂ ಕೂಡಾ ಇತರ ದೇವತೆಗಳ ಜೊತೆಗೆ ದೇವಾಲಯದ ಒಂದು ಭಾಗವಾಗಿದೆ.ಈ ದೇವಾಲಯದ ಮಧ್ಯದಲ್ಲಿ ಸಿದ್ದೇಶ್ವರರ ಸಮಾಧಿಯೂ ಇದೆ.

ಸಿದ್ದೇಶ್ವರ ಕೆರೆ

ಸಿದ್ದೇಶ್ವರ ಕೆರೆ

PC: Uddhavghodake

ಸಿದ್ದೇಶ್ವರ ಕೆರೆಯು ಈ ದೇವಾಲಯದ ಮುಖ್ಯ ಆಕರ್ಷಣೆಯಾಗಿದೆ. ಈ ಕೆರೆ ದೊಡ್ಡದಾಗಿದೆ ಮತ್ತು ನೀರಿನ್ನೂ ಸ್ಪಷ್ಟವಾಗಿದೆ. ಈ ಕೆರೆಯಲ್ಲಿ ಹಲವಾರು ನೀರಿನ ಚಟುವಟಿಕೆಗಳು ನಡೆಯುತ್ತವೆ. ಸಂಜೆ ಹೊತ್ತಿನಲ್ಲಿ ಹಾಗೂ ಹಬ್ಬದ ಸಂದರ್ಭದಲ್ಲಿ ಸಿದ್ದೇಶ್ವರ ದೇವಸ್ಥಾನದ ನೆರಳು ಈ ಕೆರೆಯಲ್ಲಿ ಬೀಳುತ್ತದೆ. ಇದು ಜನರನ್ನು ಆಕರ್ಷಿಸುತ್ತದೆ.

ಭೇಟಿಗೆ ಸೂಕ್ತ ಸಮಯ

ಭೇಟಿಗೆ ಸೂಕ್ತ ಸಮಯ

PC: Ameyaket

ಈ ದೇವಾಲಯಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಮಕರ ಸಂಕ್ರಾಂತಿ ಉತ್ಸವವಾಗಿದ್ದು, ಮೂರು ದಿನಗಳ ಕಾಲ ಈ ಉತ್ಸವ ನಡೆಯುತ್ತದೆ. ಅಲ್ಲದೆ, ಗಡ್ಡ ಯಾತ್ರೆಯನ್ನು ಹದಿನೈದು ದಿನಗಳ ಕಾಲ ದೇವಾಲಯದಲ್ಲಿ ನಡೆಸಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Ameyaket

ಸಿದ್ದೇಶ್ವರ ದೇವಾಲಯವನ್ನು ತಲುಪಲು ರಸ್ತೆ ಮಾರ್ಗಗಳು ಉತ್ತಮವಾಗಿ ಸಂಪರ್ಕ ಹೊಂದಿವೆ ಮತ್ತು ಸೋಲಾಪುರ ರೈಲು ನಿಲ್ದಾಣವು ದೇವಸ್ಥಾನದಿಂದ ಕೇವಲ 2 ಕಿಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X