Search
  • Follow NativePlanet
Share
» »ಬಂದರು ಮಾತ್ರವಲ್ಲ, ಕಾರವಾರದಲ್ಲಿ ಸುತ್ತಾಡಲು ಏನೆಲ್ಲಾ ಇದೆ ಒಮ್ಮೆ ನೋಡಿ

ಬಂದರು ಮಾತ್ರವಲ್ಲ, ಕಾರವಾರದಲ್ಲಿ ಸುತ್ತಾಡಲು ಏನೆಲ್ಲಾ ಇದೆ ಒಮ್ಮೆ ನೋಡಿ

ಕಾರವಾರವು ಬೆಂಗಳೂರಿನಿಂದ ಸುಮಾರು 500 ಕಿ.ಮೀ ದೂರದಲ್ಲಿದೆ. ದಕ್ಷಿಣ ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಬಂದರು ನಗರವಾಗಿರುವ ಕಾರವಾರಕ್ಕೆ ದೇಶದ ಎಲ್ಲಾ ಪ್ರಮುಖ ನಗರಗಳಿಂದ ರಸ್ತೆ ಮತ್ತು ರೈಲು ಸಂಪರ್ಕಗಳಿವೆ. ಉತ್ತಮ ಸಂಪರ್ಕ ಹೊಂದಿದೆ. ಇಲ್ಲಿ ಯಾವುದೇ ಏರ್‌ಪೋರ್ಟ್ ಇಲ್ಲ ಹಾಗಾಗಿ ಸಮೀಪದ ಏರ್‌ಪೋರ್ಟ್ ಎಂದರೆ ಗೋವಾದ ಡೋಬೋಲಿಮ್ ಏರ್‌ಪೋರ್ಟ್. ಇದು ಕಾರವಾರದಿಂದ 60 ಕಿ.ಮೀ ದೂರದಲ್ಲಿದೆ. ಕಾರವಾರವು ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿದ್ದರೂ ಕರ್ನಾಟಕ-ಗೋವಾ ಗಡಿಭಾಗದಲ್ಲಿದೆ. ಕಾರವಾರವು ತೆಂಗಿನ ಕಾಯಿ, ಗೋಡಂಬಿ ಹಾಗೂ ಮೀನಿನ ಪದಾರ್ಥಕ್ಕೆ ಫೇಮಸ್ ಆಗಿದೆ.

ಬೆಂಗಳೂರಿನಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದೀರಾ?

ಕಾರವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಲು, ರಜಾದಿನಗಳನ್ನು ಕಳೆಯಲು ಕಾರವಾರ ಉತ್ತಮ ಆಯ್ಕೆಯಾಗಿದೆ. ಇಲ್ಲಿಗೆ ಅಕ್ಟೋಬರ್ ಮತ್ತು ಮಾರ್ಚ್ ನಡುವಿನ ಅವಧಿಯಲ್ಲಿ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಕಾರ ವಾರ ಸುತ್ತಮುತ್ತಲೂ ಇನ್ನೂ ಅನೇಕ ಪ್ರವಾಸಿ ತಾಣಗಳಿವೆ.

ಸದಾಶಿವ ಘಡ ಕೋಟೆ

ಸದಾಶಿವ ಘಡ ಕೋಟೆ

PC:Vivo78 (talk)

ಈ ಕೋಟೆಯನ್ನು 1715ರಲ್ಲಿ ನಿರ್ಮಿಸಲಾಗಿದೆ. ಸೊಂಡಾ ರಾಜವಂಶದ ರಾಜಾ ಬಸವಲಿಂಗರಿಂದ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಕಾಳಿ ನದಿಯ ಉತ್ತರದ ದಡದಲ್ಲಿರುವ ಈ ಕೋಟೆಯು ದುರ್ಗಾ ದೇವಿಯ ದೇವಸ್ಥಾನವನ್ನು ಹೊಂದಿದೆ. 1665 ಮತ್ತು 1673 ರಲ್ಲಿ ಛತ್ರಪತಿ ಶಿವಾಜಿ ಈ ಸ್ಥಳಕ್ಕೆ ಭೇಟಿ ನೀಡಿದ್ದು, ಸದಾಶಿವಗಡ್ ಸೇರಿದಂತೆ ಕರಾವಳಿ ಪ್ರದೇಶವನ್ನು ವಶಪಡಿಸಿಕೊಂಡಿದ್ದ ಎಂದು ಹೇಳಲಾಗುತ್ತದೆ. ಈ ಕೋಟೆಯಿಂದ ಸೂರ್ಯಾಸ್ತದ ನೋಟ ನಿಜವಾಗಿಯೂ ಸುಂದರವಾಗಿ ಕಾಣಿಸುತ್ತದೆ. ಈ ದೇವಾಲಯದ ಬಳಿ 17 ನೇ ಶತಮಾನದ ದರ್ಗಾ ಕೂಡ ಇದೆ.

