Search
  • Follow NativePlanet
Share
» »ಚಿಕ್ಕಮಗಳೂರಿನ ಈ ಇಂಟ್ರಸ್ಟಿಂಗ್ ತಾಣಗಳಿಗೆ ಹೋಗಿದ್ದೀರಾ?

ಚಿಕ್ಕಮಗಳೂರಿನ ಈ ಇಂಟ್ರಸ್ಟಿಂಗ್ ತಾಣಗಳಿಗೆ ಹೋಗಿದ್ದೀರಾ?

ಕಾಫಿ ಉತ್ಪಾದನೆಗಾಗಿಯೇ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಒಂದು ಪ್ರವಾಸಿ ತಾಣವೂ ಹೌದು. ಎತ್ತರದ ಬೆಟ್ಟಗುಡ್ಡಗಳು, ಕಾಡು, ಶಾಂತ ವಾತವರಣವು ಪ್ರವಾಸಿಗರಲ್ಲಿ ಹೆಚ್ಚು ಪ್ರಸಿದ್ದವಾಗಿದೆ. ಚಿಕ್ಕಮಗಳೂರಿನ ವಿಶೇಷತೆ ಎಂದರೆ ಇಲ್ಲಿನ ಕಾಫಿ ಎಸ್ಟೆಟ್. ಇದು ಚಿಕ್ಕಮಗಳೂರನ್ನು ಭಾರತದಲ್ಲಿಯೇ ಉತ್ತಮ ಕಾಫಿ ಉತ್ಪಾದನಾ ತಾಣವನ್ನಾಗಿಸುತ್ತದೆ. ಪ್ರಕೃತಿ ಸೌಂದರ್ಯವನ್ನು ಹೊರತುಪಡಿಸಿ ಇಲ್ಲಿ ಸಾಹಸಮಯ ಕ್ರೀಡೆಗಳ ಆನಂದವನ್ನೂ ಪಡೆಯಬಹುದು. ಚಿಕ್ಕಮಗಳೂರು ಟ್ರಕ್ಕಿಂಗ್‌ಗೆ ಹೆಸರುವಾಸಿಯಾಗಿದೆ. ಚಾರಣ ಪ್ರೀಯರಿಗೆ ಇಷ್ಟವಾಗುವಂತಹ ತಾಣ ಇದಾಗಿದೆ.

ತ್ರೇತಾ ಯುಗಕ್ಕೆ ಸೇರಿದ ಈ ಶಿವಲಿಂಗದ ದರ್ಶನ ಮಾಡಿದ್ರೆ ಇಷ್ಟ ಈಡೇರುತ್ತಂತೆ

ಮುಳ್ಳಯ್ಯನಗಿರಿ

ಮುಳ್ಳಯ್ಯನಗಿರಿ

PC-Siddharthsrinivasan87

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಬೆಟ್ಟಸಾಲಿನಲ್ಲಿರುವ ಮುಳ್ಳಯ್ಯನಗಿರಿಯು 1930 ಮೀಟರ್ ಎತ್ತರದಲ್ಲಿದೆ. ಇದು ಕರ್ನಾಟಕದ ಅತ್ಯುನ್ನತ ಪರ್ವತ ಶಿಖರವಾಗಿದೆ. ಅಲ್ಲದೆ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಣ ಪ್ರದೇಶದಲ್ಲಿನ ಅತಿ ಎತ್ತರದ ಪರ್ವತವೂ ಹೌದು. ಇದು ಟ್ರಕ್ಕಿಂಗ್‌ಗೆ ಹೆಸರುವಾಸಿಯಾಗಿದೆ. ಇಲ್ಲಿ ಟ್ರಕ್ಕಿಂಗ್‌ನ್ನು ಹೊರತುಪಡಿಸಿ ಕ್ಯಾಂಪಿಂಗ್, ಮೌಂಟನ್ ಬೈಕಿಂಗ್ ಕೂಡಾ ಮಾಡಬಹುದು. ಮುಳ್ಳಯ್ಯನ ಗಿರಿ ಬೆಟ್ಟದ ಮೇಲ್ಬಾಗದಲ್ಲಿ ಮುಳ್ಳಯ್ಯ ಸ್ವಾಮಿಗಳ ದೇವಾಲಯವಿದೆ. ಸೂರ್ಯಾಸ್ತ ಪಾಯಿಂಟ್ ಹಾಗೂ ನಂದಿಯ ಮೂರ್ತಿಯು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಲ್ಲೊಂದಾಗಿದೆ.

