Search
  • Follow NativePlanet
Share
» »ರಸ್ತೆ - ಪ್ರವಾಸ - ಬೆಂಗಳೂರಿನಿಂದ - ಚಿಕ್ಕಮಗಳೂರಿಗೆ

ರಸ್ತೆ - ಪ್ರವಾಸ - ಬೆಂಗಳೂರಿನಿಂದ - ಚಿಕ್ಕಮಗಳೂರಿಗೆ

By Manjula Balaraj Tantry

ಚಿಕ್ಕಮಗಳೂರು ಕರ್ನಾಟಕದ ಅತ್ಯಂತ ಆಕರ್ಷಕವಾದ ಮತ್ತು ನೆಮ್ಮದಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸುಮಾರು 3400 ಅಡಿ ಎತ್ತರದ, ಚಿಕ್ಕಮಗಳೂರು ಅತಿ ಎತ್ತರದ ಗಿರಿಧಾಮವಾಗಿದ್ದು, ಅಲ್ಲಿಗೆ ಭೇಟಿ ನೀಡಬಹುದಾದ ಅನೇಕ ಸ್ಥಳಗಳಿವೆ. ಇದು ಕಾಫಿ ಎಸ್ಟೇಟ್ ಮತ್ತು ಇಲ್ಲಿಯ ಅನುಕೂಲಕರ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಚಿಕ್ಕಮಗಳೂರು "ಚಿಕ್ಕ ಮಗಳ ಊರು ", ಅಂದರೆ "ಕಿರಿಯ ಮಗಳ ಪಟ್ಟಣ" ಎಂದು ಅರ್ಥೈಸುತ್ತದೆ.

ಸಖ್ರಾಯಪಟ್ಟಣದ ಮುಖ್ಯಸ್ಥ ರುಕ್ಮಾಂಗದ ಕಿರಿಯ ಪುತ್ರಿಗೆ ವರದಕ್ಷಿಣೆ ರೂಪದಲ್ಲಿ ಈ ಪಟ್ಟಣವನ್ನು ನೀಡಿದ ಎಂದು ಹೇಳಲಾಗುತ್ತದೆ. ವನ್ಯಜೀವಿಗಳು ಮತ್ತು ನಿಸರ್ಗಮಯ ಪರಂಪರೆಯನ್ನು ಹೊಂದಿರುವ ತಾಣಗಳು ಮತ್ತು ಸಾಹಸಮಯ ಆಯ್ಕೆಗಳು ಈ ಸುಂದರವಾದ ದೃಶ್ಯಗಳನ್ನು ಹೊಂದಿರುವ ಪಟ್ಟಣದಲ್ಲಿ ಕಾಣ ಸಿಗುತ್ತವೆ.

ಆರಂಭಿಕ ಹಂತ: ಬೆಂಗಳೂರು ಗಮ್ಯಸ್ಥಾನ: ಚಿಕ್ಕಮಗಳೂರು

ಭೇಟಿ ನೀಡಲು ಉತ್ತಮ ಸಮಯ: ಸೆಪ್ಟೆಂಬರ್ ಮತ್ತು ಮಾರ್ಚ್ ನಡುವೆ.

ಚಿಕ್ಕಮಗಳೂರು ತಲುಪುವುದು ಹೇಗೆ:

   

ಚಿಕ್ಕಮಗಳೂರು
                                                  

ವಿಮಾನದ ಮೂಲಕ: ಮಂಗಳೂರು ವಿಮಾನ ನಿಲ್ದಾಣವು 113 ಕಿ.ಮೀ ದೂರದಲ್ಲಿದೆ, ಚಿಕ್ಕಮಗಳೂರಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ನೀವು ಬೆಂಗಳೂರಿನಿಂದ ಮಂಗಳೂರಿಗೆ ಹೋಗಬಹುದು ಮತ್ತು ಚಿಕ್ಕಮಗಳೂರು ಗೆ ತೆರಳಲು ಪ್ರಿಪೇಡ್ ಟ್ಯಾಕ್ಸಿ ಮಾಡಬಹುದು.

