Search
  • Follow NativePlanet
Share
» »ಶಿವಥರಘಳ ಸಮರ್ಥ ರಾಮದಾಸರ ಸ್ಥಳ

ಶಿವಥರಘಳ ಸಮರ್ಥ ರಾಮದಾಸರ ಸ್ಥಳ

By Vijay

ಭವ್ಯ, ವಿಶಾಲವಾದ ಈ ನಮ್ಮ ನಾಡಿನಲ್ಲಿ ವಿವಿಧ ವಿಶೇಷತೆಗಳು, ಕೌತುಕಗಳು, ವಿಸ್ಮಯ - ಅಚ್ಚರಿಗಳಿಂದ ಕೂಡಿದ ಅನೇಕ ಸ್ಥಳಗಳು ನಮ್ಮ ಆಸು ಪಾಸಿನಲ್ಲಿದ್ದರೂ ಸುಲಭವಾಗಿ ಕಂಡುಬರುವುದಿಲ್ಲ. ಸಂಶೋಧನೆ, ಹೆಚ್ಚಿನ ಓದು, ಸುತ್ತಾಟ ಮೂಂತಾದವುಗಳಿಂದ ಈ ಸ್ಥಳಗಳನ್ನು ನೋಡಬಹುದಾಗಿದೆ. ಅಂತೆಯೆ ಮಹಾರಾಷ್ಟ್ರದ ಹದಿನೇಳನೆಯ ಶತಮಾನದ ಖ್ಯಾತ ಸಂತರಾಗಿದ್ದ ಸ್ವಾಮಿ ಸಮರ್ಥ ರಾಮದಾಸರು ವಾಸಿಸಿದ್ದ ಒಂದು ಗುಹಾ ರಚನೆಯ ಸ್ಥಳವನ್ನು 1930 ರಲ್ಲಿ ಶೋಧಿಸಲಾಯಿತು. ಪ್ರಸ್ತುತ ಲೇಖನವು ಆ ಸ್ಥಳದ ಕುರಿತು ತಿಳಿಸುತ್ತದೆ.

ಯಾತ್ರಾ.ಕಾಂನಿಂದ ಉಚಿತ ಕೊಡುಗೆಗಳನ್ನು ಪಡೆಯಲು ಕ್ಲಿಕ್ ಮಾಡಿ

ವಿಶೇಷ ಲೇಖನ : ಹರಿಶ್ಚಂದ್ರಗಡ್ ಎಂಬ ಪ್ರಳಯ ಸೂಚಕ

ಶಿವಥರಘಳ ಸಮರ್ಥ ರಾಮದಾಸರ ಸ್ಥಳ

ಸ್ವಾಮಿ ಸಮರ್ಥ ರಾಮದಾಸರು ಮಹಾರಾಷ್ಟ್ರದಲ್ಲಿದ್ದ 17 ನೆಯ ಶತಮಾನದ ಪ್ರಮುಖ ಸಂತರು ಹಾಗೂ ಅಧ್ಯಾತ್ಮಿಕ ಕವಿಗಳು. ಕೇವಲ ಮಹಾರಾಷ್ಟ್ರವಲ್ಲದೆ ಉತ್ತರ ಕರ್ನಾಟಕದ ಭಾಗದಲ್ಲೂ ಸಾಕಷ್ಟು ಇವರ ಅನುಯಾಯಿಗಳನ್ನು ಇಂದಿಗೂ ನಾವು ಕಾಣಬಹುದು. ಇವರಿಂದ ರಚಿತವಾದ ಅದ್ವೈತ ಸಿದ್ಧಾಂತವನ್ನು ಹೊಂದಿರುವ ದಾಸಬೋಧ ಕೃತಿಯು ಅತ್ಯಂತ ಜನಪ್ರೀಯ ಆಧ್ಯಾತ್ಮಿಕ ಕೃತಿಯಾಗಿದೆ. ಇವರು ಆಂಜನೇಯನ ಹಾಗೂ ರಾಮನ ಪರಮ ಭಕ್ತರಾಗಿದ್ದರು. ಇವರು ಜೀವನದ 22 ವರ್ಷಗಳನ್ನು ಒಂದು ಗುಹೆಯಲ್ಲಿ ಕಳೆದಿದ್ದರೆನ್ನಲಾಗಿದ್ದು ಆ ಗುಹೆಯೆ ಶಿವಥರ ಘಳ ಅಥವಾ ಸುಂದರಮಠ.

