Search
  • Follow NativePlanet
Share
» »ಪುರಾತನ ಸ್ಮಾರಕ ನೋಡಬೇಕಾದ್ರೆ ಪ್ರಾಚಿ ಕಣಿವೆಗೆ ಹೋಗಿ

ಪುರಾತನ ಸ್ಮಾರಕ ನೋಡಬೇಕಾದ್ರೆ ಪ್ರಾಚಿ ಕಣಿವೆಗೆ ಹೋಗಿ

ಪ್ರಾಚಿ ಕಣಿವೆ ಹಲವು ಪುರಾತನ ದೇವಾಲಯಗಳ ತವರೂರು, ಇಲ್ಲಿನ ಕೆಲವು ದೇವಾಲಯಗಳು ರಾಮಾಯಣ ಮತ್ತು ಮಹಾಭಾರತದ ಕಥೆಯಲ್ಲಿ ಬರುತ್ತದೆ.

ಪ್ರಾಚಿ ಕಣಿವೆ ಭುವನೇಶ್ವರದಿಂದ 61 ಕಿಲೋಮೀಟರ್ ದೂರದಲ್ಲಿದೆ. ಪ್ರಾಚಿ ಕಣಿವೆಯು ಪ್ರವಾಸೋದ್ಯಮಕ್ಕೆ ಹೆಸರುವಾಸಿ ಯಾಗಿದ್ದು, ಇತಿಹಾಸ ಮತ್ತು ಶ್ರೀಮಂತ ಪ್ರಾಚೀನತೆಯ ಬಗ್ಗೆ ಆಸಕ್ತಿ ಇರುವವರಿಗೆ ಸೂಕ್ತ ತಾಣವಾಗಿದೆ. ಇದು ಪ್ರಾಚಿ ನದಿ ತಟದಲ್ಲಿದ್ದು ಇದು ಮಹಾನದಿಯ ಉಪನದಿಯಾಗಿದೆ. ಕ್ರಿ.ಪೂ ಏಳನೇ ಶತಮಾನದಿಂದ ಹದಿನೈದನೇ ಶತಮಾನದವರೆಗಿನ ಹಲವು ಸ್ಮಾರಕಗಳನ್ನು ಇಲ್ಲಿ ಕಾಣಬಹುದಾಗಿದೆ.

ಇತಿಹಾಸದ ಪ್ರಕಾರ

ಇತಿಹಾಸದ ಪ್ರಕಾರ

PC:Kamaldas92
ಚಾಹತಾ ಪ್ರಾಚಿ ಕಣಿವೆಯ ಪ್ರಮುಖ ವೈಜ್ಞಾನಿಕ ಪ್ರದೇಶವಾಗಿದ್ದು, ಪ್ರಾಚಿ ಮತ್ತು ಲಲಿತಾ ನದಿಯ ಸಮಾಗಮದಲ್ಲಿದೆ. ಇತಿಹಾಸದ ಪ್ರಕಾರ ವಿಷ್ಣು ದೇವರು ಗಂಗೆಗೆ ಈ ನದಿಯಲ್ಲಿ ಸ್ನಾನ ಮಾಡಲು ಹೇಳುತ್ತಾನೆ. ಅದರಂತೆ ಇಲ್ಲಿ ವಿಷ್ಣುವಿನ ಪ್ರತಿಮೆಯನ್ನು ಕಾಣಬಹುದಾಗಿದ್ದು, ಇದನ್ನು ಲಲಿತಾ ಮಾಧವ ಎಂದು ಕರೆಯುತ್ತಾರೆ.

ಸುತ್ತಮುತ್ತವಿರುವ ಪ್ರವಾಸಿ ಸ್ಥಳಗಳು

ಸುತ್ತಮುತ್ತವಿರುವ ಪ್ರವಾಸಿ ಸ್ಥಳಗಳು

PC: Prateek Pattanaik
ಪ್ರಾಚಿ ಕಣಿವೆ ಹಲವು ಪುರಾತನ ದೇವಾಲಯಗಳ ತವರೂರು, ಇಲ್ಲಿನ ಕೆಲವು ದೇವಾಲಯಗಳು ರಾಮಾಯಣ ಮತ್ತು ಮಹಾಭಾರತದ ಕಥೆಯಲ್ಲಿ ಬರುತ್ತದೆ. ಶಿವನ ದೇವಾಲಯವಾದ ಅಮರೇಶ್ವರ ಮತ್ತು ರಾಮಾಯಣಕ್ಕೆ ಸಂಬಂಧವಿದೆ ಎನ್ನಲಾಗುತ್ತದೆ. ಪ್ರಾಚೀನ ದೇವಾಲಯವಲ್ಲದೇ ಶೋಭನೇಶ್ವರ ದೇವಾಲಯ, ಪಿದ್ ದೇವಾಲಯ, ಚಮುದಾ ದೇವಿ ದೇವಾಲಯ ಮತು ಗ್ರಾಮೇಶ್ವರ ದೇವಾಲಯ ಆಸುಪಾಸಿನಲ್ಲಿದೆ.