ರೈಲು ಮೂಲಕ: ಚಿಕ್ಕಮಗಳೂರು ರೈಲ್ವೆ ನಿಲ್ದಾಣವನ್ನು ಹೊಂದಿಲ್ಲ. ಕಡೂರು ಹತ್ತಿರದ ರೈಲು ನಿಲ್ದಾಣವಾಗಿದೆ. ಇದು ಚಿಕ್ಕಮಗಳೂರಿನಿಂದ 40 ಕಿ.ಮೀ ದೂರದಲ್ಲಿದೆ.

ರಸ್ತೆ ಮೂಲಕ: ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಬೆಂಗಳೂರಿನಿಂದ ಚಿಕ್ಕಮಗಳೂರು ವರೆಗೆ ಇವೆ. ಹೇಗಾದರೂ, ನೀವು ರಸ್ತೆಯ ಪ್ರವಾಸವನ್ನು ತೆಗೆದುಕೊಳ್ಳಲು ಯೋಜನೆ ಮಾಡಿದರೆ; ನಂತರ 3 ಮಾರ್ಗಗಳಿವೆ. ಬೆಂಗಳೂರಿನಿಂದ ಚಿಕ್ಕಮಗಳೂರು ಸುಮಾರು 250 ಕಿ.ಮೀ ದೂರದಲ್ಲಿದೆ.

                                                     PC: wikimedia.org

ಚಿಕ್ಕಮಗಳೂರು

ಮಾರ್ಗ 1: ರಾ ಹೆ 75 ರಲ್ಲಿ ಬೆಂಗಳೂರು-ಕುಣಿಗಲ್-ಚನ್ನರಾಯಪಟ್ಟಣ-ಹಾಸನ-ಬೇಲೂರು-ಚಿಕ್ಕಮಗಳೂರು.

ಮಾರ್ಗ 2: ರಾ.ಹೆ 75 ಮತ್ತು 73 ರಿಂದ ಬೆಂಗಳೂರು-ಕುಣಿಗಲ್-ತಿಪಟೂರು-ಅರಸೀಕೆರೆ-ಹಳೆಬೀಡು-ಚಿಕ್ಕಮಗಳೂರು.

ಮಾರ್ಗ 3: ಬೆಂಗಳೂರು-ತುಮಕೂರು-ಹಿರಿಯೂರು-ಹೊಸದುರ್ಗ-ಕಡೂರು-ಚಿಕ್ಕಮಗಳೂರು ರಾ.ಹೆ. 48 ರಲ್ಲಿ.

ಮಾರ್ಗ1 :

ಅತೀ ಕಡಿಮೆ ಸಮಯದಲ್ಲಿ ಕ್ರಮಿಸಬಹುದಾದಂತಹ ದೂರವಾಗಿದ್ದು, ಇದು ಸುಮಾರು 4.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಸುಂದರ ನಗರವಾದ ಹಾಸನ ಮೂಲಕ ಮತ್ತು ಬೇಲೂರಿನ ಐತಿಹಾಸಿಕ ಪಟ್ಟಣಗಳ ಮೂಲಕ ಹೋಗಬಹುದು, ಇಲ್ಲಿಯ ರಸ್ತೆಗಳು ಉತ್ತಮವಾಗಿದ್ದು ಅದ್ಭುತ ಸವಾರಿ ಮಾಡಬಹುದು.

ಆದರೆ, ಕೆಲವೊಮ್ಮೆ ವಿಸ್ತರಣೆ / ದುರಸ್ತಿ ಕಾರ್ಯ ನಡೆಯುತ್ತಿರುತ್ತದೆ ಮತ್ತು ಆದ್ದರಿಂದ ಪ್ರಯಾಣವನ್ನು ಯೋಜಿಸುತ್ತಿರುವಾಗ ಇದು ಸುರಕ್ಷಿತವಾಗಿ ಹೋಗಲು ಸಾಧ್ಯವೆ ಎಂಬುದನ್ನು ದೃಢ ಪಡಿಸಿಕೊಳ್ಳುವುದು ಉತ್ತಮ.