ಕುದುರೆಮುಖ

ಕುದುರೆಮುಖ

PC- Karunakar Rayker

ಕುದುರೆಮುಖವು ಚಿಕ್ಕಮಗಳೂರಿನ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದಾಗಿದೆ. ಮುಳ್ಳಯ್ಯಗಿರಿಗೆ ಟ್ರಕ್ಕಿಂಗ್‌ಗೆ ಬರುವವರು ಕುದುರೆಮುಖಕ್ಕೂ ಬರುತ್ತಾರೆ. ಪ್ರಕೃತಿ ಸೌಂದರ್ಯದಿಂದ ಕೂಡಿರುವ ಈ ತಾಣವು ಪ್ರಕೃತಿ ಪ್ರೇಮಿಗಳಿಗಂತೂ ಇಷ್ಟವಾಗೋದರಲ್ಲಿ ಎರಡು ಮಾತಿಲ್ಲ. ನೀವು ಪ್ರಕೃತಿ ಪ್ರೇಮಿಯಾಗಿದ್ದಲ್ಲಿ ಈ ಸ್ಥಳಕ್ಕೆ ಖಂಡಿತಾ ಹೋಗಲೇ ಬೇಕು.

ಜೆಡ್ ಪಾಯಿಂಟ್‌

ಜೆಡ್ ಪಾಯಿಂಟ್‌

PC- Srinivasa83

ನೀವು ಪ್ರಕೃತಿ ಪ್ರೇಮಿಯಾಗಿದ್ದಲ್ಲಿ , ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂದಿದ್ದಲ್ಲಿ ಚಿಕ್ಕಮಗಳೂರಿನ ಪ್ರಸಿದ್ಧ ಜೆಡ್ ಪಾಯಿಂಟ್‌ಗೆ ಹೋಗಬಹುದು. ಇದು ಸಾಹಸಮಯ ಟ್ರಕ್ಕಿಂಗ್‌ಗೆ ಪ್ರಸಿದ್ಧಿಹೊಂದಿದೆ. ನೀವು ಶಾರೀರಿಕವಾಗಿ, ಮಾನಸಿಕವಾಗಿ ಆರೋಗ್ಯದಿಂದಿರೆಂದಾರೆ ಇಲ್ಲಿಯ ಟ್ರಕ್ಕಿಂಗ್‌ನ ಅನುಭವವನ್ನು ಪಡೆಯಲೇ ಬೇಕು.ಇಲ್ಲಿಗೆ ಟ್ರಕ್ಕಿಂಗ್ ಹೋಗುವಾಗ ಟ್ರಕ್ಕಿಂಗ್‌ಗೆ ಬೇಕಾಗುವ ಎಲ್ಲಾ ಅವಶ್ಯಕ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಬೇಕು. ಇಲ್ಲಿಯ ಬೆಟ್ಟ ಗುಡ್ಡಗಳು, ಟ್ರಕ್ಕಿಂಗ್‌ನ ರಸ್ತೆ ಬಹಳ ಕಷ್ಟಕರವಾಗಿದೆ. ಹಾಗಾಗಿ ಟ್ರಕ್ಕಿಂಗ್‌ಗೆ ಪೂರ್ಣರೀತಿಯಲ್ಲಿ ತಯಾರಿ ನಡೆಸಿಕೊಂಡು ಹೋಗುವುದೇ ಒಳಿತು.

