Search
  • Follow NativePlanet
Share
» »ಸಾಯಿಬಾಬಾ ಜೀವಸಮಾಧಿಯಾಗಿದ್ದು ಎಲ್ಲಿ ಮತ್ತು ಯಾವಾಗ ಗೊತ್ತಾ?

ಸಾಯಿಬಾಬಾ ಜೀವಸಮಾಧಿಯಾಗಿದ್ದು ಎಲ್ಲಿ ಮತ್ತು ಯಾವಾಗ ಗೊತ್ತಾ?

ರಜಾ ದಿನಗಳಳ್ಲಿ ಹೆಚ್ಚಿನವರು ಪ್ರವಾಸದ ಪ್ಲ್ಯಾನ್ ಮಾಡುತ್ತಾರೆ. ಆಧ್ಯಾತ್ಮಿಕವಾಗಿಯೂ, ಆಹ್ಲಾದಕರವಾಗಿಯೂ ಇರುವಂತಹ ಸ್ಥಳಗಳನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಅಂತವರಿಗೆ ಶಿರಡಿ ಟೂರ್ ಉತ್ತಮವಾಗಿದೆ. ಹಾಗಾಗಿ ಇಂದು ನಾವು ಶಿರಡಿ ಸುತ್ತಮುತ್ತಲ ಪ್ರವಾಸಿ ತಾಣಗಳ ಬಗ್ಗೆ ತಿಳಿಸಲಿದ್ದೇವೆ.

ಔರಂಗಾಬಾದ್

ಔರಂಗಾಬಾದ್

ಮೊಘಲ್‌ ಚಕ್ರವರ್ತಿ ಇದನ್ನು ಆಡಳಿತ ಕೇಂದ್ರವನ್ನಾಗಿಸಿ ದಕ್ಷಿಣಾದಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಹಾಗಾಗಿ ಇದಕ್ಕೆ ಔರಂಗಬಾದ್ ಎನ್ನುವ ಹೆಸರು ಬಂದಿತು. ಇದು ಶಿರಡಿಯಿಂದ ಸುಮಾರು 108 ಕಿ.ಮೀ ದೂರದಲ್ಲಿದೆ. ಇಲ್ಲಿ ದೌಲತಾಬದ್ ಕೋಟಿ, ಬೀಬಿ ಕಾ ಮಕ್ಬರಾವನ್ನು ನೋಡಬಹುದು.

ಕಾತ್ಯಾಯಿನಿ ವೃತ ಮಾಡಿದ್ರೆ ಇಷ್ಟಪಟ್ಟ ಬಾಳಸಂಗಾತಿ ಸಿಗ್ತಾರಂತೆಕಾತ್ಯಾಯಿನಿ ವೃತ ಮಾಡಿದ್ರೆ ಇಷ್ಟಪಟ್ಟ ಬಾಳಸಂಗಾತಿ ಸಿಗ್ತಾರಂತೆ

ಅಜಂತಾ ಎಲ್ಲೋರಾ

ಅಜಂತಾ ಎಲ್ಲೋರಾ

ಔರಂಗಬಾದ್ ಸಮೀಪದಲ್ಲೇ ಅಜಂತಾ ಎಲ್ಲೋರಾ ಗುಹೆಗಳು ಇವೆ. ಅವುಗಳಲ್ಲಿ ಅಜಂತಾ 95.ಮೀ ದೂರದಲ್ಲಿ ಇದ್ದರೆ ಎಲ್ಲೋರಾ 32 ಕಿ.ಮೀ ದೂರದಲ್ಲಿದೆ. ಈ ದೇವಾಲಯಗಳಲ್ಲಿ ಅದ್ಭುತ ಶಿಲ್ಪಕಲೆಗಳನ್ನು ಕಾಣಬಹುದು.

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು

ಇಲ್ಲಿ ಔರಂಗಬಾದ್‌ಗೆ 58 ಕಿ.ಮೀ ದೂರದಲ್ಲಿ ಗ್ರಿಷ್ಣೇಶ್ವರ ಜ್ಯೋತಿರ್ಲಿಂಗವಿದೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಇದೂ ಒಂದು. ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಲಾದ ಈ ದೇವಾಲಯವು ದೆಹಲಿ ಸುಲ್ತಾನರ ಆಕ್ರಮಣದಿಂದ ನಾಶವಾಯಿತು ಮತ್ತು 18 ನೇ ಶತಮಾನದಲ್ಲಿ ಈ ದೇವಸ್ಥಾನವನ್ನು ಪುನಃ ಸ್ಥಾಪಿಸಿತು.