ಮಾರ್ಗ 2:

ಈ ಮಾರ್ಗದಲ್ಲಿ ಹೋಗಲು ಯೋಜನೆ ಹಾಕಿದ್ದಲ್ಲಿ, ಇದು ಸುಮಾರು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದು ಬೇಲೂರು ಮತ್ತು ಹಳೆಬೀಡಿನಂತಹ ಪ್ರಸಿದ್ಧ ಅವಳಿ ನಗರಗಳ ಮೂಲಕ ಹಾದುಹೋಗುತ್ತದೆ. ಮತ್ತು ದೂರಕ್ಕೆ ಸಂಬಂಧಿಸಿದಂತೆ ಮಾರ್ಗ 3 ಉದ್ದವಾಗಿದೆ.

ನೀವು ರಾ.ಹೆ 48 ತೆಗೆದುಕೊಂಡರೆ ಈ ಮಾರ್ಗದಿಂದ ಚಿಕ್ಕಮಗಳೂರು ತಲುಪಲು 6 ಗಂಟೆಗಳು ಬೇಕಾಗುತ್ತದೆ. ಬಂಜರು ಪರಿಸರದಿಂದ ಮುಕ್ತಗೊಂಡು ಎರಡೂ ಕಡೆಗಳಲ್ಲಿ ಸಮೃದ್ಧವಾದ ಹಸಿರಿನ ದೃಶ್ಯಾವಳಿಗಳನ್ನು ನೋಡುತ್ತಾ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ರಸ್ತೆ ಪ್ರಯಾಣವು ಒಂದು ಸುಂದರವಾದ ಅನುಭವವನ್ನು ಕೊಡುತ್ತದೆ.

ಚಿಕ್ಕಮಗಳೂರಿಗೆ ಹೋಗುವ ಮಾರ್ಗದಲ್ಲಿ ಮತ್ತು ಕೆಲವು ಸ್ಥಳಗಳಿವೆ. ಆದುದರಿಂದ, ವಾರಾಂತ್ಯದಲ್ಲಿ ಅಥವಾ ದೀರ್ಘ ವಾರಾಂತ್ಯದಲ್ಲಿ ಈ ಪ್ರಯಾಣವನ್ನು ಯೋಜಿಸುವುದು ಉತ್ತಮವಾಗಿದೆ. ನೀವು ಕುಣಿಗಲ್ ನಲ್ಲಿ ನಿಲ್ಲಿಸಬಹುದು ಮತ್ತು ಬೇಗುರ್ ಸರೋವರವನ್ನು ನೋಡಿ ಆನಂದಿಸಬಹುದು.

                                                       PC: wikimedia.org

ಚಿಕ್ಕಮಗಳೂರು

ಒಕ್ಕಲಿಗ ಸಮುದಾಯದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರ ಕಚೇರಿಯಾದ ಆದಿಚುಂಚುಗಿರಿ ದಾರಿಯಲ್ಲಿದೆ. ನೀವು ಸ್ವಲ್ಪ ದೂರ ಪ್ರಯಾಣಿಸಿದಲ್ಲಿ, ಶ್ರವಣಬೆಳಗೊಳವು ಕೆಲವೇ ಮೈಲಿ ದೂರದಲ್ಲಿದೆ. ಜೈನ ಧರ್ಮದ ಅತ್ಯಂತ ಪ್ರಮುಖ ತೀರ್ಥಂಕರರಾದ ಗೋಮಟೇಶ್ವರರ ಪ್ರತಿಮೆ ಇಲ್ಲಿದೆ.