ಕಾಫಿ ಸಂಗ್ರಹಾಲಯ

ಕಾಫಿ ಸಂಗ್ರಹಾಲಯ

ಪ್ರಾಕೃತಿಕ ಸೌಂದರ್ಯ ಹಾಗೂ ರೋಮಾಂಚಕ ತಾಣಗಳನ್ನು ಹೊರತುಪಡಿಸಿ ಚಿಕ್ಕಮಗಳೂರಿನಲ್ಲಿ ಇತರ ಸ್ಥಳಗಳ ಅನುಭವವನ್ನೂ ಪಡೆಯಬಹುದು. ಚಿಕ್ಕಮಗಳೂರು ಕಾಫಿ ಉತ್ಪಾದನಾ ಸ್ಥಳವಾಗಿದೆ. ಹಾಗಾಗಿ ಇಲ್ಲಿ ಕಾಫಿಯ ಸಂಗ್ರಹಾಲಯವೂ ಇದೆ. ಕಾಫಿಯ ತೋಟ, ಕಾಫಿಯ ಉತ್ಪಾದನೆಯ ಬಗ್ಗೆ ತಿಳಿಯಬೇಕಾದರೆ ಈ ಸಂಗ್ರಹಾಲಯಕ್ಕೊಮ್ಮೆ ಭೇಟಿ ನೀಡಲೇ ಬೇಕು. ಈ ಸಂಗ್ರಹಾಲಯವು ದಾಸರಹಳ್ಳಿಯಲ್ಲಿದ್ದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ತೆರೆದಿರುತ್ತದೆ.

 ಹೆಬ್ಬೆ ಫಾಲ್ಸ್

ಹೆಬ್ಬೆ ಫಾಲ್ಸ್

PC- Srinivasa83

ಸುಂದರ ಕಾಫಿ ತೋಟಗಳ ಹಿನ್ನೆಲೆಯಲ್ಲಿರುವ ಹೆಬ್ಬೆ ಫಾಲ್ಸ್ ಸುಮಾರು 168 ಮೀಟರ್ ಎತ್ತರದಿಂದ ಬೀಳುವ ನೀರಿನ ರಭಸದ ನೋಟವನ್ನು ಪ್ರವಾಸಿಗರಿಗೆ ಮನದುಂಬಿಸುತ್ತದೆ. ಈ ಜಲಪಾತದ ನೀರಿನ ಹರಿವು ಎರಡು ಭಾಗಗಳಾಗಿ ವಿಂಗಡನೆಯಾಗಿ ಬೀಳುವುದರಿಂದ ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ ಎಂದು ಹೆಸರಿಸಲಾಗಿದೆ. ಸಾಹಸಕ್ರೀಡೆ ಮಾಡಬಯಸುವ ಪ್ರವಾಸಿಗರು ಇಲ್ಲಿಗೆ ಚಾರಣದ ಮೂಲಕವೂ ಬರಬಹುದು. ಈ ಜಲಪಾತದಿಂದ ಬೀಳುವ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮರೋಗ ಮತ್ತು ಅದಕ್ಕೆ ಸಂಬಂಧಿಸಿದ ಇನ್ನಿತರೆ ರೋಗಗಳು ವಾಸಿಯಾಗುತ್ತವೆ ಎಂಬುವುದು ಇಲ್ಲಿನ ಜನರ ನಂಬಿಕೆ.

 ಕಳಸ

ಕಳಸ

PC- Wind4wings

ಚಿಕ್ಕಮಗಳೂರಿನಲ್ಲಿರುವ ಕಳಸ ಒಂದು ಪ್ರಮುಖ ಪ್ರೇಕ್ಷಣಿಯ ತಾಣವಾಗಿದೆ. ಇಲ್ಲಿ ಅನೇಕ ಮಂದಿರಗಳಿವೆ. ಈ ನಗರವು ಭದ್ರಾ ನದಿ ತೀರದಲ್ಲಿದೆ. ಈ ನಗರದ ಇರುವಿಕೆಯ ಹಿಂದೆ ಒಂದು ಪೌರಾಣಿಕ ಕಾರಣವೂ ಇದೆ ಎನ್ನಲಾಗುತ್ತದೆ. ಸ್ಥಳವು ಪ್ರಾಕೃತಿಕ ಹಾಗೂ ಆಧ್ಯಾತ್ಮಿಕ ರೂಪದಲ್ಲಿ ಮ ಹತ್ವಪೂರ್ಣವಾಗಿದೆ. ಇಲ್ಲಿನ ಹೆಚ್ಚಿನ ಜನರು ರೈತರು. ಇವರ ಬೆಳೆಗಳೆಲ್ಲಾ ಇಲ್ಲಿನ ಭದ್ರಾ ನದಿಯನ್ನೇ ಅವಲಂಭಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X