Search
  • Follow NativePlanet
Share
» »ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಶೂಟಿಂಗ್ ನಡೆದಿದ್ದು ಎಲ್ಲೆಲ್ಲಿ ಗೊತ್ತಾ?

ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಶೂಟಿಂಗ್ ನಡೆದಿದ್ದು ಎಲ್ಲೆಲ್ಲಿ ಗೊತ್ತಾ?

ಇಂದು ಶಿಕ್ಷಕರ ದಿನಾಚರಣೆ ಪ್ರತಿಯೊಬ್ಬರು ತಮ್ಮ ತಮ್ಮ ಶಿಕ್ಷಕರನ್ನು ನೆನೆಯುವ ದಿನ. ಶಿಕ್ಷಕರೆಂದ ತಕ್ಷಣ ನಮ್ಮ ಬಾಲ್ಯದ ದಿನಗಳು ನೆನಪಿಗೆ ಬರುವುದು ಸಹಜ. ಆಗ ಬಾಲ್ಯದ ಶಾಲೆಯೂ ನೆನಪಿಗೆ ಬರದೇ ಇರಲಾರದು. ಇತ್ತೀಚೆಗೆ ಬಿಡುಗಡೆಯಾದ ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಸಿನಿಮಾವನ್ನು ಹೆಚ್ಚಿನವರು ನೋಡಿರುತ್ತೀರಿ.

ಎಲ್ಲೆಲ್ಲಿ ಶೂಟಿಂಗ್ ನಡೆದಿದೆ

ಎಲ್ಲೆಲ್ಲಿ ಶೂಟಿಂಗ್ ನಡೆದಿದೆ

ಬಹಳ ಸುದ್ದಿ ಮಾಡುತ್ತಿರುವಂತಹ ಒಂದು ಸಿನಿಮಾ ಇದಾಗಿದೆ. ಈ ಸಿನಿಮಾ ಶೂಟಿಂಗ್ ಎಲ್ಲಿ ನಡೆದಿರುವುದು ನಿಮಗೆ ಗೊತ್ತಾ? ಹೆಸರೇ ಸೂಚಿಸಿರುವಂತೆ ಕಾಸರಗೋಡಿನಲ್ಲೇ ಈ ಸಿನಿಮಾದ ಎಲ್ಲಾ ಶೂಟಿಂಗ್ ನಡೆದಿರುವುದು ಎಂದು ನೀವು ತಿಳಿದಿದ್ದರೆ ನಿಮ್ಮ ಊಹೆ ಖಂಡಿತಾ ತಪ್ಪು. ಈ ಸಿನಿಮಾ ಶೂಟಿಂಗ್ ನಡೆದಿರುವುದು, ಕಾಸರಗೋಡು, ಮಂಜೇಶ್ವರ, ಉಪ್ಪಳ, ಬಂಟ್ವಾಳ, ಕೈರಂಗಳ, ಮಂಗಳೂರು ಹಾಗೂ ಮಂಗಳೂರಿನ ಇನ್ನಿತರ ಸ್ಥಳಗಳಲ್ಲಿ.

ಗಾಳಿಯಲ್ಲಿ ತೇಲುತ್ತಿದೆ 9ಸಾವಿರ ಕಿ.ಲೋ ತೂಕದ ಪಾರ್ಶ್ವನಾಥನ ಮೂರ್ತಿಗಾಳಿಯಲ್ಲಿ ತೇಲುತ್ತಿದೆ 9ಸಾವಿರ ಕಿ.ಲೋ ತೂಕದ ಪಾರ್ಶ್ವನಾಥನ ಮೂರ್ತಿ

ಕೈರಂಗಳ ಶಾಲೆ

ಕೈರಂಗಳ ಶಾಲೆ

ಇನ್ನು ಸಿನಿಮಾದಲ್ಲಿ ನೀವು ನೋಡಿರುವ ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಶಾಲೆ ಎಲ್ಲಿಯದು ಎನ್ನುವುದು ನಿಮಗೆ ಗೊತ್ತಾ? ನೀವೆಲ್ಲಾ ತಿಳಿದಿರಬಹುದು ಇದು ಕಾಸರಗೋಡಿನ ಯಾವುದೋ ಸರ್ಕಾರಿ ಶಾಲೆಯಾಗಿರಬಹುದೆಂದು. ಆದರೆ ಇದು ಕೈರಂಗಳದ ಸರ್ಕಾರಿ ಶಾಲೆಯಾಗಿದೆ.