ನೀವು ಹಾಸನದಿಂದ 20 ಕಿಮೀ ದೂರದಲ್ಲಿರುವ ಹೇಮಾವತಿ ನದಿಗೆ ಕಟ್ಟಲಾಗಿರುವ ಗೋರೂರ್ ಅಣೆಕಟ್ಟಿಗೆ , ಭೇಟಿ ನೀಡಬಹುದು. ಹಾಸನದಿಂದ 13 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಮುಳುಗುವ ಚರ್ಚಿಗೆ ಭೇಟಿ ನೀಡಬಹುದು. ಇದು ಮಳೆಗಾಲದ ಸಮಯದಲ್ಲಿ ನೀರೊಳಗೆ ಮುಳುಗಿರುತ್ತದೆ ಮತ್ತು ಮಳೆಗಾಲದ ನಂತರ ಮತ್ತೆ ಕಾಣುತ್ತದೆ.

ಬೇಲೂರು ಮತ್ತು ಹಳೆಬೀಡು ದೇವಾಲಯದ ಮಾರ್ಗವು ಬೆಂಗಳೂರಿನಿಂದ ಚಿಕ್ಕಮಗಳೂರುಗೆ ಚಾಲನೆ ಮಾಡುವುದು ಸಣ್ಣ ಬೈಪಾಸ್ ಮೂಲಕ ಆಗಿದೆ.ಹೊಯ್ಸಳ ರಾಜರ ನೇತೃತ್ವದಲ್ಲಿ ಈ ದೇವಾಲಯಗಳನ್ನು 11 ನೇ -13 ನೇ ಶತಮಾನದಲ್ಲಿ ನಿರ್ಮಿಸಲಾಯಿತು ಈ ಕಾಲದಲ್ಲಿ 92 ದೇವಾಲಯಗಳನ್ನು ನಿರ್ಮಿಸಿದ್ದರೂ ಇದರಲ್ಲಿ ಸೋಮನಾಥಪುರ, ಬೇಲೂರು ಮತ್ತು ಹಳೇಬೀಡು ಈ ಮೂರು ಮಾತ್ರ ಇಂದಿಗೂ ಪ್ರಸಿದ್ದಿಯನ್ನು ಹೊಂದಿದೆ.

                                                      PC: wikimedia.org

ಚಿಕ್ಕಮಗಳೂರು

ಬೇಲೂರಿನಲ್ಲಿ ಚೆನ್ನಕೇಶವ ದೇವಸ್ಥಾನದ ಕೆತ್ತನೆಗಳ ಬಗ್ಗೆ ಕೂಡಾ ಓದಿ.

ಹೊಯ್ಸಳನ ವಾಸ್ತುಶಿಲ್ಪದ ಸೂಕ್ಷ್ಮತೆಗಳನ್ನು ವಿವರಿಸಲು ನೀವು ಮಾರ್ಗದರ್ಶಿಗಳ ಸೇವೆಗಳನ್ನು ಬಳಸಿಕೊಳ್ಳಿ. ನೀವು ದಾರಿಯಲ್ಲಿ ಸಿಗುವ ಯಗಚಿ ಅಣೆಕಟ್ಟಿನಲ್ಲಿಯೂ ಸ್ವಲ್ಪ ಹೊತ್ತು ನಿಲ್ಲಿಸಬಹುದು ಮತ್ತು ಬನಾನಾ ಬೋಟ್ ಸವಾರಿಯಲ್ಲಿ ಪಾಲ್ಗೊಳ್ಳಬಹುದು.

ಚಿಕ್ಕಮಗಳೂರಿನಲ್ಲಿ ಭೇಟಿ ನೀಡಲೇ ಬೇಕಾದ ಸ್ಥಳಗಳು

ಮುಳ್ಳಯ್ಯನ ಗಿರಿ

                                              PC: wikimedia.org


ಚಿಕ್ಕಮಗಳೂರು

ಇದು ಕರ್ನಾಟಕದ ಅತಿ ಎತ್ತರದ ಶಿಖರವಾಗಿದ್ದು ಚಿಕ್ಕಮಗಳೂರಿನಲ್ಲಿದೆ. ಈ ಗಿರಿಯು ಸುಮಾರು 1930 ಮೀಟರ್ ಎತ್ತರದಲ್ಲಿದೆ ಮತ್ತು ಕೆಲವು ಸುಂದರ ಟ್ರೆಕಿಂಗ್ ಪ್ರದೇಶಗಳನ್ನು ಹೊಂದಿದೆ.