ವಿಶೇಷ ಲೇಖನ : ಅಂಜನಾಸುತ ಆಂಜನೇಯನ ಕಿಷ್ಕಿಂಧೆ

ಶಿವಥರಘಳ ಸಮರ್ಥ ರಾಮದಾಸರ ಸ್ಥಳ

ಚಿತ್ರಕೃಪೆ: Yogeshmahad

ಮಹಾರಾಷ್ಟ್ರದ ಧುಳೆಯ ಶಂಕರರಾವ್ ದೇವ್ ಎಂಬುವವರು ಈ ಸ್ಥಳದಲ್ಲಿರುವ ಗುಹೆಯನ್ನು 1930 ರಲ್ಲಿ ಶೋಧಿಸಿದರು. ನಂತರ 1950 ಸ್ಥಾಪಿತವಾದ ಸಮರ್ಥ ಸೇವಾ ಮಂಡಳವು ಈ ಗುಹಾ ತಾಣವನ್ನು ಸಾಕಷ್ಟು ಅಬಿವೃದ್ಧಿ ಪಡಿಸಿ ಭೇಟಿ ನೀಡಲು ಯೋಗ್ಯವಾದ ಸ್ಥಳವನ್ನಾಗಿ ಮಾಡಿದರು. ಶಿವಥರ ಘಳಕ್ಕೆ ಇಂದು ಸಾಕಷ್ಟು ರಾಮದಾಸರ ಭಕ್ತಾದಿಗಳು ರಾಜ್ಯದೆಲ್ಲೆಡೆಯಿಂದ ಇಲ್ಲಿಗೆ ಬರುತ್ತಿರುತ್ತಾರೆ. ಅಲ್ಲದೆ ಇದನ್ನು ನಿಯಂತ್ರಿಸುವ ಸಮರ್ಥ ಮಂಡಳವು ಇಲ್ಲಿ ಆವಾಗಾವಾಗ ಉತ್ಸವಗಳನ್ನು ಆಯೋಜಿಸುತ್ತಿರುತ್ತಾರೆ.

ವಿಶೇಷ ಲೇಖನ : ಕೊಟ್ಟೂರು ವೈಶಾಖ ಮಹೋತ್ಸವ

ಶಿವಥರಘಳ ಸಮರ್ಥ ರಾಮದಾಸರ ಸ್ಥಳ

ಚಿತ್ರಕೃಪೆ: Mvkulkarni23

ಶಿವಥರ ಘಳದಲ್ಲಿ ಇಂದು ಜಲಪಾತದ ಹಿಂಬದಿಯಲ್ಲಿರುವ ಮೂಲ ಗುಹೆ, ಸಮರ್ಥ ರಾಮದಾಸರಿಗೆ ಮುಡಿಪಾದ ದೇವಾಲಯ, ಪ್ರಸಾದ ಕೊಠಡಿ ಹಾಗೂ ವಸತಿ ಕೋಣೆಯನ್ನು ಕಾಣಬಹುದಾಗಿದೆ. ಮಧ್ಯಾಹ್ನ 12 ರಿಂದ 1.30 ಮಧ್ಯದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವ ಭಕ್ತಾದಿಗಳು ಇಲ್ಲವೆ ಪ್ರವಾಸಿಗರಿಗೆ ಪ್ರಸಾದ ವಿತರಿಸಲಾಗುತ್ತದೆ. ಪ್ರಸಾದವು ವಿಶಿಷ್ಟವಾಗಿದ್ದು ಹೆಸರುಕಾಳಿನಿಂದ ಮಾಡಲಾದ ಕಿಚಡಿ ಹಾಗೂ ಕೇಸರಿ ಬಾತ್ (ಶಿರಾ) ಗಳನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ. ಶಿವಥರ ಘಳದಲ್ಲಿ ರಾಮದಾಸರು ವಾಸಿಸಿದರೆನ್ನಲಾದ ಗುಹೆಯು ಜಲಪತದ ಹಿಂಬದಿಯಲ್ಲಿದೆ. ಮಳೆಗಾಲದಲ್ಲಿ ಈ ಜಲಪಾತ ಉಕ್ಕಿ ಹರಿಯುತ್ತದೆ.