ಮೂರು ನದಿಗಳ ಸಮಾಗಮ

ಮೂರು ನದಿಗಳ ಸಮಾಗಮ

ಪ್ರಾಚಿ, ಸರಸ್ವತಿ ಮತ್ತು ಮಣಿಕಾರ್ಣಿಕಾ ಮೂರು ನದಿಗಳ ಸಂಗಮ. ಇದನ್ನು ಮಣಿಕಾರ್ಣಿಕಾ ತೀರ್ಥ ಎಂದೂ ಕರೆಯುತ್ತಾರೆ. ಇದು ದೇವಾಲಯಗಳ ಸಮೀಪದಲ್ಲೇ ಹರಿಯುತ್ತದೆ. ಸಾವಿರಾರು ಭಕ್ತಾದಿಗಲು ಈ ಸಂಗಮಕ್ಕೆ ಬಂದು ಪವಿತ್ರ ಸ್ನಾನ ಮಾಡುತ್ತಾರೆ. ಅಮವಾಸ್ಯೆಯ ಸಮದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಪ್ರಾಚಿ ಕಣಿವೆಯ ಬೇರೆ ಬೇರೆ ದೇವರ ವಿವಿಧ ದೇವಾಲಗಳು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ?

ಯಾವಾಗ ಭೇಟಿ ನೀಡುವುದು ಸೂಕ್ತ?

PC: Prateek Pattanaik
ಚಳಿಗಾಲದಲ್ಲಿ ಪ್ರಾಚಿ ಕಣಿವೆಗೆ ಭೇಟಿ ನೀಡುವುದು ಸೂಕ್ತ. ವರ್ಷದ ಈ ಸಮಯದಲ್ಲಿ ತಂಪಾದ ವಾತಾವರಣವಿದ್ದು, ರಾತ್ರಿ ಹೊತ್ತಿನಲ್ಲಿ ಅತಿ ಚಳಿ ಇರುತ್ತದೆ. ಪ್ರವಾಸಿಗರು ಈ ಅವಧಿಯಲ್ಲಿ ಸ್ಥಳೀಯರು ಬೆಂಕಿಯ ಮುಂದೆ ಚಳಿ ಕಾಯಿಸುವುದನ್ನು ನೋಡಬಹುದಾಗಿದೆ. ಸೂಕ್ತವಾದ ವಾತಾವರಣ ಇರುವುದರಿಂದ ಈ ಅವಧಿಯಲ್ಲಿ ಭೇಟಿ ನೀಡುವುದು ಸೂಕ್ತ.

ಪ್ರಾಚಿ ಕಣಿವೆ ತಲುಪುವುದು ಹೇಗೆ ?

ಪ್ರಾಚಿ ಕಣಿವೆ ಒರಿಸ್ಸಾ ರಾಜ್ಯದ ಎಲ್ಲಾ ಪ್ರಮುಖ ನಗರಗಳ ಮೂಲಕ ತಲುಪಬಹುದು. ರಸ್ತೆಯ ಗುಣಮಟ್ಟವೂ ಚೆನ್ನಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಇಲ್ಲಿ ಹೇರಳವಾಗಿದೆ.
ಪ್ರಾಚಿ ಕಣಿವೆಗೆ ಭುವನೇಶ್ವರ ಮತ್ತು ಪುರಿಯಿಂದ ಪ್ರಯಾಸವಿಲ್ಲದೇ ಪ್ರಯಾಣಿಸ ಬಹುದಾಗಿದೆ. ಈ ಎರಡೂ ನಗರವು ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ.
ಪ್ರಾಚಿ ಕಣಿವೆಗೆ ನೇರ ವಿಮಾನ ಸಂಪರ್ಕವಿಲ್ಲ. ಭುವನೇಶ್ವರದ ವಿಮಾನ ನಿಲ್ದಾಣ ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣ. ಇಲ್ಲಿಗೆ ಭೇಟಿ ನೀಡಲು ಬರುವ ಪ್ರವಾಸಿಗರು ಭುವನೇಶ್ವರ ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಕ್ಯಾಬ್ ಮೂಲಕ ಪ್ರಾಚಿ ಕಣಿವೆಗೆ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X