ಬಾಬಾ ಬುಡನ್ ಗಿರಿ

ಈ ಶಿಖರವು ಚಿಕ್ಕಮಗಳೂರಿನಲ್ಲಿನ ಮತ್ತೊಂದು ನೆಚ್ಚಿನ ಪ್ರವಾಸಿ ತಾಣವಾಗಿದೆ. 150 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಮುಸ್ಲಿಂ ಸಂತ ಬಾಬಾ ಬುಡನ್ ಅವರ ಹೆಸರನ್ನು ಈ ಬೆಟ್ಟವು ಪಡೆದಿದೆ. ಈ ಶ್ರೇಣಿಯಲ್ಲಿ ಭಾರತದಲ್ಲಿ ಕಾಫಿ ಬೆಳೆಯನ್ನು ಮೊಟ್ಟ ಮೊದಲಿಗೆ ಈ ಶ್ರೇಣಿಯಲ್ಲಿ ಬಾಬಾ ಬುಡಾನ್ ಅವರಿಂದ ಬೆಳೆಸಲಾಯಿತು ಎಂದು ಹೇಳಲಾಗುತ್ತದೆ. ಇವರು 7 ಕಾಫಿಯ ಬೀಜಗಳನ್ನು ತಮ್ಮ ಬೆಲ್ಟ್ನಲ್ಲಿ ಕಟ್ಟಿಕೊಂಡು ಮೆಕ್ಕಾದಿಂದ ಹಿಂದಿರುಗಿ ಬರಬೇಕಾದರೆ ತಂದು ಈ ಪ್ರದೇಶದಲ್ಲಿ ನೆಟ್ಟರು ಎಂದು ಹೇಳಲಾಗುತ್ತದೆ.

ಕೆಮ್ಮಣ್ಣುಗುಂಡಿ

ಈ ಗಿರಿಧಾಮವು 1400 ಮೀಟರ್ ಎತ್ತರದಲ್ಲಿದೆ ಮತ್ತು ನಾಲ್ಕನೇ ಶ್ರೀ ಕೃಷ್ಣರಾಜ ಒಡೆಯರ್ ಅವರ ಬೇಸಿಗೆಯಲ್ಲಿ ಸಮಯ ಕಳೆಯುವ ತಾಣವಾಗಿತ್ತು. ಇಲ್ಲಿ ಒಂದು ಕಲ್ಲಿನ ಉದ್ಯಾನವನ, ಮಕ್ಕಳ ಉದ್ಯಾನವನ ಮತ್ತು ಅನೇಕ ದೃಷ್ಟಿಕೋನಗಳನ್ನು ಹೊಂದಿದೆ ಅಲ್ಲಿ ನೀವು ಅನೇಕ ದೃಶ್ಯಾವಳಿಗಳನ್ನು ಆನಂದಿಸಬಹುದು.

ಹೆಬ್ಬೆ ಜಲಪಾತ

ಹೆಬ್ಬೆ ಜಲಪಾತವು ಕೆಮ್ಮಣ್ಣು ಗುಂಡಿಯಿಂದ ಸುಮಾರು 10 ಕಿ.ಮೀ ದೂರದಲ್ಲಿದೆ, ಇಲ್ಲಿ ಎರಡು ಹಂತಗಳಲ್ಲಿ ನೀರಿನ ತೊರೆಗಳು ಬೀಳುತ್ತವೆ ಇವುಗಳನ್ನು ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ ಎಂದು ಕರೆಯುತ್ತಾರೆ. ಈ ಜಲಪಾತವು ತುಂಬ ಒಳಗಿರುವುದರಿಂದ ಇಲ್ಲಿಗೆ ತಲುಪಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