ವಿಶ್ವ ವಿದ್ಯಾನಿಲಯ ಕಾಲೇಜು ಮಂಗಳೂರು

ವಿಶ್ವ ವಿದ್ಯಾನಿಲಯ ಕಾಲೇಜು ಮಂಗಳೂರು

ಇನ್ನು ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ನೀವು ನೋಡಿರಬಹುದು ಅನಂತನಾಗ್ ವಾದಿಸುವ ಕೋರ್ಟ್ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು. ಈ ಕಾಲೇಜನ್ನು ನ್ಯಾಯಾಲಯವಾಗಿ ಚಿತ್ರೀಕರಿಸಲಾಗಿದೆ. ಈ ಕಾಲೇಜನ್ನು ನೀವು ಅನೇಕ ಸಿನಿಮಾಗಳಲ್ಲಿ ನೋಡಿರಬಹುದು. ಒಂದು ಮೊಟ್ಟೆಯ ಕಥೆ ಹಾಗೂ ತೆಲುಗು ಸಿನಿಮಾ ಅರ್ಜುನ್ ರೆಡ್ಡಿ ಚಿತ್ರೀಕರಣವು ಇದೇ ಕಾಲೇಜಿನಲ್ಲಿ ನಡೆದಿದೆ.

ಅಯ್ಯಪ್ಪ ಸ್ವಾಮಿಯನ್ನು ವರಿಸಲು ಕಾದಿರುವ ಮಲ್ಲಿಕಾಪುರಥಮ್ಮನ ದೇವಾಲಯದ ಬಗ್ಗೆ ಗೊತ್ತಾ?ಅಯ್ಯಪ್ಪ ಸ್ವಾಮಿಯನ್ನು ವರಿಸಲು ಕಾದಿರುವ ಮಲ್ಲಿಕಾಪುರಥಮ್ಮನ ದೇವಾಲಯದ ಬಗ್ಗೆ ಗೊತ್ತಾ?

ಮಂಗಳೂರು ಬೀಚ್

ಮಂಗಳೂರು ಬೀಚ್

ಇನ್ನು ಸಿನಿಮಾದ ಹಾಡಿನಲ್ಲಿ ನೀವು ನೋಡಿರಬಹುದು ಮಂಗಳೂರಿನ ಸುತ್ತಮುತ್ತಲ ಬೀಚ್‌ಗಳನ್ನೂ ತೋರಿಸಲಾಗಿದೆ. ಬಲೂನ್‌ ಸಾಂಗ್‌ನಲ್ಲಿ ಹಾಗೂ ದಡ್ಡ ಹಾಡಿನಲ್ಲಿ ಮಂಗಳೂರು ಹಾಗೂ ಕಾಸರಗೋಡಿನ ಬೀಚ್‌ಗಳನ್ನು ಚಿತ್ರೀಕರಿಸಲಾಗಿದೆ.

ತೂಗು ಸೇತುವೆ

ತೂಗು ಸೇತುವೆ

ಸಿನಿಮಾದಲ್ಲಿ ಕಾಣುವ ತೂಗುಸೇತುವೆಯು ಬಂಟ್ವಾಳದಲ್ಲಿನ ತೂಗು ಸೇತುವೆಯಾಗಿದೆ. ಮಂಗಳೂರು ಹಾಗೂ ಬಂಟ್ವಾಳ ತಾಲೂಕನ್ನು ಸಂಪರ್ಕಿಸುವ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ತೂಗು ಸೇತುವೆ ಇದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X