ದುಶ್ಯಂತ, ಶಕುಂತಲಾ ವಿವಾಹ ನಡೆದ ನಂದ ಪ್ರಯಾಗವನ್ನು ನೋಡಿದ್ದೀರಾ?ದುಶ್ಯಂತ, ಶಕುಂತಲಾ ವಿವಾಹ ನಡೆದ ನಂದ ಪ್ರಯಾಗವನ್ನು ನೋಡಿದ್ದೀರಾ?

ದಸರಾದಿನವೇ ಸಮಾಧಿ

ದಸರಾದಿನವೇ ಸಮಾಧಿ

ಶಿರಡಿ ಪ್ರವಾಸದಲ್ಲಿ ಶಿರಡಿಸಾಯಿಯ ದರ್ಶನ ಪ್ರಮುಖವಾದುದು. 100 ವರ್ಷಗಳ ಹಿಂದೆ ದಸರಾ ದಿನವೇ ಸಾಯಿಬಾಬಾ ಮಹಾಸಮಾಧಿಯಾದರು ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಹೆಚ್ಚಿನ ಜನರು ವಿಜಯದಶಮಿ ದಿನದಂದು ಸಾಯಿಬಾಬಾರ ಸಮಾಧಿಯನ್ನು ನೋಡಲು ಶಿರಡಿಗೆ ಹೋಗುತ್ತಾರೆ.

ಶಿರಡಿ ಯಾತ್ರೆ

ಶಿರಡಿ ಯಾತ್ರೆ

ಹೆಚ್ಚಿನವರು ಈ ಬಾರಿ ಬಾಬಾರ ಸಮಾಧಿಯ ದರ್ಶನ ಪಡೆದಿದ್ದಾರೆ. ಇನ್ನೂ ಈವರ್ಷ ಸಮಾಧಿಯ ಶತಮಾನೋತ್ಸವ ಆಚರಿಸಿದೆ. ಕೇವಲ ಸಾಯಿಬಾಬಾರ ಸಮಾಧಿಯ ದರ್ಶನ ಪಡೆದರೆ ಶಿರಡಿ ಯಾತ್ರೆ ಪೂರ್ಣವಾಗದು.

ಮುರುಡೇಶ್ವರ ಸಮೀಪ ಎಷ್ಟೆಲ್ಲಾ ಬೀಚ್‌ಗಳಿವೆ ಗೊತ್ತಾ?ಮುರುಡೇಶ್ವರ ಸಮೀಪ ಎಷ್ಟೆಲ್ಲಾ ಬೀಚ್‌ಗಳಿವೆ ಗೊತ್ತಾ?

ಪ್ರವಾಸಿ ತಾಣಗಳು

ಪ್ರವಾಸಿ ತಾಣಗಳು

ಬಾಬಾನನ್ನು ಮೊದಲ ಬಾರಿಗೆ ಸಾಯಿ ಎಂದು ಕರೆದ ಖಂಡೋಬಾ ದೇವಸ್ಥಾನ, ಸಾಯಿಬಾಬಾ ನಿರ್ಮಿಸಿದ ಲೆಂಡಿ ವನ , ಸಾಯಿಯ ನಿವಾಸವಾಗಿದ್ದ ದ್ವಾರಕಾಮಾಯಿ ಮಸೀದಿ, ಬಾಬಾ ಚವಾಡಿ ಎಂದು ಕರೆಯಲಾಗುತ್ತಿದ್ದ ಸ್ಥಳಗಳು ಇಂದು ಶಿರಡಿಯಲ್ಲಿನ ಪ್ರವಾಸಿ ತಾಣಗಳಾಗಿವೆ.