1000 ವರ್ಷ ಹಳೆಯ ಈ ದೇವಾಲಯಗಳನ್ನು ನೀವು ನೋಡಿದ್ದೀರಾ?

ಕಾಳಿ ನದಿ ಸೇತುವೆ

ಕಾಳಿ ನದಿ ಸೇತುವೆ

PC:Rane.abhijeet

ಕಾರವಾರ ಮೂಲಕ ಹರಿಯುವ ಕಾಳಿ ನದಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಲಕ್ಷಾಂತರ ಜನರಿಗೆ ಜೀವನಾಧಾರವಾಗಿದೆ. 1986 ರಲ್ಲಿ ಈ ನದಿಯ ಮೇಲೆ ನಿರ್ಮಿಸಲಾದ ಸೇತುವೆ ಕರ್ನಾಟಕವನ್ನು ಗೋವಾದೊಂದಿಗೆ ಸಂಪರ್ಕಿಸುತ್ತದೆ. ಸೇತುವೆ ನದಿ ಮತ್ತು ಸಮುದ್ರದ ಸಂಗಮದ ಮೇಲೆಯೇ ನಿರ್ಮಿಸಲ್ಪಟ್ಟಂತೆ ಪ್ರವಾಸಿಗರಲ್ಲಿ ಇದು ಜನಪ್ರಿಯವಾಗಿದೆ.

ರವೀಂದ್ರನಾಥ್ ಟಾಗೋರ್ ಬೀಚ್

ರವೀಂದ್ರನಾಥ್ ಟಾಗೋರ್ ಬೀಚ್

ಇತಿಹಾಸದ ಪ್ರಕಾರ, ರವೀಂದ್ರನಾಥ್ ಟಾಗೋರ್ ಅವರು 22 ನೇ ವಯಸ್ಸಿನವರಾಗಿದ್ದಾಗ 1882 ರಲ್ಲಿ ಇಲ್ಲಿ ನೆಲೆಸಿದ್ದರು ಎನ್ನಲಾಗುತ್ತದೆ. ಆ ಸಮಯದಲ್ಲಿ ನಗರದ ಜಿಲ್ಲಾ ನ್ಯಾಯಾಧೀಶರಾಗಿದ್ದ ತಮ್ಮ ಸಹೋದರ ಸತ್ಯೇಂದ್ರನಾಥ ಟ್ಯಾಗೋರ್ ಅವರೊಂದಿಗೆ ರವೀಂದ್ರನಾಥ್ ಟಾಗೋರ್ ವಾಸಿಸುತ್ತಿದ್ದರು. ನಗರದ ಹೃದಯ ಭಾಗದಲ್ಲಿರುವ ಈ ಬೀಚ್‌ನಲ್ಲಿ ಸುಂದರವಾದ ಸೂರ್ಯಾಸ್ತವನ್ನು ಕಣ್ತುಂಬಿಸಿಕೊಳ್ಳಬಹುದು. ಸಮುದ್ರತೀರದಲ್ಲಿ ಸಂಜೆಯ ಕಾಲಕಳೆಯಲು ಮತ್ತು ವಿಶ್ರಾಂತಿಗೆ ಉತ್ತಮ ಮಾರ್ಗವಾಗಿದೆ.