ಶಿವಥರಘಳ ಸಮರ್ಥ ರಾಮದಾಸರ ಸ್ಥಳ

ಚಿತ್ರಕೃಪೆ: Marathipunekar

ಶಿವಥರ ಘಳದಲ್ಲೆ ರಾಮದಾಸರು ದಾಸಬೋಧವನ್ನು ರಚಿಸಿದರು ಎನ್ನಲಾಗಿದೆ. ಅಲ್ಲದೆ ಛತ್ರಪತಿ ಶಿವಾಜಿ ಮಹಾರಾಜನು ರಾಮದಾಸರನ್ನು ಇಲ್ಲಿಯೆ ಪ್ರಥಮ ಬಾರಿ ಭೇಟಿ ಮಾಡಿದನೆನ್ನಲಾಗಿದೆ. ಶಿವಥರ ಘಳವು ಸಹ್ಯಾದ್ರಿ ಪರ್ವತ ಶ್ರೇಣಿಯ ವರಂಧ ಘಾಟ್‍ನಲ್ಲಿದ್ದು ಭೋರ್ - ಮಹಾಡ್ ರಸ್ತೆಯ ಮೂಲಕ ಈ ತಾಣವನ್ನು ತಲುಪಬಹುದಾಗಿದೆ. ಪುಣೆಯಿಂದ ಭೋರ್ ನೆಡೆ ಪ್ರಯಾಣಿಸಿ ವರಂಧ ಘಾಟ್ ಅನ್ನು ತಲುಪಬೇಕು. ಇಲ್ಲಿಂದ ಮಹಾಡ್ ನೆಡೆ ಸಾಗುವ ದಾರಿಯ ಮೂಲಕ ಸಾಗಿ ಬಲ ತಿರುವು ಪಡೆದು ಶಿವಥರ ಘಳವನ್ನು ತಲುಪಬಹುದಾಗಿದೆ.

ಶಿವಥರಘಳ ಸಮರ್ಥ ರಾಮದಾಸರ ಸ್ಥಳ

ಶಿವಥರಘಳಕ್ಕೆ ಸಾಗುವ ಹಾದಿಯಲ್ಲಿ
ಚಿತ್ರಕೃಪೆ: Yogendra Joshi

ಸೂಚನೆ: ವರಂಧ ಘಾಟ್ ನಿಂದ ಶಿವಥರ ಘಳಕ್ಕೆ ತಲುಪಲು ಎರಡು ಆಯ್ಕೆಗಳಿವೆ. ಒಂದು ಚಿಕ್ಕದಾಗಿದ್ದು ಕೇವಲ 9 ಕಿ.ಮೀ ಉದ್ದವಿದೆ. ಆದರೆ ಈ ರಸ್ತೆಯುಕಳಪೆ ಮಟ್ಟದಲ್ಲಿದ್ದು ಅಪಾಯಕರವೂ ಸಹ ಆಗಿದೆ. ಆದ್ದರಿಂದ ಮೊದಲಿಗೆ ಬರುವ ಈ ರಸ್ತೆ ಬಿಟ್ಟು ಸ್ವಲ್ಪ ಮುಂದೆ ಸಾಗಿ ಮತ್ತೊಂದು ತಿರುವಿನ ಮೂಲಕ ಶಿವಥರ ಘಳಕ್ಕೆ ತಲುಪಬಹುದು. ಪುಣೆಯಿಂದ ಶಿವಥರ ಘಳವು ಸುಮಾರು 110 ಕಿ.ಮೀ ಗಳಷ್ಟು ಅಂತರದಲ್ಲಿ ನೆಲೆಸಿದೆ.

ವಿಶೇಷ ಲೇಖನ : ಪುಣೆ ಜಿಲ್ಲೆಯ ಧಾರ್ಮಿಕ ಆಕರ್ಷಣೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X