ಬಸ್‌ ವ್ಯವಸ್ಥೆಗಳಿವೆ

ಬಸ್‌ ವ್ಯವಸ್ಥೆಗಳಿವೆ

ಸಾಯಿ ಹೆರಿಟೇಜ್ ವಿಲೇಜ್‌ನಲ್ಲಿ ಸಾಯಿಬಾಬಾರ ಜೀವನದ ಕೆಲವು ಪ್ರಮುಖ ಘಟ್ಟಗಳನ್ನು ಶಿಲ್ಪಕಲಾಕೃತಿ ರೂಪದಲ್ಲಿ ನೋಡಬಹುದು. ಶಿರಡಿಗೆ ಹೈದರಾಬಾದ್, ವಿಜಯವಾಡ, ಬೆಂಗಳೂರಿನಿಂದ ಸಾಕಷ್ಟು ಬಸ್‌ ವ್ಯವಸ್ಥೆಗಳು ಇವೆ.

ಕೊಡಗಿನ ಈ ಜಲಪಾತಗಳಲ್ಲಿ ಯಾವುದನ್ನೆಲ್ಲಾ ನೀವು ನೋಡಿದ್ದೀರಿ?ಕೊಡಗಿನ ಈ ಜಲಪಾತಗಳಲ್ಲಿ ಯಾವುದನ್ನೆಲ್ಲಾ ನೀವು ನೋಡಿದ್ದೀರಿ?

ಶನಿಶಿಂಗಾಣಪುರ

ಶನಿಶಿಂಗಾಣಪುರ

ಶಿರಡಿ ಯಾತ್ರೆಯಲ್ಲಿ ಪ್ರತಿಯೊಬ್ಬರೂ ನೋಡಲೇ ಬೇಕಾದ ಸ್ಥಳವೆಂದರೆ ಶನಿಶಿಂಗಾಣಪುರ . ಶನಿದೇವರು ಸ್ವಯಂಭೂ ಆಗಿ ನೆಲೆಸಿರುವ ಈ ಕ್ಷೇತ್ರವು ಶಿರಡಿಯಿಂದ 74ಕಿ.ಮೀ ದೂರದಲ್ಲಿದೆ. ಶಿರಡಿಯಿಂದ ಶನಿಶಿಂಗಾಣಪುರಗೆ ಟ್ಯಾಕ್ಸಿ, ರಿಕ್ಷಾಗಳ ವ್ಯವಸ್ಥೆಯೂ ಇದೆ.

ಶನಿದೆಸೆ ದೂರ

ಶನಿದೆಸೆ ದೂರ

ಈ ಊರಿನ ವಿಶೇಷತೆಎಂದರೆ ಯಾವುದೇ ಮನೆಗೆ ಬಾಗಿಲುಗಳಿಲ್ಲ. ಅಂಗಡಿ ಮುಗ್ಗಟ್ಟುಗಳಿಗೂ ಬಾಗಿಲು ಇಲ್ಲ. ಶನೀಶ್ವರನು ಕಾಪಾಡುತ್ತಾನೆ ಎನ್ನುವ ನಂಬಿಕೆ ಜನರದ್ದು. ಇಲ್ಲಿನ ಶನೀಶ್ವರನಿಗೆ ಎಣ್ಣೆ ಅಭಿಷೇಕ ಮಾಡಿದ್ರೆ ನಮ್ಮ ಶನಿ ಎಲ್ಲಾ ದೂರವಾಗುತ್ತದೆ ಎನ್ನುವ ಬಲವಾದ ನಂಬಿಕೆ ಇಲ್ಲಿನ ಜನರದಲ್ಲಿದೆ.

ಇಂತಹ ಅದ್ಭುತ ಪರ್ವತ ಪ್ರವಾಸವನ್ನು ನೀವು ಕನಸಿನಲ್ಲೂ ಕಂಡಿರಲಿಕ್ಕಿಲ್ಲಇಂತಹ ಅದ್ಭುತ ಪರ್ವತ ಪ್ರವಾಸವನ್ನು ನೀವು ಕನಸಿನಲ್ಲೂ ಕಂಡಿರಲಿಕ್ಕಿಲ್ಲ

ಪಂಚವಟಿ

ಪಂಚವಟಿ

ಪಂಚವಟಿ ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ವನವಾಸದ ಸಂದರ್ಭದಲ್ಲಿ ಸೀತಾ ರಾಮ ಲಕ್ಷಣರು ಇಲ್ಲಿ ತಂಗಿದ್ದರು ಎನ್ನುವುದನ್ನು ಸ್ಥಳಪುರಾಣ ತಿಳಿಸುತ್ತದೆ. ಇಲ್ಲಿ ಕಾಲಾರಾಮ ದೇವಾಲಯವೂ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X