ಯುದ್ಧನೌಕೆ ವಸ್ತುಸಂಗ್ರಹಾಲಯ

ಯುದ್ಧನೌಕೆ ವಸ್ತುಸಂಗ್ರಹಾಲಯ

PC: Anurag R Naik

ಟಾಗೋರ್ ಬೀಚ್ ಬಳಿಯಿರುವ ಯುದ್ಧನೌಕೆ ವಸ್ತುಸಂಗ್ರಹಾಲಯವು ಐಎನ್ಎಸ್ ಚಾಪೆಲ್‌ಗೆ ಭೇಟಿ ನೀಡುವವರಲ್ಲಿ ಜನಪ್ರಿಯವಾಗಿದೆ. 1971 ರ ಇಂಡೋ-ಪಾಕ್ ಯುದ್ಧದಲ್ಲಿ ನೌಕಾ ಯುದ್ಧಕ್ಕಾಗಿ ಇದನ್ನು ಬಳಸಲಾಗುತ್ತಿತ್ತು. ಹಳೆಯ ಯುದ್ಧನೌಕೆ ಈಗ ಒಂದು ಸಣ್ಣ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಈ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಲು ಸಾಮಾನ್ಯ ಪ್ರವೇಶ ಶುಲ್ಕವಿದೆ. ಇದು ಬೆಳಗ್ಗೆ 10 ರಿಂದ 1 ರವರೆಗೆ ಮತ್ತು ಸಂಜೆ 4:30 ರಿಂದ 6 ರವರೆಗೆ ತೆರೆದಿರುತ್ತದೆ.

ಈ ಬೀಚ್‌ಗಳಿಗೆ ಹೋದ್ರೆ ಗೋವಾಕ್ಕೆ ಹೋಗೋ ಅಗತ್ಯನೇ ಇಲ್ಲ

ಮೀನು ಮಾರುಕಟ್ಟೆ

ಮೀನು ಮಾರುಕಟ್ಟೆ

ಕಾರವಾರವು ಕರಾವಳಿ ನಗರವಾಗಿರುವುರ ಜೊತೆಗೆ ಬಂದರು ಕೂಡಾ ಇರುವುದರಿಂದ ಇಲ್ಲಿ ಮೀನು ಮಾರುಕಟ್ಟೆ ಫೇಮಸ್ ಆಗಿದೆ. ಕಾರವಾರದಲ್ಲಿ ಗಮನಾರ್ಹ ಮೀನು ಮಾರುಕಟ್ಟೆ ಇದೆ. ಮೀನಿನ ಮಾರುಕಟ್ಟೆಗೆ ಮುಂಜಾನೆ ಹೋದರೆ ನಿಮಗೆ ವಿವಿಧ ರೀತಿಯ ಮೀನುಗಳನ್ನು ಕಾಣಸಿಗುತ್ತದೆ. ನೀವು ಹಲವಾರು ಚಟುವಟಿಕೆಗಳನ್ನು ನಿರೀಕ್ಷಿಸಬಹುದು.

ದೇವ್‌ಬಾಗ್ ಬೀಚ್ ರೆಸಾರ್ಟ್

ದೇವ್‌ಬಾಗ್ ಬೀಚ್ ರೆಸಾರ್ಟ್

PC: youtube

ಪ್ರಶಾಂತ ಕಡಲತೀರದಲ್ಲಿನ ಬಿಳಿ ಮರಳು ಕಾರವಾರದ ದೇವ್ಬಾಗ್ ಬೀಚ್ ರೆಸಾರ್ಟ್ ಅನ್ನು ಉತ್ತಮ ಆಕರ್ಷಣೀಯ ತಾಣವನ್ನಾಗಿ ಮಾಡುತ್ತದೆ. ಇದು ನಗರದಿಂದ ಸುಮಾರು 15 ಕಿ.ಮೀ ದೂರದಲ್ಲಿ, ಸ್ಥಳೀಯ ಜಂಗಲ್ ಲಾಡ್ಜ್ ರೆಸಾರ್ಟ್ ಕಚೇರಿಯಿಂದ ದೋಣಿ ಮೂಲಕ ಸುಲಭವಾಗಿ ತಲುಪಬಹುದು. ನೀವು ಕೆಲವು ಸಾಹಸಮಯ ಕ್ರೀಡೆಗಳಲ್ಲಿ ಆಸಕ್ತಿಹೊಂದಿದ್ದರೆ, ಸ್ನಾರ್ಕ್ಕಲಿಂಗ್, ಬನಾನ ಬೋಟ್‌ ರೈಡ್‌ ಮತ್ತು ಪ್ಯಾರಾಸೈಲಿಂಗ್‌ನಂತಹ ಚಟುವಟಿಕೆಗಳ ಆನಂದವನ್ನು ಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more