ಆದುದರಿಂದ ಇಲ್ಲಿ ಅಂಚಿನಲ್ಲಿ ಹೋಗುವ ಮೊದಲು ತುಂಬಾ ಜಾಗರೂಕರಾಗಿರಬೇಕಾಗುತ್ತದೆ. ಮಳೆಗಾಲದಲ್ಲಿ ಮಾತ್ರ ಜಲಪಾತವು ಹರಿಯುತ್ತದೆ, ಇದರರ್ಥ ಅರಣ್ಯವು ಜಿಗಣೆಗಳಿಂದ ಮುತ್ತಿಕೊಂಡಿರುತ್ತದೆ. ಅವುಗಳನ್ನು ತೊಡೆದುಹಾಕಲು ಸಣ್ಣ ಉಪ್ಪಿನ ಪ್ಯಾಕೆಟ್ಗಳನ್ನು ತೆಗೆದುಕೊಂಡು ಹೋಗಿ ಮತ್ತು ಅವುಗಳನ್ನು ತೊಡೆದು ಹಾಕಿ.

                                                     PC: wikimedia.org

ಚಿಕ್ಕಮಗಳೂರು

ಕಾಫಿ ತೋಟಗಳು

ನಿಮ್ಮ ಬೆಳಿಗ್ಗೆಯ ಸಮಯದಲ್ಲಿ ಕಾಫಿಯ ಪರಿಮಳ ಎಲ್ಲಿಂದ ಬರುವುದನ್ನು ತಿಳಿಯಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಇಲ್ಲಿಯ ಮೈಲುಗಟ್ಟಲೆ ಎಕರೆಗಟ್ಟಲೆ ಬೆಳೆಯುವಂತಹ ಕಾಫಿ ತೋಟದ ಹಸಿರಿನ ನಡುವಿನಿಂದ ಒಂದು ಸುವಾಸನಾಭರಿತ ತಾಜಾ ಗಾಳಿಯನ್ನು ನೀವು ಆಹ್ಲಾದಿಸಬಹುದು.

ಝಡ್ ಪಾಯಿಂಟ್

ಇಲ್ಲಿ ಸೂರ್ಯಾಸ್ತ ಮತ್ತು ಸೂರ್ಯೋದಯ ವೀಕ್ಷಣೆಗಳು ವೀಕ್ಷಿಸುವ ಯೋಜನೆ ಇದ್ದರೆ, ಝಡ್ ಪಾಯಿಂಟ್ ಪರಿಪೂರ್ಣ ವಾಂಟೇಜ್ ಪಾಯಿಂಟ್ ನೀಡುತ್ತದೆ. ಇಲ್ಲಿಯ ಸೌಂದರ್ಯವು ನಿಮ್ಮನ್ನು ಬೆರಗುಗೊಳಿಸುತ್ತದೆ.

ಭದ್ರಾ ನದಿ

ಭದ್ರ ನದಿಯ ದಂಡೆಯಲ್ಲಿ ವೈಟ್ ವಾಟರ್ ರಾಫ್ಟಿಂಗ್ ಬಹಳ ಪ್ರಸಿದ್ಧವಾಗಿದೆ. ಹೇಗಾದರೂ, ಇದು ಪ್ರವಾಸದ ನಿಮ್ಮ ಮುಖ್ಯ ಅಂಶ ಆಗಿದ್ದರೆ, ರಾಫ್ಟ್ಟಿಂಗ್ ಸ್ಪಾಟ್ ಗೆ ಭೇಟಿ ನೀಡಿ. ಇದು ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ವಲಯದಿಂದ ಸ್ವಲ್ಪ ದೂರದಲ್ಲಿದೆ ಇಲ್ಲಿ ನಿಮ್ಮ ಉತ್ತಮ ಸಮಯವನ್ನು ಕಳೆಯಬಹುದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more